ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್. ಎಸ್. ಶ್ರೀನಿವಾಸ್ ಅವರು ಬುಧವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೃತರಾದ ಹೆಚ್. ಎಸ್. ಶ್ರೀನಿವಾಸ್ (58) ಅವರಿಗೆ ಇತ್ತೀಚಿಗೆ ಸೋಂಕು ದೃಢ ಪಟ್ಟಿತ್ತು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂತಾಪ: ಶ್ರೀನಿವಾಸ್ ಅವರ ನಿಧನಕ್ಕೆ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರಿಣಿಸಲಿ. ಸರ್ಕಾರದಿಂದ ದೊರೆಯುವ ಪರಿಹಾರವನ್ನು ಕುಟುಂಬಕ್ಕೆ ಶೀಘ್ರ ದೊರಕಿಸಲು ಕ್ರಮ ವಹಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಜಿಲ್ಲೆಯ ಹಲವಡೆ ಬಿರುಗಾಳಿ, ಗುಡುಗು ಸಿಡಿಲು ಸಮೇತ ಮಳೆಯಾಗಿದೆ. ಜಿಲ್ಲೆಯ ಗಜೇಂದ್ರಗಡ, ರೋಣ ಶಿರಹಟ್ಟಿ ತಾಲೂಕಿನ ಹಲವೆಡೆ ಬಿರುಗಾಳಿ ಮಳೆಯಾಗಿದೆ. ಅನೇಕ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಬಿಸಿಲುನಿಂದ ಬೆಂದ ಜನ್ರಿಗೆ ಮಳೆರಾಯ ತಂಪೆರೆಯುವಂತೆ ಮಾಡಿದ್ದಾನೆ.
ಇನ್ನೂ ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಂಗಾ ನಗರದ ಮನೆ ಮುಂದಿನ ತೆಂಗಿನಮರ ಸಿಡಿಲಿನ ಬೆಂಕಿಗಾಹುತಿಯಾಗಿದೆ. ತೆಂಗಿನ ಮರದ ಸಿಡಿಲು, ಬೆಂಕಿ ಕಂಡು ಸ್ಥಳೀಯರು ಕೆಲಕಾಲ ಭಯಭೀತಗೊಂಡಿದ್ದರು.
ಎಪ್ರಿಲ್ 14 ಬುಧವಾರದಂದು ಜಿಲ್ಲೆಯಲ್ಲಿ 25 ಜನರಿಗೆ ಸೋಂಕು ಪತ್ತೆಯಾಗಿದೆ. ಗದಗ ನಗರ ಹಾಗೂ ತಾಲೂಕಿನ 16 ಜನರಿಗೆ, ಮುಂಡರಗಿಯ 00, ನರಗುಂದದ 00, ರೋಣ ತಾಲೂಕಿನಲ್ಲಿ 03 ಹಾಗೂ ಶಿರಹಟ್ಟಿ ತಾಲೂಕಿನ 05 ಹಾಗೂ ಹೊರಜಿಲ್ಲೆಯ-01 ಜನರಿಗೆ ಸೋಂಕು ತಗುಲಿದೆ.
ಬುಧವಾರ 25 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11436 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 17 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11150 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 145 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 168 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 313084 ಮಾದರಿಗಳಲ್ಲಿ 301480 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭೀಮರಾವ್ ರಾಮ್‌ಜೀ ಅಂಬೇಡ್ಕರ್ ರವರು ಏಪ್ರಿಲ್ 14, 1891 ರಂದು ರಾಮಜಿ ಮತ್ತು ಭೀಮಬಾಯಿ ದಂಪತಿಗಳ 14ನೇ ಮಗನಾಗಿ ಜನಿಸಿದರು.ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು, ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ,ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿನಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ ರವರು 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ.
ನಂತರ 1913ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ ಎ ಹಾಗೂ ಎಂ ಎ ,ಪಿಎಚ್ ಡಿ ಪದವಿ ಪಡೆದ ನಂತರ ಹೆಚ್ಚಿನ ಉನ್ನತ ವ್ಯಾಸಂಗವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ತದನಂತರ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಸಹ ಪಡೆಯುವ ಮೂಲಕ ಭಾರತಕ್ಕೆ ಬಂದು ವಕೀಲ ವೃತ್ತಿಯನ್ನು ಪ್ರಾರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.ಇದೆ ಸಮಯದಲ್ಲಿ ಇವರನ್ನು1927ರಲ್ಲಿ ಮುಂಬಯಿಯ ಶಾಸಕಾಂಗ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ.ಈ ತನ್ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು ಜೊತೆಗೆ 1927 ರಿಂದ 1932 ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮತಾವಾದದ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುತ್ತಾರೆ.
ದೇಶದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದಾರೆ, ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲೂ ಅತ್ಯುತ್ತಮ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡಿರುತ್ತಾರೆ.ಹೀಗಾಗಿ ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ, ಈ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವ ಭಾವನೆಗಳು ಸೇರಿ ಹತ್ತು ಹಲವಾರು ಸಮಾಜಿಕ ಮೌಲ್ಯಾಧಾರಿತ ವೈಜ್ಞಾನಿಕ ಅಭಿವೃದ್ಧಿ ಪರ ಚಿಂತನಗಳ ಸಿದ್ದಾಂತ್ ಗಳು ದೇಶಕ್ಕೆ ನೀಡಿದ್ದಾರೆ. ಇವರ ತ್ಯಾಗ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಕಚ್ಚೆದೇಯ ಮನೋಧರ್ಮಗಳ ನೈಜತೆ ವಿಚಾರಗಳು ಇಂದಿನ ಸಮಾಜಕ್ಕೆ ಪ್ರೇರಣೆ, ಮಾರ್ಗದರ್ಶನ ಎನ್ನುವಂದತ್ತು ಸುಳ್ಳಲ್ಲ.
ಅಂಬೇಡ್ಕರ್ ರವರ ವೈಚಾರಿಕ ಬದುಕು – ಡಾ.ಬಿ.ಆರ್. ಅಂಬೇಡ್ಕರ ಅವರೊಬ್ಬ ಸಮಾಜಮುಖಿ ಚಿಂತಕ, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ,ಅವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡಿ ವಿಶ್ವಕ್ಕೆ ಮಾದರಿ, ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದ್ದು ಹೀಗಾಗಿ ಭಾರತ ಸಂವಿಧಾನ ವಿಶ್ವ ಸರ್ವ ಶ್ರೇಷ್ಠ ಮಾಹಾಸಂವಿಧಾನ ಬಂಧುಗಳೇ, ಆದ್ದರಿಂದ ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಆಡಳಿತ ನಡೆಯುತ್ತಿದೆ ಎಂದರೆ ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದಿಂದ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಗೌರವದಿಂದ ನಡೆಯಬೇಕಾಗಿದೆ. ಜೊತೆಗೆ ಅವರ ಕೈಗೊಂಡ ಹಲವಾರು ಜನಪರ ಕಾಳಜಿ ನಮ್ಮಗೆಲ್ಲರಿಗೂ ಮಾದರಿ, ಅವರ ವೈಚಾರಿಕ ಕ್ರಾಂತಿ ಹಾಗೂ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳ ವಿರುದ್ಧದ ಹೋರಾಟ ಎಂದೆಂದಿಗೂ ಈ ದೇಶವು ಮರೆಯುವಂತಿಲ್ಲ.
ಈ ಎಲ್ಲಾ ಚಳವಳಿಗಳಿಗೆ ಇಂದಿಗೂ – ಎಂದೆಂದಿಗೂ ಕೆಚ್ಚೆದೆಯ ಹೋರಾಟದ ಸ್ಪೂರ್ತಿ ಚಿಂತನೆಗಳೇ ಅವರು ಕೊಟ್ಟ ದೊಡ್ಡ ಬಳುವಳಿ ನಮಗೆ ಎಂದರೆ ತಪ್ಪಾಗಲಾರದು. ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಸತ್ತ ನಂತರವೂ ಬದುಕಿರುತ್ತಾರೆ. ಮೊದಲನೆಯದಕ್ಕೆ ಉದಾಹರಣೆ ನೀಡಲು ಈ ಜಗದಲ್ಲಿ ಕೋಟ್ಯಂತರ ಮಂದಿ ಇರಬಹುದು. ಆದರೆ, ಎರಡನೆಯದಕ್ಕೆ ನಿದರ್ಶನ ಕೊಡಲು ಕೋಟಿಗೊಬ್ಬರು ದೊರೆಯುವುದೂ ದುರ್ಲಭ. ಈ ಹಿಂದೆ ಹುಟ್ಟಿರದ, ಬಹುಶಃ ಮುಂದೆಯೂ ಹುಟ್ಟಲು ಸಾಧ್ಯವಿಲ್ಲದ ವಿರಳಾತಿ ವಿರಳ ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಮತ್ತು ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಅಗಾದ ಪಾಂಡಿತ್ಯ ಹಾಗೂ ಗೌರವ ಹೊಂದಿದ್ದ ಡಾ.ಬಿ.ಆರ್. ಅಂಬೇಡ್ಕರ ರವರು, ಅವರ ಕಠಿಣ ಪರಿಶ್ರಮ, ಸಾಧನೆ, ತತ್ತ್ವಾದರ್ಶ ಇಂದಿನ ಜನಸಾಮಾನ್ಯರಿಗೆ ಪ್ರೇರಣೆ ಎಂಬುದು ನಾವೆಲ್ಲರೂ ಆತ್ಮಸಾಕ್ಷಿಯಿಂದ ಒಪ್ಪಲೇ ಬೇಕು. ನಮ್ಮ ನಡುವೆ ಇದ್ದ ಓರ್ವ ವ್ಯಕ್ತಿ ಸರ್ವಮಾನ್ಯ ಮಹಾನ್ ಶಕ್ತಿಯಾಗಿ ಬೆಳೆದು, ಒಂದು ಸಂಸ್ಥೆಯಾಗಿ ರೂಪುಗೊಂಡು ಕೋಟ್ಯಂತರ ಜನರ ಹೃದಯ ಕಮಲಗಳಲ್ಲಿ ಬಲಿಷ್ಠವಾಗಿ ಬೇರೂರಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಪ್ರತಿಮಾತ್ಮಕ ಘನ ವ್ಯಕ್ತಿತ್ವದ ಅಂಬೇಡ್ಕರ್ ರವರೇ ಸಾಕ್ಷಿ.
ಬಡತನವನ್ನು ಸಹಿಸಬಹುದು. ಆದರೆ, ಸ್ವಾಭಿಮಾನವನ್ನೇ ಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು. ಜಾತಿ ವ್ಯವಸ್ಥೆಯ ಈ ಅನಿಷ್ಠವನ್ನು ದೂರಮಾಡಲು ಡಾ. ಅಂಬೇಡ್ಕರ್ ಅವರು ನಡೆಸಿದ ಹೋರಾಟಗಳು ವರ್ಣಿಸಲು ಅಸಾಧ್ಯವಾದುದು. ಕೆಳ ಜಾತಿಯ ಮಕ್ಕಳು ಶಾಲೆಯಲ್ಲಿ ಎಲ್ಲರೊಡನೆ ಸರಿಸಮನಾಗಿ ಕೂರುವಂತಿರಲಿಲ್ಲ. ಅಷ್ಟೇ ಏಕೆ ? ಎತ್ತಿನ ಗಾಡಿಯನ್ನು ಏರುವಂತಿರಲಿಲ್ಲ. ಎತ್ತಿನಗಾಡಿಯನ್ನು ಏರಿದರೆ ಎತ್ತುಗಳಿಗೇ ಮೈಲಿಗೆಯಾಗುತ್ತದೆ ಎಂಬ ಅರ್ಥಹೀನ ಹಾಗೂ ಅಮಾನವೀಯ ಸಂಸ್ಕೃತಿ. ಇಂಥ ಅಪಮಾನ ಎದುರಿಸುವ ಎದೆಗಾರಿಕೆ ಅಂಬೇಡ್ಕರ್ ಅವರಲ್ಲಿ ಚಿಗುರಿದ್ದು ನಮ್ಮ ಭಾರತ ದೇಶದ ಭಾಗ್ಯ.
ಹಾಗಾಗಿ ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗುತ್ತವೆ ಮತ್ತೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕರಾಗಿ ಕಂಗೊಳಿಸಿದ ಮಾಹಾ ಚೈತನ್ಯ ಮೂರ್ತಿ ಸ್ನೇಹಿತರೇ.
ಇಂಥ ವಾತಾವರಣದಲ್ಲಿ ಜನಿಸಿದ ಯುವ ತರುಣ ತನ್ನ ಪ್ರತಿಭೆಯಿಂದಲೇ ವಿದೇಶದಲ್ಲಿ ವ್ಯಾಸಂಗ ಮಾಡಿ. ಆ ಸಂದರ್ಭದಲ್ಲಿ ಅಲ್ಲಿಯೇ ದುಡಿಮೆಗೆ ವಿಫುಲ ಅವಕಾಶಗಳು ದೊರೆತರೂ, ಅವೆಲ್ಲವನ್ನೂ ನಿರಾಕರಿಸಿ, ಸ್ವದೇಶಕ್ಕೆ ಮರಳಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಸಮಾಜದ ಅವಕೃಪೆಗೆ ತುತ್ತಾಗಿದ್ದ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಡಲು ಸುಧಾರಣೆ – ಅಭಿವೃದ್ಧಿಯೆಂಬ ಸಮಾಜಿಕ ಕಳಕಳಿಯ ಚಕ್ರವನ್ನು ಪ್ರಯೋಗಿಸಿದರು. ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ ಎಂಬುವುದನ್ನು ಜಗತ್ತಿಗೆ ಸಾರಿ ಹೇಳಿದರು. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ. ಅಂಬೇಡ್ಕರ್ ವೇದವಾಕ್ಯವಾಗಿತ್ತು ಹೀಗಾಗಿ ಇಂತಹ ಅನೇಕ ಕ್ರಾಂತಿಕಾರಿ ತಮ್ಮ ಬದುಕಿನ ಹೋರಾಟದ ಮೂಲಕ ಬಡವರ – ನೊಂದವರ ಕಣ್ಣಿರಿನ ಹನಿಯನ್ನು ಒರೆಸಿದ ಕೀರ್ತಿ ಮೇಧಾವಿ ಪುರುಷ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ.
ಅಂಬೇಡ್ಕರ್ ರವರು ಚಿಂತನೆಗಳು: ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ.ಅಂಬೇಡ್ಕರ್ ಸ್ಮೃತಿ ಎಂದರೆ ಭಾರತದ ಸಂವಿಧಾನ. ಇದು ಮಾನವೀಯ ಮೌಲ್ಯದಿಂದ ಕೂಡಿದೆ. ಸಮಾನತೆ, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆಯಿದೆ. ಇದರ ಆಧಾರದ ಮೇಲೆ ನಮ್ಮ ಆಡಳಿತ ಮತ್ತು ಜೀವನ ಮಾರ್ಗ ಕಂಡುಕೊಳ್ಳುವುದರಿಂದ ಶೋಷಣೆ, ದಾರಿದ್ರ್ಯ, ಅಸಮಾನತೆ ಇತ್ಯಾದಿ ನಿವಾರಿಸಬಹುದು. ನಮ್ಮ ದೇಶವನ್ನು ಒಗ್ಗಟ್ಟಾಗಿ ಮುಂದುವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ, ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ದಿಸೆಯಲ್ಲಿ ಅವರು ಜೀವನ ಪ್ರಯೋಗ ಹೆಚ್ಚು ಪ್ರಭಾವಶಾಲಿ ಹಾಗೆ ಅಂಬೇಡ್ಕರ್ ರವರು ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ ಅನ್ನುವದನ್ನು ಮರೆಯಬಾರದು. ಹಾಗಾಗಿ ಅವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕುವುದು ಒಳ್ಳೆಯದು ಹಾಗೆ ನಾಡಿಗೆ – ದೇಶಕ್ಕೆ ಮಾದರಿಯಾಗುವ ಮೂಲಕ ಪ್ರೇರಣೆ ಕೆಲಸ ಮಾಡಿ, ಅಂಬೇಡ್ಕರ್ ರವರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅವರ ಆಶಯದಂತೆ ಬದುಕುವುದು ಕಲಿಯೊಣ.
ಕೊನೆಯದಾಗಿ : ಅಂಬೇಡ್ಕರ್ ಒಬ್ಬ ರಾಜಕೀಯ ಮುತ್ಸದ್ದಿ, ಸಾಂವಿಧಾನಿಕ ವಿದ್ವಾಂಸ ಮತ್ತು ಬರಹಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಶತಮಾನಗಳಿಂದಲೂ ತಾರತಮ್ಯವನ್ನೆದುರಿಸಿದ ದಲಿತ ಸಮುದಾಯದಿಂದ ಬಂದಿದ್ದರೂ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಕಡ್ಡಾಯವನ್ನು ಖಾತ್ರಿಗೊಳಿಸಿ ಕಾನೂನಿನಲ್ಲಿ ತಮ್ಮ ನಂಬಿಕೆಯಿಟ್ಟು ರಾಜಕೀಯ ಮುತ್ಸದ್ದಿತನವನ್ನು ತೋರಿಸಿದರು ಎನ್ನುವ ವಾಸ್ತವವನ್ನು ನಾವು ಗುರುತಿಸಲೇಬೇಕು, ಆದ್ದರಿಂದಲೇ ಇಂದು ಇಡೀ ವಿಶ್ವದಲ್ಲೇ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ನಮ್ಮ ಭಾರತ ಹೊಂದಿದೆ ಎಂದರೆ ಅದಕ್ಕೆ ಪ್ರಧಾನ ಗೌರವ ಶಿಲ್ಪಿ, ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಡಾ ಅಂಬೇಡ್ಕರ್ ಅವರು ಪ್ರಮುಖ ಕಾರಣ ಹಾಗೆ ಭಾರತ ಕಂಡ ಒಂದು ಅದ್ಭುತ ಶಕ್ತಿ ಇವರಾಗಿದ್ದರು ಎನ್ನುವುದು ಮತ್ತೊಂದು ವಿಶೇಷ ಮತ್ತೆ ಇಂದೂ ಹಾಗೂ ಮುಂದೆಯೂ ಶೋಷಿತರೆಲ್ಲರಿಗೂ ಸಮಾನತೆ ಹಾಗೂ ಸ್ವಾಭಿಮಾನದ ಹರಿಕಾರ – ಸಂಕೇತವಾಗಿರುತ್ತಾರೆ ಎನ್ನುವುದು ನಾವ್ಯಾರೂ ಮರೆಯಬಾರದು.
ಅವರ ಅಪ್ರತಿಮವಾದ ನಾಗರಿಕ ಹಕ್ಕುಗಳ ಹೋರಾಟ, ಜೊತೆಗೆ ಬಡವರ ಏಳಿಗೆಗಾಗಿ ಶ್ರಮಿಸಿ ಬದುಕಿದ ದಿವ್ಯಚೇತನ. ಅವರಿಗಿದ್ದ ಜ್ಞಾನದ ಹಂಬಲ ಯುವ ಜನತೆಗೆ ಆಶಾಕಿರಣ ತತ್ವ ಮತ್ತು ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಕೊಡುಗೆ ಅಪಾರ ಮತ್ತೆ ಅವರ ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ.
ಹಾಗಾಗಿ ಈಗ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು. ಹಾಗೆ ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಆ ದಿಸೆಯಲ್ಲಿ ಯುವ ಜನತೆ ಮಾಹಾತ್ಯಾಗ ಮೂರ್ತಿ ಅಂಬೇಡ್ಕರ್ ರವರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ದೇಶಕ್ಕೆ – ವಿಶ್ವಕ್ಕೆ ಉತ್ತಮ ಅಲ್ಲದೆ ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯ.
ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಆ ನಿಮಿತ್ತವಾಗಿ ಈ ಪುಟ್ಟ ಲೇಖನ.
ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು ಕ್ಷಣಮಾತ್ರದಲ್ಲಿ ಊಹಿಸಬಹುದು. ಅದೇ ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ.
ಭೀಮರಾವ್ ರಾಮ್‍ಜಿ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೇ-ಎರಡೇ? ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ.
ಆಗಿನ್ನೂ ಅಂಬೇಡ್ಕರ್ ಅವರಿಗೆ ಏಳೆಂಟು ವರ್ಷ. ಒಂದು ದಿನ ಆ ಪುಟ್ಟ ಬಾಲಕ ತನ್ನ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿತ್ತು. ಎತ್ತಿನ ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಆ ಕ್ಷಣ ಆ ಪುಟ್ಟ ಹುಡುಗನ ಮನಸ್ಸಿಗೆ ಅತ್ಯಂತ ಆಘಾತವಾಯಿತು.
ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಬಾಲಕನಿಗೆ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ.
ಕ್ಷೌರಿಕ ಕ್ಷೌರ ಮಾಡದೆ ಹಿಂದಕ್ಕೆ ಕಳುಹಿಸಿದ್ದನಂತೆ. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಬಾಲಕನನ್ನು ಇನ್ನಿಲ್ಲದಂತೆ ಕಾಡಿದವು. ನಾವೂ ಮನುಷ್ಯರೇ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಆಗ ಆ ಬಾಲಕನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಬಾಲಕ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ಇರುತ್ತಿರಲಿಲ್ಲ.
ಆದರೆ, ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನಶಿಲ್ಪಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ನಿಲ್ಲುವಂತಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ. ಮಹಾರಾಷ್ಟ್ರದ ರತ್ನಗಿರಿ ಜಿ¯್ಲÉಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್ಜೀ ಸಕ್ಬಾಲ್, ತಾಯಿ ಭೀಮಾಬಾಯಿ ಅವರ ಪುತ್ರರಾಗಿ ಜನಿಸಿದರು.
ಅಂದಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಅಂಬೇಡ್ಕರ್‍ರಿಗೆ ಚಿಕ್ಕಂದಿನಿಂದಲೇ ಓದಬೇಕು, ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜತೆಗೆ ಸಂಸ್ಕøತ ಕಲಿಯಬೇಕೆಂಬ ಮಹದಾಸೆಯಿತ್ತು. ಇದಕ್ಕೆ ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ, ಇವರು ಬಗ್ಗಲಿಲ್ಲ.
ಬದಲಿಗೆ ಹಠತೊಟ್ಟವರಂತೆ ಸಂಸ್ಕøತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರ್‍ರ ಭೀಮಶಕ್ತಿ ಅಂಥದ್ದು.
1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಂಬೇಡ್ಕರ್ ತೇರ್ಗಡೆಯಾದರು. ಅವರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921ರಲ್ಲಿ ಬಿಎ ಪದವೀಧರರಾದರು. ನಂತರ ಬರೋಡಾ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.
ಆದರೆ, ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಅಂಬೇಡ್ಕರ್ ಅವರನ್ನು ಅಮೇರಿಕಾಕ್ಕೆ ಕಳುಹಿಸಿದರು.
ಅಲ್ಲಿ ಎಂಎ ಪದವಿಯೊಡನೆ ಪಿಎಚ್‍ಡಿಯನ್ನು ಗಳಿಸಿ 1917ರ ಆಗ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಶಿಕ್ಷಣ ದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಸಾದರು.
ವಿದೇಶದಲ್ಲಿ ಕಲಿತು, ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನ ಜಾಗೃತಿಗೆ ನಿಂತರು.
ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡುವ ಮೂಲಕ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು.
ಹೀಗೆ ದಲಿತರ ಪರ ಕ್ರಾಂತಿ ಕಹಳೆ ಪ್ರಾರಂಭವಾಗಿ ನಿಧಾನವಾಗಿ ದೇಶದೆಲ್ಲಾಡೆ ಮೊಳಗತೊಡಗಿತು. ಈ ಸಂದರ್ಭದಲ್ಲಿ ಎರಡನೆ ಮಹಾಯುದ್ಧ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಪ್ರಥಮ ಪ್ರಾಶಸ್ತ್ಯದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ದೊರಕಿತ್ತು.
ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ನೆಹರೂ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರ್, ಭಾರತ ದೇಶಕ್ಕೆ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾದರು. ಇದು ಇಡೀ ವಿಶ್ವಕ್ಕೇ ಮಾದರಿ ಸಂವಿಧಾನವಾಗಿರುವುದು ಇವರಿಗೆ ಸಂದ ಮಹಾಗೌರವವೇ ಸರಿ.
ಅಧಿಕಾರ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪೃಶ್ಯತೆ ನಿವಾರಣೆಗಾಗಿಯೇ ಅವರ ಹೃದಯ ತುಡಿಯುತ್ತಿತ್ತು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತ ದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು (ಈಗ ಮಾಜಿ) ಸಾಧ್ಯವಾದದ್ದು.
ಅಂಬೇಡ್ಕರ್ ಅವರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ, ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿದ್ದ ಅವರು ಬುದ್ಧನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ.ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು.
1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ಸರ್ಕಾರ 1991ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇಂದು ನಮ್ಮ ಮುಂದೆ ಇಲ್ಲದಿರಬಹುದು. ಆದರೆ, ಅವರು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ.
ಎಪ್ರಿಲ್ 13 ಮಂಗಳವಾರವೂ ಕೊರೋನಾ ಸೋಂಕಿನ ತೀವ್ರತೆ ಮುಂದುವರೆದಿದ್ದು, 30 ಜನರಿಗೆ ಸೋಂಕು ಪತ್ತೆಯಾಗಿದೆ. ಗದಗ ನಗರ ಹಾಗೂ ತಾಲೂಕಿನ 18 ಜನರಿಗೆ, ಮುಂಡರಗಿಯ 01, ನರಗುಂದದ 03, ರೋಣ ತಾಲೂಕಿನಲ್ಲಿ 02 ಹಾಗೂ ಶಿರಹಟ್ಟಿ ತಾಲೂಕಿನ 06 ಜನರಿಗೆ ಸೋಂಕು ತಗುಲಿದೆ.
ಮಂಗಳವಾರ 30 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11411 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 16 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11133 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 137 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 220 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನಿ ಪರೀಕ್ಷೆಗಾಗಿ ಸಂಗ್ರಹಿಸಿದ 311934 ಮಾದರಿಗಳಲ್ಲಿ 300303 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲೆಕ್ರ್ಟೇಶಿಯನ್, ಅಟೋ ಡ್ರೈವರ್, ಖಾಸಗಿ ಕಂಪನಿಯ ಇಬ್ಬರು ನೌಕರರು ಸೇರಿದಂತೆ ಐದು ಜನರು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಟಗೇರಿಯ ಕುರಹಟ್ಟಿಪೇಟಿಯ ರೈಲ್ವೆ ಹಳಿಯ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ಶ್ರೀಧರ್ ಅಲಿಯಾಸ್ ಮಂಜುನಾಥ್ ನಾಗಪ್ಪ ಮೆಣಸಗಿ, ವಿರೇಶ್ ಮರಿಯಪ್ಪ ಸೊಲಗಿ, ಕೃಷ್ಣಪ್ಪ ರಾಮಪ್ಪ ಚಲವಾದಿ, ಕಿರಣಕುಮಾರ್ ಈರಣ್ಣ ಗಂಜಿ, ಮನೋಹರ ಯಲ್ಲಪ್ಪ ಪಾಂಚಾಳ ಎಂಬುವವರನ್ನು ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ ನಗದು 12 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಳು ಜನರ ತಂಡವೊಂದು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಅವರಿಂದ ನಗದು ಹಣ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಎಸ್ ಎಸ್ ಪಾಟೀಲ್ ನಗರದ ಬಳಿ ಅಶೋಕ ಫಕ್ಕೀರಪ್ಪ ಹಳ್ಳಿ, ಈರಣ್ಣ ಶಂಕ್ರಪ್ಪ ಇನಾಮಾದಾರ್, ನಾಗಾರಾಜ್ ಹೆಗ್ಗಪ್ಪ ಕೌಜಗೇರಿ, ಕನಕರಾಜ್ ವೆಂಕಪ್ಪ ಕಟ್ಟಿಮನಿ, ನಿಂಗಪ್ಪ ಬಸನಗೌಡ್ ಕದ್ರಳ್ಳಿ, ವೆಂಕಟೇಶ್ ಹನಮಂತಪ್ಪ ಶಿಂದೋಗಿ ಹಾಗೂ ಈರಪ್ಪ ಕಾಳಪ್ಪ ಹಮ್ಮಗಿ ಎಂಬುವವರು ಇಸ್ಪೀಟು ಜೂಜಾಟದಲ್ಲಿ ತೊಡಗಿದ ಖಚಿತ ಮಾಹಿತಿ ಮೇರೆಗೆ ಮುಂಡರಗಿ ಠಾಣೆಯ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಬಂಧಿಸಿ, ಅವರಿಂದ ನಗದು 1520 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.
ಇಡೀ ಭಾರತದಿಂದ ಕೊರೋನಾ ಮುಕ್ತಿ ಪಡೆದು ಎಲ್ಲರೂ ಕ್ಷೇಮ ಹಾಗೂ ಆರೋಗ್ಯವಾಗಿರಲಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅವರು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಶುಭಕೋರಿದ ಅವರು, ತಂದೆ ತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದಮನೋವಾಂಛ ಫಲಗಳನ್ನು ಈಡೇರಿಸಿ ನಮ್ಮನ್ನು ಕಾಡುತ್ತಿರುವ ಕೊರೋನಾ ಭಾರತದಿಂದ ತೊಲಗಿ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ… ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ… ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ.
ಈ ಹೊಸತನ, ನಿರೀಕ್ಷೆ, ಭರವಸೆಗಳನ್ನು ಹೊತ್ತು ಕಳೆದ ವರ್ಷದ ತೊಡಕುಗಳು ಈ ಹೊಸ ವರ್ಷ ನೀಗಲಿ. ಬೇವು-ಬೆಲ್ಲದ ಅನುಭವಗಳು ಈ ವರ್ಷ ಸಮನಾಗಿರಲಿ ಎಂದರು.
ಈ ಶುಭ ವರ್ಷ ಎಲ್ಲರಿಗೂ ಒಳಿತು ತರಲೆಂದು ಭಗವಂತನಲ್ಲಿ ನಾನು ಕೋರುತ್ತೇನೆ ಎಂದು ನಾಡಿನ ಸಮಸ್ತರಿಗೂ ಯುಗಾದಿ-ಹೊಸ ವರ್ಷದ ಶುಭಾಶಯಗಳನ್ನು ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ತಿಳಿಸಿದ್ದಾರೆ
ಕೊರೋನಾ ಎರಡನೆ ಅಲೆ ವೇಗವಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಗದಗ ನಗರ ಹಾಗೂ ತಾಲೂಕಿನ ಒಟ್ಟು 21 ಜನರಿಗೆ ಸೋಂಕು ವ್ಯಾಪಿಸಿದೆ. ಅದೇ ರೀತಿ ಮುಂಡರಗಿಯ 03, ನರಗುಂದದ 01, ರೋಣ ತಾಲೂಕಿನಲ್ಲಿ 04 ಜನರಿಗೆ ಕೊರೊನಾ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ವ್ಯಾಪಿಸುವ ಮೂಲಕ ಈವರೆಗೆ ಒಟ್ಟುಸೋಂಕಿತರ ಸಂಖ್ಯೆ 11381ಕ್ಕೆ ಏರಿಕೆಯಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇದುವರೆಗೂ 11117 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 123 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 96 ಜನರ ವರದಿ ಬರಲು ಬಾಕಿ ಇದೆ. ಇದುವರೆಗೂ ಸೋಂಕಿನಿ ಪರೀಕ್ಷೆಗಾಗಿ ಸಂಗ್ರಹಿಸಿದ 310123 ಮಾದರಿಗಳಲ್ಲಿ 298646 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.