ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.
ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.
ಆಗಿದ್ದೆನು?
ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.
ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ) ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.
ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.
ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.
ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.
ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.
ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.
ಆಗಿದ್ದೆನು?
ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದಾರೆ.
ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.
ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ) ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.
ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.
ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.
ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷೆ ಮೂಡಿಸಿದ್ದ ಭಾರತ ಹಾಕಿತಂಡ ಮಂಗಳವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿಲ್ಜಿಯಂ ವಿರುದ್ದ ಸೋಲು ಕಂಡಿದೆ.
ಕ್ವಾರ್ಟರ್ ಫೈನಲ್ ಪಂದ್ಯನಲ್ಲಿ ಗ್ರೇಟ್ ಬ್ರಿಟನ್ ಮಣಿಸಿ ಸೆಮೀಸ್ ಗೆ ಪ್ರವೇಶಿಸಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿದಿದ್ದ ಭಾರತ ವಿಶ್ವದ ಬಲಾಢ್ಯ ತಂಡ ಬೆಲ್ಜಿಯಂ ವಿರುದ್ಧ 5-2 ಅಂತರದಲ್ಲಿ ಸೋತು ಫೈನಲ್ ಗೇರುವ ಅವಕಾಶ ಕಳೆದುಕೊಂಡಿತು.
ಪಂದ್ಯ ಆರಂಭದಿಂದಲೇ ಬೆಲ್ಜಿಯಂ ಆಟಗಾರರ ಆಕ್ರಮಣಕಾರಿ ಆಟಕ್ಕೆ ಭಾರತೀಯ ರಕ್ಷಣಾ ಪಡೆ ನಿರುತ್ತರಾದರು. ಸೋತರೂ ಕಂಚಿನ ಪದಕಕ್ಕೆ ಹೋರಾಟ ನಡೆಸುವ ಅವಕಾಶ ಭಾರತಕ್ಕಿದೆ.
ನಾಳೆ ಸಂಜೆ ಅಥವಾ ರಾತ್ರಿ ವೇಳೆಗೆ ಸಚಿವರ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಎರಡು ಗಂಟೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಾಧ್ಯಕ್ಷರೊಂದಿಗೆ ನಡೆಸಿದ ಮಾತುಕತೆ ಸಕಾರಾತ್ಮಕವಾಗಿದೆ. ಹೈಕಮಾಂಡ್ ಗೆ ಮೂರು ಪಟ್ಟಿ ಸಲ್ಲಿಸಿದ್ದೇವೆ. ಈ ಪಟ್ಟಿಯಲ್ಲಿರುವ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಯಾರನ್ನು ಬಿಡಬೇಕು ಎಂಬುದನ್ನು ವರಿಷ್ಠರು ಸಭೆ ಸೇರಿ ಚರ್ಚಿಸಿ ಅಂತಿಮ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆ ಸಂಸತ್ ಅಧಿವೇಶ ಇರುವುದರಿಂದ ಸಂಜೆ ವರಿಷ್ಠರು ಸಭೆ ನಡೆಸಲಿದ್ದಾರೆ. ಎಷ್ಟು ಜನ ಡಿಸಿಎಂಗಳು ಇರಬೇಕು ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ. ಒಟ್ಟಾರೆ ನಾಳೆ ರಾತ್ರಿ ಒಳಗೆ ಸಚಿವರ ಪಟ್ಟಿ ಸಿದ್ದವಾಗುವ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದರು.
ಖೋಟಾ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಬೀದರ್ ನಗರದ ಗಾಂಧಿಗಂಜ್ ಪೊಲೀಸರು ಐವರನ್ನು ಬಂಧಿಸಿ, ಸುಮಾರು 37 ಸಾವಿರ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ, ಜಾವೀದ್, ಬಂಧಿತರು.
ಬಂಧಿತ ಆರೋಪಿಗಳಿಂದ 5 ನೂರು ಮುಖ ಬೆಲೆಯ 274 ಖೋಟಾ ನೋಟು, ಪ್ರಿಂಟ್ ಮಾಡಲು ಬಳಸಿದ್ದ ಲ್ಯಾಪ್ ಟಾಪ್, ಪ್ರಿಂಟರ್ ಹಾಗೂ ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದೊಂದು ವರ್ಷದಿಂದ 20 ಲಕ್ಷಕ್ಕೂ ಹೆಚ್ಚು ನಕಲಿ ನೋಟು ಮುದ್ರಣ ಹಾಗೂ ಚಲಾವಣೆ ಮಾಡಿದ್ದಾರೆಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ವ್ಯವಹಾರದ ವೇಳೆ 500 ರೂಪಾಯಿ ನೋಟು ತೆಗೆದುಕೊಳ್ಳುವಾಗ ನೋಟು ಪರೀಕ್ಷಿಸಿ ಪಡೆಯಬೇಕೆಂದು ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳದಂಧೆಯ ಮೂಲಕ ಸಾಗಾಟ ಮಾಡುವ ಹೊಸದೊಂದು ಜಾಲ ಗದಗ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆಯೇ? ಎಂಬ ಪ್ರಶ್ನೆಗೆ ಇತ್ತೀಚೆಗೆ ಪೊಲೀಸರು ಭೇದಿಸಿದ ಪ್ರಕರಣಗಳೇ ಸಾಕ್ಷಿಯಾಗಿವೆ.
ರಾಜಾರೋಷವಾಗಿ ನಡೆಯುತ್ತಿದ್ದ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟದ ದಂಧೆಗೆ ಕಳೆದ ಫೆಬ್ರವರಿಯಲ್ಲಿಯೇ ಕಡಿವಾಣ ಬಿದ್ದಿದೆ. ಆದರೆ ಈಗ ಅಲ್ಲಲ್ಲಿ ಹೊಸಬರು ಈ ದಂಧೆಗೆ ಎಂಟ್ರಿಕೊಟ್ಟಿದ್ದಾರೆ. ಅವರನ್ನು ರೌಡಿ ಶೀಟರ್ಸ್ ಹುರಿದು ಮುಕ್ಕುತ್ತಿದ್ದಾರೆ.
ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದ ಬೆಳವಣಿಗೆ. ಗದಗನ ಗಂಗಿಮಡಿ ಸರ್ಕಲ್, ಬಿಂಕದಕಟ್ಟಿ, ಮುಂಡರಗಿ ತಾಲೂಕಿನ ಡಂಬಳ, ಹಿರೇವಡ್ಡಟ್ಡಿಯಲ್ಲಿ ಅನ್ನಭಾಗ್ಯ ಅಕ್ಕಿ ಸಿಕ್ಕಿದೆ. ಆ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಈಗ ಗದಗ- ಬೆಟಗೇರಿ ಅವಳಿ ನಗರದಲ್ಲಿ ಸದ್ದಿಲ್ಲದೆ ದಂಧೆ ಕರಾಳ ಹಸ್ತ ಚಾಚಿಕೊಂಡಿದೆ.
ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ
ಬೆಟಗೇರಿಯ ನೇಕಾರನಗರ, ಮಂಜುನಾಥ್ ನಗರ, ಹುಯಿಲಗೋಳ ರೋಡ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಮನೆಯ ಅಕ್ಕಿಯನ್ನು ನೇಕಾರನಗರದ ನಾಗರಾಜ್ ಕೆಂಜಿಗುಂಡಿ ಎಂಬಾತ ಖರೀದಿಸಿ, ತನ್ನ ಸಹಚರನ ಮುಖಾಂತರ ಹಾವೇರಿಗೆ ಕಳಿಸುತ್ತಾನೆ. ಹಾಗೆಯೇ ಗದಗನಲ್ಲೂ ಒಂದಿಷ್ಟು ಪುಂಡ ಪೋಕರಿಗಳು ದಾಸರ ಓಣಿ, ಗಂಗಿಮಡಿ, ಒಕ್ಕಲಗೇರಿ, ರಹಮತ್ ನಗರ, ಖಾನ್ ತೋಟ್ ಮುಂತಾದೆಡೆ ಅಕ್ಕಿ ಸಂಗ್ರಹಿಸಿ ಅಣ್ಣಿಗೇರಿ ಮೂಲಕ ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ. ಹಾವೇರಿಯ ಸಚಿನ್ ಎಂಬಾತ ದೊಡ್ಡ ಮೊತ್ತ ನೀಡಿ ಈ ಅಕ್ಕಿ ಖರೀದಿಸುತ್ತಾನೆ.
ಈ ರೀತಿ ಅಕ್ಕಿ ದಂಧೆ ಎರಡು ತಿಂಗಳಿನಿಂದ ಜೋರಾಗಿದೆ. ರಾತ್ರಿ ಆದರೆ ಸಾಕು, ಒಂದೊಂದೇ ವಾಹನ ಅಕ್ಕಿ ತುಂಬಿಕೊಂಡು ಹೊರಗೆ ಬೀಳುತ್ತವೆ. ಅಶೋಕ ಲೈಲ್ಯಾಂಡ್, ಬೋಲೆರೋ, ಟಾಟಾಏಸ್ ಮೂಲಕ ಅಕ್ಕಿ ಸಾಗಾಟ ಎಗ್ಗಿಲ್ಲದೆ ನಡೆಯಿತ್ತದೆ.
ರೌಡಿ ಶೀಟರ್ಸ್ ಹಾವಳಿ
ಕೆಲವು ರೌಡಿಗಳು, ಪುಂಡ-ಪೋಕರಿಗಳು ಈ ದಂಧೆಗೆ ಸಾಥ್ ನೀಡ್ತಾರೆ. ಕೆಲವೊಮ್ಮೆ ತಮ್ಮ ವಾಹನ ಬಿಟ್ಟು ಬೇರೆಯವರ ಅಕ್ಕಿ ತುಂಬಿದ ವಾಹನಗಳು ಹೊರಟರೆ ಅವುಗಳನ್ನು ಹಿಡಿದು ದುಡ್ಡು ವಸೂಲಿ ಮಾಡುತ್ತಾರೆ. ಹೀಗೆ ಗುರುವಾರ ಮಧ್ಯರಾತ್ರಿ, ಸಮೀಪದ ಅಡವಿ ಸೋಮಾಪುರ ಹಾಗೂ ಮುಳಗುಂದ ನಾಕಾ ಬಳಿ ವಾಹನ ಹಿಡಿದಿದ್ದಾರೆ. ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದಾರೆ. ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ನೀಡ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಶುಕ್ರವಾರ ಬೆಳಗಿನವರೆಗೂ ಚೌಕಾಸಿ ನಡೆದು ಕೊನೆಗೂ ಒಂದು ಅಮೌಂಟ್ ಕೊಡುವ ಒಪ್ಪಂದಕ್ಕೆ ಬಂದ ಅನಂತರವೇ ವಾಹನಗಳನ್ನು ಬಿಟ್ಟಿದ್ದಾರೆ. ಇದು ಸ್ಯಾಂಪಲ್ ಮಾತ್ರ. ಇನ್ನೂ ಹಲವು ಬಾರಿ ಇಂತಹ ಘಟನೆಗಳು ನಡೆದರೂ ಪೊಲೀಸರ ಗಮನಕ್ಕೆ ಬರುತ್ತಿಲ್ಲ.
ಕಳ್ಳತನ ಪ್ರಕರಣಗಳಲ್ಲೂ ಭಾಗಿ
ಜಿಲ್ಲೆಯಲ್ಲಿ ಈಗ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಎರಡು ತಿಂಗಳಿನಿಂದ ಗದಗ-ಬೆಟಗೇರಿ ಭಾಗದಲ್ಲಿ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕೇಶವ ನಗರದಲ್ಲಿ ಮುಂಬಾರಡ್ಡಿ ಎಂಬುವರ ಮನೆ ಹಾಡುಹಗಲೇ ಕಳ್ಳತನವಾಗಿತ್ತು. ರೋಣ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡದಲ್ಲೂ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.
ಇತ್ತೀಚೆಗೆ ಲಕ್ಷ್ಮೇಶ್ವರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಆದರೆ ಗದಗನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಇನ್ನೂ ಸಿಕ್ಕಿಲ್ಲ. ಇಂತಹ ಘಟನೆಗಳನ್ನು ತಡೆಯಬೇಕಾದರೆ ರೌಡಿ ಶೀಟರ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕಬೇಕು. ಆದರೆ ಗದಗನಲ್ಲಿ ಅಂತಹ ಲಕ್ಷಣಗಳು ಕಾಣುತ್ತಿಲ್ಲ.
ಏನೆ ಆಗಲಿ ಮುಂದಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್‌ಗಳಿಗೆ ಪರೇಡ್ ಆದರೂ ನಡೆಸಲಿ. ಅವರ ಚಲನವಲನಗಳ ಮೇಲೆ ಕಣ್ಣಿಡಲಿ. ಅವರ ಜೊತೆಗೆ ರಾತ್ರಿ ಇರುವ ಜೊತೆಗಾರರು ಯಾರು? ಪತ್ತೆ ಹಚ್ಚಿ ಒಂದಿಷ್ಟಾದರೂ ಬುದ್ಧಿ ಕಲಿಸಲು ಮುಂದಾಗಬೇಕು. ಅಂದಾಗ ಮಾತ್ರ ರೌಡಿ ಶೀಟರ್‌ಗಳ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಬೀಳಬಹುದು.
ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಆಕಾಂಕ್ಷಿಗಳು
ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
ನೂತನ ಕ್ಯಾಬಿನೆಟ್ ರಚನೆ ಹಿನ್ನೆಲೆ ಚಿತ್ರದುರ್ಗ ಬಿಜೆಪಿ ಶಾಸಕರು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಐವರು ಶಾಸಕರು ತೀವ್ರ ಪೈಪೋಟಿ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ದುರ್ಗದ ಶಾಸಕರು ಪಕ್ಷದ ಮುಖಂಡರನ್ನು ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ.
ಡಿಸಿಎಂ ಆಗಲು ಮೊಳಕಾಲ್ಮೂರು ಶಾಸಕ ರಾಮುಲು ಕಸರತ್ತು ನಡೆಸಿದ್ದರೆ, ಯುವ ಕೋಟಾದಡಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಕ್ಕು ಮಂಡಿಸಿದ್ದಾರೆ. ನಿನ್ನೆ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ.
ಇನ್ನು ಹಿರಿತನದ ಆಧಾರದಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಮಹಿಳಾ ಕೋಟಾದಡಿ ಮಿನಿಸ್ಟರ್ ಆಗಲು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಯಡಿಯೂರಪ್ಪ ಆಪ್ತ ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಹ ಲಾಭಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಕಾರವಾರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ
ವಿಜಯಸಾಕ್ಷಿ ಸುದ್ದಿ, ಕಾರವಾರ
ಬಿಜೆಪಿ ಭ್ರಷ್ಟ ಪಕ್ಷ, ರಾಜ್ಯದಲ್ಲಿರುವುದು ಭ್ರಷ್ಟ ಸರಕಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾವು ಸಾಚಾಗಳು, ಸಂಸ್ಕೃತಿಯವರು ಎಂದು ತೋರಿಸಿಕೊಳ್ತಾರೆ. ಆದರೆ, ಬಿಜೆಪಿಯವರು ಸಂಸ್ಕೃತಿ ರಹಿತರು ಎಂದು ಟೀಕಿಸಿದ ಅವರು, ಯಡಿಯೂರಪ್ಪರವರನ್ನು ಯಾಕೆ ಇಳಿಸಿದ್ರು? 75 ವರ್ಷ ಆಯ್ತುಂತ ಇಳಿಸಿದ್ರಾ..? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ನೂತನ ಸಿಎಂ, ಅವರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಕೊರೊನಾ ನಿಯಂತ್ರಣ ಮಾಡೋದು ಸರಕಾರದ ಪ್ರಾಥಮಿಕ ಕರ್ತವ್ಯ. ಕೇರಳದಲ್ಲಿ ಮೂರನೇ ಅಲೆ ಬಂದಿದೆ. ಮಹಾರಾಷ್ಟ್ರದಲ್ಲೂ ಜಾಸ್ತಿಯಾಗಿದೆ. ಬಾರ್ಡರ್‌ನಲ್ಲಿ ಕಟ್ಟೆಚ್ಚರ ವಹಿಸಬೇಕು. ಬಿಗಿಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎರಡು ಡೋಸ್ ತೆಗೆದುಕೊಂಡವರನ್ನು ಮಾತ್ರ ಒಳಗೆ ಬಿಡಬೇಕು. ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ರಾಜ್ಯದೊಳಗೆ ಬಿಡಬೇಕು. ಈಗಾಗಲೇ ಜನರು ಆಕ್ಸಿಜನ್, ಬೆಡ್ ಇಲ್ಲದೇ ತೊಂದರೆ ಅನುಭವಿಸಿದ್ದಾರೆ. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳುವ ಬದಲು ಸಿಎಂ ಮಂತ್ರಿಮಂಡಳ ರಚನೆಯಲ್ಲಿ ಬ್ಯುಜಿ ಆಗಿದ್ದಾರೆ. ಪದೇ ಪದೇ ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ. ಹೈಕಮಾಂಡ್ ಕೂಡಾ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಶಾಸಕರು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಅವರಿಗೆ ಮಂತ್ರಿಯಾಗೋದು ಮುಖ್ಯವಾಗಿದೆ. ಜನರ ಸಮಸ್ಯೆಯಲ್ಲ ಎಂದು ದೂರಿದರು.
ರೇಣುಕಾಚಾರ್ಯ ಕೋರ್ಟ್ ಮೊರೆ ಹೋಗಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇವರು ಯಾವುದೋ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸೆಕ್ಸ್ ಹಾಗೂ ಇತರ ಸ್ಕ್ಯಾಮ್‌ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅದಕ್ಕೆ ಹೋಗಿದ್ದಾರೆ ಎಂದರು. ಜೆಡಿಎಸ್ ಸೆಕ್ಯೂಲರ್ ಪಾರ್ಟಿ ಅಲ್ಲ. ಅದಕ್ಕೆ ತರ್ಪಣ ಬಿಟ್ಟು ಬಹಳ ಸಮಯವಾಯ್ತು. ದೇವೆಗೌಡರ ಬಗ್ಗೆ ನಾನು ಮಾತನಾಡಲ್ಲ ಎಂದರು.
ರಾಜ್ಯದಲ್ಲಿ ಇನ್ನೆರಡು ದಿನದಲ್ಲಿ ಸಚಿವ ಸಂಪುಟ ರಚನೆ ಆಗುವ ಸಾಧ್ಯತೆಯಿದೆ. ಪಕ್ಷಕ್ಕೆ ವಲಸೆ ಬಂದವರಲ್ಲಿ ಕೆಲವರಿಗೆ ಅವಕಾಶ ಸಿಗೋದು ಡೌಟು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೆ ಸಚಿವ ಸ್ಥಾನ ಸಿಗುತ್ತದೋ ಭಗವಂತ ಹಾಗೂ ಹೈಕಮಾಂಡ್‍ಗೆ ಗೊತ್ತು. ಈ ನಡುವೆ ಯುವಕರಿಗೆ ಆದ್ಯತೆ ಹಾಗೂ ಹಳಬರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.
ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಸಂಪುಟ ಫೈನಲ್ ಆಗಲಿದ್ದು, ಸಂಜೆ ಅಥವಾ ನಾಳೆ ಅಂತಿಮ ಚಿತ್ರಣ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಎಲ್ಲ ಶಾಸಕರು ಸಚಿವರಾಗಲು ಆಗದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗುವುದು. ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸಿದ್ದೇನೆ. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ. ಪ್ರಾದೇಶಿಕ ಸಮತೋಲನ ಕಾಪಾಡಬೇಕು. ಹಿಂದೆ ಸಂಪುಟದಲ್ಲಿ ಸ್ಥಾನ ಪಡೆದವರ ಬಗ್ಗೆಯೂ ಚರ್ಚೆಯಿದೆ. ಎಲ್ಲವನ್ನೂ ನಿರ್ಧರಿಸಿ ಬ್ಯಾಲೆನ್ಸ್ ಸಂಪುಟ ರಚನೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಎಷ್ಟು ಜನ ಡಿಸಿಎಂ ಇರಬೇಕು. ಸಂಪುಟ ರಚನೆಗೆ ಯಾವ ಸೂತ್ರ ಪಾಲಿಸಬೇಕು. ಎಷ್ಟು ಹಂತದಲ್ಲಿ ಸಂಪುಟ ರಚನೆಯಾಗಬೇಕು ಸೇರಿ ಹಲವು ವಿಚಾರಗಳ ಬಗ್ಗೆ ವರಿಷ್ಠರ ಭೇಟಿಯಾಗಿ ಚರ್ಚಿಸುತ್ತೇನೆ. ಜೆ.ಪಿ.ನಡ್ಡಾ ಭೇಟಿಗೂ ಮುನ್ನ ಸಂಸತ್ ಭವನಕ್ಕೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ. ಬಳಿಕ ಜೆ.ಪಿ.ನಡ್ಡಾ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.