Home Blog Page 3226

ಗದಗ-ಬೆಟಗೇರಿ ಅವಳಿ ನಗರದಲ್ಲಿ ಇಂದು ನೀರು ಪೂರೈಕೆ ಎಲ್ಲೆಲ್ಲಿ….?

0

ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ಟೋಬರ್‌ 19 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ

ವಾರ್ಡ್ ನಂ. 27 ಕಾಶಿ ವಿಶ್ವನಾಥನಗರ, ಮಾರುತಿ ದೇವಸ್ಥಾನದ ಲೈನ್, ಅಸೂಟಿಯವರ ಲೈನ್, ಕಣವಿ ಅವರ ಲೈನ್, ಮಾಳಿಕೋಟಿಯವರ ಸಂದಿ, ವಿ ಆರ್ ಎಲ್ ಆಫೀಸ್ ಲೈನ್, ವಾರ್ಡ್ ನಂ. 30 ಟಿವಿಎಸ್ ಶೋರೂಮ್, ಮುತ್ತಿನಪೆಂಡಿಮಠ ಲೇಔಟ್, ಅಬ್ಬಿಗೇರಿ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಪಾಸಿಯವರ ಲೈನ್, ವಾರ್ಡ್ ನಂ. 22 ದೊಡ್ಡ ಮಸೀದಿ ಹತ್ತಿರ ಹಿಂದಿನ ಭಾಗ ಮುಂದಿನ ಭಾಗ, ಕನ್ನಡ ಶಾಲೆ ಲೈನ್, ಶುದ್ಧ ನೀರಿನ ಘಟಕ ಭಾಗ-1,2,3, ವಾರ್ಡ್ ನಂ. 1 ಎಸ್ ಎಂ ಕೃಷ್ಣ ನಗರ ಕೆಳಗಿನ ಭಾಗ ಮೇಲಿನ ಭಾಗ, ಆದಿಶಕ್ತಿಯ ಗುಡಿಯ ಸುತ್ತಮುತ್ತಲಿನ ಭಾಗಗಳು, ಕ್ರಿಶ್ಚಿಯನ್‌ ಕಾಲೋನಿ, ಆಟೋ ಕಾಲೋನಿಯ ಕೆಲವು ಭಾಗಗಳು.

ವಾರ್ಡ್ ನಂ. 35, 34, 30 ಈಡಬ್ಲ್ಯೂಎಸ್, ಮೂರು ಶಿಳ್ಳಿನ ವಕಾರ, ಹೂಗಾರ ಪ್ಲಾಟ್, ಡಿಪೋ ಹಿಂದಿನ ಭಾಗ, ವಡ್ಡರಗೇರಿ ಮೇಲಿನ ಭಾಗ, 46 ಪ್ಲಾಟ್, ಶಿವಾನಂದ ನಗರ, ಕುಂಚಿ ಕೊರವರ ಓಣಿ, ಬಸವೇಶ್ವರ ಸ್ಕೂಲ್ ಲೈನ್, ವಾರ್ಡ್ ನಂ. 29 ಸಾಯಿ ನಗರ, ಪಂಚಾಕ್ಷರಿ ನಗರ, ಕಲಾಮಂದಿರ ನಗರ, ಮಸೂತಿ ಲೈನ್ ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡೆತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ ನಗರದಲ್ಲಿ ಸಾರ್ವಜನಿಕರ ಎದುರಲ್ಲೇ ಚಾಕು ಇರಿತ; ರಕ್ತದ ಮಡುವಿನಲ್ಲಿ ಒದ್ದಾಡಿದ ಸುನೀಲ್….

ಪೊಲೀಸರ ಭೇಟಿ, ಪರಿಶೀಲನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಹಾಡಹಗಲೇ ಸಾರ್ವಜನಿಕವಾಗಿ ಗೆಳೆಯರಿಬ್ಬರ ಮಧ್ಯೆ ಉಂಟಾದ ಕಲಹ ವಿಕೋಪಕ್ಕೆ ಹೋಗಿ ಚಾಕು ಇರಿದ ಘಟನೆ ಗದಗ ನಗರದಲ್ಲಿ ಮಧ್ಯಾಹ್ನ ನಡೆದಿದೆ.

ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯ ಎದುರು ಇರುವ ದೀಪಾ ಇಡ್ಲಿ ಸೆಂಟರ್ ಮುಂದೆ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಸುನೀಲ ಹಾಗೂ ದೇವು ಎಂಬ ಗೆಳೆಯರ ಮಧ್ಯೆ ಹಣಕಾಸು ಹಾಗೂ ತಾಯಿಗೆ ನಿಂಧಿಸಿದ ಆರೋಪದ ಹಿನ್ನೆಲೆಯಲ್ಲಿ ಸುನೀಲ್‌ಗೆ ದೇವು ಎಂಬಾತ ಹೊಟ್ಟೆ ಹಾಗೂ ಕಿವಿಗೆ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದಾನೆ. ಇದರಿಂದಾಗಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ನಂತರ ಸುದ್ದಿ ತಿಳಿದ ಪೊಲೀಸರು ಗಾಯಾಳು ಸುನೀಲ್‌ನನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿ ದೇವು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನರೇಗಲ್ಲ ಬಳಿ ಭೀಕರ ಅಪಘಾತ; ಬಾಲಕ ಸೇರಿ ಆರು ಜನರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಮಕ್ಕಳು ಸೇರಿ ಹತ್ತಕ್ಕೂ ಹೆಚ್ಚು ಜನರು ಗಾಯ…..

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾಸುಮೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.

ನರೇಗಲ್ಲ ಸಮೀಪದ ನಿಡಗುಂದಿಕೊಪ್ಪದ ಬಳಿ ಈ ದುರ್ಘಟನೆ ಜರುಗಿದ್ದು, ಅಪಘಾತದಲ್ಲಿ ಮೂರು ಜನ ಮಹಿಳೆಯರು, ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ಹಾಗೂ ಅಪ್ಜಲಪೂರ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದು, ನಾಲ್ವರು ಮಕ್ಕಳು ತೀವ್ರ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಹ ಸಣ್ಣಪುಟ್ಟ ಗಾಯಗಳು ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಅಪ್ಜಲಪೂರದ  ಸಚಿನ್ ಕತ್ತಿ 31, ದ್ರಾಕ್ಷಾಯಣಿ ಕತ್ತಿ-30 ಹಾಗೂ  ಮಾದನ ಹಿಪ್ಪರಗಿಯ ಶಿವಕುಮಾರ್ ಕಲಶೆಟ್ಟಿ 50, ಚಂದ್ರಕಲಾ 42, ರಾಣಿ-32 ಹಾಗೂ ದಿಂಗಾಲೇಶ್ವರ ಎಂಬ ಐದು ವರ್ಷದ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಅಲ್ಲಮಪ್ರಭು ಎಂಬ ಬಾಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರು ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ವರ ಮಠ ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದರ್ಶನಕ್ಕೆ ಬರುತ್ತಿದ್ದರು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನರೇಗಲ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ನೆರವಿನೊಂದಿಗೆ ಶವಗಳನ್ನು ಹೊರ ತೆಗೆದು ಶವಾಗಾರಕ್ಕೆ ರವಾನಿಸಿದರು.

ಅಂದರ್-ಬಾಹರ್ ಜೂಜಾಟ; ಸೆಕ್ಯೂರಿಟಿ ಗಾರ್ಡ್, ವರ್ತಕ ಸೇರಿ 10 ಜನರ ಬಂಧನ

ಗ್ರಾಮೀಣ ಪೊಲೀಸರ ಕಾರ್ಯಾಚರಣೆ….

ವಿಜಯಸಾಕ್ಷಿ ಸುದ್ದಿ, ಗದಗ

ದೇವಸ್ಥಾನದ ಮುಂಬಾಗದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಸೆಕ್ಯೂರಿಟಿ ಗಾರ್ಡ್, ವರ್ತಕ, ಪ್ಲಂಬರ್ ಸೇರಿದಂತೆ ಹತ್ತು ಜನರನ್ನು ಬಂಧಿಸಿರುವ ಗ್ರಾಮೀಣ ಪೊಲೀಸರು ಒಂದು ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಘಟನೆ ಜರುಗಿದೆ.

ಗದಗ ತಾಲೂಕಿನ ದುಂದೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಉಮೇಶ್ ನಿಂಗಪ್ಪ ಕೌಜಗೇರಿ, ಮಂಜುನಾಥ ಶಂಕ್ರಪ್ಪ ಅಕ್ಕಿ, ರುದ್ರಪ್ಪ ಹನಮಪ್ಪ ತಳವಾರ, ಬಸವರಾಜ್ ಶಿವಪ್ಪ ಚುರ್ಚಿಹಾಳ, ಸುರೇಶ್ ಪಕ್ಕೀರಪ್ಪ ದುಂದೂರು, ಮುತ್ತು ಯಲ್ಲಪ್ಪ ಓಲೇಕಾರ, ಶ್ರೀನಿವಾಸ್ ಭೋಜಪ್ಪಗೌಡ ಮರಿಯಪ್ಪಗೌಡ್ರ, ರಾಮನಗೌಡ ಹನುಮಂತಗೌಡ ಪಾಟೀಲ, ಚಂದ್ರಪ್ಪ ದೇವೇಂದ್ರಪ್ಪ ವಾಲೀಕರ ಹಾಗೂ ಯಲ್ಲಪ್ಪ ಹನಮಪ್ಪ ಯಾವಗಲ್ ಎಂಬುವವರನ್ನು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಕಿರಣ್‌ಕುಮಾರ್ ಕೆ.ಎಸ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 1 ಲಕ್ಷ 15 ಸಾವಿರ ದ ಇಪ್ಪತ್ತು ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಕಲಂ 87ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 279/2023, ಎನ್.ಸಿ 44/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ್-ಬಾಹರ್ ಜೂಜಾಟ; ಐದು ಜನರ ಬಂಧನ

ಹೊಂಬಳ ಗ್ರಾಮದಲ್ಲಿ ಜೂಜಾಟ……

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕ ಗಣಪತಿ ಮುಂದೆ ರಸ್ತೆಯ ಮೇಲೆ ಅಂದರ್-ಬಾಹರ್ ಜೂಜಾಡುತ್ತಿದ್ದ ಐವರನ್ನು ಗ್ರಾಮೀಣ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಗದಗ ತಾಲೂಕಿನ ಹೊಂಬಳ ಗ್ರಾಮದ ಪ್ಯಾಟಿ ಅವರ ಓಣಿಯಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಸಿದ್ಧಲಿಂಗೇಶ್ವರ ಸಾರ್ವಜನಿಕ ಗಣಪತಿ ಮುಂಬಾಗ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವೀರಣ್ಣ ತಂದೆ ಮಲ್ಲಪ್ಪ ನವಲಗುಂದ, ಶಂಕ್ರಪ್ಪ ತಂದೆ ಚನ್ನಪ್ಪ ಲದ್ದಿ, ಮಾಬುಸಾಬ ತಂದೆ ದೊಡ್ಡ ಹಸನಸಾಬ ಹಾದಿಮನಿ, ಇಮಾಮಸಾಬ್ ದಾವಲಸಾಬ ದಾಯಮ್ಮನವರ ಹಾಗೂ ಹನುಮಂತಪ್ಪ ತಂದೆ ಫಕ್ಕೀರಪ್ಪ ಮಾಗಳದ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 8400 ರೂ.ಗಳನ್ನು ವಶಪಡಿಸಿಕೊಂಡಿದ್ದು, ಕಲಂ 87,ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 0284/2023, ಎನ್.ಸಿ 46/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ಮೆರವಣಿಗೆ ಬೇಗ ಮುಗಿಸಿ ಅಂದಿದ್ದಕ್ಕೆ ಪೊಲೀಸ್ ಮೇಲೆ ಹಲ್ಲೆ…

0

ಮೂವರಿಂದ ಕರ್ತವ್ಯಕ್ಕೆ ಅಡ್ಡಿ…..

ವಿಜಯಸಾಕ್ಷಿ ಸುದ್ದಿ, ಗದಗ

ಗಣೇಶ ವಿಸರ್ಜನಾ ಮೆರವಣಿಗೆ ಬೇಗ ಮುಗಿಸಿ ಎಂದ ಪೊಲೀಸ್ ಒಬ್ಬರ ಮೇಲೆ ಮೂವರು ಹಲ್ಲೆ ಮಾಡಿದ ಘಟನೆ ಮೊನ್ನೆ ರಾತ್ರಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೊನ್ನೆ ಗದಗ ತಾಲೂಕಿನ ಚಿಂಚಲಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬಂದೋಬಸ್ತ್ ‌ಗೆ ತೆರಳಿದ್ದ ಪೇದೆ ಗಿರೀಶ್ ಕುರಹಟ್ಟಿ, ಮೆರವಣಿಗೆ ಬೇಗ ಮುಗಿಸಿ ಅಂದಿದ್ದೆ ತಡ, ಅದೇ ಗ್ರಾಮದ ದುರ್ಗಾನಗರದ ವಿರೇಂದ್ರ ತಂದೆ ಮಂಜಪ್ಪ ಲಕ್ಷ್ಮೀಗುಡಿ, ರಾಕೇಶ್ ತಂದೆ ಹುಚ್ಚಪ್ಪ ವಡ್ಡರ ಹಾಗೂ ಮುದಕಪ್ಪ ತಂದೆ ಹನಮಂತಪ್ಪ ವಡ್ಡರ ಎಂಬ ಮೂವರು ಆರೋಪಿಗಳು, ಪೇದೆ ಜೊತೆಗೆ ವಾಗ್ವಾದಕ್ಕಿಳಿದರು.

ಏಕವಚನದಲ್ಲಿ ಮಾತನಾಡಿದ ಆರೋಪಿಗಳು, ಪೇದೆಯ ಯುನಿಪಾರ್ಮ್ ಕಾಲರ್ ಹಿಡಿದು ಜಗ್ಗಾಡಿ, ಶರ್ಟ್ ಹರಿದು, ಒಬ್ಬ ಅಡ್ಡಗಟ್ಟಿ ಕಪಾಳಕ್ಕೆ ಹೊಡೆದರೆ, ಮತ್ತೊಬ್ಬ ಎದೆಗೆ ಹಾಗೂ ಹೊಟ್ಟೆಯ ಕೆಳಭಾಗಕ್ಕೆ ಹೊಡೆದು ಒಳಪೆಟ್ಟುಪಡಿಸಿದ್ದಾನೆ. ಅಷ್ಟೇ ಅಲ್ಲದೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ.

ಪೇದೆ ಗಿರೀಶ್ ಕುರಹಟ್ಟಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮುಳಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ 0065/2023, IPC 1860(U/s-341,332,353,504,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಬೈಕ್ ಕಳ್ಳನ ಬಂಧನ, 7 ಬೈಕ್‌ಗಳು ಜಪ್ತಿ

0

ಎಸ್ಪಿ ಬಿ.ಎಸ್. ನೇಮಗೌಡ ಶ್ಲಾಘನೆ…..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಪೊಲೀಸ್ ಠಾಣೆ ಹಾಗೂ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 7 ಬೈಕ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಬೆನ್ನತ್ತಿದ ಪೊಲೀಸರು, ಎಸ್‌ಪಿ ಬಿ.ಎಸ್ ನೇಮಗೌಡ ಮತ್ತು ಡಿಎಸ್‌ಪಿ ಸಂಕದ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ವಿಜಯಕುಮಾರ ತಳವಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಸೆ.೨೮ರ ಬೆಳಗಿನ ಜಾವ ಆರೋಪಿ ಗುಡದಯ್ಯ ಲಕ್ಷ್ಮಣ ಮೋಡಕೇರ(21) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕದ್ದ ಬೈಕ್‌‌ಗಳ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.

ಶಿರಹಟ್ಟಿ ತಾಲೂಕಿನ ಕಡಕೋಳ, ಛಬ್ಬಿ, ಶಿರಹಟ್ಟಿಯ ಚರ್ಚ್ ಹತ್ತಿರ, ಗದಗ ತಾಲೂಕಿನ ಅಂತೂರ-ಬೆಂತೂರ, ಗಜೇಂದ್ರಗಡ, ಲಿಂಗಸೂರು, ಗುತ್ತಲದ ಹುರುಳಿಹಾಳ ಗ್ರಾಮಗಳಲ್ಲಿ ಕಳುವು ಮಾಡಿದ್ದ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾದ ಪಿಎಸ್‌ಐ ಈರಪ್ಪ ರಿತ್ತಿ, ವಿಜಯಕುಮಾರ ತಳವಾರ, ಸಿಬ್ಬಂದಿಗಳಾದ ಎಲ್.ಎಚ್ ಲಮಾಣಿ, ಆರ್.ಎಸ್ ಯರಗಟ್ಟಿ, ಎಸ್.ಸಿ ಕಪ್ಪತ್ತನವರ, ಎಂ.ವಾಯ್ ಪಿರಂಗಿ, ಕಿರಣ ಪವಾರ, ಸಿ.ಸಿ ಗುಂಡೂರಮಠ, ರಾಜೇಶ ವೀರಾಪೂರ, ಬಿ.ಜೆ ಮುಳಗುಂದ, ಹನಮಂತ ದೊಡ್ಡಮನಿ, ಆರ್.ಎಚ್ ಮುಲ್ಲಾ, ಎಸ್.ಎಚ್ ರಾಮಗೇರಿ, ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಸಂಜು ಕೊಡೂರ ಇವರ ಕಾರ್ಯಕ್ಕೆ ಎಸ್‌ಪಿ ಬಿ.ಎಸ್. ನೇಮಗೌಡ, ಡಿಎಸ್‌ಪಿ ಸಂಕದ ಹಾಗೂ ಸಿಪಿಐ ನಾಗರಾಜ್ ಮಾಡಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಕ್ಕುಂಡಿ ಬಳಿ ಭೀಕರ ಅಪಘಾತ; ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್, ಕಾರಿನಲ್ಲಿದ್ದ ತಂದೆ, ಮಗ ಸ್ಥಳದಲ್ಲೇ ಸಾವು

0

ಶವ ಹೊರ ತಗೆಯಲು ಹರಸಾಹಸ....

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಸಂಸ್ಥೆಯ ಬಸ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಮುಂಜಾನೆ ಜರುಗಿದೆ.

ಶಿಕ್ಷಣ ಇಲಾಖೆಯಲ್ಲಿ ಜೆಡಿಯಾಗಿ ನಿವೃತ್ತಿ ಹೊಂದಿದ್ದ ಹೊಸಪೇಟೆಯ ನಿವಾಸಿಗಳಾದ ಬಾಲರಾಜ್ (65) ಹಾಗೂ ಮಗ ಉಪನ್ಯಾಸಕ ವಿನಯ್ (28) ಸ್ಥಳದಲ್ಲೇ ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ.

ಗದಗ ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಕುಂಡಿ ಗ್ರಾಮದ ಕೂಗಳತೆಯಲ್ಲಿ ಈ ಅಪಘಾತ ನಡೆದಿದೆ.

ಬಸ್ ಗದಗನಿಂದ ಲಕ್ಕುಂಡಿ ಮಾರ್ಗವಾಗಿ ಕೊಪ್ಪಳಕ್ಕೆ ಹೊರಟಿತ್ತು ಎನ್ನಲಾಗಿದೆ. ಕಾರು ಹೊಸಪೇಟೆಯಿಂದ ಹುಬ್ಬಳ್ಳಿ ಕಡೆ ಹೊರಟಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಿಂದ ಶವ ಹೊರಗಡೆ ತೆಗೆಯಲು ಹರಸಾಹಸ ಪಡಬೇಕಾಯಿತು.

ಗಾಯಗೊಂಡ ಪ್ರಯಾಣಿಕರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ, ಹಾಲಿನ ಪುಡಿ ವಶಕ್ಕೆ

0

ಆಹಾರ ಇಲಾಖೆ, ಪೊಲೀಸರ ಜಂಟಿ ಕಾರ್ಯಾಚರಣೆ…

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ


ಪಟ್ಟಣದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿರುವ ಗೋಡೌನ್ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಅನ್ನಭಾಗ್ಯದ ಅಕ್ಕಿ ಮತ್ತು ಕ್ಷೀರಭಾಗ್ಯದ ಹಾಲಿನ ಪುಡಿಯನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

ತಾಲೂಕು ಅಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹಾಗೂ ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ ಎಪಿಎಂಸಿ ಗೋದಾಮೊಂದರಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಹಾಗೂ ಅನ್ನಭಾಗ್ಯ ಅಕ್ಕಿಯನ್ನು ಹೋಲುವ 51 ಚೀಲಗಳಲ್ಲಿರುವ 26.5ಕ್ವಿಂಟಾಲ್ ತೂಕದ 90,100 ರೂ ಮೌಲ್ಯದ ಅಕ್ಕಿ ಚೀಲಗಳು ಸಿಕ್ಕಿವೆ. ಈ ಕುರಿತು ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪಟ್ಟಣದ ಎಪಿಎಂಸಿಯ ಗೋದಾಮಿನ ಮೇಲೆ ನಡೆದ ದಾಳಿ ವೇಳೆ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಸಿಕ್ಕಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯದ್ದಾಗಿದೆ. ಗಜೇಂದ್ರಗಡ ನೆರೆಯ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಹತ್ತಿರವಿದ್ದು, ಎಲ್ಲ ಪ್ಯಾಕೆಟ್‌ಗಳ ಬ್ಯಾಚ್ ನಂಬರ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ತಿಳಿಸಿದ್ದಾರೆ.

ಗಾಂಜಾ ಬೆಳೆದ ಆರೋಪಿಗೆ 3 ವರ್ಷ ಶಿಕ್ಷೆ, 25 ಸಾವಿರ ದಂಡ

0

ಅಯ್ಯನಗೌಡ ಗೌಡಪ್ಪಗೌಡ……ಜಮೀನಿನಲ್ಲಿ ಗಾಂಜಾ ಬೆಳೆದಿದ್ದ…..

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಸ್ವಂತ ಲಾಭಕ್ಕೋಸ್ಕರ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಗದಗ ತಾಲೂಕಿನ ಬೆಳಹೋಡದಿಂದ ಮದಗಾನೂರು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ವೆ ನಂ. 111/1+2ಅ/2 ರಲ್ಲಿ ಒಟ್ಟು 10 ಹಸಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು.

22.10.2021 ರಂದು ಆರೋಪಿತ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡರ ಸಿಕ್ಕಿಬಿದ್ದಿದ್ದು, ಇವನಿಂದ ಸುಮಾರು 12 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಗದಗ ವಲಯದ ಅಬಕಾರಿ ನಿರೀಕ್ಷಕ ನಾರಾಯಣಸಾ ಪವಾರ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಎಸ್‌ ಶೆಟ್ಟಿ ಇವರು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡನಿಗೆ ದಿ.16.09.2023 ರಂದು ಶಿಕ್ಷೆ ವಿಧಿಸಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯ ಕಲಂ 20(I) 20(ಎ) 25, 8 (ಸಿ) ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

error: Content is protected !!