Home Blog Page 3177

ಧಾರವಾಡ ಜಿಲ್ಲೆಯ ಬಿಜೆಪಿಯ ಮತ್ತೊಬ್ಬ ನಾಯಕ ಕಾಂಗ್ರೆಸ್ ಸೇರ್ಪಡೆ

0

ಹುಬ್ಬಳ್ಳಿ,: ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್‌ ಮೈತ್ರಿ ಬೆನ್ನಲ್ಲೇ ಇತ್ತ ಕಾಂಗ್ರೆಸ್​​ನಿಂದ ಕರ್ನಾಟಕದಲ್ಲಿ ಆಪರೇಷನ್ ಹಸ್ತ ಬಿರುಸುಗೊಂಡಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್​, ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿರುವ ಬಿಜೆಪಿ ಹಾಗೂ ಜೆಡಿಎಸ್​​ ನಾಯಕರುಗಳಿಗೆ ಗಾಳ ಹಾಕಿದೆ.

ಈಗಾಗಲೇ ಕೆಲ ಭಾರತೀಯ ಜನತಾ ಪಕ್ಷದ ಮಾಜಿ ಶಾಸಕರುಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪನವರ ಸಂಬಂಧಿ , ಮಾಜಿ ಶಾಸಕ ಚಿಕ್ಕನಗೌಡರ್ ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್​ನತ್ತ ಸೇರ್ಪಡೆಗೆ ಮುಂದಾಗಿದ್ದಾರೆ.

ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ?

0

ಪ್ರತಾಪ್ ಮನೆಯಲ್ಲಿನ ಹೆಣ್ಣುಮಕ್ಕಳನ್ನು ನೋಡೋ ದೃಷ್ಟಿ ಸರಿ ಇಲ್ವಾ? ಕಳೆದ ವಾರ ವಿನಯ್ ಬಾಯಲ್ಲಿ ಇಂಥದೊಂದು ಮಾತು ಹೊರಬಂದಿತ್ತು. ಅದಕ್ಕೆ ಇಶಾನಿ‌ ಕೂಡ ‘ಹೌದು. ನಂಗೂ ಗೊತ್ತು ಅದು’ ಎಂದು ಅನುಮೋದಿಸಿದ್ದರು.‌ ತುಕಾಲಿ, ನಮ್ರತಾ ಕೂಡ ಆ ಮಾತನ್ನು ಅನುಮೋದಿಸಿದ್ದರು.ಈಗ ವೀಕೆಂಡ್ ಎಪಿಸೋಡಿನಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.

ಇದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.ಪ್ರತಾಪ್ ಕ್ಯಾರೆಕ್ಟರಿಗೇ ಕಳಂಕ ತರುವಂಥ ಮಾತುಗಳನ್ನಾಡಿದ ವಿನಯ್, ಇಶಾನಿ ಏನು ಹೇಳುತ್ತಾರೆ? ಸ್ವತಃ ಪ್ರತಾಪ್ ಗೆ ಇವೆಲ್ಲದರ ಅರಿವಿದೆಯೇ? ಗೊತ್ತಾಗಲು ಈವತ್ತು ರಾತ್ರಿ 9ಗಂಟೆಗೆ ಪ್ರಸಾರವಾಗುವ ‘ಸೂಪರ್ ಸಂಡೆ ವಿಥ್ ಸುದೀಪ್’ ನೋಡಬೇಕು.

50 ವರ್ಷದ ನಂತರ ರಾಜ್ಯದಲ್ಲಿ ಬರ ತಾಂಡವ ಆಡುತ್ತಿದೆ: ಗೋವಿಂದ ಕಾರಜೋಳ

0

ಧಾರವಾಡ: ಮಾದ್ಯಮಗಳಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಸರಕಾರದ ಆಡಳಿತ ಕುಸಿದು ಹೋಗಿದೆ. 50 ವರ್ಷದ ನಂತರ ಬರ ತಾಂಡವ ಆಡುತ್ತಿದೆ. ಮುಂಗಾರು-ಹಿಂಗಾರು ಬೆಳೆ ಕೈ ಕೊಟ್ಟಿದೆ.

ರಾಜ್ಯ ಸರಕಾರ ರಾಜ್ಯದ ಜನತೆಯ ಪರವಾಗಿ ನಿಲ್ಲಬೇಕಿತ್ತು, ಆದರೆ ಸರಕಾರ ನಿಲ್ಲುತ್ತಿಲ್ಲ, ಪ್ರತಿದಿನ 7 ಗಂಟೆ ತ್ರಿಪೇಸ್ ಕೊಡಬೇಕಿತ್ತು ಕೊಡ್ತಾ ಇಲ್ಲ, ಸರಕಾರ 7 ತಾಸು ರೈತರಿಗೆ ತ್ರಿಪೇಸ್ ಕೊಡಬೇಕು.

ವಿರಾವೇಶದಿಂದ ಹೇಳಿಕ್ಕೊಂಡ್ರು ರಾಜ್ಯದ ಅಭಿವೃದ್ದಿ ಮಾಡುತ್ತೆವೆ ಎಂದಿದ್ದ ಸಿದ್ದರಾಮಯ್ಯ, ಇದೀಗ  ಸರ್ವರಿಗೂ ಸಮಪಾಲು ಅಂತಾರೆ. ಅವರು ಸುಳ್ಖು ಹೇಳಿಕ್ಕೊಂಡು ಗಿಮಿಕ್ ಮಾಡಿದ್ದಾರೆ ಎಂದರು.

ಇನ್ನೂ ಪ್ರತಿ ತಾಲೂಕು ಪಂಚಾಯತಗೆ 10 ಕೋಟಿ ಹಣ ಬಿಡುಗಡೆ ಮಾಡಬೇಕು. ನವಲಗುಂದ, ಅಣ್ಣಗೇರಿ, ಕಲಘಟಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೊರಟಿದ್ದಾರೆ. 68 ಕೆರೆಗಳನ್ನ ಮಲಪ್ರಭಾ ಡ‌್ಯಾಂ ನಿಂದ ನೀರು ತುಂಬಿಸಿಕೊಡಬೇಕು. ಮಾದೇವಪ್ಪ ನಿನಗೂ ಪ್ರಿ, ಕಾಕಾಸಾಹೇಬ್ ನಿನಗೂ ಪ್ರಿ ಎಂದಿದ್ದ ಸಿದ್ದರಾಮಯ್ಯ ಎಂದು ಸಿಎಂ ಹೇಳಿಕೆಯನ್ನ ಮಿಮಿಕ್ರಿ ಮಾಡಿದರು.

ಬೇಟೆಗಾರನ ಎದೆ ಸೀಳಿದ ಅರಣ್ಯಾಧಿಕಾರಿ ಹಾರಿಸಿದ ಗುಂಡು

0

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮದ್ದೂರು ರೇಂಜ್ ಬಳಿ ಬೇಟೆಗಾರನ ಮೇಲೆ ಅರಣ್ಯಾಧಿಕಾರಿ ಫೈರಿಂಗ್ ಮಾಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭೀಮನಬೀಡು ಗ್ರಾಮದ ನಿವಾಸಿ ಮನೋಜ್‌ (23) ಗುಂಡಿನ ದಾಳಿಗೆ ಬಲಿಯಾದ ಬೇಟೆಗಾರ.

10 ಬೇಟೆಗಾರರ ತಂಡ ತಡರಾತ್ರಿ ಕಡವೆ ಬೇಟೆಯಾಡಲು ಬಂದಿದ್ದರು. ಬೇಟೆಗಾರರು ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿ ಕೊಂಡೊಯ್ಯುತ್ತಿದ್ದರು.

ಈ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೇಟೆಗಾರರನ್ನು ಬಂಧಿಸಲು ಯತ್ನಿಸಿದ್ದಾರೆ.

ಈ ವೇಳೆ ಬೇಟೆಗಾರರು ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಅರಣ್ಯಾಧಿಕಾರಿ ಆತ್ಮರಕ್ಷಣೆಗಾಗಿ ಬೇಟೆಗಾರರ ಮೇಲೆ ಫೈರಿಂಗ್ ಮಾಡಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ.

ಮೃತಪಟ್ಟ ಮಹೇಶ್‌ಗೆ ವಿವಾಹವಾಗಿ ಒಂದು ವರ್ಷವಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.

ಕೊಲೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಆದರೆ ರಿಯಲ್ ಫಾಕ್ಟ್ಸ್ ಗೊತ್ತಾಗುತ್ತಿಲ್ಲ: ಎಸ್ ಎಸ್ ಮಲ್ಲಿಕಾರ್ಜುನ್

0

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊಲೆ ನಡೆದಿರುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಆದರೆ ರಿಯಲ್ ಫಾಕ್ಟ್ಸ್ ಗೊತ್ತಾಗುತ್ತಿಲ್ಲ, ಪೊಲೀಸ್ ನವರು ಫ್ಯಾಮಿಲಿ ಡಿಸ್ಪ್ಯೂಟ್ ಅಂತ ಹೇಳುತ್ತಿದ್ದಾರೆ. ಇಲಾಖೆಯಿಂದ ಯಾವುದೇ ಇಸ್ಸ್ಯೂಗಳು ಇರಲಿಲ್ಲ. ಹೀಗಾಗಿ ಇದು ಏನು ಅಂತ ಗೊತ್ತಾಗುತ್ತಿಲ್ಲ. ತನಿಖೆಯಿಂದಲೇ ಗೊತ್ತಾಗಬೇಕು ಎಂದು ಹೇಳಿದರು.

ಇನ್ನೂ ಅವರಿಗೆ ತೀರ್ಥಹಳ್ಳಿಯಲ್ಲಿ ಒಂದು ಮಗುವಿದೆ. ಫ್ಯಾಮಿಲಿ ಜೊತೆ ಸರಿ ಇರಲಿಲ್ಲ ಅಂತಾನು ಹೇಳುತ್ತಿದ್ದಾರೆ. ಹೀಗಾಗಿ ಇದು ಗೊಂದಲವಾಗಿದೆ, ಪೂರ್ಣ ತನಿಖೆಯಾಗಬೇಕಿದೆ.

ಅಕ್ರಮ ಗಣಿಗಾರಿಕೆ ಇಸ್ಸ್ಯೂ ಇದ್ರೆ ನೋಡೊಣ. ಕಾರ್ ಡ್ರೈವರ್ ನನ್ನ ರಿಲ್ಯೂವ್ ಮಾಡಿದ್ದರು ಎಂಬ ಮಾಹಿತಿ ಇದೆ. ಯಾರ‌್ಯಾರು ಸಂಪರ್ಕದಲ್ಲಿದ್ದರು  ಇದೆಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಪ್ರತಿಮಾ ಒಳ್ಳೆಯ ಆಫೀಸರ್ ಆಗಿದ್ದರು. ನಿನ್ನೆ ವಿಡಿಯೋ ಕಾನ್ಫರೆನ್ಸ್  ಮೀಟಿಂಗ್ ಕೂಡ ಮಾಡಿದ್ದಾರೆ. ಪ್ರತ್ಯೇಕವಾಗಿ ಅವರದ್ದು ಏನಿದೆಯೋ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತಾರೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.

ಸಿಎಂ ಆಗೋಕೆ ಕಾಂಗ್ರೆಸ್​ನಲ್ಲಿ 8-10 ಜನ ಕಾಯ್ತಿದ್ದಾರೆ: ವಿಜಯೇಂದ್ರ

0

ಬೆಂಗಳೂರು: ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ.  ಆದ್ರೆ ಕಾಂಗ್ರೆಸ್​ನಲ್ಲಿ ಇನ್ನೂ 8 ರಿಂದ 10 ಜನ ಮುಖ್ಯಮಂತ್ರಿ ಸಾಲಿನಲ್ಲಿ ನಿಂತಿದ್ದಾರೆ. ನನಗೂ ಡಿಸಿಎಂ ಸ್ಥಾನ ಕೊಡಿ ಅಂತಾ 18-20 ಜನ ಕಾಯ್ತಿದ್ದಾರೆ. ಈ ಪರಿಸ್ಥಿತಿ ದೇಶದ ಯಾವುದೇ ರಾಜ್ಯದಲ್ಲಿ ನೋಡಲು ಆಗಲ್ಲ.

ಜಾತಿ ಗಣತಿ ವರದಿ ಸ್ವೀಕಾರಕ್ಕೆ ರಾಜ್ಯ ಸರ್ಕಾರ ಸಿದ್ಧತೆ ವಿಚಾರವಾಗಿ ಮಾತನಾಡಿದ ಅವರು ಲಿಂಗಾಯತರು, ಒಕ್ಕಲಿಗರು ಎಂಬ ಪ್ರಶ್ನೆ ಅಲ್ಲ ಎಲ್ಲಾ ವರ್ಗದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಯೋಚಿಸಬೇಕು. ಬೆಂಕಿ ಹಚ್ಚುವ ಕೆಲಸ ಮಾಡಿದರೆ ಜನ ಕ್ಷಮಿಸಲ್ಲ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯನಗರದಲ್ಲಿ ದನಕರುಗಳ ಮೇಲೆ ಚಿರತೆ ದಾಳಿ

0

ವಿಜಯನಗರ: ದನಕರುಗಳ‌ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಹೊಸಪೇಟೆ ತಾಲೂಕಿನ ರಾಯರಕೇರೆ ಪ್ರದೇಶದ ಹೊಲದಲ್ಲಿ ನಡೆದಿದೆ.

ಕಟಗಿ ವಸಂತಪ್ಪ ಎಂಬ ರೈತನ ಹಸು ಮೇಲೆ ಚಿರತೆ ದಾಳಿ ಮಾಡಿದ್ದು, ಕಳೆದ ಸ್ವಲ್ಪ ದಿನಗಳಿಂದ ಐದು ಕುರಿ, ನಾಲ್ಕು ನಾಯಿಗಳನ್ನು ಹೊತ್ತೊಯ್ದಿದೆ.

ಚಿರತೆ ಈಗ  ದನಕರುಗಳ‌ ಮೇಲೆ ದಾಳಿ ಮಾಡಿರುವುದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿರುವ  ರೈತರಿಗೆ ಚಿರತೆ ಕಾಟ ಹೆಚ್ಚಾಗಿದೆ.

ಹೊಸಪೇಟೆ ಟ್ರಾಫಿಕ್ ಪೊಲೀಸ್ ಠಾಣೆ, ನ್ಯಾಶನಲ್ ಕಾಲೇಜುಗಳ ಆಜು-ಬಾಜು ಚಿರತೆ ಓಡ್ಯಾಟ ಹೆಚ್ಚಾಗುತ್ತಿದೆ. ಇನ್ನೂ ಸ್ವಲ್ಪ ದಿನಗಳು ಬಿಟ್ರೆ, ಹೊಸಪೇಟೆ ನಗರ, ಹಳ್ಳಿಗಳ ಭಾಗದಲ್ಲಿ ಚಿರತೆ ಎಂಟ್ರಿಯಾಗುತ್ತದೆ ಅನ್ನೋದು ರೈತರ ಆತಂಕವಾಗಿದ್ದು, ಕೂಡಲೇ ಚಿರತೆ ಸೆರೆ ಹಿಡಯಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.

ಎಷ್ಟು ಹೇಳಿದ್ರು ಪರೀಕ್ಷಾ ಸಿಬ್ಬಂದಿ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ: ರಾಜಮ್ಮ ನೋವಿನ ಮಾತು

0

ಕಲಬುರಗಿ: ಕಲಬುರಗಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಗ್ರೂಪ್ ಸಿ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು.

ಈ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು.

ಅಲ್ಲದೇ ಕಿವಿ ಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.

ಹಿಂದು ಸಂಪ್ರದಾಯದಲ್ಲಿ ತಾಳಿ ಕಾಲುಂಗರಕ್ಕೆ ತನ್ನದೇ ಆದ ಸಂಸ್ಕ್ರತಿಯಿದೆ. ಗಂಡ ಸತ್ತಾಗ ಅಥವಾ ಹೆರಿಗೆ ಸಮಯದಲ್ಲಿ ಮಾತ್ರ ತಾಳಿ ತೆಗೆಯುತ್ತೆವೆ.

ಇಷ್ಟು ಹೇಳಿದ್ರು ಪರೀಕ್ಷಾ ಸಿಬ್ಬಂದಿ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ, ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ ತೆಗೆಯಬೇಕು ಅಂತಾ ಹೇಳಿದ್ರು. ಹೀಗಾಗಿ ಪರೀಕ್ಷೆ ದೃಷ್ಟಿಯಿಂದ ಸಹೋದರನ ಕೈಯಲ್ಲಿ ತಾಳಿ ಕೊಟ್ಟು ಹೋದ್ವಿ, ಪರೀಕ್ಷೆ ಬರೆದ ಬಳಿಕ ಮತ್ತೆ ಬಂದು ತಾಳಿ ಧರಿಸಿದಿವಿ,

ಈ ವಿಷ್ಯ ನಮ್ಮ ಮನಸ್ಸಿಗೆ ಆಘಾತ ತಂದಿದೆ ಸರ್ಕಾರ ಹೀಗೆ ಮಾಡಬಾರದಿತ್ತು ಎಂದು ಮಾಧ್ಯಮಗಳಿಗೆ ಪರೀಕ್ಷಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.

ನೀರಿನ ಸಂಪಿಗೆ ಬಿದ್ದು ಆಶಾ ಕಾರ್ಯಕರ್ತೆ ಸಾವು

ರೋಣ:- ಮನೆ ಮುಂದಿನ ನೀರಿನ ಸಂಪಿಗೆ ಕಾಲು ಜಾರಿ ಬಿದ್ದು ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಜರುಗಿದೆ.

ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ಆಶಾ ಕಾರ್ಯಕರ್ತೆ ಅಮೀನಾಬೇಗಂ ಮುಲ್ಲಾ (45) ಮೃತಪಟ್ಟ ದುರ್ಧೈವಿ.

ಇಂದು ಮುಂಜಾನೆ ಮನೆ ಮುಂದಿನ ಟ್ಯಾಂಕಿನಲ್ಲಿ ನೀರು ತುಂಬುವಾಗ ಆಯಾ ತಪ್ಪಿ ಬಿದ್ದು ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆದಿದ್ದಾರೆ.

ರೋಣ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಬ್ರ್ಯಾಂಡೆಂಡ್ ಬಟ್ಟೆಗಳೆಂದು ನಕಲಿ ಬಟ್ಟೆ ಮಾರಾಟ – ಆರೋಪಿ ಅರೆಸ್ಟ್

0

ಬೆಂಗಳೂರು;- ನಗರದಲ್ಲಿ ನಕಲಿ ಬಟ್ಟೆ ಶೇಖರಿಸಿಟ್ಟಿದ್ದ ಅಪಾರ್ಟ್ಮೆಂಟ್ ಮೇಲೆ ಪೊಲೀಸರ ರೇಡ್ ಮಾಡಿದ್ದಾರೆ. ಬ್ರ್ಯಾಂಡೆಡ್ ಕಂಪನಿಯ ಹೆಸರಿನಲ್ಲಿ ನಕಲಿ ಬಟ್ಟೆ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರ್ಮಾನಿ ಬರ್ಬರಿ ಸೇರಿ ಹಲವು ಬ್ರಾಂಡ್ ಗಳ ನಕಲಿ ಬಟ್ಟೆಗಳು ವಶಕ್ಕೆ ಪಡೆದಿದ್ದಾರೆ.

ಕೋಟ್ಯಾಂತರ ಮೌಲ್ಯದ ಬಟ್ಟೆಯನ್ನು ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಶೇಖರಣೆ‌ ಮಾಡಿದ್ದ. ಮೋಹಿತ್ ಎಂಬಾತನಿಂದ ನಕಲಿ ಬಟ್ಟೆ ಶೇಖರಣೆ ಮಾಡಲಾಗಿತ್ತು. ಕೆಲ ಪ್ರತಿಷ್ಠಿತ ಕಂಪನಿಯವರಿಂದ ವಿವಿಪುರಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೋಟ್ಯಾಂತರ ರೂಪಾಯಿ ಬಟ್ಟೆಗಳು ಪೊಲೀಸರು ವಶಕ್ಕೆ ಪಡೆದಿದ್ದು, ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!