Home Blog Page 3178

ತೋಟದ ಮನೆಯ ರೂಮ್‌ನಲ್ಲಿದ್ದ ನಾಗರಹಾವು ರಕ್ಷಣೆ..!

0

ತುಮಕೂರು: ತೋಟದ ಮನೆಯ ರೂಮ್ ನಲ್ಲಿದ್ದ ನಾಗರಹಾವನ್ನೂ ಉರಗ ಸಂರಕ್ಷಕ ದಿಲೀಪ್ ರಕ್ಷಣೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ್ ರವರ ತೋಟದ ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವು, ಹಾವನ್ನೂ ನೋಡಿದ ಮನೆಯವರು ಭಯಭೀತರಾಗಿದ್ದಾರೆ.

ತಕ್ಷಣ ಉರಗ ಸಂರಕ್ಷಕ ದಿಲೀಪ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಉರಗ ಸಂರಕ್ಷಕ ದಿಲೀಪ್ ಭೇಟಿ ನಾಗರಹಾವು ರಕ್ಷಣೆ ಮಾಡಿದ್ದಾರೆ.

ಕೋಲಾರದಲ್ಲಿ ಮತ್ತೆ ಪೊಲೀಸರಿಂದ ಪೈರಿಂಗ್..!

0

ಕೋಲಾರ: ಕೋಲಾರದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಮಾಲೂರು ತಾಲೂಕಿನ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್‌ ಕುಮಾರ್‌ ಹತ್ಯೆ ಪ್ರಕರಣದ ಆರೋಪಿಯು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಕೊನೆಗೆ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್‌ ಎಂದು ಗುರುತಿಸಲಾಗಿದೆ.

ಅಕ್ಟೋಬರ್‌ 21ರಂದು ಜಯಮಂಗಲ ಗ್ರಾಪಂ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಅನಿಲ್‌ ಕುಮಾರ್‌ ಅವರನ್ನು ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್‌ ಬಳಿ ಹತ್ಯೆ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಶೋಕ್‌ನನ್ನು ಬಂಧಿಸಲು ಪೊಲೀಸರು ಮಾಲೂರು ಕೈಗಾರಿಕಾ ಪ್ರದೇಶಕ್ಕೆ ತೆರಳಿದ್ದಾರೆ. ಇದೇ ವೇಳೆ ಅಶೊಕನು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಶೋಕ್‌ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಅಶೋಕನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕೋದಂಡಪಾಣಿ ಹಾಗೂ ಅಶೋಕ್ ಎಂಬುವರ ಮೇಲೆ ಹಲ್ಲೆ‌‌ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಫೈರಿಂಗ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ ಆರೋಪಿ ಅಶೋಕ್‌ ಹಾಗೂ ಇಬ್ಬರು ಪೊಲೀಸರಿಗೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಿಣಸಂದ್ರ ಗ್ರಾಮದವರಾದ ಅನಿಲ್‌ ಕುಮಾರ್‌ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬೆಳಗಾವಿ; ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆರಂಭ

0

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆರಂಭವಾಗಿದೆ. ನವೆಂಬರ್ 7 ರಂದು ಬೆಳಗಾವಿಗೆ ಸಭಾಪತಿ ಭೇಟಿ ನೀಡಿ, ಸುವರ್ಣ ವಿಧಾನಸೌಧದಲ್ಲಿ ಸಿದ್ಧತೆ ಪರಿಶೀಲಿಸಲಿದ್ದಾರೆ. ಬಳಿಕ ನ.7ರಂದು ಅಧಿಕೃತವಾಗಿ ಅಧಿವೇಶನದ ದಿನಾಂಕ ಘೋಷಣೆ ಮಾಡಲಿದ್ದಾರೆ.

ಊಟ, ವಸತಿ, ಇಂಧನ, ಮುದ್ರಣ, ವಾಹನ ಸೇರಿ 10 ಸಮಿತಿಗಳನ್ನು ರಚನೆ ಮಾಡಲಾಗಿದೆ. ಯಶಸ್ವಿ ಅಧಿವೇಶನಕ್ಕೆ ಡಿಸಿ ನಿತೇಶ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡದಿಂದ ಸಿದ್ಧತೆ ಕೈಗೊಳ್ಳುತ್ತಿದೆ. ಜಿಲ್ಲಾಡಳಿತ ಕಳೆದ ವರ್ಷ ಸರ್ಕಾರಕ್ಕೆ ಎರಡೂವರೆ ಕೋಟಿ ಉಳಿತಾಯ ಮಾಡಿತ್ತು.

ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ವಂಚನೆ: ಹಣ ವಸೂಲಿಗಾಗಿ ಜ್ಯೋತಿಷಿಯ ಕಿಡ್ನಾಪ್ ಪ್ಲಾನ್

0

ತುಮಕೂರು: ನಿಧಿ ನಿಕ್ಷೇಪ ತೋರಿಸುವುದಾಗಿ ಜ್ಯೋತಿಷಿಯೊಬ್ಬರು 16 ಲಕ್ಷ ರೂ. ಪಡೆದು ನಾಮ ಹಾಕಿದ್ದು, ನಿಧಿ ಸಿಗದ ಹಿನ್ನೆಲೆ ಬೆಂಗಳೂರಿನ ಕಮಲಾ ನಗರ ನಿವಾಸಿಗಳು ಜ್ಯೋತಿಷಿಯನ್ನು ಕಿಡ್ನಾಪ್ ಮಾಡಿದ ಘಟನೆ ಪಾವಗಡ  ತಾಲೂಕಿನ ರಾಜವಂತಿ ಗ್ರಾಮದಲ್ಲಿ ನಡೆದಿದೆ. ರಾಜವಂತಿ ಗ್ರಾಮದ ಜ್ಯೋತಿಷಿ ರಾಮಣ್ಣ ಸ್ವಾಮಿ ಎನ್ನುವವರನ್ನು ಬೆಂಗಳೂರಿನ ಕಮಲಾನಗರದ ನಿವಾಸಿಗಳು ಕಿಡ್ನಾಪ್ ಮಾಡಿದ್ದು, ಪಾವಗಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವರಾಜು (32), ಮೇದರಹಳ್ಳಿ ಚಿಕ್ಕಬಾಣಾವರದ ಅನಂತಕೃಷ್ಣ (21), ಆಂಧ್ರದ ಮಡಕಶಿರಾ ತಾಲೂಕಿನ ಕೊತಾಲಗುಟ್ಟದ ನರೇಶ್ (25) ಬಂಧಿತ ಆರೋಪಿಗಳು. ಅತಿಯಾಸೆಗೆ ಬಿದ್ದು ಹಣ ಕೊಟ್ಟವರು ಹಣ ವಸೂಲಿಗಾಗಿ ಜ್ಯೋತಿಷಿಯ ಕಿಡ್ನಾಪ್ ಪ್ಲಾನ್ ಮಾಡಿದ್ದು, ಪೊಲೀಸರು ಕಿಡ್ನಾಪ್ ಮಾಡಿದ ಟೀಂ ಅನ್ನು ಕೇವಲ 12 ಗಂಟೆಯೊಳಗೆ ಬಂಧಿಸಿದ್ದಾರೆ. ರಾತ್ರಿ 9 ಗಂಟೆಗೆ ಜ್ಯೋತಿಷಿಯನ್ನು ರಕ್ಷಿಸಿ ಕಿಡ್ನಾಪರ್ಸ್‌ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದಾನೆ.

ಬೈಕ್‌ನಲ್ಲಿ ಹೊರಟಿದ್ದ ಜ್ಯೋತಿಷಿ ರಾಮಣ್ಣನವರನ್ನು ಎರಡು ಕಾರುಗಳಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಪಾವಗಡದ ಅರಣ್ಯ ಇಲಾಖೆ ಕಚೇರಿ ಎದುರು ಆರೋಪಿಗಳು ರಾಮಣ್ಣನವರನ್ನು ಕಿಡ್ನಾಪ್ ಮಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಮಣ್ಣನವರ ಮೊಬೈಲ್‌ನಿಂದಲೇ ಆರೋಪಿಗಳು ರಾಮಣ್ಣರ ಮಗನಿಗೆ ಕರೆ ಮಾಡಿದ್ದರು. ನಿಮ್ಮ ತಂದೆ 16 ಲಕ್ಷ ರೂ. ಸಾಲ ಪಡೆದಿದ್ದಾರೆ. ಆ ಹಣ ಕೊಟ್ಟು ನಿಮ್ಮ ತಂದೆಯನ್ನು ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಬೆಂಗಳೂರಿನ ಉಳ್ಳಾಲ ಬಳಿ ರಾಮಣ್ಣನವರನ್ನು ರಕ್ಷಣೆ ಮಾಡಿದ್ದಾರೆ.

ಕುಡಿವ ನೀರಿನ ಕೊಳವೆಯಲ್ಲಿ ಬಂತು ರಕ್ತದ ಜೊತೆ ಮಾಂಸದ ತುಣುಕು..! ಜನರಿಗೆ ಆತಂಕ

0

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ  ಶನಿವಾರ ಮೂರನೇ ವಾರ್ಡಿನಲ್ಲಿ ಕುಡಿಯುವ ನೀರಿನ ಕೊಳವೆಯಲ್ಲಿ ರಕ್ತ ಮತ್ತು ಮಾಂಸದ ತುಣಕು ಕಂಡುಬಂದಿದ್ದು  ಊರಿನ ಜನರು ಆಶ್ಚರ್ಯ ಪಡುವಂತಾಗಿದೆ. ತೆಕ್ಕಲಕೋಟೆಯ ಮೂರನೇ ವಾರ್ಡಿನ ಜಾಮಿಯಾ ಮಸೀದ್ ಹತ್ತಿರ ಇರುವ ವಠಾರದಲ್ಲಿ ಸಮಯ ಸುಮಾರು 8:00  ವೇಳೆಗೆ ಕುಡಿಯುವ ನೀರು ಸರಬರಾಜು ಮಾಡಲಿಕ್ಕೆ ಅಳವಡಿಸಿರುವ ಕೆಲವೊಂದು ಕೊಳವೆಯಲ್ಲಿ ರಕ್ತದ ನೀರು ಹಾಗೂ ಮಾಂಸದ ತುಣುಕುಗಳು ಕಂಡುಬಂದಿದ್ದು,

ಜನರು ಆಶ್ಚರ್ಯ ಚಕಿತರಾಗಿದ್ದು ಸುದ್ದಿ ತಿಳಿದ ನಂತರ ಸ್ಥಳಕ್ಕೆ ಭೇಟಿ ನೀಡಿದಾಗ ಕಾಜಾ ಸಾಬ್ ತಂದೆ ಅಹ್ಮದ್ ಸಾಬ್, ಕಾಜ ಹುಸೇನ್ ತಂದೆ ಹಮಾಜ್ ಸಾಬ್, ಮೈಬು ತಂದೆ ಶಾಮಿದ್ , ಹಾಗೂ ಅಕ್ಕಪಕ್ಕದ ಮನೆಗಳ  ಕೊಳೆವೆಯಲ್ಲಿ ನೀರಿನ ರಕ್ತದ ಕೋಡಿ ಹರಿದಿತ್ತು ಈ ವಠಾರಕ್ಕೆ ಅದೇ ವಾರ್ಡ್ ನಲ್ಲಿರುವ ನೀರಿನ ಸರಬರಾಜು ಒಂದರ ಟ್ಯಾಂಕನಲ್ಲಿ ವೀಕ್ಷಿಸಿದಾಗ,

ಯಾವುದೇ ರೀತಿಯಲ್ಲಿ ಸಂಶಯಾತ್ಮಕವಾಗಿ  ಕಂಡು  ಬಂದಿರುವುದಿಲ್ಲ, ನಂತರ ಪಟ್ಟಣ ಪಂಚಾಯಿತಿಯ  ಸಿ. ಓ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುವುದಾಗಿ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ  ಗಪೂರ್, ನಾಜಿಮ್,ಹುಸೇನ್, ರಜಾಕ್, ಮೈನುದ್ದಿನ್, ಖಾಜಾ ಮೊಬೈಲ್ ಶಾಪ್, ಶರೀಫ್, ಮಹಿಳೆಯರಾದ ಶಕೀನಾ,ಶಾಯಿನ್, ಶಮಿಮ್, ಶಂಶಾದ್ ಮತ್ತು ವಾರ್ಡಿನ ಕೆಲವು ಕುಟುಂಬ ಪರಿವಾರಗಳು ಮತ್ತಿತರರು  ಇದ್ದರು.

ಚಾಕುವಿನಿಂದ ಇರಿದು ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯ ಹತ್ಯೆ..!

0

ಬೆಂಗಳೂರು: ಚಾಕು ಇರಿದು ಉಪ ನಿರ್ದೇಶಕಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ನಡೆದಿದೆ.

ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ಮೃತ ಸರ್ಕಾರಿ ಅಧಿಕಾರಿ. ತೀರ್ಥಹಳ್ಳಿ ಮೂಲದ ಪ್ರತಿಮಾ ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಯ ಕುವೆಂಪು ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶನಿವಾರ ರಾತ್ರಿ ಪ್ರತಿಮಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಭಾನುವಾರ ಬೆಳಗ್ಗೆ ಪ್ರತಿಮಾ ಅವರ ಸಹೋದರ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆ ಬಳಿ ತೆರಳಿದಾಗ ಕೊಲೆಯಾದ ವಿಚಾರ ಬೆಳಕಿಗೆ ಬಂದಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ  8 ಗಂಟೆಗೆ ಪ್ರತಿಮಾ ಅವರನ್ನು ಕಾರು ಚಾಲಕ ನಿವಾಸಕ್ಕೆ ತಂದು ಬಿಟ್ಟಿದ್ದಾನೆ.

ಪ್ರತಿಮಾ ಬೆಂಗಳೂರಿನಲ್ಲಿ ಒಬ್ಬರೇ ವಾಸವಾಗಿದ್ದು, ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದಾರೆ. ಪ್ರತಿಮಾ ಅವರ ಜೊತೆ ಮನೆಯಲ್ಲಿ ನಿನ್ನೆ ಯಾರಿದ್ದರು? ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಈ ವಿಚಾರಗಳು ಇನ್ನಷ್ಟೇ ತಿಳಿಯಬೇಕಿದೆ.

ಪ್ರವಾಸಿತಾಣ ಭೀಷ್ಮ ಕೆರೆಯಲ್ಲಿ ಮಹಿಳೆ ಶವ ಪತ್ತೆ: ಆತ್ಮಹತ್ಯೆ ಶಂಕೆ

ಗದಗ: ಸುಮಾರ 40 ವರ್ಷದ ಮಹಿಳೆ ಶವ ಭೀಷ್ಮ ಕೆರೆಯಲ್ಲಿ ಪತ್ತೆಯಾಗಿದೆ.

ಮುಂಜಾನೆಯೇ ಭೀಷ್ಮ ಕೆರೆಯಲ್ಲಿ ಶವ ತೇಲಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ 112 ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರಗಡೆ ತೆಗೆದಿದ್ದಾರೆ.

ಮಹಿಳೆ ಅನಾರೋಗ್ಯದಿಂದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೈಗೆ ಸಲಾಯಿನ್ (ನೀಡಲ್ಸ್) ಹಾಕಿರುವ ಪಟ್ಟಿ ಇರೋದರಿಂದ ಪೊಲೀಸರು ಈ ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಿಳೆ ಯಾರು ಅನ್ನೋದು‌ ಪತ್ತೆಯಾಗಿಲ್ಲ. ಹೀಗಾಗಿ ಶಹರ ಠಾಣೆಯ ಪೊಲೀಸರು ಮಹಿಳೆಯ ವಾರಸುದಾರರ ಪತ್ತೆ ಹಚ್ಚಲು ಮುಂದಾಗಿದ್ದಾರೆ.

ಕೆರೆಗೆ ರಕ್ಷಣೆ ಇಲ್ಲದೆ ಇರುವುದರಿಂದ ಇಂತಹ ಪ್ರಕರಣ ಪದೇ ಪದೇ ನಡೆತಾ ಇವೆ.

ಕೆರೆಗೆ ಬೇಲಿ ಹಾಕುವಂತೆ ಜನರು ಈ ಹಿಂದೆ ಹಲವಾರು ಬಾರಿ ಒತ್ತಾಯ ಮಾಡಿದ್ದರು. ಆದರೆ ಇದುವರೆಗೂ ಆ ಕೆಲಸ ಆಗಿಲ್ಲ ಎಂಬ ಆರೋಪ ಜನರದ್ದು,

ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನನಗಂತೂ ಯಾರ ಬೆಂಬಲದ ಅವಶ್ಯಕತೆ ಇಲ್ಲ – ಡಿಕೆ ಶಿವಕುಮಾರ್

0

ಬೆಂಗಳೂರು;- ನನಗೆ ಯಾರ ಬೆಂಬಲವೂ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ಇಶ್ಯೂ ಮಾಡ್ತೀನಿ ಎಂದು ಶಾಸಕರ ವಿರುದ್ಧ ಗರಂ ಆಗಿದ್ದಾರೆ.

ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ಇಶ್ಯೂ ಮಾಡ್ತೀನಿ. ಪಕ್ಷದಲ್ಲಿ ಒಂದು ಶಿಸ್ತು ಇರಬೇಕು. ನನಗೆ ಯಾವ ಶಾಸಕರ ಬೆಂಬಲನೂ ಬೇಡ, ಯಾವ ಶಾಸಕರೂ ಬೇಡ. ರಾಮನಗರ MLA ಇಕ್ಬಾಲ್ ಹುಸೇನ್​ಗೆ ನೋಟಿಸ್ ಕೊಡಬೇಕು ಎಂದು ಕೊಂಡಿದ್ದೀನಿ. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ. ಐ ಡೋಂಟ್ ವಾಂಟ್ ಏನೀ ರೆಕಮೆಂಡೇಶನ್ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.

ಗ್ರಾ. ಪಂ. ಸದಸ್ಯರಿಗೆ ಗೌರವಧನ ಬಿಡುಗಡೆ ಮಾಡಿ – ದಿನೇಶ್ ಗೂಳಿಗೌಡ

0

ಬೆಂಗಳೂರು;– ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಧನ ಬಿಡುಗಡೆ ಮಾಡುವ ಕುರಿತು ಶಾಸಕ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತ್‌ಗಳು ಗ್ರಾಮೀಣ ಭಾಗದ ಸರ್ಕಾರಗಳಾಗಿವೆ. ರಾಜ್ಯದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವರ ಬೇಕು ಬೇಡಗಳನ್ನು ಈಡೇರಿಸುವ ಮಹತ್ವದ ಸಂಸ್ಥೆಗಳಾಗಿವೆ. ಗ್ರಾಮ ಪಂಚಾಯಿತಿಗಳಿಂದ ನಡೆಯುವ ಗ್ರಾಮ ಸಭೆಗಳ ಮೂಲಕ ಪ್ರಜಾಪ್ರಭುತ್ವದ ನಿಜವಾದ ಅರ್ಥ ಸಾಕಾರವಾಗುತ್ತಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಈ ವ್ಯವಸ್ಥೆಯ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ. ಆದರೆ, ಇವರಿಗೆ ಸಮರ್ಪಕವಾಗಿ ವೇತನ ಬರದಿದ್ದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸರ್ಕಾರ ತುರ್ತು ಗಮನ ಹರಿಸಬೇಕಿದೆ.

ಗ್ರಾಪಂ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷನಾಗುವುದನ್ನು ಒಂದು ಸೇವೆ ಎಂದು ಪರಿಗಣಿಸಿದ್ದರೂ, ಅವರ ಕನಿಷ್ಠ ಖರ್ಚು ವೆಚ್ಚಗಳಿಗೆ ಸರ್ಕಾರದಿಂದ ಗೌರವಧನ ನೀಡಲಾಗುತ್ತಿದೆ. ಸದಸ್ಯರಿಗೆ ಮಾಸಿಕ ತಲಾ 2 ಸಾವಿರ ರೂಪಾಯಿ, ಉಪಾಧ್ಯಕ್ಷರಿಗೆ ಮಾಸಿಕ ತಲಾ 3 ಸಾವಿರ ರೂಪಾಯಿ ಹಾಗೂ ಅಧ್ಯಕ್ಷರಿಗೆ ಮಾಸಿಕ ತಲಾ 6 ಸಾವಿರ ರೂಪಾಯಿ ಗೌರವಧನವನ್ನು ನೀಡಲಾಗುತ್ತಿದೆ. ಆರ್ಥಿಕವಾಗಿ ಸಬಲರಲ್ಲದ ಗ್ರಾಮೀಣ ಜನಪ್ರತಿನಿಧಿಗಳಿಗೆ ಈ ಮೊತ್ತವು ತುಂಬಾ ಅವಶ್ಯ ಕೂಡ ಆಗಿದೆ.

ಆದರೆ, ರಾಜ್ಯದ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷರ ಮಾಸಿಕ ಗೌರವಧನವನ್ನು ಕಳೆದ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ತಿಂಗಳುಗಳವರೆಗೆ (07 ತಿಂಗಳು) ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಸದಸ್ಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಜತೆಗೆ ಅವರು ಆಡಳಿತ ವ್ಯವಸ್ಥೆಯಲ್ಲಿ ಆಸಕ್ತಿ ಕಳೆದುಕೊಳ್ಳುವ ಅಪಾಯವೂ ಇದೆ. ಹೀಗಾದಲ್ಲಿ ಸರ್ಕಾರದ ಮೂಲ ಆಶಯಕ್ಕೆ ಧಕ್ಕೆ ಬರುತ್ತದೆ. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇವೇ ತಮ್ಮ ಜವಾಬ್ದಾರಿಗಳಿಂದ ವಿಮುಖರಾದರೆ ಅಭಿವೃದ್ಧಿ ಕಾರ್ಯಗಳು ಮತ್ತಷ್ಟ ಕುಂಠಿತಗೊಳ್ಳುವ ಅಪಾಯ ಇದೆ. ಅಲ್ಲದೆ, ಗ್ರಾಮ ಪಂಚಾಯತ್‌ಗಳ ಆಡಳಿತ ನಿರ್ವಹಣೆ, ಸಾರ್ವಜನಿಕ ಕೆಲಸ ಕಾರ್ಯಗಳು ಕುಂಠಿತಗೊಂಡಿರುತ್ತವೆ.

ಗ್ರಾಮ ಪಂಚಾಯತ್‌ಗಳ ಹೊಣೆಗಾರಿಕೆಯಲ್ಲಿ ಒದಗಿಸಲಾಗುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಪರಿಸರ ನೈರ್ಮಲ್ಯ ಹಾಗೂ ನರೇಗಾದಂತಹ ಜನೋಪಯೋಗಿ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು, ಜನರಿಗೆ ತಲುಪಿಸುವುದು ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಯನ್ನು ಗ್ರಾಪಂ ಜನಪ್ರತಿನಿಧಿಗಳು ಉತ್ಸಾಹದಿಂದ ಮಾಡುವಂತೆ ಮಾಡಬೇಕಿದೆ. ಅಲ್ಲದೆ, ಆರ್ಥಿಕ ಸಮಸ್ಯೆಯಿಂದ ದೂರದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಇವರು ಖುದ್ದು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ.

ಸದ್ಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ ಇರುವ ಕಾರಣ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಿಗೂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಿಲ್ಲ. ಇದರಿಂದ ಗ್ರಾಮ ಪಂಚಾಯತ್ ಆಡಳಿತವೇ ಜನರಿಗೆ ಸ್ಪಂದಿಸಬೇಕಿದೆ.

ರಾಜ್ಯದಲ್ಲಿ ಸದ್ಯ 6022 ಗ್ರಾಮ ಪಂಚಾಯತ್‌ಗಳಿದ್ದು, ಅಷ್ಟೇ ಸಂಖ್ಯೆಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸುಮಾರು 90 ಸಾವಿರದಷ್ಟು ಸದಸ್ಯರಿದ್ದಾರೆ. ಅವರಿಗೆ ಪ್ರತಿ ತಿಂಗಳು ಗೌರವಧನ ನೀಡಲು ದಯಮಾಡಿ ಅನುದಾನವನ್ನು ಆದಷ್ಟು‌‌‌‌ ಶೀಘ್ರ ಬಿಡುಗಡೆ ಮಾಡುವಂತೆ ಈ ಪತ್ರದ ಮುಖೇನ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಪರವಾಗಿ ಕೋರಲಾಗಿದೆ ಎಂದು ಬರೆದಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಪತನ – ಕಟೀಲ್

0

ಬಾಗಲಕೋಟೆ;- ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲ್ಲ. ಬದಲಾಗಿ ಆಪರೇಶನ್ ಹಸ್ತ ನಡೆಯುತ್ತಿದೆ. ಬರದ ನಡುವೆ ಕೈ ನಾಯಕರು ಕುರ್ಚಿಗಾಗಿ ಕಸರತ್ತು ನಡೆಸಿದ್ದಾರೆ. ನಾವೇನು ಸರ್ಕಾರ ಕೆಡವಲ್ಲ. ಅದು ತಾನಾಗಿಯೇ ಬೀಳಲಿದೆ ಎಂದರು.

ಸರ್ಕಾರ ಬೀಳೋದನ್ನೇ ನಾವು ಕಾಯುತ್ತಿಲ್ಲ. ರಾಜ್ಯದ ಜನತೆಯ ಪರವಾಗಿ ನಮ್ಮ ಪಕ್ಷ ಇದೆ. ಅಧಿಕಾರಕ್ಕಾಗಿ ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಸರ್ಕಾರ ಪತನವಾದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ. ಬರ ಕಾಮಗಾರಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ರೈತರ ಶಾಪದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಕಟೀಲ್ ತಿಳಿಸಿದರು.

ವಿಪಕ್ಷ ನಾಯಕನ ಆಯ್ಕೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ಕಾದು ನೋಡೋಣ, ಹೇಗಾದರೂ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಆ ಬಗ್ಗೆ ಯೋಚಿಸೋಣ ಎಂದು ನಸುನಕ್ಕರು.

ಇದೇ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಕಟೀಲ್ ಪ್ರತಿಕ್ರಿಯೆ ನೀಡದೇ ಮೌನವಹಿಸಿದರು.

error: Content is protected !!