ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರಲಿದೆ: ಜಗದೀಶ್ ಶೆಟ್ಟರ್

0
Spread the love

ಹುಬ್ಬಳ್ಳಿ: ಬಿಜೆಪಿಯವರು ಸಾಕಷ್ಟು ಭ್ರಮೆಯಲ್ಲಿದ್ದಾರೆ, ಈಗಾಗಲೇ ಬೇರೆ ಕಡೆ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50-60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹಿಂದೆ ಏನೆ ಕಾರಣ ಇರಲಿ, ಅದಕ್ಕೆ ಜನ ಉತ್ತರ ನೀಡುತ್ತಾರೆ. ಈಗ ಸಿದ್ದರಾಮಯ್ಯ ಮುಖ್ಯ ಮಂತ್ರಿ ಇದ್ದಾರೆ. ಪವರ್ ಶೇರಿಂಗ್ ಬಗ್ಗೆ ಯಾರೋ ಮಾತನಾಡುತ್ತಾರೆ ಅಂತಾ ಚರ್ಚೆ ಮಾಡುವುದು ಸರಿಯಲ್ಲಾ. ಅದು ಬರೀ ಚರ್ಚೆ ಆಗುತ್ತೆ.

ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರಲಿದೆ ಎಂದು ಶೆಟ್ಟರ್‌ ಹೇಳಿದರು. ಇನ್ನೂ ವಿಜಯೇಂದ್ರ ರಾಜಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಗ್ಗೆ ಮಾತನಾಡಿದ ಶೆಟ್ಟರ್‌, ಇವಗ್ಯಾಕೆ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಆಯ್ತು, ಏನೋ ಅತ್ತು ಕರೆದು ಮಾಡಿರೋ ತರಹ ಕಾಣತ್ತೆ ಎಂದು ವ್ಯಂಗ್ಯವಾಡಿದರು.

ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ, ರಾಜಕೀಯ ಪಕ್ಷ ಆಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಆದ್ರೆ ಇವಗ್ಯಾಕೆ ಆಯ್ಕೆ ಮಾಡಿದ್ರು? ಬಿಜೆಪಿ ಫೇಲ್ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.


Spread the love

LEAVE A REPLY

Please enter your comment!
Please enter your name here