Home Blog Page 97

ಸರ್ಕಾರ ರೈತರ ಸಾಲ ವಸೂಲಾತಿ ನಿಲ್ಲಿಸಿ, ಹೊಸ ಸಾಲ ನೀಡಲಿ: ಬಸವರಾಜ ಬೊಮ್ಮಾಯಿ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವ ಮುಸ್ಲೀಂ ಮೌಲ್ವಿ ಕುಳಿತಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಯ ವಿರುದ್ದ ವಿಜಯಪುರದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.

ಅವರಿಗೆ ಐಎಸ್ ಐ ಸಂಪರ್ಕ ಇರುವ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಕಾಂಗ್ರೆಸ್ ನವರು ಲಘುವಾಗಿ ಪರಿಗಣಿಸಿದ್ದರು. ಆದರೆ, ಅವರಲ್ಲಿ ಐದಾರು ಜನರು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಗಳು ಮುಸ್ಲೀಂ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿರುವುದು ಓಲೈಕೆ ರಾಜಕಾರಣದ ಮುಂದುವರೆದ ಭಾಗ ಅಲ್ಲದೇ ಪ್ರಚೋದನಾಕಾರಿಯಾಗಿಯೂ ಇದೆ.

ಇಡೀ ಕಾಂಗ್ರೆಸ್ಸಿನ ನೀತಿ ನೋಡಿದಾಗ ಅವರ ಸಚಿವ ಸಂಪುಟದ ಸಹೊದ್ಯೋಗಿ ಸ್ಪೀಕರ್ನ್ ಅಲ್ಪ ಸಂಖ್ಯಾತರನ್ನು ಮಾಡಿದ್ದೇವೆ ಎಲ್ಲರೂ ಅವರ ಮುಂದೆ ಜಿ ಹುಜುರ್ ಅನಬೇಕು ಎನ್ನುತ್ತಾರೆ ಇದೊಂದು ಪ್ರಚೋದನೆ. ಸಿಎಂ ಆದವರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ದೇಶದ ಸಂಪತ್ತನ್ನು ಬೆಳೆಸಲು ಎಲ್ಲರೂ ದುಡಿಯಬೇಕು. ಅದು ದೇಶಕ್ಕೆ ಇರುತ್ತದೆ. ಅದನ್ನು ಹೇಳುವ ಬದಲು ಒಂದು ಸಮುದಾಯಕ್ಕೆ ಸಂಪತ್ತು ಹಂಚಿಕೆ ಮಾಡುವ ಬಗ್ಗೆ ಹೇಳುತ್ತಾರೆ‌. ಇದು ಸಮಾಜ ಒಡೆಯುವ ಕೆಲಸ ಎಂದು ಹೇಳಿದರು.

ರೈತರ ಸಾಲ ವಸೂಲಿ ನಿಲ್ಲಿಸಲಿ
ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಹಣ ಬಿಡಿಗಡೆ ಮಾಡಿಲ್ಲ. ರೈತರಿಗೆ ಬೆಳೆ ಇಲ್ಲ, ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಸರ್ಕಾರ ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಹಿಂದೆ ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ ಡಿಬಿಟಿ ಮುಖಾಂತರ ರೈತರಿಗೆ ಸುಮಾರು 2000 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಅವರು ಕೇವಲ 2000 ಸಾವಿರ ನೀಡುತ್ತೇನೆ ಎನ್ನುತ್ತಾರೆ.

ಇದು ರೈತರಿಗೆ ಅವಮಾನ ಮಾಡಿದಂತೆ. ಕೇಂದ್ರದ ನಿಯಮಂತಾದರೂ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್ ಗೆ ಕನಿಷ್ಟ 6000 ರೂ, ನೀರಾವರಿಗೆ 18 ಸಾವಿರ ರೂ. ನೀಡುವ ಕೆಲಸ ಮಾಡಬೇಕು. ನಾವು ರೈತರಿಗೆ ಕಿಸಾನ್ ಸಮ್ಮಾನ್ ನೀಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ರೈತರಿಂದ ಸಾಲ ವಸೂಲಿ ನಿಲ್ಲಿಸಬೇಕು. ಕೂಡಲೆ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ

0

ಥಿಯೇಟರ್ ನಲ್ಲಿ ಧೂಳ್ ಎಬ್ಬಿಸಿದ್ದ ಘೋಸ್ಟ್ ಸಿನಿಮಾ ಜೀ5 ಒಟಿಟಿಯಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನವೆಂಬರ್ 17ರಂದು ಬಿಡುಗಡೆಯಾಗಿದ್ದ ಶಿವಣ್ಣ ಚಿತ್ರ ಕೆಲವೇ ದಿನಗಳಲ್ಲಿ 200 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡಿದೆ. ಘೋಸ್ಟ್ ಸಿನಿಮಾದ ಈ ಸಕ್ಸಸ್ನ್ ಸೆಲಬ್ರೇಟ್ ಮಾಡೋದಕ್ಕೆ ಶ್ರೀ ಮುತ್ತು ನಿವಾಸದಲ್ಲೇ ಮಾಧ್ಯಮಮಿತ್ರರನ್ನ ಆಹ್ವಾನಿಸಿದ್ದ ಶಿವಣ್ಣ, ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಘೋಸ್ಟ್ ಪಾರ್ಟ್-2, ಭೈರತಿ ರಣಗಲ್ ಸಿನಿಮಾಗಳ ಬಗ್ಗೆ ಅಪ್ಡೇುಟ್ ನೀಡಿದ ಹ್ಯಾಟ್ರಿಕ್ ಹೀರೋ, ತನ್ನ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಇರುವುದನ್ನ ಖಚಿತಪಡಿಸಿದರು.

ಶಿವಣ್ಣನ ‘ಭಜರಂಗಿ 2’, ‘ವೇದ’ ಹಾಗೂ ‘ಘೋಸ್ಟ್’ ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಸ್ವತ: ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ. “ಜೀ 5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿ ಇದೆ ಅಂತ ಅನಿಸುತ್ತೆ. ಕನ್ನಡ ಡಬ್ ಸಿನಿಮಾ ನೋಡುತ್ತಾರೆ. ಆದರೆ, ಕನ್ನಡ ಸಿನಿಮಾ ನೋಡೋದು ಕಡಿಮೆ. ಅದೇ ಈಗ ಹೆಚ್ಚಾಗಿದೆ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ಅಲ್ಲೆಲ್ಲ ಚೆನ್ನಾಗಿಯೇ ರೆಸ್ಪಾನ್ಸ್ ಸಿಕ್ಕಿದೆ.” ಎಂದು ಶಿವಣ್ಣ ಹೇಳಿದ್ದಾರೆ.

‘ಹಾಯ್ ನಾನ್ನ’ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನ್ಯಾಚುರಲ್ ಸ್ಟಾರ್ ನಾನಿ ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದರು. ಶಿವಣ್ಣ ನಾನಿ ಭೇಟಿ ಬೆನ್ನಲ್ಲೆ ಇವರಿಬ್ಬರ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಗುಲ್ಲೆದಿತ್ತು. ಅದಕ್ಕೂ ಪ್ರತಿಕ್ರಿಯಿಸಿರುವ ಶಿವಣ್ಣ, ಸಿನಿಮಾವೊಂದಕ್ಕೆ ಗೆಸ್ಟ್ ಅಪಿಯರೆನ್ಸ್ ಮಾಡಬೇಕು ಎಂದು ಫೋನ್ ಮಾಡಿದ್ದೆ. ತಕ್ಷಣ ಯಸ್ ಎಂದಿದ್ದರು. ನಾನೇ ಅಲ್ಲಿಗೆ ಬರುತ್ತೇನೆ ಎಂದಿದ್ದೆ. ಇಲ್ಲ ನಾನೇ ಅಲ್ಲಿಗೆ ಬರುತ್ತೇನೆ. ಆಮೇಲೆ ಅದು ಬೇಡ ಅನಿಸಿತು. ಇನ್ನೊಮ್ಮೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡೋಣಾ ಅಂದುಕೊಂಡಿದ್ದೇವೆ ಎಂದರು.

ವಿದೇಶದಲ್ಲಿಯೂ ಘೋಸ್ಟ್ ಸಿನಿಮಾಗೆ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಶ್ರೀನಿ ಹಾಗೂ ಶಿವಣ್ಣ, “ಆಸ್ಟ್ರೇಲಿಯಾ, ಅಮೆರಿಕಾ, ಯುಕೆಯಲ್ಲಿ ಹೆಚ್ಚು ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂತು. ಆದರೂ, ಚೆನ್ನಾಗಿ ಹೋಯ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸಂದೇಶ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿ ‘ಘೋಸ್ಟ್’ ನಿರ್ಮಾಣವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಅಬ್ಬರ ತೋರಿತ್ತು ಸಿನಿಮಾ. ಇನ್ನು ಈ ಸಿನ್ಮಾಗೆ ಅರ್ಜುನ್‌ ಜನ್ಯಾ ಸಂಗೀತ ಇದೆ. ನಟ ಶಿವಣ್ಣ ಅವರ ಜೊತೆಗೆ ಮಲಯಾಳಂ ನಟ ಜಯರಾಮ್‌ & ಬಾಲಿವುಡ್ ನಟ ಅನುಪಮ್‌ ಖೇರ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಮತ್ತು ಇತರರು ಸಾಥ್ ನೀಡಿದ್ದರು. ಹೀಗಾಗಿ ಸಿನಿಮಾ ಭಾರತದ ಮೂಲೆ ಮೂಲೆಯಲ್ಲು ಸದ್ದು ಮಾಡಿತ್ತು. ಈಗ ಓಟಿಟಿ ಅಂಗಳದಲ್ಲೂ ದಾಖಲೆ ಬರೆದಿದೆ.

ವಿಜಯಪುರ ಜಿಲ್ಲೆ ತಾಳಿಕೋಟಿ ಪಟ್ಟಣದಲ್ಲಿ ವ್ಯಕ್ತಿ ಶವ ಪತ್ತೆ!

0

ವಿಜಯಪುರ : ಜಿಲ್ಲೆಯ ತಾಳಿಕೋಟೆ ಪಟ್ಟಣದ ಮದರಕಲ್ ಮೆಗಾಮಾರ್ಟ್ ಎದುರು ವ್ಯಕ್ತಿ ಶವ ಪತ್ತೆಯಾಗಿದ ಘಟನೆ ಬೆಳಕಿಗೆ ಬಂದಿದೆ. ಕೊಡಗಾನೂರು ಗ್ರಾಮದ ಚಿದಾನಂದ ಶಂಕ್ರಪ್ಪ ಬಡಿಗೇರ (31) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿ ವ್ಯಕ್ತಿ ಸಾವನ್ನಪ್ಪಿರುವ ವ್ಯಕ್ತಿಯ ಶವ ಪತ್ತೆಯಾಗಿದೆ. ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರ ಸಜೀವ ದಹನ

0

ಬೆಳಗಾವಿ: ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ಟಿಪ್ಪರ್ ಮತ್ತು ಕಾರಿನ ಮಧ್ಯೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಇಬ್ಬರ ಸಜೀವ ಧಹನವಾಗಿರುವ ಘಟನೆ ದೇವಗಿರಿ ಬಂಬರಗಾ ಕ್ರಾಸ್ ಬಳಿ ದುರ್ಘಟನೆ ನಡೆದಿದೆ ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತ ದುರ್ದೈವಿಗಳು‌. ಸಂಬಂಧಿಕರ ಮದುವೆ ಮುಗಿಸಿಕೊಂಡು ರಾತ್ರಿ ಬಂಬರಗಾ ಗ್ರಾಮಕ್ಕೆ ಬರುವಾಗ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಆಗಿದೆ.

ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿದ್ದು ಅಪಘಾತದ ರಭಸಕ್ಕೆ ಟಿಪ್ಪರ್ ನ ಡಿಸೇಲ್ ಟ್ಯಾಂಕ್ ಒಡೆದು ಹೊತ್ತಿ ಉರಿದಿದ್ದು ಈ ವೇಳೆ ಕಾರಿನಲ್ಲಿದ್ದ ನಾಲ್ವರು ಪೈಕಿ ಇಬ್ಬರು ಸಜೀವ ದಹನ ಆಗಿದ್ದು ಗಂಭೀರ ಗಾಯಗೊಂಡ ಮತ್ತಿಬ್ಬರನ್ನ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಗಂಭೀರ ಗಾಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.ಸ್ಥಳಕ್ಕೆ ಡಿಸಿಪಿ ಸ್ನೇಹಾ, ಎಸಿಪಿ ಮತ್ತು ಕಾಕತಿ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.ಅಪಘಾತ ಆಗ್ತಿದ್ದಂತೆ ಪೊಲೀಸ್ ಠಾಣೆಗೆ ತೆರಳಿ ಟಿಪ್ಪರ್ ಡ್ರೈವರ್ ಶರಣಾಗಿದ್ದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದವರ ಬಂಧನ

0

ದಾವಣಗೆರೆ: ಕಾನೂನು ಬಾಹಿರವಾಗಿ ಸರ್ಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ದಾವಣಗೆರೆಯ ಆರ್ ಎಂ ಸಿ ಯಾರ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಭಾರತ್ ಕಾಲೋನಿ ನಿವಾಸಿ ಆಟೋ ಚಾಲಕ ಮಲ್ಲೇಶಪ್ಪ (50), ಬಾಷಾ ನಗರದ ಹೆಚ್ ಪಿ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಹೆಲ್ ರಜಾ (20) ಬಂಧಿತ ಆರೋಪಿಗಳು.

ಬಂಧಿತರಿಂದ ಹೆಚ್ ಪಿ ಕಂಪೆನಿ ಹೆಸರಿನ 26 ತುಂಬಿದ ಸಿಲಿಂಡರ್‌ಗಳು, 12 ಹೆಚ್ ಪಿ ಹೆಸರಿನ ಖಾಲಿ ಸಿಲಿಂಡರ್ ಗಳು, 3 ಸಣ್ಣ ಖಾಲಿ ಸಿಲಿಂಡರ್ ಗಳು, ಗ್ಯಾಸ್ ರೀಪಿಲ್ಲಿಂಗ್ ಕಡ್ಡಿ, ಗ್ಯಾಸ್ ರಿಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ತೂಕದ ಯಂತ್ರಗಳು ಹಾಗೂ ಒಂದು ಗೊಡ್ಸ್ ಆಪೆ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.

ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಪಾಳು ಬಿದ್ದಿರುವ ಕೆ. ಎಂ ಸಿ ಕಾಂಪೌಂಡ್ ಒಳಗಿನ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಪರವಾನಿಗೆ ಇಲ್ಲದೇ ಅಕ್ರಮವಾಗಿ, ಗ್ಯಾಸ್ ರೀ ಪಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಡಿಸಿ ಆರ್ ಬಿ ಘಟಕದ ಪೊಲೀಸ್ ನಿರೀಕ್ಷಕ ರುದ್ರಪ್ಪ ಎಲ್. ವಿದ್ಯಾನಗರ ಪೊಲೀಸ್ ಠಾಣೆ ನಿರೀಕ್ಷಕಿ ಪ್ರಭಾವತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗ ರಾಘವೇಂದ್ರ, ಮಜೀದ್, ಅಶೋಕ್, ಬಾಲಾಜಿ, ನಟರಾಜ್, ಆಂಜನೇಯ, ಮಾರುತಿ ರವರನ್ನು ಒಳಗೊಂಡ ತಂಡ ಸ್ಥಳಕ್ಕೆ ದಾಳಿ ಮಾಡಿದ್ದು, ಕಾನೂನು ಬಾಹಿರವಾಗಿ ಗ್ಯಾಸ್ ರಿಪಿಲ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಅಬಕಾರಿ ಪೊಲೀಸರ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

0

ಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಹರಣಶಿಕಾರಿ ಕಾಲೋನಿಯಲ್ಲಿರುವ ಬಾಲಪ್ಪ ಪುನೋಜಪ್ಪ ಹರಣಶಿಕಾರಿ ಎಂಬುವವನಿಗೆ ಸೇರಿದ ವಾಸದ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿ, ಅಂದಾಜು 15 ಸಾವಿರ ರೂ. ಮೌಲ್ಯದ 54 ಪೌಚ್‌ಗಳಲ್ಲಿಯ ಒಟ್ಟು 348 ಗ್ರಾಂ ಒಣಗಿದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಅಪರ ಅಬಕಾರಿ ಆಯುಕ್ತರು, ಅಪರಾಧ ಕೇಂದ್ರಸ್ಥಾನ ಬೆಳಗಾವಿ ಇವರ ನಿರ್ದೇಶದನಲ್ಲಿ, ಅಬಕಾರಿ ಜಂಟಿ ಆಯುಕ್ತರು, ಹೊಸಪೇಟೆ ವಿಭಾಗ ಮತ್ತು ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಗದಗ ಇವರ ಮಾರ್ಗದರ್ಶನದಲ್ಲಿ ಗದಗ ವಲಯದ ಅಬಕಾರಿ ನಿರೀಕ್ಷಕಿ ನೇತ್ರಾ ಉಪ್ಪಾರ, ಸಿಬ್ಬಂದಿಗಳಾದ ಆಶಾರಾಣಿ ಗುಡದಾರ, ಪೇದೆಗಳಾದ ನಜೀರಸಾಬ ಖುದಾವಂದ, ಮಂಜುನಾಥಗೌಡ ರಾಯನಗೌಡ್ರ, ಅಂಬೋಜಿ ಹಾಳಕೇರಿ, ಚಾಲಕ ರಮೇಶ ಬೆಣಗಿ ಮತ್ತು ಪಂಚರುಗಳೊಂದಿಗೆ ರಾತ್ರಿ ದಾಳಿ ನಡೆಸಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಾದ ತಿಮ್ಮಾಪುರ ಗ್ರಾಮದ ಬಾಲಪ್ಪ ಪುನೋಜಪ್ಪ ಹರಣಶಿಕಾರಿ(52) ಹಾಗೂ ರೋಣ ತಾಲೂಕಿನ ಅಬ್ಬಿಗೇರಿಯ ಯಲ್ಲಪ್ಪ ಫಕ್ಕೀರಪ್ಪ ತೊಂಡಿಹಾಳ(37) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗದಗ ವಲಯ ಕಚೇರಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

0

ಕೆ.ಆರ್.ಜಿ ಸ್ಟುಡಿಯೋಸ್‍ ಮತ್ತು ಟಿ.ವಿ.ಎಫ್‍ ಮೋಷನ್‍ ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯವಾಗಿದೆ.30 ದಿನಗಳ ಕಾಲ ನಡೆದ ಈ ಮೊದಲ ಹಂತದ ಚಿತ್ರೀಕರಣದಲ್ಲಿ ದಿಗಂತ್‍, ಧನ್ಯಾ ರಾಮ್‍ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ ಮುಂತಾದ ಪ್ರತಿಭಾವಂತ ಕಲಾವಿದರು ಸಂತೋಷದಿಂದ ಚಿತ್ರೀಕರಣ ಮುಗಿಸಿದರೆ.

ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು ಸದ್ಯದಲ್ಲೇ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.‘ಪೌಡರ್’ ಒಂದು ಹಾಸ್ಯಮಯ ಚಿತ್ರವಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವಾಗಲಿದೆ. ಈ ಚಿತ್ರಕ್ಕೆ ಜನಾರ್ದನ್‍ ಚಿಕ್ಕಣ್ಣ ಕಥೆ ಬರೆದು ನಿರ್ದೇಶಿಸುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್‍ ಮತ್ತು ಟಿ.ವಿ.ಎಫ್‍ ಮೋಷನ್‍ ಪಿಕ್ಚರ್ಸ್ ಜೊತೆಯಾಗಿ ನಿರ್ಮಿಸಿವೆ. 2024ರ ಏಪ್ರಿಲ್‍ನಲ್ಲಿ ‘ಪೌಡರ್’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಕೃಷಿ ಇಲಾಖೆಯ ಖಾಲಿ ಹುದ್ದೆಗಳಿಗೆ ಎರಡು ಹಂತದಲ್ಲಿ ನೇಮಕಾತಿ: ಸಚಿವ ಎನ್.ಚಲುವರಾಯಸ್ವಾಮಿ

0

ಬೆಳಗಾವಿ: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಈ ಹುದ್ದೆಗಳಿಗೆ ಎರೆಡು ಹಂತದಲ್ಲಿ ನೇಮಕಾತಿಯ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಹೇಳಿದರು. ವಿಧಾನಸಭಾ ಅಧಿವೇಶನದಲ್ಲಿ ಬೀಳಗಿ ಶಾಸಕ ಪಾಟೀಲ್.ಜೆ.ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿವ ವೇಳೆ ನಡೆದ ಚರ್ಚೆಯಲ್ಲಿ, ಅವರು ಈ ಮಾಹಿತಿಯನ್ನು ಸದನಕ್ಕೆ ನೀಡಿದರು.  ಕೃಷಿ ಇಲಾಖೆಯಲ್ಲಿ ಶೇ.60 ರಷ್ಟು ಹುದ್ದೆಗಳ ಕೊರತೆ ಇದೆ. ಇದರಿಂದಾಗಿ ಹೋಬಳಿ ಹಾಗೂ ಗ್ರಾಮಗಳಲ್ಲಿ ಅಧಿಕಾರಿಗಳು ತೆರಳಿ ಕ್ಷೇತ್ರ ಕಾರ್ಯನಿರ್ವಹಿಸುವಲ್ಲಿ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನೇಮಕಾತಿ ಮಾಡುವ ಮೂಲಕ ಶೀಘ್ರವೇ ಬಗೆಹರಿಸಲಾಗುವುದು.

ಸರ್ಕಾರ ಕೃಷಿ, ನೀರಾವರಿ ಹಾಗೂ ರೈತರ ಜಮೀನ ರಸ್ತೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಸದ್ಯ ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಹಾಗೂ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ತೆರಳಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಇದನ್ನು ತಡೆಗಟ್ಟಲು ರೈತರಿಗೆ ಭೂ ಫಲವತ್ತೆ ಕುರಿತು ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಮಣ್ಣು ಪರೀಕ್ಷೆಯ ಮೂಲಕ ಸಮತೋಲನ ಪ್ರಮಾಣ ರಸಗೊಬ್ಬರಗಳ ಬಳಕೆಗೆ ಶಿಫಾರಸ್ಸು ಮಾಡಲಾಗುತ್ತಿದೆ. ಸಾವಯವ, ಜೈವಿಕ,ನ್ಯಾನೋ ಹಾಗೂ ನೈಸರ್ಗಿಕ ಗೊಬ್ಬರ, ಲಘುಫೋಷಕಾಂಶಗಳು ಮತ್ತು ಮಣ್ಣು ಸುಧಾರಕಗಳ ಬಳಕೆ ಬಗ್ಗೆ ರೈತರಿಗೆ ವೈಜ್ಞಾನಿಕವಾಗಿ ಸಲಹೆ ನೀಡಲಾಗುತ್ತಿದೆ. ಮಣ್ಣಿನ ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನದಡಿ ಹಸಿರೆಲೆ ಗೊಬ್ಬರದ ಬೀಜಗಳನ್ನು ಶೇ.75ರ ಸಹಾಯಧನಲ್ಲಿ ರೈತÀ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರೂ.3 ಕೋಟಿ ಒದಗಿಸಲಾಗಿದೆ ಎಂದರು.

ದೇಶದಲ್ಲಿರುವ ಮುಸ್ಲಿಮರು ಭಾರತೀಯರೇ ಹೊರತು ಅನ್ಯದೇಶದವರಲ್ಲ: ದಿನೇಶ್ ಗುಂಡೂರಾವ್

0

ಬೆಂಗಳೂರು: ಚುನಾವಣೆಗೆ ಮುಂಚೆ ಮುಸ್ಲಿಮರನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಈಗ ಮುಸ್ಲಿಂ ದ್ವೇಷಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಧರ್ಮದ ನಡುವೆ ಬೆಂಕಿ ಹಚ್ಚಿ ದೇಶ ಒಡೆಯುವ ಬಿಜೆಪಿಯವರ ಧರ್ಮ ರೋಗ ನಿಮಗೂ ಅಂಟಿದ್ದಕ್ಕೆ ವಿಷಾದವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಪಾಲಿದೆ ಎಂಬ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ?. ಸಿದ್ದರಾಮಯ್ಯ ಏನಾದರೂ ದೇಶದ ಸಂಪತ್ತೆಲ್ಲಾ ಮುಸ್ಲಿಮರಿಗೇ ಸೇರಬೇಕು ಎಂದಿದ್ದಾರಾ?. ಹಾಗೇನಾದರೂ ಹೇಳಿಕೆ ಕೊಟ್ಟಿದಿದ್ದರೆ ಜೆಡಿಎಸ್- ಬಿಜೆಪಿಯವರು ವಿರೋಧಿಸುವುದರಲ್ಲಿ ಅರ್ಥವಿರುತಿತ್ತು. ಈ ದೇಶದಲ್ಲಿರುವ ಮುಸ್ಲಿಮರು ಭಾರತೀಯರೇ ಹೊರತು ಅನ್ಯದೇಶದವರಲ್ಲ ಎಂದಿದ್ದಾರೆ.

ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ: ವಿ ಸೋಮಣ್ಣ

0

ತುಮಕೂರು: ಕೆಲ ಸಂದರ್ಭದಲ್ಲಿ ನನ್ನ ದುರಹಂಕಾರದಿಂದ ನನಗೆ ತೊಂದರೆ ಆಗಿದೆ. ಕೆಲ ವೇಳೆ ನಾನು ಮಾಡಿದ ತೀರ್ಮಾನ ನನಗೆ ತೊಂದರೆ ಕೊಟ್ಟಿದೆ. ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ. ಅದನ್ನು ಒರೆಸಿಕೊಂಡು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಗುರುಭವನ ಲೋಕಾರ್ಪಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಡವಳಿಕೆ ಬೇರೆಯವರಿಗೆ ಹೋಲಿಸಬೇಡಿ. ನಾನು ಒಂದಕ್ಕೆ ಅಂಟಿಕೊಂಡವನಲ್ಲ. ನನ್ನ ಅರ್ಹತೆ ಪಕ್ಷ ಗುರುತಿಸಿದ್ಯೋ ಇಲ್ಲವೋ ಎನ್ನುವುದನ್ನು ಈಗ ಮಾತನಾಡಲ್ಲ. ಆದರೆ ಒಂದಂತು ಸತ್ಯ. ಅರ್ಹತೆಗೆ ಈ ರೀತಿಯ ಮಾನದಂಡ ಆಗಬಾರದು. ಅರ್ಹತೆ ಅವಕಾಶ ವಂಚಿತ ಆಗಬಾರದು ಎಂದರು.

error: Content is protected !!