ರಾಯಚೂರು:- ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಬಳಿ ಪಾದಚಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ.
ಘಟನೆ ನಡೆದ ಬೆನ್ನಲ್ಲೇ ಚಾಲಕ ಪರಾರಿ ಆಗಿದ್ದಾನೆ. 34 ವರ್ಷದ ವೀರೇಶ್ ಮೃತ ಪಾದಾಚಾರಿ ಎಂದು ಗುರುತಿಸಲಾಗಿದೆ. ವೀರೇಶ್ ಗಿಲ್ಲೇಸುಗೂರಿನಿಂದ ಆಂಧ್ರಪ್ರದೇಶದ ಮಾಧವರಂ ಕಡೆಗೆ ಹೊರಟಿದ್ದ ವೇಳೆ ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ಸರ್ಕಾರಿ ಬಸ್ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ವೀರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



