Home Blog Page 3480

ಅಂದರ್-ಬಾಹರ್ ಜೂಜಾಟ; ಗ್ರಾ.ಪಂ‌ ಉಪಾಧ್ಯಕ್ಷ ಸೇರಿ 12 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಫೈನಾನ್ಷಿಯರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸೇರಿದಂತೆ 12 ಜನರ ತಂಡವೊಂದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ನಡೆದಿದೆ.

ಗದಗ ತಾಲೂಕಿನ ಕಿರಿಟಗೇರಿ ಗ್ರಾಮದ ಬಳಿ ಇರುವ ಹಳ್ಳವೊಂದರಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಷಣ್ಮುಖ ನಿಂಗಪ್ಪ ದಂಡಿನ, ಶಂಕರ್ ಯಮನಪ್ಪ ಬಳ್ಳಾರಿ, ಬಸವರಾಜ್ ಕಳಕಪ್ಪ ಪೂಜಾರ, ಚನ್ನಪ್ಪ ರಾಮಲಿಂಗಪ್ಪ ಹರದೊಲಿ, ಯಲ್ಲಪ್ಪ ಕನಕಪ್ಪ ಭಜಂತ್ರಿ, ಶಿವಾನಂದ ಈರಪ್ಪ ಕರಿಗೌಡರ್, ಮಲ್ಲೇಶ್ ತಿಮ್ಮಣ್ಣ ಕಣಕಿ, ಶೇಖಪ್ಪ ಬಸವರಾಜ್ ಹುನಗುಂಡಿ, ಗುರುಬಸಯ್ಯ ಈಶ್ವರಯ್ಯ ಹಿರೇಮಠ, ಮಾಲತೇಶ್ ಕರಿಯಪ್ಪ ಮೇಟಿ, ಈಶ್ವರ ಮಲ್ಲಪ್ಪ ಯಳವತ್ತಿ, ಹಾಗೂ ಅಂದಾನಪ್ಪ ಶಿವಪ್ಪ ಬಿಂಗಿ ಎಂಬುವವರನ್ನು ಬಂಧಿಸಲಾಗಿದೆ.

ಗ್ರಾಮೀಣ ಠಾಣೆಯ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ 42 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ; ಜಿಲ್ಲೆಯಲ್ಲಿ ಕಂಟ್ರೋಲ್‌ ಗೆ ಬಂತು ಸೋಂಕು, ಸಹಜ ಸ್ಥಿತಿಯತ್ತ ಗದಗ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ಕಂಟ್ರೋಲ್‌ ನತ್ತ ಬರುತ್ತಿದೆಯಾ? ಹೌದು ಸೋಮವಾರದ ವರದಿಯಂತೆ‌ ಜಿಲ್ಲೆಯಲ್ಲಿ ಕೇವಲ 17 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯ ಮುಂಡರಗಿ, ನರಗುಂದ ತಾಲೂಕಿನಲ್ಲಿ ತಲಾ ಒಬ್ಬರಿಗೆ, ಶಿರಹಟ್ಟಿ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ಇದರಿಂದಾಗಿ ಮುಂಡರಗಿ ತಾಲೂಕು ಹಾಗೂ ರೋಣ ತಾಲೂಕಿನಲ್ಲಿ ಸೋಂಕು ಹತೋಟಿಗೆ ಬಂದಿದೆ.

ಇವತ್ತಿನ ವರದಿಯಲ್ಲಿ ಕೋವಿಡ್ ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರಿಂದಾಗಿ ಇದುವರೆಗೂ ಕೋವಿಡ್ ನಿಂದಾಗಿ 294 ಜನ ಮೃತಪಟ್ಟಂತಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ 70 ವರ್ಷದ ವ್ಯಕ್ತಿ ಜೂನ್ 17 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಅವರಿಗೆ ‌ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 19 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಪ್ರಕಟಣೆ ನೀಡಿದ್ದಾರೆ.

ಇಂದು 17 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25628 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -08, ಮುಂಡರಗಿ-01, ನರಗುಂದ-01, ರೋಣ-05, ಶಿರಹಟ್ಟಿ-02, ಹೊರಜಿಲ್ಲೆಯ-00 ಸೇರಿದಂತೆ 17 ಪ್ರಕರಣಗಳು ದೃಢಪಟ್ಟಿವೆ.

ಇಂದು 65 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25029 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 305 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 75 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅನ್ ಲಾಕ್ ಜಿಲ್ಲೆಗಳ ಪಟ್ಟಿಗೆ ಮತ್ತೆ 6 ಜಿಲ್ಲೆಗಳು ಸೇರ್ಪಡೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ತೆರುವುಗೊಳಿಸಲಾಗುತ್ತಿದೆ. ಇತೀಚೆಗಷ್ಟೇ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಲಾಗಿತ್ತು. ಈಗ ಮತ್ತೆ 6 ಜಿಲ್ಲೆಗಳಲ್ಲಿ ಸರ್ಕಾರ ಅನ್ ಲಾಕ್ ಘೋಷಣೆ ಮಾಡಿದೆ.

ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿಯೂ ಅನ್ ಲಾಕ್ ವಿನಾಯಿತಿ ನೀಡಲಾಗಿದೆ. 2ನೇ ಹಂತದ ಕೊರೊನಾ ಪಾಸಿಟಿವಿಟಿ ರೇಟ್ ಆಧರಿಸಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಿಗ್ಗೆಯಿಂದ ಸಂಜೆ 5ರ ವರೆಗೆ ಎಲ್ಲ ಅಂಗಡಿ –ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಅನ್ ಲಾಕ್ ತೆರವುಗೊಳಿಸಲಾಗಿತ್ತು. ಈಗ ಈ ಸಾಲಿಗೆ 6 ಜಿಲ್ಲೆಗಳು ಸೇರಿವೆ.

ಕಾಂಗ್ರೆಸ್ ನಲ್ಲಿ ಅಧ್ಯಕ್ಷರೇ ಸುಪ್ರೀಂ; ಮಾಜಿ ಡಿಸಿಎಂ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಕಾಂಗ್ರೆಸ್ ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಮುಂದಿನ ಸಿಎಂ ಸಿದ್ದರಾಮಯ್ಯ ಎಂಬುವುದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ನಮ್ಮೊಂದಿಗೆ ಕಾರ್ಯಕರ್ತರು ಇರುತ್ತಾರೆ. ಅವರಿಗೆ ಆಸೆಗಳು ಇರುತ್ತವೆ. ನಮ್ಮ ನಾಯಕರು ಹೀಗೆ ಇರಬೇಕು ಎಂಬುವುದು ಅವರ ಆಸೆಯಾಗಿರುತ್ತದೆ. ಹಾಗೆಯೇ ಸಿದ್ದರಾಮಯ್ಯರೊಂದಿಗೆ ಇರುವ ಜಮೀರ್ ಗೆ ಆ ರೀತಿಯ ಆಸೆ ಇರಬೇಕು ಎಂದು ಹೇಳಿದ್ದಾರೆ.

ಕೆಲವೊಮ್ಮೆ ನಾನು ಸಿಎಂ ಆಗಬೇಕು ಎಂಬುವುದು ನಮ್ಮ ಬೆಂಬಲಿಗರ ಆಸೆಯಾಗಿರುತ್ತದೆ. ಆದರೆ, ಈ ಬಾರಿ ಪ್ರತಿಯೊಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.
ಬಿಜೆಪಿಯವರು ಕೆಟ್ಟ ಆಡಳಿತ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯವಾಗಿದೆ. ನಾವೆಲ್ಲರೂ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ನಮ್ಮಲ್ಲಿ ಪಕ್ಷದ ವ್ಯವಹಾರ ಬಂದಾಗ ಕಾಂಗ್ರೇಸ್ ನ ರಾಜ್ಯಾಧ್ಯಕ್ಷರೇ ಸುಪ್ರೀಂ. ಯಾರೇ ಅಧ್ಯಕ್ಷರಿದ್ದರೂ ಕಾಂಗ್ರೆಸ್ ಪಕ್ಷದ ಎಲ್ಲಾ ವ್ಯವಹಾರಗಳಿಗೆ ಅವರೇ ಸುಪ್ರೀಂ. ಡಿ.ಕೆ. ಶಿವಕುಮಾರ್ ಗೆ ಹೈ ಕಮಾಂಡ್ ಅಧಿಕಾರ ಕೊಟ್ಟಿದೆ. ಹೀಗಾಗಿ ಎಲ್ಲರೂ ಅವರು ಹೇಳಿದ ಹಾಗೆಯೇ ಕೇಳಬೇಕು ಎಂದು ಹೇಳಿದ್ದಾರೆ.

ನಮ್ಮಲ್ಲಿ ಬಣ ರಾಜಕಾರಣ ಇಲ್ಲ. ಜಮೀರ್ ಮೇಲೆ ಶಿಸ್ತು ಕ್ರಮಕೊಳ್ಳುವ ಹಂತಕ್ಕೆ ಯಾವ ಸಂದರ್ಭವೂ ಬಂದಿಲ್ಲ. ಅಂತಹ ಸಂದರ್ಭ ಬಂದರೆ, ಕಾಂಗ್ರೆಸ್ ಜನರಲ್ ಸೆಕ್ರೆಟರಿ ಸುರ್ಜೆವಾಲ ಅದನ್ನು ಸರಿಪಡಿಸುತ್ತಾರೆ ಎಂದು ಹೇಳಿದ್ದಾರೆ.

ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಯೋಗ ಸಹಕಾರಿ; ಶೆಟ್ಟರ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಯೋಗ ಸಹಕಾರಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು‌ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು‌.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಗೆ, ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ವಿಶ್ವ ಸಂಸ್ಥೆ ಮನ್ನಣೆ ನೀಡಿತು. ಇಂದು ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳು, ಕೋಟ್ಯಾಂತರ ಜನರು ಯೋಗ ದಿನಾಚರಣೆ ಆಚರಿಸುತ್ತಿದ್ದಾರೆ.

ಯೋಗ ವೈಯಕ್ತಿಕವಾಗಿ ಲಾಭಧಾಯವಾಗಿದೆ. ಯೋಗ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಪ್ರತಿನಿತ್ಯ‌ ಯೋಗ ಮಾಡುವರಿಗೆ ಕೊರೊನಾ ಹೆಚ್ಚಾಗಿ ಬಾಧಿಸಿಲ್ಲ. ಇದು ನನ್ನ ವೈಯಕ್ತಿಕ ಅನುಭವವೂ ಆಗಿದೆ.

ಕೋವಿಡ್ ಸಾಂಕ್ರಮಿಕ ಹಿನ್ನಲೆಯಲ್ಲಿ ವರ್ಚುಯಲ್ ಮೂಲಕ ಯೋಗ ದಿನಾಚರಣೆ ಚಾಲನೆ ನೀಡಲಾಗಿದೆ. ಸೀಮಿತ ಸಂಖ್ಯೆಯಲ್ಲಿ ಧ್ಯಾನ ಮಂದಿರದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಈ ಬಾರಿ ಯೋಗ ದಿನಾಚರಣೆ ಘೋಷವಾಕ್ಯ “ಮನೆಯಲ್ಲಿ ಇದ್ದೇ ಯೋಗ ಮಾಡಿ”(Be with Yoga, Be at Home) ಆಗಿದೆ. ಜನರು ಪ್ರತಿನಿತ್ಯ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಹುಬ್ಬಳ್ಳಿ ಧಾರವಾಡ ಜನತೆಗೆ ಯೋಗ ಹಾಗೂ ಧಾನ್ಯದ ಮಹತ್ವ ಸಾರಲು ಪಿರಾಮಿಡ್ ಧಾನ್ಯಮಂದಿರವನ್ನು ನಿರ್ಮಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಜಿ.ಪಂ. ಸಿ‌.ಇ.ಓ ಡಾ.ಬಿ.ಸುಶೀಲ, ಹು-ಧಾ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಯಶವಂತ ಮದೀನಕರ್, ಜಿಲ್ಲಾ ಆಯುಷ್ಯಾಧಿಕಾರಿ ಡಾ.ಮೀನಾಕ್ಷಿ, ತಹಶಿಲ್ದಾರರ ಶಶಿಧರ ಮಾಡ್ಯಾಳ ಭಾಗವಹಸಿದ್ದರು.

ಯೋಗ ಶಿಕ್ಷಕ ಸಂಗಮೇಶ್ ನಿಂಬರಗಿ ಅವರ ತಂಡ ರಾಷ್ಟ್ರೀಯ ಆಯುಷ್ಯ ಮಾರ್ಗಸೂಚಿಗಳ ಅನುಸಾರ ನಿಗದಿ ಪಡಿಸಲಾದ ‌ಯೋಗಾಸನಗಳ ಕ್ರಮಗಳ ಕುರಿತು ಪ್ರಾತ್ಯಕ್ಷತೆ ನೀಡಿ, ಅವುಗಳ ಉಪಯೋಗ ತಿಳಿಸಿದರು.

ಜಿಲ್ಲೆಯಲ್ಲಿ ಅನ್ ಲಾಕ್; ರಸ್ತೆಗೆ ಇಳಿದ ಬಸ್ ಗಳು!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಸ್ ಗಳು ರಸ್ತೆಗೆ ಇಳಿದಿವೆ. ಕೊರೊನಾ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಗದಗ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಜೆ 5ರ ವರೆಗೆ ಅನ್ ಲಾಕ್ ಘೋಷಿಸಿದೆ. ಹೀಗಾಗಿ ವಾಣಿಜ್ಯ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ನಡೆಯುತ್ತಿವೆ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆ ಇಳಿದಿವೆ.

ಇಲ್ಲಿಯ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬಸ್ ಗಳು ಆಗಮಿಸುತ್ತಿವೆ. ಜಿಲ್ಲೆಯಿಂದ ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಮುಂಡರಗಿಗೆ ಬಸ್ ಗಳು ಆರಂಭವಾಗಿವೆ. ಹೀಗಾಗಿ ಪ್ರಯಾಣಿಕರು ಕೂಡ ಬಸ್ ನಿಲ್ದಾಣದತ್ತ ಮುಖ ಮಾಡುತ್ತಿದ್ದಾರೆ.

ಬಸ್ ಆರಂಭವಾದ ಹಿನ್ನೆಲೆಯಲ್ಲಿ ನಗರ ಬಸ್ ಡಿಪೋದಲ್ಲಿ ಬಸ್ ಗೆ ಹಾರ ಹಾಕಿ, ಕಾಯಿ ಒಡೆದು ಪೂಜೆ ಸಲ್ಲಿಸಿ ಸಂಚಾರ ಪ್ರಾರಂಭಿಸಲಾಗಿದೆ. ಬಸ್ ಗೆ ನಮಸ್ಕರಿಸುವ ಮೂಲಕ ಚಾಲಕರು ಬಸ್ ಹತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನಿಂದ 150 ಬಸ್ ಗಳು ಸಂಚಾರ ನಡೆಸುತ್ತಿವೆ.

ಸತತ 50 ದಿನಗಳ ಬಳಿಕ ರಸ್ತೆಗಿಳಿದ NWKRTC ಬಸ್

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆ ಮೇರೆಗೆ ಪುನಃ ಬಸ್ ಸಂಚಾರ ಆರಂಭ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಬಸ್ ಗಳು ಕಾರ್ಯಾಚರಣೆ ಮಾಡಲಿದ್ದು, ಮೈಸೂರು ಜಿಲ್ಲೆ ಹೊರತು ಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್ಸುಗಳ ಸಂಚಾರ ಆರಂಭಿಸಿವೆ.

ರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಲಾಗಿದ್ದು,
ಈಗಾಗಲೇ ಶೇ% 92 ರಷ್ಟು ಸಿಬ್ಬಂದಿಗಳಿಗೆ ಲಸಿಕೆ ಪೂರ್ಣ ಮಾಡಲಾಗಿದೆ.

ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ‌. ಪ್ರಯಾಣಿಕರು ಕಡ್ಡಾವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಪ್ರಯಾಣಿಕರು ಕುಳಿತುಕೊಳ್ಳುವ ಮೂರು ಆಸನಗಳಲ್ಲಿ ಇಬ್ಬರಿಗೆ ಹಾಗೂ ಎರಡು ಆಸನದಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಮಾಡಲಾಗಿದೆ. ಚಾಲನಾ ಸಿಬ್ಬಂದಿಗಳು ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದ್ದು, ಅಂತಹ ಸಿಬ್ಬಂದಿಗಳಿಗೆ ಮಾತ್ರ ಕರ್ತವ್ಯ ನಿರ್ವಹಣೆಗೆ ಸೂಚಿಸಲಾಗಿದೆ.

ಅಂತರ್ ಜಿಲ್ಲಾ ಬಸ್ ಸಂಚಾರ

ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು 200 ಬಸ್ ಗಳು ರಸ್ತೆಗಿಳಿಯಲಿವೆ. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮಂಗಳೂರಿನಲ್ಲಿ ಜುಲೈ 5ರ ವರೆಗೂ ಲಾಕ್ ಡೌನ್ ವಿಸ್ತರಣೆ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 5ರ ವರೆಗೂ ಲಾಕ್‍ ಡೌನ್ ವಿಸ್ತರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅನ್ ಲಾಕ್ 1.0 ಭಾಗವಾಗಿ ಅಗತ್ಯವಸ್ತುಗಳ ಖರೀದಿಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಬೀದಿ ಬದಿ ವ್ಯಾಪಾರ ಮತ್ತು ಮದ್ಯ ಪಾರ್ಸಲ್ ಗಷ್ಟೇ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ನಿರ್ಮಾಣ ಚಟುವಟಿಕೆ ಮತ್ತು ಸ್ಟೀಲ್, ಸಿಮೆಂಟ್ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತ್ರ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಇಬ್ಬರು ಪ್ರಯಾಣಿಕರೊಂದಿಗೆ ಜಿಲ್ಲೆಯಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಉದ್ಯಾನ ತೆರೆಯಲು ಅವಕಾಶ ನೀಡಿಲ್ಲ. ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ ಗಳು ಜಿಲ್ಲೆಯಿಂದ ಹೊರಗೆ ಹಾಗೂ ಒಳಗೆ ಓಡಾಟ ಮಾಡುವಂತಿಲ್ಲ. ಇದರೊಂದಿಗೆ ಹೊರ ಜಿಲ್ಲೆಗಳಿಂದಲೂ ಸಾರಿಗೆ ಸಂಸ್ಥೆಯ ಬಸ್ ಗಳು ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಜುಲೈ 5ರ ವರೆಗೆ ಪ್ರತಿ ದಿನ ಸಂಜೆ 7 ರಿಂದ ಬೆಳಿಗ್ಗೆ 7ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ವಾಹನ ಓಟಾಡಕ್ಕ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಬೇಕೆಂಬುದು ಜನರ ದನಿ: ಹಿಟ್ನಾಳ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಆಂತರಿಕ ಕಚ್ಚಾಟದಿಂದ ಜನ ಬೇಸತ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬುದು ಜನರ ದನಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಕೊಪ್ಪಳದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದರೆ ಇಂಥ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು ಎಂಬುದು ಜನಾಭಿಪ್ರಾಯವಾಗಿದೆ. ಅದನ್ನೇ ನಮ್ಮ ಪಕ್ಷದ ಮುಖಂಡರು ಹೇಳುತ್ತಿದ್ದಾರೆ ಎಂದರು.

ಕೊರೊನಾ ದಿನಗಳಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಅನೇಕರು ಉದ್ಯೋಗ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಥವರ ಕಷ್ಟಗಳಿಗೆ ಹೆಗಲು ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜೂನ್ 21ರ ಸೋಮವಾರ ಕೊಪ್ಪಳದಲ್ಲಿ 15 ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತದೆ. ತಾಲೂಕು ಕ್ರೀಡಾಂಗಣದಲ್ಲಿ ಸಾಂಕೇತಿಕವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಆಹಾರ ಕಿಟ್‌ಗಳನ್ನು ಕೆಲ ಅರ್ಹ ಕುಟುಂಬಗಳಿಗೆ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಗುರು ಹಲಗೇರಿ, ಮುತ್ತುರಾಜ, ಮುಖಂಡ ರವಿ ಕುರಗೋಡ ಮತ್ತಿತರರು ಇದ್ದರು.

ಸಿಎಂ ಯಡಿಯೂರಪ್ಪ ರಾಜೀನಾಮೆಗೆ ವಾಟಾಳ್ ಒತ್ತಾಯ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಸರ್ವಾಧಿಕಾರಿ. ಸಿಎಂ ಬಗ್ಗೆ ಮಠಾಧೀಶರಿಗೆ ಏಕೆ ಇಷ್ಟೊಂದು ಒಲವು ಇದೆ. ಬಿ.ಡಿ. ಜತ್ತಿ, ನಿಜಲಿಂಗಪ್ಪ, ಕಂಠಿ ಅವರಿಗಿಲ್ಲದ ಒಲವು ಯಡಿಯೂರಪ್ಪ ಅವರ ಬಗ್ಗೆ ಏಕಿದೆ? ಯಡಿಯೂರಪ್ಪ ದುರಾಡಳಿತ ನಡೆಸಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪನೇ ಹೈಕಮಾಂಡ್. ಈ ಸರ್ಕಾರದಲ್ಲಿ ಮಂತ್ರಿಗಳು ಇಲ್ಲ, ಶಾಸಕರು ಇಲ್ಲ ಸಂಸದರು ಇಲ್ಲ‌. ಎಲ್ಲರನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ. ಕೂಡಲೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ. ಪದವಿ ಶಿಕ್ಷಣ ಕನ್ನಡ ಪಠ್ಯ ಕಡಿತ ಮಾಡಿರುವುದು ಸರಿಯಾದ ನಿಲುವಲ್ಲ. ಸರ್ಕಾರ ಕೂಡಲೇ ಹಳೇ ಶಿಕ್ಷಣ ಪದ್ದತಿಯನ್ನೇ ಮುಂದುವರೆಸಬೇಕು ಎಂದು ವಾಟಾಳ್ ಒತ್ತಾಯಿಸಿದ್ದಾರೆ.