Home Blog Page 3175

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ KSRTC ಬಸ್: ಬಸ್ ಹೊರತೆಗೆಯಲು ಹರಸಾಹಸ

0

ತುಮಕೂರು: ಗಾಳಿ ಮಳೆ ಸಹಿತ ಭರ್ಜರಿ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಚರಂಡಿಗೆ ಇಳಿದಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ನಿಟ್ಟರಹಳ್ಳಿ ಗ್ರಾಮದಲ್ಲಿ KSRTC ಬಸ್  ಚಾಲಕನ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಇಳಿದಿರುವ  ಘಟನೆ ನಡೆದಿದೆ.

ಮಧುಗಿರಿಯಿಂದ ಕೊಂಡವಾಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಚರಂಡಿಗೆ ಸಿಲುಕಿಕೊಂಡಿದ್ದರಿಂದ ಶಾಲಾ -ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

ರಾಜಕೀಯ ರಂಗದ ಹಿರಿಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ವಿಧಿವಶ

0

ಚಿಕ್ಕಮಗಳೂರು: ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ (87) ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ‌ ಸಂಸ್ಕಾರ ನೆರವೇರಿಸಲಾಗುವುದು.

ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದ ಚಂದ್ರೇಗೌಡ  ಅವರು ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. ಕಾಂಗ್ರೆಸ್ ಕಟ್ಟಾಳಾಗಿದ್ದ ಚಂದ್ರೇಗೌಡ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಮೂರು ಬಾರಿ ಶಾಸಕರು, ಮೂರು ಸಲ ಸಂಸದರು, ಒಮ್ಮೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯ ಮರು ಹುಟ್ಟು ನೀಡಲು ರಾಜೀನಾಮೆ ನೀಡಿದ್ದರು. ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿ ಸ್ಪರ್ಧೆಗೆ ಚಂದ್ರೇಗೌಡರು ಅವಕಾಶ ಮಾಡಿಕೊಟ್ಟಿದ್ದರು.

 

 

ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ: ಬಿಎಸ್ ಯಡಿಯೂರಪ್ಪ

0

ಬೆಂಗಳೂರುಸರ್ಕಾರಿ ನೌಕರರಿಗೆ ನ್ಯಾಯಯುತವಾಗಿ ವೇತನ ಪರಿಷ್ಕರಣೆ ಮಾಡಲು ವೇತನ ಆಯೋಗ ರಚಿಸಿ ಮಧ್ಯಂತರ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಸರ್ಕಾರ ಕುಂಟು ನೆಪ ಹೇಳಿ ವೇತನ ಆಯೋಗದ ಅವಧಿ ವಿಸ್ತರಿಸಿದೆ. ಸರ್ಕಾರದ ಬಳಿ ಬರ ಎದುರಿಸಲು, ಗ್ಯಾರಂಟಿಗಳ ಜಾರಿಗೆ ಹಣ ಇಲ್ಲ. ಸರ್ಕಾರಿ ನೌಕಕರರಿಗೆ ವೇತನ ಪಾವತಿಸಲೂ ಹಣ ಇಲ್ಲ. ಸರ್ಕಾರ ಒಂದು ರೀತಿಯಲ್ಲಿ ದಿವಾಳಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ದೇಶದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿತ್ತು.

ಈಗ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಎಲ್ಲ ರಂಗಗಳಲ್ಲೂ ಕಾಂಗ್ರೆಸ್ ವಿಫಲವಾಗಿದೆ. ಈ ಸರ್ಕಾರ ಬದುಕಿದ್ದೂ ಸತ್ತಂತೆ ಆಗಿದೆ. ಕುಂಟು ನೆಪ ಹೇಳಿಕೊಂಡು ಕಾಂಗ್ರೆಸ್​ನವರು ಕಾಲಹರಣ ಮಾಡುತ್ತಿದ್ದಾರೆ. ಬಹಳ ಕಾಲ ಇವರನ್ನು ಹೀಗೇ ಬಿಡಲು ಆಗಲ್ಲ. ನಮ್ಮೆಲ್ಲಾ ಮುಖಂಡರೂ ಚರ್ಚೆ ಮಾಡಿ ಇದೆಲ್ಲದರ ವಿರುದ್ಧ ಹೋರಾಟ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದರು.

ತಂದೆ ತಿಥಿ ಮುಗಿಸಿ ವಾಪಸ್ ತೆರಳುವ ವೇಳೆ ಕಾರು ಅಪಘಾತ ತಾಯಿ ಸಾವು

0

ಚಿಕ್ಕಬಳ್ಳಾಪುರ: ತಂದೆಯ ತಿಥಿ ಕಾರ್ಯ ಮುಗಿಸಿ  ವಾಪಸ್ ಬೆಂಗಳೂರಿಗೆ ತೆರಳುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ತಾಯಿ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಬೆಂಗಳೂರು – ಹಿಂದೂಪುರ ಹೆದ್ದಾರಿ ಅಲಕಾಪುರ ಗೇಟ್ ಬಳಿ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಗುಂಡಗಲ್ಲು ಗ್ರಾಮದ 56 ವರ್ಷದ ಸುಶೀಲಮ್ಮ ಮೃತ ದುರ್ದೈವಿಯಾಗಿದ್ದು. ಬೆಂಗಳೂರಿನಲ್ಲಿ ವಾಸವಾಗಿರುವ ಮುರಳಿ ಎನ್ನುವಾತ ತನ್ನ ತಂದೆ ಅಶ್ವತ್ಥರೆಡ್ಡಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಅವರ ತಿಥಿ ಕಾರ್ಯವನ್ನು ನೆನ್ನೆ ಗುಂಡಗಲ್ಲು ಗ್ರಾಮದಲ್ಲಿ ನೆರವೇರಿಸಿ ಇಂದು ಬೆಳಗ್ಗೆ ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ತೆರಳಲು ಸುಜುಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಸ್ಥಳದಲ್ಲೇ ಸುಶೀಲಮ್ಮ ಮೃತಪಟ್ಟು ಆಕೆಯ ಮಗ ಮುರಳಿ, ಸೊಸೆ ಗುಣವತಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು ಘಟನೆ ಸಂಬಂಧ ಮಂಚೇನಹಳ್ಳಿ ಠಾಣೆಯ ಪೊಲೀಸರು ಬೇಟೆ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Gadag: ಹಸಿವು ತಾಳಲಾರದೇ ಹಾವನ್ನೇ ನುಂಗಿದ ನಾಗರಹಾವು..!

0

ಗದಗ: ತನ್ನದೇ ತಳಿಯ ಹಾವನ್ನೇ ನಾಗರಹಾವು ನುಂಗಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಅನ್ನದಾನೀಶ್ವರ ಪ್ರೌಢಶಾಲೆ ಆವರಣದಲ್ಲಿ ಈ ದೃಶ್ಯ ಕಂಡು ಬಂದಿದೆ.

ತನ್ನದೇ ತಳಿಯ ನಾಗರಹಾವನ್ನ ಮತ್ತೊಂದು ನಾಗರಹಾವು ನುಂಗಿ ಹಾಕಿದೆ. ಹಸಿವು ತಾಳಲಾರದೇ ಈ ರೀತಿ ಒಂದನ್ನೊಂದು ಕೊಂದು ಸರ್ಪಗಳು ತಿಂದಿವೆ ಎಂದು ಉರಗತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯ ಹಾವು ನುಂಗುವ ದೃಶ್ಯ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ

0

ತುಮಕೂರು: ದರಿದ್ರ ಸರ್ಕಾರದಿಂದಾಗಿ ನಾವೆಲ್ಲಾ ಪೇಪರ್ ಎಂಎಲ್‌ಎಗಳಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.

ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ರೈತರಿಗೆ ಮರಣ ಶಾಸನ ಬರೆದ ಸಿದ್ದರಾಮಯ್ಯ ಸರಕಾರ. ಬಿಎಸ್ ವೈ ಸರಕಾರ 20 ಸಾವಿರ ಟ್ರಾನ್ಸಫರ್ಮರ್ ಅಳವಡಿಕೆ ಮಾಡಿತ್ತು.

ರೈತರಿಂದ ಹಿಡಿದು ಕೈಗಾರಿಕೋದ್ಯಮಿ ಗಳಿಂದ ಹಿಡಿದು, ಯಾರಿಗೂ ಕೂಡ ಕರೆಂಟ್ ಇಲ್ಲ, ಹೇಮಾವತಿ ನೀರಿಲ್ಲ, ಇವತ್ತು ಬೆಂಗಳೂರು ತುಮಕೂರು,ಮಂಡ್ಯ ನೀರಿಲ್ಲದೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.

ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ ಅಂತ, ಯೂನಿಫಾರ್ಮ್ ಕೊಟ್ಟಿಲ್ಲ ಅಂತ ಮಕ್ಕಳು ಬಂದಿದ್ದಾರೆ. ಶಾಸಕರ ಅನುದಾನ ಕೂಡ 2 ಕೋಟಿ  ಬದಲು 50 ಲಕ್ಷ ಕೊಟ್ಟಿದ್ದಾರೆ.

ನಾವು ಯಾವ ಮುಖ ಇಟ್ಕೊಂಡ್ ಹೋಗೋದು. ಮೋದಿ ಕೊಡೋ ಅಕ್ಕಿನಾ ಕೂಡ ಕೊಡ್ತಾ ಇಲ್ಲ. ರಾಜ್ಯ ಸರಕಾರ ಏನ್ಬೇಕಾದ್ರು ಮಾಡ್ಕೊಳ್ಳಿ, ಆದ್ರೆ ಮೋದಿ‌ ಕೊಡ್ತಿರೋ ಅಕ್ಕಿ ಕೊಡಿ, 2 ಕೆ.ಜಿ. ಕಡಿತ ಯಾಕೆ. ನಾವೆಲ್ಲಾ ಪೇಪರ್ ಮೇಲೆ ಎಂಎಲ್ ಎ ಗಳಾಗಿದ್ದೇವೆ, ಯಾವ ಅನುದಾನವೂ ಬರುತ್ತಿಲ್ಲ. ಯಾವಾಗ ತೊಲಗುತ್ತಾ ಸರಕಾರ ಅಂತ ಕಾಯ್ತಿದ್ದೇವೆ ಎಂದು ಕಿಡಿಕಾರಿದರು.

ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಮಗನನ್ನು ಭೇಟಿಯಾಗಲು ಓಡೋಡಿ ಬಂದ ತಂದೆ

0

ಯಾದಗಿರಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಎಂ ನ್ಯಾಯಾಧೀಶರ ಅನುಮತಿ ಪಡೆದು ಬಂಧಿತ 16 ಆರೋಪಿಗಳ ಪೈಕಿ 9 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 9 ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಇನ್ನೂ ಈ ಸಂಧರ್ಭದಲ್ಲಿ ತಂದೆಯೊಬ್ಬರು ಮಗನನ್ನು ಭೇಟಿಯಾಗಲು ಕೈಯಲ್ಲಿ ಔಷಧಿಗಳನ್ನು ಹಿಡಿದುಕೊಂಡು ಓಡೋಡಿ ಬಂದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಿಂದ ಬುತ್ತಿ, ಔಷಧಿ ಹಿಡಿದುಕೊಂಡು ಬಂದ ತಂದೆಯನ್ನು ಅಧಿಕಾರಿಗಳು ತಡೆದು ಮಾತ್ರೆ ನೀಡಲು ಅವಕಾಶ ಕೊಡಲಿಲ್ಲ,

ಆರೋಪಿ ಹಸನ್ ಸಾಬ್ ಗೆ ಕಳೆದ ತಿಂಗಳು ಬೆನ್ನು ಹುರಿ ಕಾಣಿಸಿಕೊಂಡು ಬೆನ್ನಿನ್ನಲ್ಲಿ ನೀರು ತುಂಬಿತ್ತು, ಬೆನ್ನು ಹುರಿ ಕಡಿಮೆಯಾಗಲು ವೈದ್ಯರು 6 ತಿಂಗಳ ಮಾತ್ರೆಗಳನ್ನು ಬರೆದುಕೊಟ್ಟಿದ್ದಾರೆ.

10  ದಿನಗಳ ಹಿಂದೆ ನನ್ನ ಮಗ ಎಕ್ಸಾಂ ಬರೆಯಲಿಕ್ಕೆ ಬಂದಾಗ ಅರೆಸ್ಟ್ ಮಾಡಿದ್ದಾರೆ. 10 ದಿನಗಳಿಂದ ಮಗ ಮಾತ್ರೆ ತೆಗೆದುಕೊಂಡಿಲ್ಲ. ಮಗನಿಗಾಗಿ ಆರೋಗ್ಯದಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಹೇಗೆ..? ಮಗನಿಗೆ ಮಾತ್ರೆಗಳನ್ನು ನೀಡಲು ಪೊಲೀಸ್ರು ಅವಕಾಶ ಮಾಡಿಕೊಡಬೇಕು ಅಂತಾ ಆರೋಪಿ ತಂದೆ ಮಹೆಬೂಬ್ ಸಾಬ್ ಮನವಿ ಮಾಡಿದ್ದಾರೆ.

ಗೋಮಾಂಸ ರಫ್ತು ಮಾಡುವುದನ್ನು ಬ್ಯಾನ್ ಮಾಡಲಿ: ಸಚಿವ ಸಂತೋಷ್ ಲಾಡ್

0

ಧಾರವಾಡ: ಭಾರತ ದೇಶ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತ ಇದೆ. ಯುಪಿ, ಎಂಪಿ, ಛತ್ತಿಸಗಡ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಎರಡನೇ ಸ್ಥಾನದಲ್ಲಿವೆ. ಇದರ ಶ್ರೇಯಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವುದು ಬೇಡ ಎಂತಾದರೆ ದೇಶದಾದ್ಯಂತ ಗೋಶಾಲೆ ತೆರೆಯಲಿ. ಗೋಮಾಂಸ ರಫ್ತು ಮಾಡುವುದನ್ನು ಬ್ಯಾನ್ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಕೃಷಿ ವಿಶ್ವವಿದ್ಯಾಲಯ ಕೆಲವೊಂದಿಷ್ಟು ಜಾನುವಾರುಗಳನ್ನು ಹರಾಜು ಮಾಡುತ್ತಿರುವುದಕ್ಕೆ ಬಜರಂಗದಳ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಅವರು, ಗೋವಾ ಮತ್ತು ಮಣಿಪುರದಲ್ಲಿ ಗೋಮಾಂಸಕ್ಕೆ ಅವಕಾಶ ಕೊಟ್ಟಿದ್ದಾರೆ. ಚುನಾವಣೆ ಬಂದಿರುವ ಕಾರಣ ಏನೇನೋ ವಿಚಾರ ತರುತ್ತಿದ್ದಾರೆ ಎಂದರು.

ಬಿಹಾರದಲ್ಲಿ ಒಂದು ವಾರದಲ್ಲಿ 8.5 ಲಕ್ಷ ಶೌಚಾಲಯ ಕಟ್ಟಿಸಿದ್ದೇವೆ ಎಂದು ಬಿಜೆಪಿಯವರು ಹೇಳಿದ್ದಾರೆ. ಇದನ್ನು ನಂಬಲು ಸಾಧ್ಯವೇ? ಇರದೇ ಇರುವು ರೈಲ್ವೆ ನಿಲ್ದಾಣಗಳ ಪ್ರಸ್ತಾಪ ಮಾಡಿದ್ದಾರೆ.

ರಾಣಿ, ದುರ್ಗಾ, ದೇವಿ ಸ್ಟೇಷನ್ ಅಂತೆಲ್ಲಾ ಹೇಳಿದ್ದಾರೆ. ಆ ಸ್ಟೇಷನ್‌ಗಳು ಭಾರತದಲ್ಲಿ ಇಲ್ಲ. ಆದರೂ ಬಿಜೆಪಿಯವರ ಪಿಕ್ಚರ್ ನಡೆಯುತ್ತಿದೆ ನಡೆಯಲಿ. ಬಜರಂಗದಳದವರು ಎಷ್ಟು ಜನ ಗೋವು ಸಾಕಿದ್ದಾರೆ ಎಂದು ಪ್ರಶ್ನಿಸಿದರು.

ಬ್ರೇಕ್‌ಪಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ: ಸಿದ್ದರಾಮಯ್ಯ

0

ಬೆಂಗಳೂರು: ಬ್ರೇಕ್‌ ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೆಲ್ಲಾ ಬರ್ತಾರೋ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ತೇವೆ. ನಾವು ಯಾವುದೇ ಆಪರೇಷನ್‌ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಕಮಲ ಮಾಡಲ್ಲ. ಯಾರು ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರ್ತಾರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ತಿವಿ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇಂದು ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯಕ್ಕೆ ಕೊಡಬೇಕಾದನ್ನೇ ಇನ್ನ ಅವರು ಕೊಟ್ಟಿಲ್ಲ. ಅವರು ರಾಜಕೀಯ ಭಾಷಣ ಮಾಡಿದ್ದಾರೆ. ದಾಖಲಾತಿಗಳನ್ನು ಇಟ್ಟು ಮಾತನಾಡಲಿ ಬೇಕಾದ್ರೆ, ಸುಳ್ಳು ಹೇಳಬಾರದು ಎಂದು ಚಾಟಿ ಬೀಸಿದ್ದಾರೆ.

ಬರಗಾಲದ ಹಣ (ಪರಿಹಾರ) ಇನ್ನೂ ಕೊಡೋಕೆ ಆಗಿಲ್ಲ ಅವರಿಂದ. 5 ಉಚಿತ ಗ್ಯಾರಂಟಿ ಕೊಡೋಕೆ ಆಗಲ್ಲ ಅಂದಿದ್ದರು. ರಾಜ್ಯ ದಿವಾಳಿ ಆಗುತ್ತೆ ಅಂದಿದ್ದರು. ಈಗ ತಾವು ಮಾಡಿಲ್ವಾ? ಈ ರೀತಿಯ ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೋಭೆ ತರಲ್ಲ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ

 

ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ: ಸತೀಶ್ ಜಾರಕಿಹೊಳಿ

0

ಬೆಂಗಳೂರು: ದಲಿತ ಸಿಎಂ ವಿಚಾರ ಅದು 2013 ರಿಂದಲೂ‌ ಓಡುತ್ತಲೆ ಇದೆ. 5 ವರ್ಷ ಅದೆ ಓಡಿತು ಆದರೆ ಪಿಚ್ಚರ್ ರಿಲೀಸ್ ಆಗಲಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಖರ್ಗೆಯವರು ಇದ್ದರು ಆಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು ಅವರಿಗೆ ಡಿಸಿಎಂ ಆಗೋಕು ಆಗಲಿಲ್ಲ.

ಎರಡುವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ ಇದಾರೆ, ಡಿಸಿಎಂ ಇದಾರೆ ಪಕ್ಷದ ಅಧ್ಯಕ್ಷರ ಇದ್ದಾರೆ ಹೈ ಕಮಾಂಡ್ ನಾಯಕರಿದ್ದರೆ ಅದೆಲ್ಲಾ ಅವರು ತೀರ್ಮಾನ ಮಾಡ್ತಾರೆ ಎಂದರು.

ಹಾಗೆ ಸಿಎಂ‌ ಕರೆದ ಸಭೆಗೆ ನಾನು ಬಂದಿರಲಿಲ್ಲ. ಅನಾರೋಗ್ಯದ ಕಾರಣ ನಾನು ಬಂದಿರಲಿಲ್ಲ. ಅದನ್ನ ಸಿಎಂ ಗಮನಕ್ಕೆ ತಂದಿದ್ದೆ. ಬರಲಿಲ್ಲ ಅಂದ ಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ. ಯಾರು ಮಾತನಾಡಬಾರದು ಅನ್ನೋದು ಸರಿ ಇದೆ. ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತೆ ಎಂದು ಹೇಳಿ ಸುಮ್ಮನಾದರು.

ಮತ್ತೆ ಮಧ್ಯ ಪ್ರದೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಧಾನಿ ವಾಗ್ದಾಳಿ ವಿಚಾರ‌‌ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ‌ ಸಹಜ ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯವನ್ನ ಬಯ್ಯುವುದು. ಟೀಕೆ ಮಾಡುವುದು. ಅವರು ಆರೋಪ ಮಾಡ್ತಾರೆ. ಅವರು ಆರೋಪ‌ ಮಾಡಿದ್ದನ್ನು ಒಪ್ಪಬೇಕು ಅಂತಿಲ್ಲ ನಾವು ಅವರ ವಿರುದ್ದ 40% ಆರೋಪ, ಪೇ ಸಿಎಂ ಆರೋಪ ಮಾಡಿದ್ದೆವು ಅವರು ಒಪ್ಪಿಕೊಂಡ್ರಾ….? ಎಂದು ಹೇಳಿದರು.

error: Content is protected !!