Home Blog Page 3295

ಚರಂಡಿಗೆ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಬರೋಬ್ಬರಿ 250 ಲೀಟರ್ ಹಾಲನ್ನು ಚರಂಡಿಗೆ ಸುರಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ಲಕ್ಕವ್ವನಹಳ್ಳಿ ಬಿಎಂಸಿ‌ ಕೇಂದ್ರದ ಹತ್ತಿರ ಈ ಘಟನೆ ನಡೆದಿದೆ. ಹಾಲಿನಲ್ಲಿ ಶೇ. 3.5ರಷ್ಟು ಕೊಬ್ಬಿನಾಂಶ ಕಡಿಮೆ ಇದೆ ಎಂದು ಹೇಳಿದ ಅಧಿಕಾರಿಗಳು. ಅಲ್ಲದೇ, ಹಲವು ರೈತರನ್ನು ಕೊಬ್ಬಿನಾಂಶ ಕಡಿಮೆ ಇದೆ ಎಂದು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷ ಪೂರ್ತಿ ಲಾಭಗಳಿಸಿ ಈಗ ನಮ್ಮ ಹಾಲನ್ನು ಅಧಿಕಾರಿಗಳು ಮರಳಿ ಕಳುಹಿಸುತ್ತಿದ್ದಾರೆ. ನೈಸರ್ಗಿಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೊಬ್ಬಿನಾಂಶ ಕಡಿಮೆ ಆಗುತ್ತಿದೆ. ಇದಕ್ಕೆ ರೈತರನ್ನು ಹೊಣೆ ಮಾಡಿ, ಹಾಲು ಖರೀದಿಸದೆ ಅಧಿಕಾರಿಗಳು ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ರೈತರು ಬದುಕುವುದೇ ದುಸ್ತರ ಎನ್ನುವಂತಾಗಿದೆ. ಈ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಈ ರೀತಿ ವರ್ತಿಸಿದರೆ, ರೈತರು ಹಾಗೂ ಬಡವರ ಪರಿಸ್ಥಿತಿ ಏನಾಗಬೇಕು? ಅಧಿಕಾರಿಗಳು ಇದೇ ರೀತಿ ತಮ್ಮ ವರ್ತನೆ ಮುಂದುವರೆಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.

ಈ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಹಾಲು ಖರೀದಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರಾಗಿರುವ ಸುಂದರ್ ಹಾಗೂ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ; ನರಗುಂದ, ರೋಣ ತಾಲೂಕಿನಲ್ಲಿ ಭಾರಿ ಇಳಿಮುಖ, ಸೋಂಕು ಮುಕ್ತದತ್ತ ದಾಪುಗಾಲು!

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಸತತ ನಾಲ್ಕನೇ ದಿನವೂ ಶುಭ ಸುದ್ದಿ ಸಿಕ್ಕಿದೆ. ಹೌದು ಶುಕ್ರವಾರದಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಮುಖದತ್ತ ಸಾಗಿದ್ದು, ಸೋಮವಾರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ ಜನ ಒಂದಿಷ್ಟು ನಿರಾಳರಾದಂತಾಗಿದೆ. ಅದರಲ್ಲೂ ನರಗುಂದ ಹಾಗೂ ರೋಣ ತಾಲೂಕಿನಲ್ಲಿ ಸೋಂಕು ಭಾರಿ ಇಳಿಮುಖವಾಗಿದೆ.

ಇಂದು 141 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 141 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 24934 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -81, ಮುಂಡರಗಿ-21, ನರಗುಂದ-01, ರೋಣ-05, ಶಿರಹಟ್ಟಿ-30, ಹೊರಜಿಲ್ಲೆಯ-03 ಸೇರಿದಂತೆ 141 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 275 ಕ್ಕೇರಿದೆ.

ಗದಗ ತಾಲೂಕಿನ ಹೊಂಬಳ ನಿವಾಸಿ 88 ವರ್ಷದ ವ್ಯಕ್ತಿ ಜೂನ್- 04 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -06 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹೊಂಬಳ ನಿವಾಸಿ 78 ವರ್ಷದ ಮಹಿಳೆ ಮೇ-22 ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 06 ರಂದೇ ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 301 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 23106 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1554 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 150 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಿಜೆಪಿ ಮುಖಂಡರಿಂದ ಪೊಲೀಸರಿಗೆ ಎನರ್ಜಿ ಡ್ರಿಂಕ್ಸ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ನೇತೃತ್ವದಲ್ಲಿ ಗೋಕುಲ್ ಪೊಲಿಸ್ ಠಾಣೆ ಸಿಬ್ಬಂದಿಗಳಿಗೆ ಇಮ್ಯುನಿಟಿ ಎನರ್ಜಿ ಡ್ರಿಂಕ್ಸ್ ವಿತರಣೆ ಮಾಡಲಾಯಿತು.

ಇಂದು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ immuity booster ಪಾನೀಯ ಬಾಟಲನ್ನು ಠಾಣೆಯ ಇನ್ಸ್‌ಪೆಕ್ಟರ್ ಕಾಲಿಮಿರ್ಚಿ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ವಿನಯ್ ಸಜ್ಜನರ, ಮನೋಹರ್ ಭಾಂಡಗೆ, ಅಶೋಕ ವಾಲಿಕರ, ಆನಂದ ವಿಶ್ವನಾಥಮಠ, ಮುರಗೇಶ ಶೆಟ್ಟರ, ಗುರುನಾಥ ವಾಲ್ಮೀಕಿ, ಶ್ರೀಕಾಂತ ಪಾಟೀಲ್, ಶ್ರೀಧರ ಗಡಾದ ಸೇರಿದಂತೆ ಅನೇಕರು ಇದ್ದರು.

ಜಿಲ್ಲೆಯಲ್ಲಿ ಜೂ. 14ರ ವರೆಗೂ ಲಾಕ್ ಡೌನ್ ತೆರುವು ಇಲ್ಲ; ಜಿಲ್ಲಾಧಿಕಾರಿ

ವಿಜಯ ಸಾಕ್ಷಿ ಸುದ್ದಿ ಗದಗ

ಜಿಲ್ಲೆಯಲ್ಲಿ ಜೂ. 14ರ ವರೆಗೆ ಅನ್ ಲಾಕ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರದ ಆದೇಶದಂತೆ ಜೂ. 14 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಬೆಳಿಗ್ಗೆ 6 ಯಿಂದ 10 ಗಂಟೆಯವರೆಗೆ ಅಗತ್ಯ ಖರೀದಿಗೆ ಅವಕಾಶ ನೀಡಲಾಗುವುದು. ಆಹಾರ ಸಾಮಗ್ರಿ, ಹಾಲು, ದಿನಸಿ, ಮಾಂಸ ಮತ್ತು ಮೀನಿನ ಮಳಿಗೆಗಳು, ಮದ್ಯ ಮಾರಾಟ ಮಳಿಗೆಗಳಲ್ಲಿ ಕೇವಲ ಪಾರ್ಸೆಲ್ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ರೈತರಿಗೆ ಅಗತ್ಯವಿರುವ ಬೀಜ,ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಖರೀದಿಗಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ತಳ್ಳುಗಾಡಿ, ಆಟೋ, ಟಂಟಂಗಳಲ್ಲಿ ಬೀದಿ ಸುತ್ತುವ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳು , ಪಾರ್ಸೆಲ್ ಹಾಗೂ ಹೋಂ ಡಿಲೆವರಿ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪಾಸಿಟಿವ್ ದರ ಶೇ. 10.5ರಷ್ಟಿದೆ. ಸಾವಿನ ಪ್ರಮಾಣ ಶೇ. 1.26ರಷ್ಟಿದೆ. ಇದನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಸೋಂಕಿನ ಪ್ರಯಾಣ ಹಾಗೂ ಸಾವಿನ ಪ್ರಮಾಣ ಸದ್ಯ ಇಳಿಕೆ ಕಾಣುತ್ತಿದೆ. ಆದರೆ, ಇಷ್ಟಕ್ಕೆ ಮೈ ಮರೆಯುವಂತಿಲ್ಲ. ಅನ್ ಲಾಕ್ ವಿಚಾರ ಸದ್ಯಕ್ಕೆ ಇಲ್ಲ. ಜೂ. 14 ರ ನಂತರ ಸರ್ಕಾರದ ಆದೇಶದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ವಿಜಯಸಾಕ್ಷಿಗೆ ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ವ್ಯಾನಿಟಿ ಬ್ಯಾಗ್ ಕಳ್ಳತನ; ದುಬೈನಿಂದ ತಂದಿದ್ದ‌ ಮೊಬೈಲ್ ಕಳೆದುಕೊಂಡು ಕಂಗಾಲಾದ ವೈದ್ಯೆ!

ವಿಜಯಸಾಕ್ಷಿ ಸುದ್ದಿ, ಗದಗ

ನಿತ್ಯವೂ ಇಲ್ಲಿ ಜನಜಂಗುಳಿ. ಮಕ್ಕಳು, ಮಹಿಳೆಯರೇ ತುಂಬಿ ತುಳುಕುವ ಈ ಆಸ್ಪತ್ರೆಯಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ, ಸಿಸಿ ಕ್ಯಾಮೆರಾ ಇಲ್ಲದ ಕಾರಣ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನ ಈಗ ಮಾಮೂಲಿ ಆಗಿದೆ. ವಾರದಲ್ಲಿ ಒಂದು ಪ್ರಕರಣವಾದರೂ ನಡೆಯುತ್ತೆ.‌ ಆದರೆ ಪೊಲೀಸ್ ಠಾಣೆಯ ಮೆಟ್ಟಲು ಹತ್ತಲ್ಲ!

ಶನಿವಾರ ಮುಂಜಾನೆ 10ರ ಸುಮಾರಿಗೆ ಕರ್ತವ್ಯ ನಿರತ ವೈದ್ಯ, ಮಹಿಳಾ ಸಿಬ್ಬಂದಿಯ ಎರಡು ವ್ಯಾನಿಟಿ ಬ್ಯಾಗ್‌ಗಳು ಕಳ್ಳತನವಾಗಿವೆ. ಪುಣ್ಯಕ್ಕೆ ಆ ಚೀಲಗಳಲ್ಲಿ ಹಣವಿರಲಿಲ್ಲ. ಆದರೆ, ವೈದ್ಯರ ಬ್ಯಾಗಲ್ಲಿ‌ದ್ದ ದುಬೈಯಿಂದ ತಂದಿದ್ದ ಬೆಲೆಬಾಳುವ ಸ್ಯಾಮ್‌ಸಂಗ್‌ ಮೊಬೈಲ್‌ ಕಳ್ಳತನವಾಗಿದೆ.

ಮಹಿಳಾ ಸಿಬ್ಬಂದಿಯ ಬ್ಯಾಗ್‌ನಲ್ಲಿ ಎಟಿಎಮ್ ಕಾರ್ಡ್, ಡ್ರೈವಿಂಗ್ ‌ಲೈಸೆನ್ಸ್ ಇದ್ದವು. ಈ ಎರಡು ಬ್ಯಾಗ್ ಕಳ್ಳತನವಾಗಿ ಎರಡು ಗಂಟೆಗಳ ಕಾಲ ಮೊಬೈಲ್ ಆನ್ ಆಗಿಯೇ ಇತ್ತು. ಕಾಲ್ ಮಾಡಿದಾಗ ಕಳ್ಳ (ಕಳ್ಳಿ?) ರೀಸೀವ್ ಮಾಡಿದನಾದರೂ ಮಾತನಾಡಲಿಲ್ಲ. ಈ ಬಗ್ಗೆ ಬಡಾವಣೆ ಠಾಣೆಗೆ ಹೋದ ವೈದ್ಯರು ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ‌ಮುಂದುವರೆದಿದೆ.

ಈ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ಕಳ್ಳತನದ ಹಲವಾರು ಪ್ರಕರಣಗಳು ನಡೆದಿವೆ. ವಾರದ ಹಿಂದೆ ಒಪಿಡಿಯಲ್ಲಿ ಜನರ ಚೀಟಿ ಮಾಡಿದ ದುಡ್ಡು ಮಾಯವಾಗಿತ್ತು. ಆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ.

ಇಷ್ಟೆಲ್ಲ ನಡೆಯುತ್ತಿದ್ದರೂ ಈ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಆಸ್ಪತ್ರೆಯಲ್ಲಿ ಜವಾಬ್ದಾರಿ ಇದ್ದವರು ಸಿಸಿ ಕ್ಯಾಮೆರಾ ಅಳವಡಿಸಿ ಕಳ್ಳತನ ಪ್ರಕರಣ ತಡೆಯಲು ಮುಂದಾಗಬೇಕಿದೆ. ವೈದ್ಯರಿಗೆ ಈ ರೀತಿ ಆದರೆ ರೋಗಿಗಳ, ಅವರ ಸಂಬಂಧಿಕರ ಪಾಡೇನು ಅನ್ನುವ ಪ್ರಶ್ನೆ ಎದುರಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ವ್ಯಾನಿಟಿ ಬ್ಯಾಗ್ ಕಳ್ಳತನ; ದುಬೈನಿಂದ ತಂದಿದ್ದ‌ ಮೊಬೈಲ್ ಕಳೆದುಕೊಂಡು ಕಂಗಾಲಾದ ವೈದ್ಯೆ!

ವಿಜಯಸಾಕ್ಷಿ ಸುದ್ದಿ, ಗದಗ

ನಿತ್ಯವೂ ಇಲ್ಲಿ ಜನಜಂಗುಳಿ. ಮಕ್ಕಳು, ಮಹಿಳೆಯರೇ ತುಂಬಿ ತುಳುಕುವ ಈ ಆಸ್ಪತ್ರೆಯಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ, ಸಿಸಿ ಕ್ಯಾಮೆರಾ ಇಲ್ಲದ ಕಾರಣ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನ ಈಗ ಮಾಮೂಲಿ ಆಗಿದೆ. ವಾರದಲ್ಲಿ ಒಂದು ಪ್ರಕರಣವಾದರೂ ನಡೆಯುತ್ತೆ.‌ ಆದರೆ ಪೊಲೀಸ್ ಠಾಣೆಯ ಮೆಟ್ಟಲು ಹತ್ತಲ್ಲ!

ಶನಿವಾರ ಮುಂಜಾನೆ 10ರ ಸುಮಾರಿಗೆ ಕರ್ತವ್ಯ ನಿರತ ವೈದ್ಯ, ಮಹಿಳಾ ಸಿಬ್ಬಂದಿಯ ಎರಡು ವ್ಯಾನಿಟಿ ಬ್ಯಾಗ್‌ಗಳು ಕಳ್ಳತನವಾಗಿವೆ. ಪುಣ್ಯಕ್ಕೆ ಆ ಚೀಲಗಳಲ್ಲಿ ಹಣವಿರಲಿಲ್ಲ. ಆದರೆ, ವೈದ್ಯರ ಬ್ಯಾಗಲ್ಲಿ‌ದ್ದ ದುಬೈಯಿಂದ ತಂದಿದ್ದ ಬೆಲೆಬಾಳುವ ಸ್ಯಾಮ್‌ಸಂಗ್‌ ಮೊಬೈಲ್‌ ಕಳ್ಳತನವಾಗಿದೆ.

ಮಹಿಳಾ ಸಿಬ್ಬಂದಿಯ ಬ್ಯಾಗ್‌ನಲ್ಲಿ ಎಟಿಎಮ್ ಕಾರ್ಡ್, ಡ್ರೈವಿಂಗ್ ‌ಲೈಸೆನ್ಸ್ ಇದ್ದವು. ಈ ಎರಡು ಬ್ಯಾಗ್ ಕಳ್ಳತನವಾಗಿ ಎರಡು ಗಂಟೆಗಳ ಕಾಲ ಮೊಬೈಲ್ ಆನ್ ಆಗಿಯೇ ಇತ್ತು. ಕಾಲ್ ಮಾಡಿದಾಗ ಕಳ್ಳ (ಕಳ್ಳಿ?) ರೀಸೀವ್ ಮಾಡಿದನಾದರೂ ಮಾತನಾಡಲಿಲ್ಲ. ಈ ಬಗ್ಗೆ ಬಡಾವಣೆ ಠಾಣೆಗೆ ಹೋದ ವೈದ್ಯರು ಹಾಗೂ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ‌ಮುಂದುವರೆದಿದೆ.

ಈ ಕಳ್ಳತನ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ಕಳ್ಳತನದ ಹಲವಾರು ಪ್ರಕರಣಗಳು ನಡೆದಿವೆ. ವಾರದ ಹಿಂದೆ ಒಪಿಡಿಯಲ್ಲಿ ಜನರ ಚೀಟಿ ಮಾಡಿದ ದುಡ್ಡು ಮಾಯವಾಗಿತ್ತು. ಆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ.

ಇಷ್ಟೆಲ್ಲ ನಡೆಯುತ್ತಿದ್ದರೂ ಈ ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಆಸ್ಪತ್ರೆಯಲ್ಲಿ ಜವಾಬ್ದಾರಿ ಇದ್ದವರು ಸಿಸಿ ಕ್ಯಾಮೆರಾ ಅಳವಡಿಸಿ ಕಳ್ಳತನ ಪ್ರಕರಣ ತಡೆಯಲು ಮುಂದಾಗಬೇಕಿದೆ. ವೈದ್ಯರಿಗೆ ಈ ರೀತಿ ಆದರೆ ರೋಗಿಗಳ, ಅವರ ಸಂಬಂಧಿಕರ ಪಾಡೇನು ಅನ್ನುವ ಪ್ರಶ್ನೆ ಎದುರಾಗಿದೆ.

ನಮ್ಮಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಕಟೀಲ್

ವಿಜಯ ಸಾಕ್ಷಿ ಸುದ್ದಿ, ಹಾವೇರಿ

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿಯ ನಾಯಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಿ ಸಿಎಂ ಸ್ಥಾನ ಕೊಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಸಿಎಂ ಹಾಗೂ ನಾಯಕತ್ವದ ಬದಲಾವಣೆಯ ಮಾತೇ ಇಲ್ಲ. ಸದ್ಯ ಇಂತಹ ಚರ್ಚೆಗಳು ಅಪ್ರಸ್ತುತ ಎಂದು ಹೇಳಿದ್ದಾರೆ.

ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಯಾರೂ ಅಧಿಕಾರಕ್ಕಾಗಿ ಅಂಟಿ ಕೂತಿಲ್ಲ. ನಾವೆಲ್ಲ ಹೈಕಮಾಂಡ್ ಆದೇಶದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂಬ ಸಂದೇಶವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಹೀಗಾಗಿ ಸಿಎಂ ಅವರು ನಮಗೆಲ್ಲ ಆದರ್ಶರಾಗಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ಯೋಗೇಶ್ವರ ಅವರು ನಿನ್ನೆಯೇ ಈ ಕುರಿತು ಮಾತನಾಡಿದ್ದಾರೆ. ಸಿಎಂ ಕುರಿತು ನಮ್ಮಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಇದು ಎಲ್ಲಿಂದ ಸೃಷ್ಟಿಯಾಗುತ್ತಿದೆ ಎಂಬುವುದು ಆಶ್ಚರ್ಯವಾಗಿದೆ. ನಮ್ಮದು ಪ್ರಜಾಪ್ರಭುತ್ವ ಸಂಘಟನೆ. ನಮ್ಮಲ್ಲಿನ ಶಿಸ್ತು ಸಮಿತಿ ಈಗಾಗಲೇ ಎಚ್ಚರಿಕೆ ನೀಡಿ ಯತ್ನಾಳ್ ಅವರಿಗೆ ನೊಟೀಸ್ ನೀಡಿದೆ. ಒಬ್ಬ ಶಾಸಕನಿಗೆ ಮೂರು ಹಂತದ‌ ನೊಟೀಸ್ ಗಳನ್ನು ಕೊಡಬೇಕಿದೆ. ಆ ಎಲ್ಲ ಕಾರ್ಯ ಈಗಾಗಲೇ ನಡೆಯುತ್ತಿದೆ. ಇನ್ನಷ್ಟು ತಪ್ಪು ಮಾಡಿದರೆ ಮುಂದಿನ ಎಲ್ಲ ನಿರ್ಧಾರಗಳನ್ನು ಕೇಂದ್ರ ತೆಗೆದುಕೊಳ್ಳುತ್ತದೆ ಎಂದು ಯತ್ನಾಳ್ ಬಗ್ಗೆ ಹೇಳಿದ್ದಾರೆ.

ಮಾನವೀಯತೆ ಮೆರೆದ ಡಿ ಬಾಸ್ ಅಭಿಮಾನಿಗಳು

ವಿಜಯ ಸಾಕ್ಷಿ ಸುದ್ದಿ, ಬೆಂಗಳೂರು

ನಟ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಭರ್ಜರಿಯಾಗಿ ಸ್ಪಂದಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಸುಮಾರು ರೂ. 25 ಲಕ್ಷ ಹಣ ಕರ್ನಾಟಕ ಮೃಗಾಲಯಗಳಲ್ಲಿ ಸಂಗ್ರಹವಾಗಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಮನುಷ್ಯರಿಗೆ ಉಂಟಾದ ತೊಂದರೆಯಂತೆ, ಪ್ರಾಣಿಗಳಿಗೂ ಉಂಟಾಗಿದೆ. ಹೀಗಾಗಿ ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟಕರವಾಗಿದೆ. ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಬೇಕು ಎಂದು ಡಿ ಬಾಸ್ ಮನವಿ ಮಾಡಿದ್ದರು.

ಅವರು ಮನವಿ ಮಾಡಿದ್ದೇ ತಡ. ಅವರ ಅಭಿಮಾನಿಗಳ ಕೈ ಜೋಡಿಸಿದ್ದಾರೆ. ಹೀಗಾಗಿ ಎರಡೇ ದಿನಗಳಲ್ಲಿ ರೂ. 25 ಲಕ್ಷ ಸಂಗ್ರಹವಾಗಿದೆ. ಡಿ ಬಾಸ್ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರು ರಾಜ್ಯದಲ್ಲಿನ 9 ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರಿನಲ್ಲಿ ಮೃಗಾಲಯಗಳಿಂದ ಸದ್ಯ ಜನರು ಸ್ವ ಇಚ್ಚೆಯಿಂದ ಪ್ರಾಣಿ ದತ್ತು ಪಡೆಯುತ್ತಿದ್ದಾರೆ.

ರೂ. 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ದರ್ಶನ್ ಅವರಿಗೆ ಕರ್ನಾಟಕ ಮೃಗಾಲಯ ಧನ್ಯವಾದ ಹೇಳಿದೆ.
ಮೃಗಾಯಲಗಳಿಂದ ಪ್ರಾಣಿಗಳನ್ನು ದತ್ತು ಪಡೆದವರ ಹೆಸರು ಮತ್ತು ಮಾಹಿತಿಯನ್ನು ಪ್ರಮಾಣಪತ್ರದ ಸಮೇತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ ದರ್ಶನ್ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತಿದ್ದಾರೆ.

ತಂಗಿಯ ಶೀಲ ಶಂಕಿಸಿದ ಭಾವನ ಕೊಲೆ ಮಾಡಿದ ಅಣ್ಣ

ವಿಜಯಸಾಕ್ಷಿ ಸುದ್ದಿ, ಮಂಡ್ಯ

ತಂಗಿಯ ಶೀಲ‌ ಶಂಕಿಸಿದ ಭಾವನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿಯ ಬಳಿ ನಡೆದಿದೆ. ತುಮಕೂರು ಜಿಲ್ಲೆಯ ಸಂತೆಮಾವತ್ತೂರು ಗ್ರಾಮದ ಪುಟ್ಟರಾಜು ಕೊಲೆಯಾದ ಭಾವ. ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಗ್ರಾಮದ ನಂಜಪ್ಪ ಎಂಬುವವರ ಮಗಳು ಸವಿತಾಳನ್ನು ಪುಟ್ಟರಾಜು ಮದುವೆ ಮಾಡಿಕೊಂಡಿದ್ದರು. ಮದುವೆಯಾಗಿ ಇಬ್ಬರೂ 16 ವರ್ಷ ಸಂಸಾರ ನಡೆಸಿದ್ದರು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬರುತ್ತಿತ್ತು. ಹೀಗಾಗಿ ಇಬ್ಬರ ಮಧ್ಯೆ ಜಗಳ ಜೋರಾಗಿತ್ತು.

ಪುಟ್ಟರಾಜು, ಹೆಂಡತಿ‌ ಸವಿತಾ ಅವರ ಶೀಲಶಂಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ‌ ಸವಿತಾ‌ ಗಂಡನನ್ನು ಬಿಟ್ಟು ತವರಿಗೆ ಬಂದಿದ್ದರು. ಹೀಗಾಗಿ ಜೂ. 3ರಂದು ಪುಟ್ಟರಾಜು ಹೆಂಡತಿ ಕರೆದುಕೊಂಡು ಹೋಗಲು ಬಂದಿದ್ದ. ಈ ಸಂದರ್ಭದಲ್ಲಿ‌ ಮದ್ಯ ಪ್ರವೇಶಿಸಿದ ಸವಿತಾಳ ಅಣ್ಣ ಮಂಜುನಾಥ್, ಬಾವ ಪುಟ್ಟರಾಜುನನ್ನು ಬೈಕ್ ನಲ್ಲಿ ಕರೆದು ಕೊಂಡು ಹೊಗಿದ್ದಾನೆ. ಆ ನಂತರ ಕರಿಘಟ್ಟದ ಬಳಿ ಭಾವನ ಕತ್ತು ಹಿಸುಕಿ ಕೊಲೆ ಮಾಡಿ, ಬೈಕ್‌ ನಿಂದ ಬಿದ್ದು ಸತ್ತ‌ ಎಂದು ಬಿಂಬಿಸಿ ಪೋಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾನೆ.

ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದಾಗ ಅನುಮಾನಗೊಂಡು ಮಂಜುನಾಥನ ಬಾಯಿ ಬಿಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಾಜಿ ಸಚಿವ ಪ್ರೊ. ಮುಮ್ತಾಝ್ ಅಲಿ ಖಾನ್ ನಿಧನ : ಮುಖ್ಯಮಂತ್ರಿ ಸಹಿತ ಗಣ್ಯರಿಂದ ಸಂತಾಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರೊ.ಮುಮ್ತಾಝ್ ಅಲಿ ಖಾನ್ ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ಗಂಗಾನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮುಮ್ತಾಝ್ ಅಲಿ ಖಾನ್, ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. 2008 ರಲ್ಲಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿದ್ದರು. ಲೇಖಕರಾಗಿಯೂ ಅವರು ಗಮನ ಸೆಳೆದಿದ್ದರು. ಹಲವು ಲೇಖನಗಳನ್ನು ಬರೆಯುವ ಮೂಲಕ ಮುಸ್ಲಿಂ ಸಮಾಜದ ಬೇರೆ ಬೇರೆ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಆದರೆ ಬಿಜೆಪಿಯಲ್ಲಿದ್ದ ಮುಮ್ತಾಝ್ ಅಲಿ ಖಾನ್ ಬಳಿಕ ಡಾ.ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು.

ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ 1982 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಮುಮ್ತಾಝ್ ಅಲಿ ಖಾನ್, 2 ಮಕ್ಕಳನ್ನು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 1.30 ಕ್ಕೆ ಅವರ ಅಂತ್ಯ ಕ್ರಿಯೆ ಬೆಂಗಳೂರಿನ ಖುದ್ದುಸ್ ಸಾಹೇಬ್ ಖಬ್ರಸ್ಥಾನ್ ನಲ್ಲಿ ನಡೆಯಿತು.

ಮಾಜಿ ಸಚಿವ ಮುಮ್ತಾಝ್ ಅಲಿ ಖಾನ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ, ಹಜ್ಜ್ , ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರು, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಆತ್ಮೀಯ ಸ್ನೇಹಿತ ಹಾಗೂ ಸರಳ ಹಾಗೂ ಸಜ್ಜನ ಚಿಂತನಾಶೀಲ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!