ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಅವರಿಗೆ ಕಡೆಗೂ ಬೇಲ್ ಸಿಕ್ಕಿದೆ. 180ಕ್ಕೂ ಅಧಿಕ ದಿನ ದಿನಗಳ ಕಾಲ ಪರಪ್ಪನ ಅಗ್ರಗಾರ ಜೈಲಿನಲ್ಲಿ ಕಾಲ ಕಳೆದಿರುವ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಇಂದು ಬೆಳಗ್ಗೆ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಪವಿತ್ರಾಗೌಡ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಂದ ಹೊರ ಬಂದ ಪವಿತ್ರಾ ಗೌಡ ಜೈಲಿನ ಆವರಣದಲ್ಲಿರುವ ಮುನೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇದಾದ ಮೇಲೆ ನೇರ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಾಲಯದ ಮುಂದೆ ಪವಿತ್ರಾಗೌಡ ತೀರ್ಥಸ್ನಾನ ಮಾಡಿದ್ದಾರೆ. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ.
ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪೂಜಾರಿಗಳಿಗೆ ಹೇಳಲಾಗಿದೆ. ಹೀಗಾಗಿ ಪೂಜಾರಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿದ್ದಾರೆ. ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಆರ್‌ಆರ್ ನಗರದ ನಿವಾಸದತ್ತ ಪವಿತ್ರಾ ಕುಟುಂಬ ತೆರಳಿದ್ದಾರೆ.