Home Blog Page 3236

ಗದಗನಲ್ಲಿ ಗೂಳಿ ಕಾಳಗ; ಬಿಡಾಡಿಗಳ ಕಾದಾಟ ಕಂಡು ಅವಾಕ್ಕಾದ ಸಾರ್ವಜನಿಕರು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅವಳಿ ನಗರದಲ್ಲಿ ಬಿಡಾಡಿಗಳ ಕಾಟ ಹೆಚ್ಚಾಗಿದ್ದು, ಪ್ರತಿದಿನವೂ ಈ ಬಿಡಾಡಿಗಳ ಕಾದಾಟ ನಡೆಯೋದು ಸಹಜವಾಗಿದೆ.

ಇಂದೂ ಸಹ ಇದೇ ಘಟನೆ ನಗರದ ಹಳೆ ಡಿಸಿ ಆಫೀಸ್ ಸರ್ಕಲ್ ಬಳಿ ನಡೆದಿದೆ.

ಮದವೇರಿದ ಎರಡು ಗೂಳಿಗಳು, ತಲೆಗೆ ತಲೆ ಡಿಕ್ಕಿ ಹೊಡೆಸಿ ಗುಟುರು ಹಾಕುತ್ತಾ ಕಾದಾಟ ನಡೆಸಿದವು. ಇನ್ನು ಇದನ್ನು ಕಂಡು ಸುತ್ತಮುತ್ತಲಿದ್ದ ಜನ ಅವಾಕ್ಕಾಗಿ ನಿಂತಿದ್ದರು.

ಕೊನೆಗೆ ಅವುಗಳಲ್ಲಿ ಒಂದು ಗೂಳಿ ಸೋಲೊಪ್ಪಿಕೊಂಡು ಫುಟ್ ಪಾತ್ ಮೇಲೆ ಬಂದಾಗ, ಮತ್ತೊಂದು ಗೂಳಿ ಅದಕ್ಕೆ ಡಿಕ್ಕಿ ಹೊಡೆಯಿತು. ಈ ವೇಳೆ ಫುಟ್ ಪಾತ್ ಮೇಲೆ ನಿಲ್ಲಿಸಿದ್ದ ಮೂರು ಬೈಕ್ ಗಳು ಜಖಂಗೊಂಡಿವೆ.

ಗದಗ ಬೆಟಗೇರಿ ಅವಳಿ ನಗರಾದಾದ್ಯಂತ ಈ ಬಿಡಾಡಿಗಳ ಕಾಟ ಹೆಚ್ಚಾಗಿದ್ದು, ಇದನ್ನು ಸರಿಪಡಿಸಿ ಎಂದು ನಗರಸಭೆಗೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನಾದರೂ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ಬಿಡಾಡಿಗಳ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಸರಾ, ಈದ್ ಮಿಲಾದ್ ಅಂಗವಾಗಿ ಶಾಂತಿ ಸಭೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶುಕ್ರವಾರ ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಸ್‌ಐ ಬಸವರಾಜ ಕೊಳ್ಳಿ ಮಾತನಾಡಿ, ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಸಂದರ್ಭದಲ್ಲಿ, ಸರ್ಕಾರ ಹೊರಡಿಸಿರುವ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಹಬ್ಬವನ್ನು ಆಚರಿಸಬೇಕು. ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಗಳ ನಾಗರಿಕರು ಎಚ್ಚರಿಕೆಯಿಂದ ಹಬ್ಬ ಹರಿದಿನಗಳನ್ನು ಮಾಡಬೇಕಾಗಿದೆ ಎಂದರು.
ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಈ ರೋಗ ಮಾತ್ರ ಹತೋಟಿಗೆ ಬರುವ ಲಕ್ಷಣಗಳನ್ನು ಗೋಚರಿಸುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕೊರೊನಾ ವೈರಸ್ ಬಗ್ಗೆ ಜಾಗೃತಿಗೊಂಡು ಪ್ರಸಕ್ತ ಸಾಲಿನ ಎಲ್ಲ ಹಬ್ಬಗಳನ್ನು ಮನೆಯಲ್ಲಿಯೇ ಆಚರಿಸಬೇಕಾಗಿದೆ ಎಂದರು.
ಅಬ್ಬಿಗೇರಿ ಗ್ರಾಮದ ಹಿರಿಯರಾದ ಅಂದಪ್ಪ ವೀರಾಪೂರ, ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತು ಕಡಗದ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಸಂತೋಷದ ವಿಷಯವಾಗಿದೆ. 10 ವರ್ಷದ ಒಳಗಿನ ಚಿಕ್ಕ ಮಕ್ಕಳು ಹಾಗೂ ವೃದ್ಧರು ಹಬ್ಬದ ಸಮಯದಲ್ಲಿ ಹೊರಗೆ ಬರುವಾಗ ಅಥವಾ ಹಬ್ಬವನ್ನು ಆಚರಣೆ ಮಾಡುವ ವೇಳೆ ಮಾಸ್ಕ್ ಧರಿಸಿಕೊಂಡು ಆಚರಿಸಬೇಕು ಎಂದರು.
ತಾ.ಪಂ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಕಣವಿ, ಯಲ್ಲಪ್ಪ ಮಣ್ಣೊಡ್ಡರ, ಅಲ್ಲಾಭಕ್ಷಿ ನದಾಫ, ರಾಜೇಶ ಅಂಗಡಿ, ಸಂತೋಷ ಹನಮಸಾಗರ, ಎಂ.ಕೆ. ಕಾಳಗಿ, ಅಂದಾನಯ್ಯ ಮಾಲಗಿತ್ತಿಮಠ, ಮಲ್ಲರಡ್ಡಿ ರಡ್ಡೇರ, ರಕ್ಷಿತಗೌಡ ಪಾಟೀಲ, ಎಸ್.ಎಫ್. ಅಂಗಡಿ, ಕೃಷ್ಣಾ ಜುಟ್ಲದ, ಶಿವನಗೌಡ ಪಾಟೀಲ, ಮಹೇಶ ಶಿವಶಿಂಪರ, ಹನಮಂತಪ್ಪ ದ್ವಾಸಲ್, ಮಹೇಶ ಬಾಗಲಿ, ಶರಣಪ್ಪಗೌಡ ಕರಮುಡಿ, ಹುಸೇನಸಾಬ ಮಾಕಿ, ಬಾಬುಸಾಬ ರಾಹುತ, ಎಂ.ಎಚ್. ಜಾಲಿಹಾಳ, ಈರಪ್ಪ ಜೋಗಿ, ಸತೀಶ ಮಾಳವಾಡ, ಸಂತೋಷ ಕಡೆತೋಟದ, ಬಸವರಾಜ ವೀರಾಪೂರ, ಕಾಶೀಮಸಾಬ ದೊಟ್ಟಿಹಾಳ, ನಿಂಗಪ್ಪ ಹೊನ್ನಾಪೂರ, ಹಟೇಲಸಾಬ ಲತೀಪನವರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು. ನಾಗರಾಜ ಮಂಗಳೂರ ನಿರ್ವಹಿಸಿದರು.
 

ಖಾಲಿ ಕ್ವಾಟ್ರು..’ಹಾಡಿಗೆ ಕುಷ್ಟಗಿ ಪುರಸಭೆ ಕಾಂಗ್ರೆಸ್ ಸದಸ್ಯರ ನೃತ್ಯ‌; ವಿಡಿಯೋ ವೈರಲ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕುಷ್ಟಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಅಜ್ಞಾತ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಕಾಂಗ್ರೆಸ್ ಸದಸ್ಯರು ಸಿನಿಮಾ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯರು, ಸದಸ್ಯೆಯರ ಪತಿಯಂದಿರು ಹಾಗು ಪುತ್ರರು ಈ ವೇಳೆ ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ.

ಮಳೆಯಿಂದ ಜನರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇವುಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಹೀಗೆ ಮೋಜು, ಮಸ್ತಿಯಲ್ಲಿ ತೊಡಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ಕುಡಿಯುವ ನೀರಿಗೆ ಆಗ್ರಹಿಸಿ ತಾಲೂಕಿನ ಮತ್ತಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಖಾಲಿ ಕೊಡಗಳ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಯನ್ನುದ್ದೇಶಿಸಿ ಮೈದೂರು ರಾಮಣ್ಣ ಮಾತನಾಡಿ, ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮತ್ತಿಹಳ್ಳಿ, ಎನ್. ಶಿರನಹಳ್ಳಿ, ಆಲದಹಳ್ಳಿ, ಹಗರಿಶಿರನಹಳ್ಳಿ ಮತ್ತು ಪುಣ್ಯ ನಗರ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಇದ್ದೆ ಇದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿತ್ತಿಲ್ಲ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಜಿಲ್ಲಾ ಪಂಚಾಯತ ಸಿಇಓ ಅವರು ಮತ್ತಿಹಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ತುಂಬಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮದ ಜನರು ಪಂಚಾಯತಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಸುಮಾರು ಹತ್ತು ಸಾವಿರ ಜನರಿಗೆ ಕುಡಿಯುವ ನೀರು ಸೇರಿದಂತೆ ಸ್ವಚ್ಚತೆ ಬೀದಿ ದೀಪ ನಿರ್ವಹಣೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಕಳೆದ ಎರಡು ತಿಂಗಳಿಂದ ಗ್ರಾಮಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್‌ಗೆ ಆಲೆದು ಅಲೆದು ಸುಸ್ತಾಗಿ, ನೀರು ತರುವ ಬಂಡಿ ಹಾಗೂ ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ಪಂಚಾಯತಿ ಕಚೇರಿ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಿರ್ಗಮಿತ ಅಧ್ಯಕ್ಷೆ ಚೆನ್ನಮ್ಮ ರಾಮಣ್ಣ, ಮೈದೂರು ರಾಮಣ್ಣ, ಡಿ ಶೇಖರಪ್ಪ, ಎಂ ಕೋಟ್ಯಪ್ಪ, ಮರಳುಸಿದ್ದಪ್ಪ, ಸಿದ್ದಪ್ಪ, ಚಂದ್ರೇಗೌಡ, ಕೋಟ್ರೇಶ, ಎರಿತಾತಾ, ನಿಂಗಜ್ಜ, ಶಿವಣ್ಣ, ಕರಿಯವ್ವ, ಬಸಮ್ಮ, ಕೆ ಸಿದ್ದಪ್ಪ, ಬಸವರಾಜ, ಕೆ ಶಿವಕುಮಾರ್, ಕೊಟ್ರೇಶ್, ಉಳ್ಳೇರ್ ಕೊಟ್ರಪ್ಪ, ಕೆಂಚಪ್ಪ, ಗಣೇಶ, ನಾಗಪ್ಪ, ಎಂ ನಾಗರಾಜ್, ನಾಗೇಂದ್ರಪ್ಪ, ಮಂಜಪ್ಪ, ಹಾಲಪ್ಪ, ಮರಿಯಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಮಾನವ ಜನ್ಮ ಪುಣ್ಯದಿಂದ ಬಂದದ್ದು, ಸಾರ್ಥಕವಾಗಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಪುಣ್ಯದಿಂದ ಬಂದ ಮಾನವ ಜನ್ಮ ಸಾರ್ಥಕವಾಗಲು ಪರಂಪರೆ, ಸಂಸ್ಕಾರ ಹಾಗೂ ಧರ್ಮದ ಪುನರುತ್ಥಾನಕ್ಕೆ ಸಮರ್ಪಿಸಿಕೊಳ್ಳಬೇಕಿದೆ ಎಂದು ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಸೂಡಿ ಗ್ರಾಮದ ಜುಕ್ತಿಹಿರೇಮಠದ ಲಿಂ.ಗುರು ಉಮಾಪತಿ ಶಿವಾಚಾರ್ಯರ 73ನೇ ಪುಣ್ಯಾರಾಧನೆ ಹಾಗೂ ೪೪ ನೇ ಸರಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ವೈರಸ್ ಜಗತ್ತಿನಾದ್ಯಂತ ಹಬ್ಬಿ ಮನುಷ್ಯರು ಮನೆ ಬಿಟ್ಟು ಬಾರದ ದುಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಹಬ್ಬಗಳು, ಜಾತ್ರೆಗಳು ಸಂಕ್ಷಿಪ್ತವಾಗಿ ಆಚರಣೆಯಾಗಿರುವುದು ನೋವಿನ ಸಂಗತಿ. ಬರಗಾಲ ಹಾಗೂ ಅತಿವೃಷ್ಠಿಯ ಸಂದರ್ಭದಲ್ಲಿ ಭಕ್ತರು ಕುಗ್ಗಿರಲಿಲ್ಲ. ಆದರೆ ದೇವರು ಕೊಟ್ಟು ಹಾಗೂ ಕಸಿದು ನೋಡುತ್ತಾನೆ ಎಂದು ಭಕ್ತ ಸಮೂಹ ಜಗತ್ತಿಗೆ ಎದುರಾಗಿರುವ ಸಂಕಷ್ಟ ಸಂದರ್ಭದಲ್ಲಿ ಸಂಕ್ಷಿಪ್ತ ಜಾತ್ರೆ ಹಾಗೂ ಹಬ್ಬಗಳಲ್ಲಿ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥಿಸುತ್ತಿದ್ದಾರೆ ಎಂದರು.
ಮಾನವ ಸಂಬಂಧಗಳು ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ದಿನಮಾನದಲ್ಲಿ ಮಾನವೀಯತೆಗೆ ಮಹತ್ವ ನೀಡಲು ಬಂದಿರುವ ಕಾಲಘಟ್ಟವಾಗಿದೆ. ಹೀಗಾಗಿ ಜಗತ್ತಿಗೆ ಎದುರಾಗಿರುವ ಕಂಟಕ ದೂರವಾಗಲಿ ಎಂದು ಮಠದಿಂದ ಪ್ರಾರ್ಥಿಸುತ್ತೇವೆ ಎಂದರು.
ಕೊರೋನಾ ಮುಂಜಾಗ್ರತ ಕ್ರಮವಾಗಿ ಸೂಡಿಯ ಪ್ರಾಥಮಿಕ ಆರೋಗ್ಯ ಇಲಾಖೆಯಿಂದ ಮಠಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೆಸರ್ ಹಾಗೂ ದೇಹದ ಉಷ್ಣ ತಪಾಸಣೆ ಮಾಡಲಾಯಿತು. ಕೊರೋನಾ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪಾಲಿಸಲು ಪಂಚಾಯ್ತಿ ಹಾಗೂ ಗಜೇಂದ್ರಗಡ ಪೊಲೀಸ್ ಠಾಣೆಯ ಸಹಕಾರವನ್ನು ಮಠದಿಂದ ಪಡೆಯಲಾಗಿತ್ತು.
ಈ ವೇಳೆ ಉಮೇಶ ಲಮಾಣಿ, ರಾಜು ಮುರಗಿ, ಸುನೀಲ ಮಾರನಬಸರಿ, ನವೀನ ಹೆಬ್ಬಾರೆ ಸೇರಿ ಇತರರು ಇದ್ದರು.

ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮನವಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರೇಗಲ್ಲ 
ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರ ಪ್ರಚಾರ ನಡೆಸಲಾಯಿತು.
ಈ ವೇಳೆ ರೋಣ ಮಂಡಲ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲು ಮಾದರ ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ ಪರವಾಗಿ ಸದನದಲ್ಲಿ ಸಾಕಷ್ಟು ಯೋಜನೆಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತಿರುವ ಏಕೈಕ ಜನಪ್ರತಿನಿಧಿಯಾಗಿ ಎಸ್.ವಿ. ಸಂಕನೂರ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಸೇವೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.
ಅಮರೇಶ ಜಾಲಿಹಾಳ, ಅಬ್ದುಲ್‌ಸಾಹೇಬ ಹೊಸಳ್ಳಿ, ಪರಶುರಾಮ ಮಾದರ, ಶರಣಪ್ಪ ಕುಂದಗೋಳ, ಮಂಜುನಾಥ ದಳವಾಯಿ, ಬಸವರಾಜ ಹುಡೇದ, ಫಕೀರಪ್ಪ ಮಾದರ, ಯಮನಪ್ಪ ಮಾದರ, ಪ್ರಸನ ಸ್ಥಾವರಮಠ, ನೀಲಪ್ಪ ಮಾದರ, ರಾಮಣ್ಣ ಮಾದರ, ಶಿವಾನಂದ ಮರಗಣ್ಣವರ, ಬಸವರಾಜ ಮಾರನಬಸರಿ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.
 

ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ, ಪರಿಸರ ಜಾಗೃತಿ ಪತ್ರ ಬಿಡುಗಡೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ೧೯೭ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ನಗರದ ರಾಣಿ ಚೆನ್ನಮ್ಮಾಜಿ ಪ್ರತಿಮೆಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು ಹಾಗೂ ಪರಿಸರ ಜಾಗೃತಿ ಕರಪತ್ರ ಬಿಡುಗಡೆಗೊಳಿಸಲಾಯಿತು.
ವಾಕರಸಾ ನಿಗಮದ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ರೈತ ಮುಖಂಡ ವಿಕಾಸ ಸೊಪ್ಪಿನ, ವೀರಣ್ಣ ಕಲ್ಲೂರ, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ಮಾತನಾಡಿದರು. ಸಾಹಿತಿ ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ಅಧ್ಯಕ್ಷತೆ ವಹಿಸಿದ್ದರು. ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಸ್ವಾಗತಿಸಿ, ನಿರೂಪಿಸಿದರು. ಗೀತಾ ಮುಳ್ಳೊಳ್ಳಿ ವಂದಿಸಿದರು.
ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಎಸ್.ಐ. ನೇಕಾರ, ಆನಂದ ಘಟಪನದಿ, ಮೃತ್ಯುಂಜಯ ಮಟ್ಟಿ, ಡಾ. ಬಸವಕುಮಾರ ತಲವಾಯಿ, ಸದಾಶಿವಚೌಶೆಟ್ಟಿ, ರತ್ನಾಚೌಶೆಟ್ಟಿ, ಸಿ.ಜಿ.ಧಾರವಾಡ ಶೆಟ್ಟರ ಮುಂತಾದವರು ಇದ್ದರು.

ಕುಬೇರಪ್ಪ ಪರ ಕುಸುಮಾವತಿ ಶಿವಳ್ಳಿ ಪ್ರಚಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕುಂದಗೋಳ
ತಾಲೂಕಿನ ಕಳಸ ಗ್ರಾಮದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಆರ್.ಎಂ. ಕುಬೇರಪ್ಪ ಅವರ ಪರವಾಗಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ ಶಿವಳ್ಳಿ ಮತಯಾಚನೆಯನ್ನು ಕೈಗೊಂಡರು.
ನಂತರ ಮಾತನಾಡಿದ ಅವರು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಇವರಾಗಿದ್ದು ಇವರಿಗೆ ಪ್ರಥಮ ಪ್ರಾಶಸ್ತದ ಮತ ನೀಡಿ ಗೆಲ್ಲಿಸಿರಿ ಎಂದು ವಿನಂತಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ರಾಮನಗೌಡ ಪಾಟೀಲ, ವಿಜಯಕುಮಾರ ಹಾಲಿ, ಇರ್ಷಾದ್ ಹುಲಗುರ, ಬಾಬಾಜಾನ ಖಾತಾಲಸಾಬನವರ, ಹಜರೆಸಾಬ ಬಾವಿಕಟ್ಟಿ, ಯಲ್ಲಪ್ಪ ಹೊಸಮನಿ, ಮೌಲಾಲಿ ಲಾಠಿ, ಮೌಲಾಸಾಬ ಗುಡಾರದ, ಇಸ್ಮಾಯಿಲ್ ಮೊಮಿನ್, ಅಖಂಡಪ್ಪ ಕೆಂಡದ, ಸದ್ದಾಮ ರಾಯಚೂರ ಸೇರಿದಂತೆ ಅನೇಕ ಹಿರಿಯರು ಹಾಗೂ ಪದವೀಧರರು ಉಪಸ್ಥಿತರಿದ್ದರು.
 

ಮಳೆಯಿಂದ ಕುಸಿದ ಮನೆ, ಪರಿಹಾರಕ್ಕೆ ಆಗ್ರಹ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಪಟ್ಟನದಲ್ಲಿ ಅತಿಯಾಗಿ ಮಳೆ ಆಗಿರುವುದರಿಂದ ಮಣ್ಣಿನ ಮನೆಗಳು ನೀರಿಗೆ ನೆನೆದು ಕುಸಿದು ಬಿದ್ದು ಅಪಾರ ಹಾನಿ ಉಂಟಾಗಿದೆ.
ಇಲ್ಲಿಯ ಭಜಂತ್ರಿ ಓಣಿಯ ರಾಜಾಭಕ್ಷಿ ಅಚ್ಚಳ್ಳಿ ಅವರ ಮನೆ ಮಾಳಿಗೆ ನೆನೆದು ಕುಸಿದು ಬಿದ್ದಿದೆ. ಸ್ವಲ್ಪದರಲ್ಲಿಯೇ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಂಡರಗಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಕುಟುಂಬಗಳು ಬೀದಿ ಪಾಲಾಗಿವೆ. ಮನೆಗಳು ಬಿದ್ದು, ಅಪಾರ ಪ್ರಮಾಣದಲ್ಲಿ ದವಸ ಧಾನ್ಯ ಬಟ್ಟೆಗಳು ಹಾಳಾಗಿದೆ. ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತಾಲೂಕು ಆಡಳಿತ ಹಾಗೂ ಪುರಸಭೆಯವರು ಬಿದ್ದ ಮನೆ ಹಾಗೂ ಹಾನಿ ಆದ ಮನೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಪುರಸಭೆ ಸದಸ್ಯ ಶಿವಪ್ಪ ಚಿಕ್ಕಣವರ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ಶಿರಾಜ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಪರಶುರಾಮ ಸುಣಗಾರ ಮೊದಲಾದವರು ಆಗ್ರಹಿಸಿದ್ದಾರೆ.

ಮಕ್ಕಳನ್ನು ತಿದ್ದಬೇಕಾದ ಪ್ರಿನ್ಸಿಪಾಲ್ ಬಣ್ಣ ಬಯಲು!

0

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಮಕ್ಕಳು ತಪ್ಪು ಮಾಡಿದರೆ ತಿದ್ದಿ-ಬುದ್ಧಿ ಹೇಳಬೇಕಾದ ಪ್ರಾಧ್ಯಾಪಕರೇ ದಾರಿ ತಪ್ಪಿದರೆ..? ಈ ಪ್ರಶ್ನೆಯೊಂದೇ ಸಾಕು ಪಾಲಕರ ಭಯಕ್ಕೆ.. ಇಂಥ ವಾತಾವರಣ ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ತಲೆದೋರಿದೆ. ಬುಧವಾರ ಕಾಲೇಜಿನ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿಯವರನ್ನು ಸ್ಥಳೀಯರು ಹಿಗ್ಗಾ ಮುಗ್ಗಾ ತರಾಟೆಗೊಳಪಡಿಸಿದ ಘಟನೆ ಬಹಿರಂಗಗೊಂಡಿದೆ‌. ಆದರೆ ತಮ್ಮ ಮೇಲಿರುವ ಎಲ್ಲ ಆರೋಪಗಳು ಶುದ್ಧ ಸುಳ್ಳು, ನಿರಾಧಾರ ಎಂದು ಲಮಾಣಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಗಲಾಟೆ?: ಕೊಪ್ಪಳದ ಮಹಿಳಾ ಪದವಿ ಕಾಲೇಜು ಅಭಿವೃದ್ಧಿಗಾಗಿ‌ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರಕಾರ ಅನುದಾನ ಬಿಡುಗಡೆಗೊಳಿಸಿದೆ. ಅನುದಾನದ‌‌ ವಿಷಯವಾಗಿ ಆಗದ ಹೊಂದಾಣಿಕೆ ಪ್ರಿನ್ಸಿಪಾಲ್ ಡಾ.ಗಣಪತಿ ಕೆ. ಲಮಾಣಿ ಮಾನ ಹರಾಜು ಆಗುವಂತೆ ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಗಂಭೀರ ಆರೋಪ?
ಪ್ರಿನ್ಸಿಪಾಲ್ ಡಾ.ಗಣಪತಿ ಕೆ.ಲಮಾಣಿ ಹೊಂದಿದ್ದರು ಎನ್ನಲಾಗುತ್ತಿರುವ ಅನೈತಿಕ ಸಂಬಂಧ ಕಾಲೇಜಿನಲ್ಲೆಲ್ಲ ಪುಕಾರಾಗಿ ಜಿಲ್ಲಾಡಳಿತದ ಕಿವಿಗೂ ಬಿದ್ದಿದೆ ಎನ್ನಲಾಗಿದೆ. ಗ್ರೂಪ್-ಡಿ ನೌಕರರೊಬ್ಬಳ ಜೊತೆ ಪ್ರಿನ್ಸಿಪಾಲ್ ಕದ್ದು ಮುಚ್ಚಿ ಆಟ ಆಡುತ್ತಿದ್ದರು ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಡಾ.ಗಣಪತಿ ಲಮಾಣಿ ಅವರಿಗಿಂತ ಮುಂಚೆ ಈ ಕಾಲೇಜಿನ ಪ್ರಾಚಾರ್ಯನಾಗಿದ್ದೆ. ಲೆಕ್ಕ ಪರಿಶೋಧನೆ ಆಹ್ವಾನ ಇದ್ದುದರಿಂದ ಬಂದಿದ್ದೆ. ಬಂದ ಮೇಲೆ ಗೊತ್ತಾಯ್ತು, ಇಲ್ಲಿನ ಆಡಳಿತ ಸರಿ‌ ಇಲ್ಲ. ಯಾರು ಏನೇ ಮಾಹಿತಿ ಕೇಳಿದರೂ ಕೊಡಲ್ಲ. ಸಾಕಷ್ಟು ಗೋಲ್‌ಮಾಲ್ ಮಾಡಲಾಗಿದೆ ಎಂಬುದು. ಜಂಟೀ ನಿರ್ದೇಶಕರು ಈ ಪ್ರಕರಣದ ತನಿಖೆ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.
-ಡಾ.ಗವಿಸಿದ್ದಪ್ಪ ಮುತ್ತಾಳ, ಪ್ರಾಚಾರ್ಯರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿ.

ಜೊತೆಗೆ ಮಹಿಳಾ ಪ್ರಯಾಣಿಕರೊಬ್ಬರು ಬಸ್ ಇಳಿದ ತಕ್ಷಣ ನಿಸರ್ಗದ ಕರೆಗೆ ಸೂಕ್ತ ಸ್ಥಳ ಸಿಗದ ಕಾರಣ ಕಾಲೇಜಿನ ಆವರಣದ ಮೂಲೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ‌ಹಿಡಿದು, ಅವರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಪ್ರಿನ್ಸಿಪಾಲ್ ಡಾ.ಗಣಪತಿ ಲಮಾಣಿ ಅವರ ಮೇಲಿದೆ.

ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾವ ತಪ್ಪನ್ನು‌ ಮಾಡಿಲ್ಲ. ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಕ್ರಮ ಎದುರಿಸಲು ಸಿದ್ಧ.
-ಡಾ.ಗಣಪತಿ.ಕೆ.ಲಮಾಣಿ, ಪ್ರಾಚಾರ್ಯರು, ಮಹಿಳಾ ಪದವಿ ಕಾಲೇಜು, ಕೊಪ್ಪಳ.

ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅತಿಥಿ ಉಪನ್ಯಾಸಕರ ಸಂಬಳವನ್ನು ನಾನಾ ಸುಳ್ಳು ಕಾರಣ ಹೇಳಿ, ಬೆದರಿಸಿ ಲಪಟಾಯಿಸಿದ್ದಾರೆ. ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಕೇಳಿದಾಗ ತಡಬಡಾಯಿಸಿದ ಡಾ.ಗಣಪತಿ ಲಮಾಣಿ ಎಲ್ಲದಕ್ಕೂ ನಂದೇನು ತಪ್ಪಿಲ್ಲ ಎಂದಷ್ಟೇ ಉತ್ತರಿಸಿದರು. ಅವರ ವಿರುದ್ಧ ಏಕವಚನ, ಕೆಲ ಅಸಂವಿಧಾನಿಕ ಪದಗಳ ಬಳಕೆಯಾದರೂ ಸುಮ್ಮನೇ ಕೂತಿದ್ದರು. ಸುಮಾರು ಹೊತ್ತಿನ ಬಂತರ ವಾಗ್ವಾದ ಮಾಡಿದವರಿಗೆ ಕ್ಷಮೆಯಾಚಿಸಿದ ವಿಡಿಯೋ ಗಮನಿಸಿದರೆ ಹಲವು ಅನುಮಾನಗಳು ಹುಟ್ಟಿಕೊಳ್ಳುವುದಂತು ಸತ್ಯ.

error: Content is protected !!