Home Blog Page 3184

ರಾಜ್ ಕುಮಾರ್ ಹಿರಾನಿ ಹಾಗೂ ಶಾರುಖ್ ಕಾಂಬೋದ ಮೊದಲ ಝಲಕ್..ಕ್ರಿಸ್ಮಸ್ ಗೆ ‘ಡಂಕಿ’ ಧಮಾಕ ಶುರು

0

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗಿಂದು ಜನ್ಮದಿನದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರುವ ಬಾದ್ ಷಾಗೆ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ. ಕಿಂಗ್ ಖಾನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಡಂಕಿ ಸಿನಿಮಾದ ಟೀಸರ್ ಉಡುಗೊರೆಯಾಗಿ ಸಿಕ್ಕಿದೆ.

ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಎಣೆದಿರುವ ಡಂಕಿ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.

ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಅಡಿಕೆ ವ್ಯಾಪಾರಿ ಬಳಿ ಒಂದು ಕೋಟಿ ಕಳವು ಪ್ರಕರಣ: ಆರೋಪಿಗಳ ಬಂಧನ

0

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅಂತರರಾಜ್ಯ ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸಂತೋಷ್ ಸೇರಿದಂತೆ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್‌ 7 ರಂದು ಹೆಚ್​​.ಎಸ್​. ಉಮೇಶ್ ಅಡಿಕೆ ವ್ಯಾಪಾರ ಸಲುವಾಗಿ ನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಚಿತ್ರದುರ್ಗದಲ್ಲಿ ಅಡಿಕೆ ಕೊಂಡುಕೊಳ್ಳಲು ಬಂದಿದ್ದರು.

ಆದರೆ ಉಮೇಶ್​​ ಅವರಿಗೆ ಅಲ್ಲಿ ಅಡಿಕೆ ಸಿಗುವುದಿಲ್ಲ. ನಂತರ ಶಿರಾದಲ್ಲಿ ಅಡಿಕೆ ಕೊಂಡುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಅಲ್ಲಿಯೂ ಸಾಧ್ಯವಾಗುವುದಿಲ್ಲ. ಕೊನೆಗೆ ತುಮಕೂರಿನಲ್ಲಾದರೂ ಸಿಗಬಹುದಾ ಎಂದು ಬಂದರೇ ಇಲ್ಲಿಯೂ ಕೂಡ ಉಮೇಶ್ಅವರಿಗೆ ಅಡಿಕೆ ಸಿಗುವುದಿಲ್ಲ.

ಬಳಿಕ ಬೆಂಗಳೂರಿನ ಚಂದ್ರಾಲೇಔಟ್ನಲ್ಲಿರುವ ಪಿಜಿಯೊಂದರಲ್ಲಿರುವ ತಮ್ಮ ಮತ್ತು ತಮ್ಮ ಸ್ನೇಹಿತರ ಮಕ್ಕಳನ್ನು ಭೇಟಿಯಾಗಿ ಹೋಗೋಣ ಎಂದು ರಾಜಧಾನಿಗೆ ಬರುತ್ತಾರೆ. ಹೀಗೆ ಬಂದವರು ನೇರವಾಗಿ ಗಾಂಧೀನಗರಕ್ಕೆ ಬರುತ್ತಾರೆ. ಗಾಂಧಿನಗರದ ಹೊಟೇಲ್​​ವೊಂದರಮುಂಭಾಗದಲ್ಲಿ ಕಾರು ನಿಲ್ಲಿಸಿ, ಊಟ ಮಾಡುತ್ತಾರೆ.

ಬಳಿಕ ಚಂದ್ರಾಲೇಔಟ್​​ನಲ್ಲಿ ಮಕ್ಕಳನ್ನು ಭೇಟಿಯಾಗಿ ಚಿತ್ರದುರ್ಗಕ್ಕೆ ವಾಪಸ್ಹೊರಡುತ್ತಿರುತ್ತಾರೆ. ದಾರಿ ಮಧ್ಯೆ ದಾಬಸ್ ಪೇಟೆಯಲ್ಲಿ ಟೀ ಕುಡಿದು, ಚಿತ್ರದುರ್ಗದಕ್ಕೆ ತೆರಳುತ್ತಾರೆ. ತಮ್ಮೂರಾದ ಭೀಮಸಮುದ್ರಕ್ಕೆ ರಾತ್ರಿ 7:45ಕ್ಕೆ ತಲುಪುತ್ತಾರೆ. ಆಗ ಕಾರಿನ ಡಿಕ್ಕಿ ತೆಗೆದು ನೋಡಿದಾಗ ಹಣ ಮಾಯವಾಗಿರುತ್ತೆ.

ನಂತರ ಉಮೇಶ್​, 10 ದಿವಸ ಬಿಟ್ಟು ಕಾರು ಡ್ರೈವರ್​​ ಮೇಲೆ ಸಂಶಯ ವ್ಯಕ್ತಪಡಿಸಿ ಉಪ್ಪಾರಪೇಟೆ ಪೊಲೀಸ್ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಕಾರ್ಡ್ರೈವರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದು.ಅದರಂತೆ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.

ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ

0

ಹಾಸನ: ಹಾಸನ‌ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ ಮಾಡಲಾಗಿದೆ.

ಪ್ರಭುಸ್ವಾಮಿ(50)ಯನ್ನು ಅಳಿಯ ಅಜಯ್(22) ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. 7 ವರ್ಷದ ಹಿಂದೆ ಪತಿಯನ್ನು ಬಿಟ್ಟು ಸಾವಿತ್ರಮ್ಮ ತವರು ಸೇರಿದ್ದಾರೆ.

ಜಮೀನು ವಿಚಾರವಾಗಿ ಆಗಾಗ್ಗೆ ತಂಗಿ ಜತೆ ಪ್ರಭುಸ್ವಾಮಿ ಜಗಳವಾಡುತ್ತಿದ್ದ. ಮದ್ಯಸೇವಿಸಿ ಬಂದು ತಂಗಿ, ಆಕೆಯ ಮಗಳನ್ನು ನಿಂದಿಸುತ್ತಿದ್ದ. ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಳಿಯ ಅಜಯ್, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಈವರೆಗೂ ಕೇಂದ್ರ ಸರ್ಕಾರ 1 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ: ಡಾ.ಜಿ.ಪರಮೇಶ್ವರ್

0

ಬೆಂಗಳೂರು: ಬಿಜೆಪಿ ನಾಯಕರ ತಂಡದಿಂದ ಬರ ಅಧ್ಯಯನ ಪ್ರವಾಸ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಡಾ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಬರ ಶುರುವಾಗಿ 3 ತಿಂಗಳು ಆಯ್ತು, ಮಳೆ ನಿಂತು 3 ತಿಂಗಳಾಯ್ತು. ಇಷ್ಟುದಿನ ಬಿಜೆಪಿಯವರು ಏನು ಮಾಡುತ್ತಿದ್ದರು. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಎಂದು ಘೋಷಿಸಿದ್ದೇವೆ. 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ.

ಈವರೆಗೂ ಕೇಂದ್ರ ಸರ್ಕಾರ 1 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ನಾಯಕರು ಕೇಂದ್ರದ ಬಳಿ ಮಾತನಾಡಿ ಅನುದಾನ ಕೊಡಿಸಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ವಿಶೇಷ ಅನುದಾನ ಕೊಡಬೇಕು. ದೆಹಲಿಗೆ ಸರ್ವಪಕ್ಷ ಕರೆದೊಯ್ಯುವ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ ಎಂದರು.

ಕುವರಿ ಕೀನ್ಯಾಗೆ ಶುಭಕೋರಿದ ಸಚಿವ ಪ್ರಿಯಾಂಕ್ ಖರ್ಗೆ – ಕಾರಣ ಇಲ್ಲಿದೆ!

0

ಕಲಬುರ್ಗಿ;- ಕೀನ್ಯಾದ ಮೊಂಬಾಸಾದಲ್ಲಿ ಇದೇ ತಿಂಗಳ 6 ರಿಂದ 9 ರವರೆಗೆ ನಡೆಯಲಿರುವ ಗ್ಲೋಬಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾಳೆ ಕಲಬುರಗಿ ಜಿಲ್ಲೆ ಸೇಡಂ ಮೂಲದ ಕಾವೇರಿ.. ಗ್ಲೋಬಲ್ ಅಪಾರ್ಚುನಿಟಿ ಯೂತ್ ನೆಟ್‌ವರ್ಕ್ ಸಂಸ್ಥೆ ಆಯೋಜಿಸಿರುವ ಸಮ್ಮೇಳನದಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕುರಿತು ಕಾವೇರಿ ಮಾತನಾಡಲಿದ್ದಾಳೆ.

ಹೀಗಾಗಿ ಟ್ರಸ್ಟ್ ಕಲ್ಪಿಸಿದ ಉಚಿತ ವೀಸಾವನ್ನು ಸಚಿವ ಪ್ರಿಯಾಂಕ್ ಖರ್ಗೆ ಕಾವೇರಿಗೆ ನೀಡಿ ಆಲ್ ದಿ ಬೆಸ್ಟ್ ಹೇಳಿದ್ರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಈವೇಳೆ ಹಾಜರಿದ್ದರು..

ಚೈತ್ರಾ ಆ್ಯಂಡ್ ಗ್ಯಾಂಗ್ ವಂಚನೆ ಪ್ರಕರಣ- ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ..!

0

ಬೆಂಗಳೂರು;- ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯಿಂದ ಕೋಟಿ ಕೋಟಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಗೆ ಸಿಸಿಬಿ ಸಿದ್ದತೆ ನಡೆದಿದೆ

ಪ್ರಕರಣದ ತನಿಖೆ ಪೂರ್ಣಗೊಳಿಸಿದೆ. ಎಂಎಲ್ಎ ಟಿಕೆಟ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು 68 ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ನಡೆಸಿದ್ದು, ಚೈತ್ರಾ ಆಂಡ್ ಗ್ಯಾಂಗ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ದ ಮಾಡಿದೆ. ಮುಂದಿನ ವಾರ ಸಿಸಿಬಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ

ಎಂಎಲ್ಎ ಡೀಲ್ ಬಗ್ಗೆ ಸಿಸಿಬಿ ಪೊಲೀಸರು 68 ಸಾಕ್ಷಿಗಳ ಹೇಳಿಕೆ ಪಡೆದಿದ್ದು, ಎಲ್ಲಾ ಸಾಕ್ಷಿಗಳ ಹೇಳಿಕೆ ಪಡೆದು ಚಾರ್ಜ್ ಶೀಟ್ ಗೆ ಸಿದ್ದತೆ ನಡೆಸಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು 4 ಕೋಟಿ 11 ಲಕ್ಷ ರಿಕವರಿ ಮಾಡಿದ್ದು, ವಂಚನೆ ಪ್ರಕರಣದಲ್ಲಿ ದೊಡ್ಡಮಟ್ಟದ ರಿಕವರಿ ಆಗಿದ್ದರಿಂದ ಚೈತ್ರಾ ಗ್ಯಾಂಗ್ ಗೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ 7 ಮಂದಿ ವಿರುದ್ದ ಸಿಸಿಬಿ ಚಾರ್ಜ್ ಶೀಟ್ ಸಿದ್ದಪಡಿಸಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಮಂದಿ ವಿರುದ್ಧ ಚಾರ್ಜ್ ಶೀಟ್ ಗೆ ತಯಾರಿ ನಡೆದಿದೆ.

ಸಿಸಿಬಿ ಪೊಲೀಸರು ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲಾ ಆಡಿಯೋ, ವಿಡಿಯೋ ಪಡೆದಿದ್ದು, ಆಡಿಯೋ, ವಿಡಿಯೋಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ‌ ಉಲ್ಲೇಖಿಸಿದ್ದಾರೆ. ಗೋವಿಂದ ಪೂಜಾರಿ ಬಳಿಯೇ ಡೀಲ್ ಸಂಬಂಧ ಸಿಸಿಬಿ 10 ವಿಡಿಯೋ ಪಡೆದಿದೆ. ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ ವರದಿ ಕೂಡ ಉಲ್ಲೇಖಿಸಲಾಗಿದೆ

ಜಾತಿ ನಿಂದನೆ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧ FIR ದಾಖಲು

0

ಬೆಂಗಳೂರು;- ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಜಾತಿನಿಂದನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ರಣಧೀರ ಪಡೆಯ ಮುಖಂಡ ಬೈರಪ್ಪ ಹರೀಶ್‌ಕುಮಾರ್‌ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಪುನೀತ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.

‘ಪುನೀತ್‌ ವಿರುದ್ಧ ಬೇರೆ ಬೇರೆ ಆರೋಪಗಳ ಅಡಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಆತನ ಬಂಧನ ಸಹ ಆಗಿತ್ತು. ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾಧ್ಯಮದಲ್ಲಿ ಪ್ರಕಟವಾದ ವರದಿಯನ್ನು ನನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದೆ. ನಂತರ ಈ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯಪುರ ಉತ್ಪಾದನೆ ವಲಯ ಆಗಿಸಲು ಕ್ರಮ ಕೈಗೊಳ್ಳಲಾಗುವುದು : ಸಚಿವ ಎಂ.ಬಿ.ಪಾಟೀಲ

0

ವಿಜಯಪುರ;- ಸಚಿವ ಎಂ.ಬಿ.ಪಾಟೀಲ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವಿಜಯಪುರ ಉತ್ಪಾದನೆ ವಲಯ ಆಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸೌಕರ್ಯಗಳನ್ನು ಕಲ್ಪಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಸ್ತರಿಸುವ ಮೂಲಕ ಬೋಯಿಂಗ್ ಮಾದರಿಯ ವಿಮಾನಗಳು ಇಲ್ಲಿ ಇಳಿಯುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ನಾಲ್ಕೈದು ತಿಂಗಳಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಆರಂಭಗೊಳ್ಳಲಿದೆ ಎಂದು ಹೇಳಿದರು.

ಈ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ನವದೆಹಲಿ, ಗುಜರಾತ್ ಮೊದಲಾದ ರಾಜ್ಯಗಳೊಂದಿಗೆ ಔದ್ಯಮಿಕ, ಶೈಕ್ಷಣಿಕ, ಆರ್ಥಿಕ ಒಡನಾಟಗಳು ತೀವ್ರಗೊಳ್ಳಲಿವೆ. ದ್ರಾಕ್ಷಿ ಮೊದಲಾದ ಬೆಳೆಗಳ ರಫ್ತು ಚಟುವಟಿಕೆಗಳಿಗೆ ವಿಜಯಪುರ ವಿಮಾನ ನಿಲ್ದಾಣ ಹೆಬ್ಬಾಗಿಲು ಆಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ: ಝೀಕಾ ವೈರಸ್ ಪತ್ತೆ

0

ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್ನಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್ (Zika Virus) ಇದೀಗ ಚಿಕ್ಕಬಳ್ಳಾಪುರದಲ್ಲಿ (Chikkaballapur) ಪತ್ತೆಯಾಗಿದೆ.

ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಸೊಳ್ಳೆಗಳಲ್ಲಿ ಝಿಕಾ ವೈರಸ್ ಇರೋದು ಧೃಡವಾಗಿದೆ.

ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸೇರಿದಂತೆ ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದ (Health Department) ಸರ್ವೆ ಕಾರ್ಯ ರ್ಯಾಂಡಮ್ ಚೆಕಪ್ ಮಾಡಲಾಗುತ್ತಿದೆ.

ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ವಡ್ಡಹಳ್ಳಿ, ಬಚ್ಚಹಳ್ಳಿ ಗ್ರಾಮದ 880 ಮನೆಗಳಲ್ಲಿ ಸರಿಸುಮಾರು 4,800 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ.

ಈಗಾಗಲೇ 30 ಮಂದಿ ಗರ್ಭಿಣಿಯರು ಹಾಗೂ ಜ್ವರದಿಂದ ಬಳಲುತ್ತಿರುವ 3 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ.

ಇನ್ನೂ ಮುಂಜಾಗ್ರತಾ ಕ್ರಮವಾಗಿ ಜ್ವರದಿಂದ ಬಳಲುತ್ತಿರುವವರ ಮೇಲೆ ನಿಗಾವಹಿಸಲಾಗಿದೆಯಾದರೂ ಝಿಕಾ ವೈರಸ್ ಸೋಂಕು ಹುಟ್ಟುವ ಮಕ್ಕಳ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಗರ್ಭಿಣಿಯರ ಮೇಲೂ ನಿಗಾ ವಹಿಸಲಾಗಿದೆ.

ಬಾಲಾಜಿ ಲೇಔಟ್ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಬೆಂಗಳೂರು: ರಾಜ್ಯಾದ್ಯಂತ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ನಗರದ ಪ್ರತಿಯೊಂದು ಬೀದಿಯಲ್ಲಿ ಕನ್ನಡದ ಬಾವುಟಗಳ ರಾರಾಜಿಸುತ್ತಿವೆ. ಅದೇ ರೀತಿ ನಿನ್ನೆ ದೊಡ್ಡ ಬ್ಯಾಲಕೆರೆ ಗ್ರಾಮದ ಬಾಲಾಜಿ ಲೇಔಟ್ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು .

ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ಧ್ವಜಾರೋಹಣ ನೆರವೇರಿಸಿದರು.  ಈ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಿವಾನಂದ ಆನಿಕಿವಿ ಗಿರಿಜಾ ಆನೆಕಿವಿ ವಿನಯ್ ಕುಮಾರ್ ನಾಗಮ್ಮ ಭುವನೇಂದ್ರ ಸತ್ಯ ಕಾರ್ತಿಕ್ ವಿಜಯ್ ರಕ್ಷಿತ್ ಹಾಗೂ ಇತರರು ಭಾಗವಹಿಸಿದ್ದರು

error: Content is protected !!