Home Blog Page 33

ಲಂಚ ಪಡೆಯುವಾಗಲೇ ಲಾಕ್: ಲೋಕಾ ಅಧಿಕಾರಿಗಳ ಮುಂದೆ ಮಹಿಳಾ ಪಿಡಿಒ ಹೈಡ್ರಾಮಾ! ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

0

ಮೈಸೂರು:- ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದ ಮಹಿಳಾ ಅಧಿಕಾರಿಯೊಬ್ಬರು ಭಾರೀ ಹೈಡ್ರಾಮಾ ನಡೆಸಿದ್ದಾರೆ.

ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾ.ಪಂ. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು, ಬಂಧನದಿಂದ ತಪ್ಪಿಸಿಕೊಳ್ಳಲು ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿದ ಘಟನೆ ಜರುಗಿದೆ.

ಎಸ್, ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಸ್ವಾಮಿ ಎಂಬುವವರು ಸಾವನ್ನಪ್ಪಿದ ಬಳಿಕ, ಅವರ ಪುತ್ರ ಮಹದೇವ್ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಮೃತ ಸ್ವಾಮಿ ಅವರ ಎರಡು ವರ್ಷದ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲಂಚ ನೀಡಲು ಇಚ್ಛಿಸದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಚೇರಿಯಲ್ಲಿ ಮುಂಗಡವಾಗಿ 25 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಕಂಗಾಲಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ. ಅಧಿಕಾರಿಗಳ ಮುಂದೆಯೇ ಹೈಡ್ರಾಮಾ ಸೃಷ್ಟಿಸಿ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಗಾಯಗೊಂಡ ಪಿಡಿಒ ಮಂಜುಳಾ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚೇತರಿಕೆ ಬಳಿಕ ತನಿಖೆ ಕೈಗೊಂಡಿದ್ದಾರೆ.

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡಬೇಕು? ತಜ್ಞರ ಮಾಹಿತಿ ಇಲ್ಲಿದೆ!

0

ನಾವು ಪ್ರತಿದಿನ ಸೇವಿಸುವ ಆಹಾರ ಮತ್ತು ದ್ರವಗಳು ದೇಹದ ವಿವಿಧ ಕ್ರಿಯೆಗಳಿಗೆ ಸಹಕಾರಿಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸಿ, ದೇಹದಲ್ಲಿನ ದ್ರವಗಳನ್ನು ಫಿಲ್ಟರ್ ಮಾಡಿ ಅಗತ್ಯ ಪೋಷಕಾಂಶಗಳನ್ನು ಉಳಿಸಿ, ತ್ಯಾಜ್ಯವನ್ನು ಮೂತ್ರದ ಮೂಲಕ ಹೊರಹಾಕುತ್ತವೆ.

ಆದರೆ, ಕೆಲವರು ಹೆಚ್ಚು ಬಾರಿ ಅಥವಾ ಕಡಿಮೆ ಬಾರಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಹಾಗಾದರೆ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ.

ಒಬ್ಬ ವ್ಯಕ್ತಿ ದಿನಕ್ಕೆ ಸರಾಸರಿ 2ರಿಂದ 3 ಲೀಟರ್ ನೀರನ್ನು ಕುಡಿಯಬೇಕು. ಈ ಪ್ರಮಾಣದ ನೀರನ್ನು ಕುಡಿದಾಗ ದೇಹದ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯುತ್ತವೆ. ಕನಿಷ್ಠ 2 ಲೀಟರ್ ನೀರು ಕುಡಿಯುವ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸುಮಾರು 4ರಿಂದ 7 ಬಾರಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ.

4 ಬಾರಿ ಕ್ಕಿಂತ ಕಡಿಮೆ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಇದು ದೇಹದಲ್ಲಿ ದ್ರವ ಕೊರತೆ ಅಥವಾ ಇತರ ಸಮಸ್ಯೆಗಳ ಸೂಚನೆ ಆಗಿರಬಹುದು. ಮತ್ತೊಂದೆಡೆ, 7 ಬಾರಿ ಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು ಸಹ ಸಾಮಾನ್ಯವಾಗಿರಬಹುದು, ವಿಶೇಷವಾಗಿ ಹೆಚ್ಚು ನೀರು ಕುಡಿಯುವವರು, ಕಾಫಿ, ಚಹಾ ಅಥವಾ ಮದ್ಯ ಸೇವಿಸುವವರು, ಮಧುಮೇಹ ಅಥವಾ ಮೂತ್ರನಾಳದ ಸೋಂಕು ಇರುವವರು ಈ ರೀತಿ ಅನುಭವಿಸಬಹುದು.

ಆದರೆ, ದಿನಕ್ಕೆ 11 ಬಾರಿ ಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ ಆಗುತ್ತಿದ್ದರೆ, ಅದನ್ನು ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಬೇಕು. ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಗಮನಿಸಬೇಕಾದ ಪ್ರಮುಖ ವಿಷಯಗಳು

  • ಮೂತ್ರವನ್ನು ಹೆಚ್ಚು ಸಮಯ ತಡೆದು ಇಡುವುದು ತಪ್ಪು. ಇದು ಮೂತ್ರನಾಳದ ಸೋಂಕು ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
  • ಆರೋಗ್ಯವಂತ ವ್ಯಕ್ತಿಯ ಮೂತ್ರವು ಹಳದಿ-ಬಿಳಿ ಬಣ್ಣದಲ್ಲಿ ಇರುವುದು ಸಾಮಾನ್ಯ.
  • ಆಹಾರ ಪದ್ಧತಿ ಮತ್ತು ದ್ರವ ಸೇವನೆಯ ಪ್ರಕಾರ ಮೂತ್ರದ ಬಣ್ಣ ಮತ್ತು ವಾಸನೆ ಬದಲಾಗಬಹುದು.

ಹೀಗಾಗಿ, ದೇಹದ ಸೂಚನೆಗಳನ್ನು ಗಮನಿಸಿ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಅತ್ಯಂತ ಮುಖ್ಯ.

ಗದಗ| ಸಿಲಿಂಡರ್ ಅಭಾವ; ನರಗುಂದದ ಇಂಡಿಯನ್ ಏಜೆನ್ಸಿಯಲ್ಲೂ ನೋ ಸ್ಟಾಕ್, ಖಾಲಿ ಸಿಲಿಂಡರ್ ಜೊತೆ ಮರಳಿದ ಜನ!

0

ಗದಗ:– ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಣ ಯುದ್ಧದ ಪರಿಣಾಮವಾಗಿ ದೇಶದೆಲ್ಲೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಜನತೆ ಸಂಕಷ್ಟಕ್ಕೀಡಾಗಿದ್ದಾರೆ.

ಅದರಂತೆ ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ಇದೀಗ ಗದಗ ಜಿಲ್ಲೆಗೂ ತಟ್ಟಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಸ್ಟಾಕ್ ಕೊನೆಗೊಂಡಿದೆ. ಕಮರ್ಷಿಯಲ್ ಮತ್ತು ಗೃಹ ಬಳಕೆಗೆ ಬೇಕಾದ ಗ್ಯಾಸ್ ಸಿಲಿಂಡರ್ ಲಭ್ಯವಾಗದೇ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ಇನ್ನೂ ಗ್ರಾಮೀಣ ಪ್ರದೇಶದಿಂದ ಸಿಲಿಂಡರ್ ಪಡೆಯಲು ಬಂದವರು ಗ್ಯಾಸ್ ಸಿಗದೆ ಖಾಲಿ ಸಿಲಿಂಡರ್ ಹಿಡಿದು ತಮ್ಮ ತಮ್ಮ ಊರಿನತ್ತ ತೆರಳಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪ: ತಡರಾತ್ರಿ ಮನೆಯ ಕಾಂಪೌಂಡ್ ಹಾರಿದ್ದ ಪೊಲೀಸ್!

ಮಂಗಳೂರು: ದೂರು ನೀಡಲು ಬಂದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿವೆ.

ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾವುದೇ ಸಂತ್ರಸ್ತೆಯರು ಧೈರ್ಯದಿಂದ ದೂರು ನೀಡುವಂತೆ ಮನವಿ ಮಾಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಾಂಪೌಂಡ್ ಹಾರುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಅದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೊಸಕೋಟೆ: ಅರಣ್ಯ ಪ್ರದೇಶದಲ್ಲಿ ಯುವಕನ ಮೃತದೇಹ ಪತ್ತೆ!

ಹೊಸಕೋಟೆ: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹೊಸಕೋಟೆ ತಾಲ್ಲೂಕಿನ ಅಲಸಹಳ್ಳಿ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಸೋಹೇಲ್ (24) ನೇಣಿಗೆ ಶರಣಾದ ಯುವಕ. ಮಗನ ದುರಂತವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕ ನಗರದ ಹಲಸೂರು ಸುತ್ತಮುತ್ತ ಟೈಲ್ಸ್ ಕೆಲಸ ಮಾಡುತ್ತಿದ್ದ, ಮತ್ತು ಮೂಲವಾಗಿ ಇವರ ಕುಟುಂಬ ರಾಜಸ್ಥಾನದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದರು. ಇದೀಗ ಮಗನ ಸಾವಿನಿಂದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಸ್ಥಳಕ್ಕೆ ಹೊಸಕೋಟೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ತನಿಖೆಯಿಂದ ತಿಳಿದು ಬರಬೇಕಾಗಿದೆ.

ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್? ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ಮಂಗಳೂರು: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳ ಸಂಚಾರಕ್ಕೆ ಈಗ ತಾತ್ಕಾಲಿಕ ಪರಿಹಾರ ಕಂಡುಬಂದಿದೆ.

ಇರಾನ್‌ನಿಂದ ನಾಲ್ಕು ಹಡಗುಗಳಿಗೆ ಅನುಮತಿ ಸಿಕ್ಕಿದ್ದು, ಮೊದಲ ಹಡಗು ಮಾರ್ಚ್ 12 ರಂದು ಮುಂಬೈಗೆ ತಲುಪಿತ್ತು. ನಂತರ ‘ಶಿವಾಲಿಕ್’ ಹಡಗು 46,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಿದ್ದು, ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್‌ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ‘ನಂದಾದೇವಿ’ ಮತ್ತು ‘ಜಗ್ ಲಾಡ್ಕಿ’ ಹಡಗುಗಳು ಇಂದು ಭಾರತ ತಲುಪಬಹುದಾಗಿದೆ.

ಇವುಗಳಿಂದ ಒಟ್ಟಾರೆ ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು ಕಚ್ಚಾ ತೈಲ ಲಭ್ಯವಾಗಲಿದೆ. ಇಂದಿನ ಘಟನೆಯಿಂದ ದೇಶದಲ್ಲಿ ಉಂಟಾದ ಎಲ್‌ಪಿಜಿ ಕೊರತೆ ತಾತ್ಕಾಲಿಕವಾಗಿ ಶಮನವಾಗಲಿದೆ. ಹಾರ್ಮುಜ್‌ನಲ್ಲಿ ಸಿಲುಕಿರುವ ಇತರ ಹಡಗುಗಳ ಬಿಡುಗಡೆಗಾಗಿ ಇರಾನ್‌ಗೆ ವೈದ್ಯಕೀಯ ನೆರವು ಒದಗಿಸುವ ವಿನಂತಿ ಬಂದಿದ್ದು, ಭಾರತ–ಇರಾನ್ ಸಹಕಾರದಿಂದ ಹಡಗುಗಳ ಸಾಗಣೆ ಕ್ರಮೇಣ ಪುನರಾರಂಭವಾಗುತ್ತಿದೆ.

ಮೇಲಾಧಿಕಾರಿಯ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ!

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ‌ ಗೌರಿಪುರದಲ್ಲಿ ಮೇಲಾಧಿಕಾರಿಯ ಮಾನಸಿಕ ಕಿರುಕುಳ ಹಿನ್ನೆಲೆ ಕೃಷಿ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಜು ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆ ನೌಕರ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ ರಾಜು ಅವರು ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ಬಗ್ಗೆ ಮೃತ ರಾಜು ಪತ್ನಿ ಪ್ರೇಮಾ ಮಾತನಾಡಿ, “ರಾಘವೇಂದ್ರ ಅವರು ನನ್ನ ಗಂಡನನ್ನು ಕೆಲಸಕ್ಕೆ ಸೇರಿಸಿಕೊಂಡಾಗಿನಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಕಳೆದ ನಾಲ್ಕು ತಿಂಗಳುಗಳಿಂದ ಸಂಬಳವೂ ನೀಡಿಲ್ಲ ಎಂದು ಆರೋಪಿಸಿದ್ದಾರೆ. ನನ್ನ ಗಂಡನ ಸಾವಿಗೆ ನ್ಯಾಯ ಒದಗಿಸಬೇಕೆಂದು ಕಣ್ಣೀರು ಹಾಕಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚಿತವಾಗಿಯೇ ರಜೆ: ಮಧು ಬಂಗಾರಪ್ಪ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚಿತವಾಗಿ ಶಿಶುಪಾಲನಾ ರಜೆ ನೀಡಬೇಕೆಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರದಲ್ಲಿ, ಶಿಕ್ಷಕರಿಗೆ ಶಿಶುಪಾಲನಾ ರಜೆ ಸರಿಯಾಗಿ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. “ಎಲ್ಲಾ ಇಲಾಖೆಗಳಂತೆ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ನೀಡಲಾಗುತ್ತಿದೆ. ಹೌದು, ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಡೆಪ್ಯೂಟೇಷನ್ ಇಲ್ಲ. ಆದರೆ ಮಾನವೀಯತೆಯನ್ನು ಗಮನಿಸಿ, ರಜೆಯನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತದೆ.”

ಮುಂದೆ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚೆ ರಜೆ ನೀಡುವ ನಿಯಮ ಜಾರಿ ಮಾಡಲಾಗುತ್ತದೆ. ಡೆಲಿವರಿ ಆದ ನಂತರ ರಜೆ ಮುಗಿಸಿಕೊಂಡ ಶಿಕ್ಷಕರನ್ನು 5 ವರ್ಷ ಕಾಲ ನಿಯಮದ ಅನ್ವಯ ವರ್ಗಾವಣೆ ಮಾಡಲಾಗುವುದು. ಹೆರಿಗೆಗೆ ಹೋಗುವ ಶಿಕ್ಷಕಿಯರ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಜೂನ್ ಒಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ.

ಗಲ್ಫ್ ಪ್ರದೇಶದಿಂದ 2.20 ಲಕ್ಷ ಮಂದಿ ಭಾರತಕ್ಕೆ ರಿಟರ್ನ್‌: ಕೇಂದ್ರ ಸರ್ಕಾರ

0

ದೆಹಲಿ: ಕೊಲ್ಲಿ ಯುದ್ಧ ಫೆಬ್ರವರಿ 28 ರಂದು ಆರಂಭವಾದ ಬಳಿಕ, ಗಲ್ಫ್ ಪ್ರದೇಶದ ದೇಶಗಳಿಂದ 2,20,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಯುಎಇ, ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಿಂದ ನಲವತ್ತೈದು ವಿಮಾನಗಳು ಸೋಮವಾರ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ನಿರೀಕ್ಷೆಯಿದೆ. ಕತಾರ್ ವಾಯುಪ್ರದೇಶ ಭಾಗಶಃ ತೆರೆಯಲಾಗಿರುವುದರಿಂದ ವಿಮಾನಗಳ ಹಾರಾಟ ಮತ್ತೆ ಆರಂಭವಾಗಿದೆ.

ಇದಕ್ಕೂ ಹೊರತು, 550 ಭಾರತೀಯರು ಭೂ ಗಡಿಯ ಮೂಲಕ ಅರ್ಮೇನಿಯಾಗೆ, 90 ಮಂದಿ ಅಜೆರ್ಬೈಜಾನ್‌ ಗಡಿಯ ಮೂಲಕ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಿಮಾನ ನಿಲ್ದಾಣಗಳು ಮುಚ್ಚಿರುವ ಕಾರಣ, ಸೌದಿ ಅರೇಬಿಯಾ ಮೂಲಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಮಾರ್ಚ್ 13 ರಂದು ಒಮಾನ್‌ನ ಸೊಹಾರ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದು, ಮಸ್ಕತ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಅವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ರಾಯಭಾರ ಕಚೇರಿ ಟೆಹ್ರಾನ್‌ನಲ್ಲಿ ಎಲ್ಲಾ ಅಗತ್ಯ ಸಹಾಯ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ಕಾರವಾರ| ಬಾವಿಗೆ ಬಿದ್ದು ಪವಾಡ ಸದೃಶ್ಯವಾಗಿ ಬದುಕುಳಿದ ಎರಡು ವರ್ಷದ ಮಗು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಕಸ್ತೂರ ಬಾ ನಗರದಲ್ಲಿ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲೆ ಭುವಿ ಪವಾಡ ಸದೃಶವಾಗಿ ಬದುಕುಳಿದ ಘಟನೆ ನಡೆದಿದೆ.

ಆಟವಾಡುತ್ತಿದ್ದ ವೇಳೆ ಏಕಾಏಕಿ ನಾಪತ್ತೆಯಾಗಿದ್ದ ಭುವಿಯನ್ನು ಮನೆಯವರು ಸುತ್ತಮುತ್ತ ಹುಡುಕಿದರೂ ಕಂಡುಹಿಡಿಯಲಾಗಲಿಲ್ಲ. ನಂತರ ಮನೆಯ ಮುಂದೆ ಇರುವ ಬಾವಿಯಲ್ಲಿ ಅಳುವ ಶಬ್ದವನ್ನು ಕೇಳಿದ ಕುಟುಂಬದವರು ತಕ್ಷಣ ಪರಿಶೀಲನೆ ನಡೆಸಿದಾಗ, ಮಗು ಬಾವಿಯ ಒಳಗಿನ ಪೈಪಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ತಕ್ಷಣವೇ ಪಯ್ಯ ಚವಟಿ ಎಂಬ ವ್ಯಕ್ತಿ ಬಾವಿಗೆ ಇಳಿದು ಮಗುವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!