Home Blog Page 3366

ಗುಜರಾತ್‌ಗೆ ನೀಡುವ ಆದ್ಯತೆ ರಾಜ್ಯಕ್ಕಿಲ್ಲ: ಉಗ್ರಪ್ಪ ಆರೋಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ಗೆ ಕೊಡುವ ಆದ್ಯತೆ ರಾಜ್ಯಕ್ಕೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಜೀವಂತವಾಗಿದೆ ಎಂದು ಕಾಣಿಸುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆ ನೆರೆ ಸಂತ್ರಸ್ತರಿಗೆ ಸೂರು ವ್ಯವಸ್ಥೆ ಕಲ್ಪಿಸಿಲ್ಲ. ಗುಜರಾತ್‌ ನೆರೆ ಪೀಡಿತರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ‌ ಎಂದು ಆರೋಪಿಸಿದರು.

2019 ರಲ್ಲಿ ಪ್ರವಾಹದಿಂದ 38 ಸಾವಿರ ಕೋಟಿ, 2020 ರಲ್ಲಿ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆದರೆ, ಕೇಂದ್ರ 1280 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಸಂಸತ್ ಅಧಿವೇಶನದಲ್ಲಿ‌ ಈ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇತ್ತು. ಆದರೆ, ರಾಜ್ಯದ ಸಂಸದರು ಚಕಾರ ಎತ್ತಲಿಲ್ಲ ಎಂದು ಟೀಕಿಸಿದರು.

ಕನಿಷ್ಟ ಕ್ಷೇತ್ರದಲ್ಲೂ ಇಲ್ಲದೆ ಬೆಂಗಳೂರು, ದೆಹಲಿಯಲ್ಲಿ ಕುಳಿತಿದ್ದಾರೆ. ನೆರೆ ನಿರ್ವಹಣೆ ಮಾಡದೆ‌ ಅಧಿಕಾರಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.
ಕೊರೊನಾ ಮೂರನೇ‌ ಅಲೆ ಪರಿಣಾಮಕಾರಿಯಾಗಿ ಎದುರಿಸಲು ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಿಎಂ, ಸಚಿವ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ

ಮುಖ್ಯಮಂತ್ರಿ, ಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ. ಗುರುತರವಾದ ಮಹತ್ವದ ಜವಾಬ್ದಾರಿ. ಎಸ್.ಆರ್. ಬೊಮ್ಮಾಯಿ ರಾಯಿಸ್ಟ್ ಐಡಿಯಾಲಜಿವುಳ್ಳವರು. ಜನರ ಬದುಕಿಗೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.

ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳಿಸಿದ್ಯಾರು?

ಬೊಮ್ಮಾಯಿ ಸರ್ಕಾರ ಬೀಳಲು ಬಿಡಲ್ಲ ಎಂಬ ಹೆಚ್.ಡಿ. ದೇವೆಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳೋಕೆ ಕಾರಣ ಯಾರು ಅನ್ನೋದನ್ನ ಮೊದಲು ಹೇಳಲಿ‌ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ಗೆ ಅಸ್ಥಿರತೆಯಿಂದ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ. ಇಲ್ಲವೆ, ಅನಿವಾರ್ಯವಾಗಿ ಬಿಜೆಪಿ ಪರ‌ ಹೇಳಿಕೆ ಕೊಡುತ್ತಿದೆಯೋ ಗೊತ್ತಿಲ್ಲ. ಜಾತ್ಯಾತೀತ ಸಿದ್ದಾಂತವುಳ್ಳವರು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.

ಶಾಸಕ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ನಿರಾಶ್ರಿತರು!

  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮಕ್ಕೆ ಭೇಡಿ ನೀಡಿದ್ದ ಶಾಸಕ ಕುಮಟಳ್ಳಿ

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಪ್ರವಾಹ ಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದ ಶಾಸಕ ಮಹೇಶ ಕುಮಟಳ್ಳಿ ಅವರನ್ನು ನಿರಾಶ್ರಿತರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಇಂದು ನಡೆದಿದೆ.

ನದಿ ಇಂಗಳಗಾವ ಗ್ರಾಮ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿದ್ದರಿಂದ ಶಾಸಕ ಮಹೇಶ ಕುಮಟಳ್ಳಿ ಇಂದು ವೀಕ್ಷಣೆಗೆ ತೆರಳಿದ್ದರು.
ಈ ವೇಳೆ ಗ್ರಾಮಸ್ಥರು ಶಾಸಕರಿಗೆ ಮುತ್ತಿಗೆ ಹಾಕಿ, ಮೊದಲು 2019ರ ಪೂರ್ಣ ಪರಿಹಾರ ನೀಡಿ. ಪ್ರವಾಹ ತಗ್ಗಿದ ಬಳಿಕ ಬಂದು ಮೊಸಳೆ ಕಣ್ಣೀರು ಒರೆಸುವುದನ್ನು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲು 2019ರ ಪರಿಹಾರ ನೀಡಿ ಮುಂದೆ ಹೋಗಿ ಎಂದು ಪಟ್ಟು ಹಿಡಿದಿದ್ದರಿಂದ ಶಾಸಕರು ತೀವ್ರ ಮುಜುಗರಕ್ಕೆ ಒಳಗಾದರು. ಕೃಷ್ಣಾ ತೀರದ ನದಿ ಇಂಗಳಗಾವ ಗ್ರಾಮ 2019 ರಲ್ಲಿ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿ ಹಲವಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು.

ಅರ್ಭಿ ಫಾಲ್ಸ್ ನಲ್ಲಿ ಈಜಲು ಹೋದ ವಿದ್ಯಾರ್ಥಿನಿ ನೀರು ಪಾಲು


ವಿಜಯಸಾಕ್ಷಿ ಸುದ್ದಿ, ಉಡುಪಿ

ಪಾಲ್ಸ್ ನಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಇಂದು ನಡೆದಿದೆ.

ಮಂಗಳೂರು ಮೂಲದ ವರ್ಷಿತಾ ಮೃತ ಬಾಲಕಿ. ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವ್ಯಾಸಂಗ ಮಾಡುತ್ತಿದ್ದ ವರ್ಷಿತಾ ವಿದ್ಯಾರ್ಥಿಗಳಿಬ್ಬರ ಜೊತೆ ಪಾಲ್ಸ್ ಗೆ ತೆರಳಿದ್ದಳು. ಈ ವೇಳೆ ಈಜಲೆಂದು ನೀರಿಗೆ ಇಳಿದಿದ್ದಾಗ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಅರ್ಭಿ ಫಾಲ್ಸ್ ನಿಷೇಧಿತ ಪ್ರದೇಶವಾಗಿದೆ.

ಗಡಿ ಕಾಯೋ ಸೈನಿಕನಿಗೂ ಬಿಡದ ಸೈಬರ್ ಖದೀಮರು; ಲಕ್ಷಾಂತರ ರೂ. ವಂಚಿಸಿ ಮೋಸ

ವಿಜಯಸಾಕ್ಷಿ ಸುದ್ದಿ, ಗದಗ

ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.

ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.

ಆಗಿದ್ದೆನು?

ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್‌ ಬುಕ್ ಮಾಡಿಸಿದ್ದಾರೆ.

ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.

ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ)
ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.

ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.

ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.

ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.

ಗಡಿ ಕಾಯೋ ಸೈನಿಕನಿಗೂ ಬಿಡದ ಸೈಬರ್ ಖದೀಮರು; ಲಕ್ಷಾಂತರ ರೂ. ವಂಚಿಸಿ ಮೋಸ

ವಿಜಯಸಾಕ್ಷಿ ಸುದ್ದಿ, ಗದಗ

ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.

ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.

ಆಗಿದ್ದೆನು?

ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್‌ ಬುಕ್ ಮಾಡಿಸಿದ್ದಾರೆ.

ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.

ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ)
ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.

ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.

ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.

ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.

ಬೆಲ್ಜಿಯಂಗೆ ಶರಣಾದ ಭಾರತ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷೆ ಮೂಡಿಸಿದ್ದ ಭಾರತ ಹಾಕಿತಂಡ ಮಂಗಳವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿಲ್ಜಿಯಂ ವಿರುದ್ದ ಸೋಲು ಕಂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯನಲ್ಲಿ ಗ್ರೇಟ್ ಬ್ರಿಟನ್ ಮಣಿಸಿ ಸೆಮೀಸ್ ಗೆ ಪ್ರವೇಶಿಸಿ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿದಿದ್ದ ಭಾರತ ವಿಶ್ವದ ಬಲಾಢ್ಯ ತಂಡ ಬೆಲ್ಜಿಯಂ ವಿರುದ್ಧ 5-2 ಅಂತರದಲ್ಲಿ ಸೋತು ಫೈನಲ್ ಗೇರುವ ಅವಕಾಶ ಕಳೆದುಕೊಂಡಿತು.

ಪಂದ್ಯ ಆರಂಭದಿಂದಲೇ ಬೆಲ್ಜಿಯಂ ಆಟಗಾರರ ಆಕ್ರಮಣಕಾರಿ ಆಟಕ್ಕೆ ಭಾರತೀಯ ರಕ್ಷಣಾ ಪಡೆ ನಿರುತ್ತರಾದರು. ಸೋತರೂ ಕಂಚಿನ ಪದಕಕ್ಕೆ ಹೋರಾಟ ನಡೆಸುವ ಅವಕಾಶ ಭಾರತಕ್ಕಿದೆ.

ನಾಳೆ ಸಚಿವರ ಪಟ್ಟಿ ಫೈನಲ್ ಪಕ್ಕಾ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ನಾಳೆ ಸಂಜೆ ಅಥವಾ ರಾತ್ರಿ ವೇಳೆಗೆ ಸಚಿವರ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಎರಡು ಗಂಟೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಾಧ್ಯಕ್ಷರೊಂದಿಗೆ ನಡೆಸಿದ ಮಾತುಕತೆ ಸಕಾರಾತ್ಮಕವಾಗಿದೆ. ಹೈಕಮಾಂಡ್ ಗೆ ಮೂರು ಪಟ್ಟಿ ಸಲ್ಲಿಸಿದ್ದೇವೆ‌. ಈ ಪಟ್ಟಿಯಲ್ಲಿರುವ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಯಾರನ್ನು ಬಿಡಬೇಕು ಎಂಬುದನ್ನು ವರಿಷ್ಠರು ಸಭೆ ಸೇರಿ ಚರ್ಚಿಸಿ ಅಂತಿಮ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಬೆಳಗ್ಗೆ ಸಂಸತ್ ಅಧಿವೇಶ ಇರುವುದರಿಂದ ಸಂಜೆ ವರಿಷ್ಠರು ಸಭೆ ನಡೆಸಲಿದ್ದಾರೆ. ಎಷ್ಟು ಜನ ಡಿಸಿಎಂಗಳು ಇರಬೇಕು ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ. ಒಟ್ಟಾರೆ ನಾಳೆ ರಾತ್ರಿ ಒಳಗೆ ಸಚಿವರ ಪಟ್ಟಿ ಸಿದ್ದವಾಗುವ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದರು.

ಖೋಟಾ ನೋಟು ಮುದ್ರಣ ಅಡ್ಡೆ ಮೇಲೆ ಪೊಲೀಸರ ದಾಳಿ

ವಿಜಯಸಾಕ್ಷಿ ಸುದ್ದಿ, ಬೀದರ್

ಖೋಟಾ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಬೀದರ್ ನಗರದ ಗಾಂಧಿಗಂಜ್ ಪೊಲೀಸರು ಐವರನ್ನು ಬಂಧಿಸಿ, ಸುಮಾರು 37 ಸಾವಿರ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ, ಜಾವೀದ್, ಬಂಧಿತರು.

ಬಂಧಿತ ಆರೋಪಿಗಳಿಂದ 5 ನೂರು ಮುಖ ಬೆಲೆಯ 274 ಖೋಟಾ ನೋಟು, ಪ್ರಿಂಟ್ ಮಾಡಲು ಬಳಸಿದ್ದ ಲ್ಯಾಪ್ ಟಾಪ್, ಪ್ರಿಂಟರ್ ಹಾಗೂ ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದೊಂದು ವರ್ಷದಿಂದ 20 ಲಕ್ಷಕ್ಕೂ ಹೆಚ್ಚು ನಕಲಿ ನೋಟು ಮುದ್ರಣ ಹಾಗೂ ಚಲಾವಣೆ ಮಾಡಿದ್ದಾರೆಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ವ್ಯವಹಾರದ ವೇಳೆ 500 ರೂಪಾಯಿ ನೋಟು
ತೆಗೆದುಕೊಳ್ಳುವಾಗ ನೋಟು ಪರೀಕ್ಷಿಸಿ ಪಡೆಯಬೇಕೆಂದು ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಅನ್ನಭಾಗ್ಯ ಅಕ್ಕಿ ದಂಧೆಗೆ ಹೊಸಬರ ಎಂಟ್ರಿ; ಮುಕ್ಕುತ್ತಿರುವ ರೌಡಿ ಶೀಟರ್ಸ್!

ವಿಜಯಸಾಕ್ಷಿ ಸುದ್ದಿ, ಗದಗ

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳದಂಧೆಯ ಮೂಲಕ ಸಾಗಾಟ ಮಾಡುವ ಹೊಸದೊಂದು ಜಾಲ ಗದಗ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆಯೇ? ಎಂಬ ಪ್ರಶ್ನೆಗೆ ಇತ್ತೀಚೆಗೆ ಪೊಲೀಸರು ಭೇದಿಸಿದ ಪ್ರಕರಣಗಳೇ ಸಾಕ್ಷಿಯಾಗಿವೆ.

ರಾಜಾರೋಷವಾಗಿ ನಡೆಯುತ್ತಿದ್ದ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಾಟದ ದಂಧೆಗೆ ಕಳೆದ ಫೆಬ್ರವರಿಯಲ್ಲಿಯೇ ಕಡಿವಾಣ ಬಿದ್ದಿದೆ. ಆದರೆ ಈಗ ಅಲ್ಲಲ್ಲಿ ಹೊಸಬರು ಈ ದಂಧೆಗೆ ಎಂಟ್ರಿಕೊಟ್ಟಿದ್ದಾರೆ. ಅವರನ್ನು ರೌಡಿ ಶೀಟರ್ಸ್ ಹುರಿದು ಮುಕ್ಕುತ್ತಿದ್ದಾರೆ.

ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ನಡೆದ ಬೆಳವಣಿಗೆ. ಗದಗನ ಗಂಗಿಮಡಿ ಸರ್ಕಲ್, ಬಿಂಕದಕಟ್ಟಿ, ಮುಂಡರಗಿ ತಾಲೂಕಿನ ಡಂಬಳ, ಹಿರೇವಡ್ಡಟ್ಡಿಯಲ್ಲಿ ಅನ್ನಭಾಗ್ಯ ಅಕ್ಕಿ ಸಿಕ್ಕಿದೆ. ಆ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಆದರೆ ಈಗ ಗದಗ- ಬೆಟಗೇರಿ ಅವಳಿ ನಗರದಲ್ಲಿ ಸದ್ದಿಲ್ಲದೆ ದಂಧೆ ಕರಾಳ ಹಸ್ತ ಚಾಚಿಕೊಂಡಿದೆ.

ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ

ಬೆಟಗೇರಿಯ ನೇಕಾರನಗರ, ಮಂಜುನಾಥ್ ನಗರ, ಹುಯಿಲಗೋಳ ರೋಡ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿ ಮನೆಯ ಅಕ್ಕಿಯನ್ನು ನೇಕಾರನಗರದ ನಾಗರಾಜ್ ಕೆಂಜಿಗುಂಡಿ ಎಂಬಾತ ಖರೀದಿಸಿ, ತನ್ನ ಸಹಚರನ ಮುಖಾಂತರ ಹಾವೇರಿಗೆ ಕಳಿಸುತ್ತಾನೆ. ಹಾಗೆಯೇ ಗದಗನಲ್ಲೂ ಒಂದಿಷ್ಟು ಪುಂಡ ಪೋಕರಿಗಳು ದಾಸರ ಓಣಿ, ಗಂಗಿಮಡಿ, ಒಕ್ಕಲಗೇರಿ, ರಹಮತ್ ನಗರ, ಖಾನ್ ತೋಟ್ ಮುಂತಾದೆಡೆ ಅಕ್ಕಿ ಸಂಗ್ರಹಿಸಿ ಅಣ್ಣಿಗೇರಿ ಮೂಲಕ ಹುಬ್ಬಳ್ಳಿ, ಹಾವೇರಿಗೆ ಕಳಿಸುತ್ತಾರೆ. ಹಾವೇರಿಯ ಸಚಿನ್ ಎಂಬಾತ ದೊಡ್ಡ ಮೊತ್ತ ನೀಡಿ ಈ ಅಕ್ಕಿ ಖರೀದಿಸುತ್ತಾನೆ.

ಈ ರೀತಿ ಅಕ್ಕಿ ದಂಧೆ ಎರಡು ತಿಂಗಳಿನಿಂದ ಜೋರಾಗಿದೆ. ರಾತ್ರಿ ಆದರೆ ಸಾಕು, ಒಂದೊಂದೇ ವಾಹನ ಅಕ್ಕಿ ತುಂಬಿಕೊಂಡು ಹೊರಗೆ ಬೀಳುತ್ತವೆ. ಅಶೋಕ ಲೈಲ್ಯಾಂಡ್, ಬೋಲೆರೋ, ಟಾಟಾಏಸ್ ಮೂಲಕ ಅಕ್ಕಿ ಸಾಗಾಟ ಎಗ್ಗಿಲ್ಲದೆ ನಡೆಯಿತ್ತದೆ.

ರೌಡಿ ಶೀಟರ್ಸ್ ಹಾವಳಿ

ಕೆಲವು ರೌಡಿಗಳು, ಪುಂಡ-ಪೋಕರಿಗಳು ಈ ದಂಧೆಗೆ ಸಾಥ್ ನೀಡ್ತಾರೆ. ಕೆಲವೊಮ್ಮೆ ತಮ್ಮ ವಾಹನ ಬಿಟ್ಟು ಬೇರೆಯವರ ಅಕ್ಕಿ ತುಂಬಿದ ವಾಹನಗಳು ಹೊರಟರೆ ಅವುಗಳನ್ನು ಹಿಡಿದು ದುಡ್ಡು ವಸೂಲಿ ಮಾಡುತ್ತಾರೆ. ಹೀಗೆ ಗುರುವಾರ ಮಧ್ಯರಾತ್ರಿ, ಸಮೀಪದ ಅಡವಿ ಸೋಮಾಪುರ‌ ಹಾಗೂ ಮುಳಗುಂದ ನಾಕಾ ಬಳಿ ವಾಹನ ಹಿಡಿದಿದ್ದಾರೆ. ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದಾರೆ. ಕೊಡದಿದ್ದರೆ ಪೊಲೀಸರಿಗೆ ಮಾಹಿತಿ ‌ನೀಡ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಶುಕ್ರವಾರ ಬೆಳಗಿನವರೆಗೂ ಚೌಕಾಸಿ ನಡೆದು ಕೊನೆಗೂ ಒಂದು ಅಮೌಂಟ್ ಕೊಡುವ ಒಪ್ಪಂದಕ್ಕೆ ಬಂದ ಅನಂತರವೇ ವಾಹನಗಳನ್ನು ಬಿಟ್ಟಿದ್ದಾರೆ.
ಇದು ಸ್ಯಾಂಪಲ್ ಮಾತ್ರ. ಇನ್ನೂ ಹಲವು ಬಾರಿ ಇಂತಹ ಘಟನೆಗಳು ನಡೆದರೂ ಪೊಲೀಸರ ಗಮನಕ್ಕೆ ಬರುತ್ತಿಲ್ಲ.

ಕಳ್ಳತನ ಪ್ರಕರಣಗಳಲ್ಲೂ ಭಾಗಿ

ಜಿಲ್ಲೆಯಲ್ಲಿ ಈಗ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಎರಡು ತಿಂಗಳಿನಿಂದ ಗದಗ-ಬೆಟಗೇರಿ‌ ಭಾಗದಲ್ಲಿ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕೇಶವ ನಗರದಲ್ಲಿ ಮುಂಬಾರಡ್ಡಿ ಎಂಬುವರ ಮನೆ ಹಾಡುಹಗಲೇ ಕಳ್ಳತನವಾಗಿತ್ತು. ರೋಣ, ಲಕ್ಷ್ಮೇಶ್ವರ, ಮುಂಡರಗಿ, ಗಜೇಂದ್ರಗಡದಲ್ಲೂ ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.

ಇತ್ತೀಚೆಗೆ ಲಕ್ಷ್ಮೇಶ್ವರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಆದರೆ ಗದಗನಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಕಳ್ಳರು ಇನ್ನೂ ಸಿಕ್ಕಿಲ್ಲ. ಇಂತಹ ಘಟನೆಗಳನ್ನು ತಡೆಯಬೇಕಾದರೆ ರೌಡಿ ಶೀಟರ್‌ಗಳ ಅಟಾಟೋಪಕ್ಕೆ ಕಡಿವಾಣ ಹಾಕಬೇಕು. ಆದರೆ ಗದಗನಲ್ಲಿ ಅಂತಹ ಲಕ್ಷಣಗಳು ಕಾಣುತ್ತಿಲ್ಲ.

ಏನೆ ಆಗಲಿ ಮುಂದಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿ ಶೀಟರ್‌ಗಳಿಗೆ ಪರೇಡ್ ಆದರೂ ನಡೆಸಲಿ. ಅವರ ಚಲನವಲನಗಳ ಮೇಲೆ ಕಣ್ಣಿಡಲಿ. ಅವರ ಜೊತೆಗೆ ರಾತ್ರಿ ಇರುವ ಜೊತೆಗಾರರು ಯಾರು? ಪತ್ತೆ ಹಚ್ಚಿ ಒಂದಿಷ್ಟಾದರೂ ಬುದ್ಧಿ ಕಲಿಸಲು ಮುಂದಾಗಬೇಕು. ಅಂದಾಗ ಮಾತ್ರ ರೌಡಿ ಶೀಟರ್‌ಗಳ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಬೀಳಬಹುದು.

ಸಂಪುಟ ಸೇರಲು ದುರ್ಗದ ಪಂಚ ಶಾಸಕರ ಮಧ್ಯೆ ಬಿಗ್ ಫೈಟ್!

  • ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಆಕಾಂಕ್ಷಿಗಳು

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ನೂತನ ಕ್ಯಾಬಿನೆಟ್ ರಚನೆ ಹಿನ್ನೆಲೆ ಚಿತ್ರದುರ್ಗ ಬಿಜೆಪಿ ಶಾಸಕರು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಐವರು ಶಾಸಕರು ತೀವ್ರ ಪೈಪೋಟಿ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ದುರ್ಗದ ಶಾಸಕರು‌ ಪಕ್ಷದ ಮುಖಂಡರನ್ನು ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ.

ಡಿಸಿಎಂ ಆಗಲು ಮೊಳಕಾಲ್ಮೂರು ಶಾಸಕ ರಾಮುಲು ಕಸರತ್ತು‌ ನಡೆಸಿದ್ದರೆ, ಯುವ ಕೋಟಾದಡಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹಕ್ಕು ಮಂಡಿಸಿದ್ದಾರೆ. ನಿನ್ನೆ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ.

ಇನ್ನು ಹಿರಿತನದ ಆಧಾರದಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದರೆ, ಮಹಿಳಾ ಕೋಟಾದಡಿ ಮಿನಿಸ್ಟರ್ ಆಗಲು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ‌ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಯಡಿಯೂರಪ್ಪ ಆಪ್ತ ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಹ ಲಾಭಿ ನಡೆಸಿದ್ದಾರೆ.

error: Content is protected !!