Home Blog Page 57

ರಾಯಚೂರು| ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿತ: ದಂಪತಿ ಸಾವು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯಲಗಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಮೆಟ್ಟಿಲು ಏಕಾಏಕಿ ಕುಸಿದ ಪರಿಣಾಮ, ಗೌಂಡಿ ಕೆಲಸ ಮಾಡುತ್ತಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಪೈಕಿ 38 ವರ್ಷದ ದ್ಯಾವಪ್ಪ ಸೂಗುರು ಮತ್ತು 32 ವರ್ಷದ ಶಿವಮ್ಮ, ದುರ್ದೈವಿಗಳು. ತನಿಖೆಯ ಪ್ರಕಾರ, ಮೆಟ್ಟಿಲು ಪಿಲ್ಲರ್ ಇಲ್ಲದೆ, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದುದರಿಂದ ಕುಸಿತಕ್ಕೆ ಕಾರಣವಾಗಿದೆ.

ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯರು ದಾರುಣ ಘಟನೆಗೆ ಸಂಬಂಧಿಸಿದಂತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 

ಶಾಸಕರಿಗೆ ಔತಣಕೂಟ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುತ್ತಾರಾ ಡಿಸಿಎಂ ಡಿಕೆಶಿ!?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.

ಈ ಔತಣಕೂಟ ರಾಜಕೀಯ ಲೆಕ್ಕಾಚಾರ, ಪವರ್ ಶೇರಿಂಗ್ ಗೊಂದಲದ ನಡುವೆ ಆಯೋಜನೆಯಾಗಿದೆ. ಪಕ್ಷದೊಳಗಿನ ಕೆಲವರಲ್ಲಿ “ಡಿಕೆಶಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಬಗ್ಗೆಯೂ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಈ ಡಿನ್ನರ್ ಮೀಟಿಂಗ್ ಸಾಕಷ್ಟು ಕುತೂಹಲ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, “ನಾನು ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಭೋಜನಕೂಟ ಹಮ್ಮಿಕೊಂಡಿದ್ದೇನೆ.

ಮುಂದಿನ ದಿನಗಳಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕೂಡ ಭೋಜನಕೂಟ ಹಮ್ಮಿಕೊಳ್ಳಲಾಗುವುದು. ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಈ ಭೋಜನಕೂಟವನ್ನು ನೀಡಿದ್ದೇವೆ” ಎಂದು ಹೇಳಿದರು.

 

ತಮಿಳುನಾಡಲ್ಲಿ ಸಿಲಿಂಡರ್ ಕೊರತೆ: ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡೋ ಪರಿಸ್ಥಿತಿ!

0

ಚೆನ್ನೈ: ಇಸ್ರೇಲ್‌, ಅಮೆರಿಕ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ದೇಶದ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ ಕಂಡಿದ್ದು, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದೆ.

ತಮಿಳುನಾಡಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳು ಈ ಪೂರೈಕಾ ತೊಂದರೆ ಹಿನ್ನೆಲೆಯಲ್ಲಿ ಬಂಡವಾಳದ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೆಲವು ಹೋಟೆಲ್‌ಗಳು ಬಂದ್‌ ಮಾಡುವ ಪರಿಸ್ಥಿತಿಯಲ್ಲಿವೆ.

ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಮುಖ್ಯಮಂತ್ರಿ ಗೆ ಪತ್ರ ಬರೆದು, ಸಿಲಿಂಡರ್ ಪೂರೈಕೆಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಪತ್ರದಲ್ಲಿ, “ಸಿಲಿಂಡರ್ ಸಿಗದೆ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ವಿತರಕರು ಪೂರೈಕೆ ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ನೋ ಸ್ಟಾಕ್ ಎಂದು ಹೇಳುತ್ತಿದ್ದು, ಬಹುತೇಕ ರೆಸ್ಟೋರೆಂಟ್ ಬಂದ್ ಮಾಡಲು ಎದುರಿಸುತ್ತಿದ್ದಾರೆ,” ಎಂದು ವಿವರಿಸಲಾಗಿದೆ.

ಅಸೋಸಿಯೇಷನ್ ಅವರು ಸರ್ಕಾರದ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿ, ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ಲೆನ್ಸ್ ಹಾಕಲು ಹಣಕ್ಕೆ ಬೇಡಿಕೆ: ಲೋಕಾ ಬಲೆಗೆ ಬಿದ್ದ ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ!

ತುಮಕೂರು:- ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆಯೋರ್ವರು ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಡಾ. ಸವಿತಾ ಲೋಕಾ ಬಲೆಗೆ ಬಿದ್ದ ನೇತ್ರಾ ಚಿಕಿತ್ಸಕಿ. ಉಪ್ಪಾರಹಳ್ಳಿ ನಿವಾಸಿ ಅವಿನಾಶ್ ಅವರ ತಾಯಿ ಕಣ್ಣಿಗೆ ಲೆನ್ಸ್ ಹಾಕಲು ಡಾ.ಸವಿತಾ ಅವರು ಹಣದ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಅವಿನಾಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮನೋಜ್ ಮೂಲಕ ಡಾ.ಸವಿತಾ ಲಂಚದ ಹಣ ಪಡೆದಾಗ, ಲೋಕಾಯುಕ್ತ ಡಿವೈಎಸ್ ಪಿ ಮಂಜುನಾಥ್ ನೇತೃತ್ವದ ತಂಡ ರೆಡ್ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಡಾ.ಸವಿತಾ ಮತ್ತು ಮನೋಜ್ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿದಿದೆ.

ವಿಶ್ವಕಪ್ ಗೆದ್ದಾಯ್ತು.. ಟೀಮ್ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

0

ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಗೆದ್ದ ನಂತರ ವಿಶೇಷ ಸಂಭ್ರಮಾಚರಣೆಯೊಂದಿಗೆ ಕೆಲವು ದಿನ ವಿಶ್ರಾಂತಿಗೆ ಹೋಗಿದೆ.

ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ಮುಗಿಸಿ ಆಟಗಾರರು ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ, “ಮುಂದೆ ತಂಡವನ್ನು ಮೈದಾನದಲ್ಲಿ ಯಾವಾಗ ನೋಡಬಹುದು?” ಎಂಬ ಪ್ರಶ್ನೆ ಈಗ ಪ್ರಸ್ತುತವಾಗಿದೆ.

ಟಿ20 ವಿಶ್ವಕಪ್ ಗೆದ್ದ ಬಳಿಕ, ಭಾರತ ತಂಡ 96 ದಿನಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದೆ ಇರುತ್ತದೆ. ಈ ವಿಶ್ರಾಂತಿ ಬಳಿಕ, ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ತೊಡಗಲಿದೆ. ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೆ ನಂತರ, ಅಫ್ಘಾನಿಸ್ತಾನ ವಿರುದ್ಧ 3 ಏಕದಿನ ಸರಣಿಯು ನಡೆಯಲಿದೆ. ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರು – ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಆಡಲಿದ್ದಾರೆ.

ಮಾರ್ಚ್ 28 ರಿಂದ ಭಾರತ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಕ್ಲಬ್ ತಂಡಗಳ ಪರವಾಗಿ ಆಡಲು ಪ್ರಾರಂಭಿಸುತ್ತಾರೆ. ಈ ಪಂದ್ಯಾವಳಿ ಫೈನಲ್ ಪಂದ್ಯ ಮೇ 31 ರಂದು ಮುಗಿಯಲಿದೆ. ಐಪಿಎಲ್ ನಂತರ, ಟೀಂ ಇಂಡಿಯಾ ಅಂತಾರಾಷ್ಟ್ರೀಯ ಮೈದಾನಕ್ಕೆ ಮರಳುತ್ತದೆ.

ಭಾರತ ತಂಡದ 2026 ರ ಪ್ರಮುಖ ಪ್ರವಾಸ ಮತ್ತು ಸರಣಿಗಳು:

  • ಜೂನ್ – ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಮತ್ತು 3 ಏಕದಿನ ಸರಣಿ.
  • ಜುಲೈ – ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲಿದೆ. ಈ ಪ್ರವಾಸದಲ್ಲಿ 5 ಟಿ20 ಮತ್ತು 3 ಏಕದಿನ ಪಂದ್ಯಗಳು ನಡೆಯುತ್ತವೆ.
  • ಆಗಸ್ಟ್ – ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
  • ಸೆಪ್ಟೆಂಬರ್-ಅಕ್ಟೋಬರ್ – ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಮತ್ತು 5 ಟಿ20 ಪಂದ್ಯಗಳು.
  • ಅಕ್ಟೋಬರ್-ನವೆಂಬರ್ – ನ್ಯೂಜಿಲೆಂಡ್ ಪ್ರವಾಸ, ಅಲ್ಲಿ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯುತ್ತವೆ.
  • ಡಿಸೆಂಬರ್ – ಶ್ರೀಲಂಕಾ ತಂಡ ಭಾರತಕ್ಕೆ ಬರುವಂತೆ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯುತ್ತವೆ.

ಈ ವೇಳಾಪಟ್ಟಿಯೊಂದಿಗೆ ಟೀಂ ಇಂಡಿಯಾ ತನ್ನ ಆಟಗಾರರನ್ನು ಹಲವಾರು ಸ್ಥಳಗಳಲ್ಲಿ ಹಾಗೂ ವಿವಿಧ ಫಾರ್ಮ್ಯಾಟ್‌ನಲ್ಲಿ ಬ್ಯುಸಿ ಇಡಲಿದೆ. ಕ್ರಿಕೆಟ್ ಅಭಿಮಾನಿಗಳು, ವಿಶೇಷವಾಗಿ ಟಿ20 ವಿಶ್ವಕಪ್ ಗೆದ್ದ ತಂಡವನ್ನು, ಮುಂದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೈದಾನದಲ್ಲಿ ನೋಡಿ ಸಂತೋಷ ಪಡುವ ನಿರೀಕ್ಷೆಯಲ್ಲಿದ್ದಾರೆ.

ಎತ್ತಿನಹೊಳೆ, ಮೇಕೆದಾಟು ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್ ಡಿ ದೇವೇಗೌಡರು ಆಕ್ರೋಶ

ದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.  ದೇವೇಗೌಡರು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ವಿಳಂಬವಾಗಿರುವ ಬಗ್ಗೆ ಕಿಡಿಕಾರಿದ್ದಾರೆ.

ರಾಜ್ಯಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸದ ಕಾರಣ ರಾಜ್ಯ ಸರ್ಕಾರವೇ ಉತ್ತರದಾಯಿಯಾಗಿದೆ; ಕೇಂದ್ರವನ್ನು ಅನಗತ್ಯವಾಗಿ ದೂರುತ್ತಿದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆಯ ವೆಚ್ಚ ಮೊದಲು 8,000 ಕೋಟಿ ರೂ. ಇದ್ದರೆ, ಈಗ 33,000 ಕೋಟಿ ರೂ. ಮೀರಿದೆ, ಆದರೂ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ನೀರು ತಲುಪಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರ ಹತ್ತಿರ ಅರಸೀಕೆರೆಗೂ ನೀರು ಬಂದಿಲ್ಲ. ಮೇಕೆದಾಟು ಯೋಜನೆ ಕಾರ್ಯಗತಗೊಳ್ಳುವುದಕ್ಕೆ ಕೇಂದ್ರದ ಅರಣ್ಯ, ಪರಿಸರ ನಿಯಮಗಳು, ಆನೆ ಕಾರಿಡಾರ್ ಹಾಗೂ ವನ್ಯಜೀವಿ ಸಂಕಷ್ಟಗಳು ಅಡ್ಡಿಯಾಗಿವೆ.

ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ಜನರಿಗೆ ಕೊಳಚೆ ನೀರು ನೀಡಲಾಗುತ್ತಿದೆ, ಬೆಳೆಗಳು ವಿಷಕಾರಿಯಾಗುತ್ತಿವೆ, ಮತ್ತು ಜನರಿಗೆ ಕಷ್ಟಗಳು ಹೆಚ್ಚಾಗುತ್ತಿವೆ ಎಂದು ಹೆಚ್.ಡಿ. ದೇವೇಗೌಡರು ಟೀಕಿಸಿದರು.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ: ವಂದೇ ಭಾರತ್ ರೈಲುಗಳ ನಿಲುಗಡೆ ಸಮಯ ಬದಲಾವಣೆ!

ಬೆಂಗಳೂರು: ನೈರುತ್ಯ ರೈಲ್ವೆ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ನಿಗದಿತ ನಿಲ್ದಾಣಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಹೊಸ ವೇಳಾಪಟ್ಟಿಗಳು ಮಾರ್ಚ್ 15ರಿಂದ ಜಾರಿಗೆ ಬರುತ್ತವೆ.

ಮುಖ್ಯ ಬದಲಾವಣೆಗಳು:

  1. ರೈಲು 20669 (ಹುಬ್ಬಳ್ಳಿ–ಪುಣೆ) – ಬೆಳಗಾವಿ: 07:05–07:10, ಘಟಪ್ರಭಾದ: 07:48–07:50
  2. ರೈಲು 20661 (ಬೆಂಗಳೂರು–ಧಾರವಾಡ) – ದಾವಣಗೆರೆ: 09:30–09:32, ಹಾವೇರಿ: 10:20–10:22, ಹುಬ್ಬಳ್ಳಿ: 11:15–11:20
  3. ರೈಲು 20662 (ಧಾರವಾಡ–ಬೆಂಗಳೂರು) – ಹಾವೇರಿ: 14:48–14:50, ದಾವಣಗೆರೆ: 15:33–15:35, ಯಶವಂತಪುರ: 19:21–19:23
  4. ರೈಲು 26751 (ಬೆಳಗಾವಿ–ಬೆಂಗಳೂರು) – ಹಾವೇರಿ: 08:42–08:44, ದಾವಣಗೆರೆ: 09:28–09:30, ತುಮಕೂರು: 12:15–12:17, ಯಶವಂತಪುರ: 13:23–13:25
  5. ರೈಲು 20704 / 20703 (ಯಶವಂತಪುರ–ಕಾಚಿಗುಡ) – ಹಿಂದೂಪುರ ನಿಲ್ದಾಣ: 12:17–12:19 / 15:55–15:57
  6. ರೈಲು 22231 / 22232 (ಕಲಬುರಗಿ–ಬೆಂಗಳೂರು) – ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ: 11:13–11:15 / 16:45–16:47, ಯಲಹಂಕ: 12:58–13:00 / 15:09–15:11
  7. ರೈಲು 20642 (ಕೊಯಮತ್ತೂರು–ಬೆಂಗಳೂರು) – ಹೊಸೂರು ನಿಲ್ದಾಣ: 12:13–12:15

ಇವುಗಳನ್ನು ಗಮನದಲ್ಲಿ ಇಟ್ಟು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕು.

ಆಲ್ಕೋಹಾಲ್ ಜೊತೆಗೆ ಸೇವಿಸಬಾರದ 5 ಪ್ರಮುಖ ಆಹಾರಗಳು!

0

ಇಂದಿನ ವೇಗದ ಜೀವನಶೈಲಿಯಲ್ಲಿ ಮದ್ಯಪಾನವು ಒತ್ತಡ ಕಡಿಮೆ ಮಾಡಲು ಅಥವಾ ಸಂತೋಷ ಹಂಚಿಕೊಳ್ಳಲು ಹಲವರು ಮಾಡುವ ಹಬ್ಬವಾಗಿದೆ. ಆದರೆ ಮದ್ಯಪಾನದ ವೇಳೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಆಲ್ಕೋಹಾಲ್‌ನೊಂದಿಗೆ ತಪ್ಪಿಸಬೇಕಾದ ಆಹಾರಗಳು:

  1. ಬ್ರೆಡ್ – ಬಿಯರ್ ಅಥವಾ ಇತರ ಮದ್ಯದೊಂದಿಗೆ ಬ್ರೆಡ್, ಸ್ಯಾಂಡ್‌ವಿಚ್, ಬರ್ಗರ್‌ಗಳು ಸೇವಿಸುವುದರಿಂದ ಯೀಸ್ಟ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಜೀರ್ಣಾಂಗದ ಒತ್ತಡ ಹೆಚ್ಚಾಗುತ್ತದೆ. ಬದಲಿಗೆ ಬೇಯಿಸಿದ ತರಕಾರಿಗಳು ಅಥವಾ ಸಲಾಡ್ ಸೇವನೆ ಮಾಡುವುದು ಉತ್ತಮ.
  2. ಚಾಕೊಲೇಟ್ – ಡಾರ್ಕ್ ಚಾಕೊಲೇಟ್‌ನಲ್ಲಿ ಕೆಫೀನ್ ಮತ್ತು ಕೋಕೋ ಇರುವುದರಿಂದ, ಆಲ್ಕೋಹಾಲ್ ಜೊತೆಗೆ ಸೇವಿಸಿದರೆ ಆಸಿಡ್ ರಿಫ್ಲಕ್ಸ್, ಗ್ಯಾಸ್ ಮತ್ತು ಎದೆಯುರಿ ಸಮಸ್ಯೆ ಉಂಟಾಗಬಹುದು.
  3. ಕಾಳುಗಳು – ಕಡ್ಲೆ, ಬಟಾಣಿ, ಕಿಡ್ನಿ ಬೀನ್ಸ್ ಮುಂತಾದ ಕಾಳುಗಳು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತವೆ. ಆಲ್ಕೋಹಾಲ್ ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಜೀರ್ಣಕ್ಕೆ ಕಾರಣವಾಗಬಹುದು.
  4. ಕರಿದ ತಿಂಡಿಗಳು – ಚಿಪ್ಸ್, ಫ್ರೆಂಚ್ ಫ್ರೈಸ್, ಡೀಪ್ ಫ್ರೈಡ್ ಆಹಾರಗಳು ಉಪ್ಪು ಮತ್ತು ಕೊಬ್ಬಿನ ಪ್ರಮಾಣ ಹೆಚ್ಚು ಹೊಂದಿರುವುದರಿಂದ ದೇಹದ ನಿರ್ಜಲೀಕರಣ ಹೆಚ್ಚಿಸುತ್ತದೆ. ಮರುದಿನ ತಲೆನೋವು, ಆಯಾಸಕ್ಕೆ ಕಾರಣವಾಗಬಹುದು.
  5. ಕಿತ್ತಳೆ ಹಣ್ಣು – ಸಿಟ್ರಸ್ ಹಣ್ಣುಗಳು (ಕಿತ್ತಳೆ, ನಿಂಬೆ ಇತ್ಯಾದಿ) ಹುಳಿಯಾಗಿದ್ದು ಜೀರ್ಣಕ್ರಿಯೆಗೆ ತೊಂದರೆ, ಹೊಟ್ಟೆ ಸುಡುವಿಕೆ ಉಂಟುಮಾಡಬಹುದು.

ಮದ್ಯಪಾನ ಮಾಡುವಾಗ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ತಪ್ಪಿಸಲು ಬ್ರೆಡ್, ಚಾಕೊಲೇಟ್, ಕಾಳುಗಳು, ಕರಿದ ತಿಂಡಿಗಳು, ಕಿತ್ತಳೆ ಹಣ್ಣು ಮುಂತಾದ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಬದಲಾಗಿ ಬೇಯಿಸಿದ ತರಕಾರಿಗಳು, ಸಲಾಡ್, ನೀರು ಹೆಚ್ಚು ಸೇವಿಸುವುದು ಉತ್ತಮ.

 

ಚಾಮರಾಜನಗರದಲ್ಲಿ ವೃದ್ಧೆಯ ನಿಗೂಢ ಸಾವು: ಚಿನ್ನಾಭರಣ, ನಗದು ಮಾಯ

ಚಾಮರಾಜನಗರ: ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ನಡೆದಿದೆ.

ಮಕ್ಕಳ ಸಹಾಯವಿಲ್ಲದೆ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಿದ್ದಮ್ಮ (84) ಅವರ ಸಾವಿಗೆ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿವೆ. ಮೃತ ಸಿದ್ದಮ್ಮ ಅವರಿಗೆ ಮೂವರು ಮಕ್ಕಳಿದ್ದರೂ ಸ್ವತಂತ್ರವಾಗಿ ಬದುಕಬೇಕೆಂದು ಬಯಸಿದ ಅವರು ಗ್ರಾಮದಲ್ಲೇ ಸಣ್ಣ ಪೆಟ್ಟಿಗೆ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಸೋಮವಾರ ಬೆಳಗ್ಗೆ ಆಗಿದ್ದರೂ ಮನೆಬಿಟ್ಟು ಹೊರಬರದೇ ಇದ್ದದ್ದು ಹಾಗೂ ಅಂಗಡಿಯನ್ನೂ ತೆರೆಯದಿದ್ದ ಹಿನ್ನೆಲೆ ಎದುರು ಮನೆಯವರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿದ್ದಮ್ಮ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಸಿದ್ದಮ್ಮ ಅವರ ಮೈಮೇಲೆ ಇದ್ದ ಚಿನ್ನದ ಓಲೆ, ಚಿನ್ನದ ಸರ ಹಾಗೂ ಸೆರಗಿನಲ್ಲಿಟ್ಟಿದ್ದ ಸುಮಾರು 50 ಸಾವಿರ ರೂಪಾಯಿ ನಗದು ಕಾಣೆಯಾಗಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಹಣ ಮತ್ತು ಚಿನ್ನದ ಆಸೆಗೆ ವೃದ್ಧೆಯನ್ನು ಕೊಲೆ ಮಾಡಲಾಗಿದೆ ಎಂದು ಮಕ್ಕಳಿಂದ ಆರೋಪ ಕೇಳಿಬಂದಿದೆ.

ಮಾಹಿತಿ ಪ್ರಕಾರ, ವಯಸ್ಸಾದರೂ ಸಿದ್ದಮ್ಮ ಆರೋಗ್ಯವಾಗಿಯೇ ಇದ್ದರು. ಮಳೆಗಾಲಕ್ಕೂ ಮುನ್ನ ಮನೆ ದುರಸ್ತಿ ಮಾಡಿಸಬೇಕೆಂದು ಹೇಳುತ್ತಿದ್ದ ಅವರು ಸುಮಾರು 50 ಸಾವಿರ ರೂಪಾಯಿ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಮಾಂಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿನ್ನಾಭರಣ ಮತ್ತು ಹಣಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಈ ಸಂಬಂಧ ಪೊಲೀಸರು ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೃದ್ಧೆಯ ಸಾವಿನ ನಿಜವಾದ ಕಾರಣ ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ.

ವದಂತಿಗಳಿಗೆ ಬ್ರೇಕ್: ನಿವೃತ್ತಿ ಯೋಚನೆ ಇಲ್ಲ ಎಂದ ಸೂರ್ಯಕುಮಾರ್!

0

2024ರ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್ ತಂಡವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರೂ ಆಟಗಾರನಾಗಿ ಸೂರ್ಯಕುಮಾರ್ ಕಳೆದ ಕೆಲವು ಸಮಯದಲ್ಲಿ ಏರಿಳಿತಗಳನ್ನು ಕಂಡಿದ್ದರು. ಟಿ20 ವಿಶ್ವಕಪ್‌ಗೆ ಮುನ್ನ ಸುಮಾರು ಒಂದು ವರ್ಷ ರನ್ ಬರ ಎದುರಿಸಿದ್ದ ಅವರು, ವಿಶ್ವಕಪ್ ಸಮೀಪಿಸುತ್ತಿದ್ದಂತೆ ಮತ್ತೆ ಉತ್ತಮ ಫಾರ್ಮ್ ಕಂಡುಕೊಂಡರು.

ಸೂರ್ಯಕುಮಾರ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು.

ಇದರ ನಡುವೆ 35 ವರ್ಷದ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಫೈನಲ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ನಿವೃತ್ತಿ ಕುರಿತು ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಸೂರ್ಯಕುಮಾರ್, “ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ನಿವೃತ್ತಿಯ ಬಗ್ಗೆ ಯಾಕೆ ಯೋಚಿಸಬೇಕು? ನಾನು ಇನ್ನೂ ನಿವೃತ್ತಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ,” ಎಂದು ಸ್ಪಷ್ಟಪಡಿಸಿದರು.

ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಯಾವುದೇ ರನ್ ಗಳಿಸದೆ ಔಟಾದರೂ, ಸಂಪೂರ್ಣ ಪಂದ್ಯಾವಳಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು. ಒಟ್ಟು ಒಂಬತ್ತು ಪಂದ್ಯಗಳಲ್ಲಿ 242 ರನ್ ಗಳಿಸಿದ ಸೂರ್ಯಕುಮಾರ್, 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಆರಂಭಿಕ ಪಂದ್ಯದಲ್ಲಿನ ಅರ್ಧಶತಕವೂ ಸೇರಿದೆ.

 

error: Content is protected !!