ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರು ನೇಣಿಗೆ ಶರಣರಾಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದು, ಮಾನಸಿಕ ಖಿನ್ನತೆಯಿಂದ ನೊಂದಿದ್ದರು. ಗುರುವಾರ ಬೆಳಗ್ಗೆ ಪುರಸಭೆ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಮನೆಗೆ ವಾಪಸ್ ಆಗಿದ್ದ ಅವರು ತಮ್ಮ ನಿವಾಸದಲ್ಲಿ ನೇಣಿಗೆ ಶರಣರಾಗಿದ್ದಾರೆ.ಕುಷ್ಟಗಿ ಪಟ್ಟಣದ 16ನೇ ವಾರ್ಡ್ ಪಕ್ಷೇತರ ಸದಸ್ಯೆಯಾಗಿ ಚುನಾಯಿತರಾಗಿದ್ದ ರಾಜೇಶ್ವರಿ ಆಡೂರು ಪುರಸಭೆ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸುತ್ತಿದ್ದರು.
ಇವರ ಪತಿ ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ಪತಿ ಹಾಗೂ ಮೂವರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ
ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ನೇಣಿಗೆ ಶರಣು
ಕೊರೋನಾ; ಗದಗ ಜಿಲ್ಲೆಯಲ್ಲಿ ಗುರುವಾರವೂ 73 ಜನರಿಗೆ ಸೋಂಕು
ವಿಜಯಸಾಕ್ಷಿ ಸುದ್ದಿ, ಗದಗ
ಎಪ್ರಿಲ್ 22 ಗುರುವಾರ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಗದಗನಲ್ಲಿ ಅತಿ ಹೆಚ್ಚು ಸೋಂಕು ವ್ಯಾಪಿಸುತ್ತದೆ. ಗದಗ ನಗರ ಹಾಗೂ ತಾಲೂಕಿನಲ್ಲಿ 61 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 01, ನರಗುಂದದ 01, ರೋಣ ತಾಲೂಕಿನಲ್ಲಿ-04, ಹಾಗೂ ಶಿರಹಟ್ಟಿ ತಾಲೂಕಿನ-04, ಹೊರಜಿಲ್ಲೆಯ 02 ಜನರಿಗೆ ಸೋಂಕು ತಗುಲಿದೆ.
ಗುರುವಾರ 73 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11877 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 30 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11320 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 416 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 305 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 327029 ಮಾದರಿಗಳಲ್ಲಿ 314847 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೋನಾ ಹಾವಳಿ; ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಾರ್ವಜನಿಕರಲ್ಲಿ ಸೈಯದ್ ಖಾಲಿದ ಕೊಪ್ಪಳ ಮನವಿ
ವಿಜಯಸಾಕ್ಷಿ ಸುದ್ದಿ, ಗದಗ
ಸಾಮಾಜಿಕ ಅಂತರ ಕಾಪಾಡಿ ಜಿಲ್ಲಾಡಳಿತಕ್ಕೆ ಸಂಪೂರ್ಣ ಬೆಂಬಲ ನೀಡಲು ಸಾರ್ವಜನಿಕರಲ್ಲಿ ಸಾಮಾಜಿಕ ಕಾರ್ಯಕರ್ತ ಸಯ್ಯದ್ ಖಾಲಿದ್ ಕೊಪ್ಪಳ ವಿನಂತಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಕೊಪ್ಪಳ, ದೇಶದಲ್ಲಿ ಕೊರೋನಾ ಎರಡನೇ ಅಲೆ ಬಂದಿದ್ದು ಸಾಮಾನ್ಯ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಂಪೂರ್ಣವಾಗಿ ಸಹಕಾರ ನೀಡಬೇಕು, ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಬೇಕು ಎಂದು ಸಯ್ಯದ್ ಖಾಲಿದ್ ಕೊಪ್ಪಳ ಮನವಿ ಮಾಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್; ಬ್ಯಾಂಕ್ ನೌಕರ ಸೇರಿ ನಾಲ್ವರ ಬಂಧನ
ವಿಜಯಸಾಕ್ಷಿ ಸುದ್ದಿ, ಗದಗ
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಐಪಿಎಲ್ 20-20 ಪಂದ್ಯದ ಮೇಲೆ ಒಂದು ಸಾವಿರ ರೂಪಾಯಿಗೆ ಎರಡು ಸಾವಿರ ಕೊಡ್ತೀವಿ ಅಂತ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಕೆವಿಜಿ ಬ್ಯಾಂಕ್ ನೌಕರ ಹಾಗೂ ಬುಕ್ಕಿ ಸೇರಿದಂತೆ ನಾಲ್ವರನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.
ರೋಣ ಪಟ್ಟಣದ ದೌಲತ್ ಗೌಡ ಪ್ಲಾಟ್ ನಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
ದಾಳಿ ವೇಳೆ ನಗದು ಸೇರಿದಂತೆ 10 ಸಾವಿರ ರೂ ಮೌಲ್ಯದ ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಬೆಟ್ಟಿಂಗ್ ನಲ್ಲಿ ತೊಡಗಿದ್ದ ಪ್ರಕಾಶ್ ದೇವೆಂದ್ರಪ್ಪ ಪತ್ತಾರ, ಬಸವರಾಜ್ ಶರಣಪ್ಪ ಗದುಗಿನ, ಅಶೋಕ ಬಸಪ್ಪ ಹುನಗುಂಡಿ ಹಾಗೂ ಗದಗನ ಮುಖ್ಯ ಬುಕ್ಕಿ ಜಗ್ಗು ಕುಂಬಾರ ಎಂಬುವವರನ್ನು ಬಂಧಿಸಲಾಗಿದೆ ಎಂದು ರೋಣ ಪೊಲೀಸರು ತಿಳಿಸಿದ್ದಾರೆ.
ಕೊರೋನಾ; ಜಿಲ್ಲೆಯಲ್ಲಿ ಬುಧವಾರವೂ ಮುಂದುವರೆದ ಸೋಂಕು
ವಿಜಯಸಾಕ್ಷಿ ಸುದ್ದಿ, ಗದಗ
ಎಪ್ರಿಲ್ 21 ಬುಧವಾರ ಜಿಲ್ಲೆಯಲ್ಲಿ 72 ಜನರಿಗೆ ಸೋಂಕು ತಗುಲಿದ್ದು, ಸೋಂಕಿನ ತೀವ್ರತೆ ಮುಂದುವರೆದಿದೆ. ಗದಗ ನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಮ್ಮೆ ಹಾಫ್ ಸೆಂಚುರಿ ಬಾರಿಸಿದ್ದು, 52 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 01, ನರಗುಂದದ 06, ರೋಣ ತಾಲೂಕಿನಲ್ಲಿ-09, ಹಾಗೂ ಶಿರಹಟ್ಟಿ ತಾಲೂಕಿನ-02, ಹೊರಜಿಲ್ಲೆಯ 03 ಜನರಿಗೆ ಸೋಂಕು ತಗುಲಿದೆ.
ಬುಧವಾರ 72 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11804 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 25 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11290 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 373 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 313 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 325146 ಮಾದರಿಗಳಲ್ಲಿ 313029 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಯೋ ಮೊಬೈಲ್ ಟವರ್ ಸ್ಥಾಪನೆ ಹೆಸರಲ್ಲಿ ಲಕ್ಷಾಂತರ ರೂ ದೋಖಾ
ವಿಜಯಸಾಕ್ಷಿ ಸುದ್ದಿ, ಗದಗ
ನಾವು ಮುಂಬೈನಿಂದ ರಿಲಾಯನ್ಸ್ ಗ್ರೂಪ್ ನಿಂದ ಮಾತಾಡ್ತಾ ಇರೋದು…..ನಿಮ್ಮ ಪ್ಲಾಟ್ ನಲ್ಲಿ ರಿಲಾಯನ್ಸ್ ಜಿಯೋ ಟವರ್ ಹಾಕ್ತೀವಿ. ನಿಮಗೆ 60 ಲಕ್ಷ ರೂಪಾಯಿ ಹಣ ಕಂಪನಿಯಿಂದ ಕೊಡ್ತೀವಿ….ಹೀಗಂತ ಮೊಬೈಲ್ ಕರೆ ಮಾಡಿದ ಇಬ್ಬರು ಖದೀಮರು ಕಾರ್ಪೆಂಟರ್ ಒಬ್ಬನಿಂದ ಲಕ್ಷಾಂತರ ರೂ, ಹಣ ದೋಚಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.
ಅಬ್ಬಿಗೇರಿ ಗ್ರಾಮದ ಕಾರ್ಪೆಂಟರ್ ಮುತ್ತಪ್ಪ ಮಾರುತೆಪ್ಪ ಬಂಡಿವಡ್ಡರ ಎಂಬುವವರು ಮೋಸಕ್ಕೊಳಗಾಗಿ ದುಡ್ಡು ಕಳೆದುಕೊಂಡವರು.
ಮುಂಬೈ ರಿಲಾಯನ್ಸ್ ಕಂಪನಿಯ ಹೆಸರಿನಲ್ಲಿ ರಾಜಾರಾಮ್ ಹಾಗೂ ಸೋಮಶೇಖರ್ ಎಂಬುವವರು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ಹಂತಹಂತವಾಗಿ 2ಲಕ್ಷ, 20 ಸಾವಿರಕ್ಕೂ ಹೆಚ್ಚು ಹಣವನ್ನು ತಮ್ಮ ಅಕೌಂಟ್ ನಂಬರಿಗೆ ಹಾಕಿಸಿಕೊಂಡು ಜಿಯೋ ಮೊಬೈಲ್ ಟವರ್ ಹಾಕದೇ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ಮೋಸ ಹೋದ ಮುತ್ತಪ್ಪ ದೂರು ನೀಡಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆ; ನಗರಸಭೆ ಮಾಜಿ ಉಪಾಧ್ಯಕ್ಷನ ಪುತ್ರನ ಬಂಧನ
ವಿಜಯಸಾಕ್ಷಿ ಸುದ್ದಿ, ಗದಗ
ಸರಕಾರ ಕೊರೋನಾ ನಿಯಂತ್ರಣಕ್ಕೆ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸಾರ್ವಜನಿಕರಿಂದ ಸಹಕಾರ ಸಿಗುತ್ತಿಲ್ಲ. ಅದರಲ್ಲೂ ಕೆಲ ರಾಜಕಾರಣಿಗಳ, ಮರಿ ಪುಡಾರಿಗಳ ದರ್ಪ ಹೇಳತೀರದು ಎನ್ನುವುದಕ್ಕೆ ನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸರು, ಅಧಿಕಾರಿಗಳು ಎರಡು ದಿನಗಳಿಂದ ಸಾರ್ವಜನಿಕರಲ್ಲಿ, ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ಕೊಡುವ ಬದಲು ಅವರ ಜೊತೆಗೆ ವಾಗ್ವಾದ ನಡೆಸಿ ಮೊಂಡುತನ ಪ್ರದರ್ಶನ ಮಾಡಿದ ರಾಜಕಾರಣಿಯ, ನಗರಸಭೆಯ ಮಾಜಿ ಉಪಾಧ್ಯಕ್ಷನ ಪುತ್ರನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಅವರ ಪುತ್ರ ವಿನಾಯಕ ಬಾಕಳೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಗದಗ ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ನೀಲಕಮಲ್ ಎಕ್ಸ್ ಕ್ಲೂಸಿವ್ ಎಸ್ ಆರ್ ಫರ್ನಿಚರ್ ಅಂಗಡಿಯಲ್ಲಿ (NEELKAMAL EXCLUSIVE S R FURNITURE SHOP) ಕೋವಿಡ್-19 ಎರಡನೇ ಅಲೆ ಹರಡುವುದನ್ನು ನಿರ್ಲಕ್ಷ್ಯಸಿ ಅಂಗಡಿಯಲ್ಲಿ ಮಾಸ್ಕ್ ಧರಿಸದೇ, ಅಂಗಡಿಯಲ್ಲಿ ಸ್ಯಾನಿಟೇಸರ್ ಮತ್ತು ಥರ್ಮಲ್ ಸ್ಕ್ಯಾನರ್ ಇಡದೇ ಕೊರೋನಾ ವೈರಸ್ ಹರಡುವಂತೆ ಪ್ರಚೋದನೆ ನೀಡಿದ್ದಾರೆ.

ಸರಕಾರದ ಆದೇಶ ಮತ್ತು ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯತನ ತೋರಿದ್ದನ್ನು ಪ್ರಶ್ನೆಸಿದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ವಿನಾಯಕ ಬಾಕಳೆ ಪೊಲೀಸರು ಅತಿಥಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರಡ್ಡಿಯವರಿಂದ ಕೋವಿಡ್-19 ತುರ್ತು ಸಭೆ
ವಿಜಯಸಾಕ್ಷಿ ಸುದ್ದಿ, ನರಗುಂದ
ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಬುಧವಾರ ತುರ್ತು ಸಭೆ ನಡೆಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ರಾಜ್ಯಾದ್ಯಂತ ಕೋವಿಡ್ -19 ಮಹಾಮಾರಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಗ್ರಾಮದ ಸಮಸ್ತ ಸಾರ್ವಜನಿಕರಲ್ಲಿ ಕೊವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಪಿಡಿಒ ಶೈನಾಜ ಮುಜಾವರ ಮಾತನಾಡಿ, ಸಾರ್ವಜನಿಕರ ಸುರಕ್ಷತೆಗಾಗಿ ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವದು, ಆಗಾಗ ಕೈಗಳನ್ನು ಸ್ವಚ್ಛಗೊಳಿಸುವದನ್ನು ಜನರಲ್ಲಿ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶ್ರತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ದೊಡಮನಿ, ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೊರೋನಾ; ಮಂಗಳವಾರವೂ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು
ವಿಜಯಸಾಕ್ಷಿ ಸುದ್ದಿ, ಗದಗ
ಎಪ್ರಿಲ್ 20 ಮಂಗಳವಾರ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕು ತನ್ನ ಆಟಾಟೋಪ ಮುಂದುವರಸಿದೆ. ಗದಗ -34 ಮುಂಡರಗಿಯ 09, ನರಗುಂದದ 03, ರೋಣ ತಾಲೂಕಿನಲ್ಲಿ-13, ಹಾಗೂ ಶಿರಹಟ್ಟಿ ತಾಲೂಕಿನ-05 ಜನರಿಗೆ ಸೋಂಕು ತಗುಲಿದೆ. ಹೊರಜಿಲ್ಲೆಯ 09 ಜನರಿಗೆ ಸೋಂಕು ತಗುಲಿದೆ.
ಮಂಗಳವಾರ 73 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11732 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 20 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11265 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 326 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 340 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 323213 ಮಾದರಿಗಳಲ್ಲಿ 311141 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


