ಕಾಂತಾರ ಸಿನಿಮಾ ನೋಡುವವರು ಮಾಂಸಾಹಾರ ಸೇವನೆ ಮಾಡುವಂತಿಲ್ಲ; ವೈರಲ್ ಪೋಸ್ಟ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

0
Spread the love

ಕಾಂತಾರ ಸಿನಿಮಾ ನೋಡುವವರು ಮಾಂಸಾಹಾರ ತಿನ್ನಬಾರದು’ ಎಂಬ ನಕಲಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಈ ಸಂಬಂಧ ಮಾತನಾಡಿದ ರಿಷಬ್ ಶೆಟ್ಟಿ, ಊಟೋಪಚಾರಗಳನ್ನು, ಅವರವರ ಅಭ್ಯಾಸಗಳನ್ನು ಪ್ರಶ್ನಿಸೋಕೆ ಯಾರಿಗೂ ಅಧಿಕಾರ ಇರಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಂತಹ ವಿಚಾರಗಳು. ಯಾರೋ ಫೇಕ್ ಪೋಸ್ಟರ್ ಹಾಕಿದ್ದಾರೆ. ಅದರ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಂದ ಕೂಡಲೇ ನಾವು ಅಲ್ಲಿಯೇ ಹೋಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಆಗುತ್ತದೆ. ಆದರೆ ಆ ಪೋಸ್ಟರ್​ ಅನ್ನು ಅವರು ತೆಗೆದು ಹಾಕಿ ಕ್ಷಮೆ ಕೇಳಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಆ ಪೋಸ್ಟರ್ ನಮ್ಮ ಪ್ರೊಡಕ್ಷನ್ ಹೌಸ್​​ಗೆ ಯಾವುದೇ ರೀತಿಯ ಸಂಬಂಧ ಇರುವಂಥದ್ದಲ್ಲ. ಅದನ್ನು ನೋಡಿದಾಗ ನಮಗೆ ಶಾಕ್ ಆಯಿತು. ನನಗೆ ಯಾರೋ ಕಳಿಸಿದರು. ನಾನು ಕೂಡಲೇ ಪ್ರೊಡಕ್ಷನ್ ಗ್ರೂಪಿನಲ್ಲಿ ಹಾಕಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಜನರು ಇದರ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ಪ್ರಶ್ನಿಸಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಬದುಕಿನ ಶೈಲಿ ಪ್ರತಿಯೊಬ್ಬನಿಗೂ ಅವನವನಿಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವಂತಹ ಅಧಿಕಾರ ಯಾರಿಗೂ ಇಲ್ಲ. ಒಂದು ಸಿನಿಮಾ ಟ್ರೆಂಡ್ ಆಗಿ, ನರೇಟಿವ್ ಸೆಟ್ ಆಗುವಾಗ ಅದರಲ್ಲಿ ತಮ್ಮ ವಿಚಾರವನ್ನು ತೆಗೆದುಕೊಂಡು ಬಂದರೆ ಜನಪ್ರಿಯತೆ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರಿಂದ ಈ ರೀತಿ ಆಗುತ್ತದೆ. ಇದು ಕೂಡ ಅಂಥದ್ದೇ. ಅದಕ್ಕೂ ಪ್ರೊಡಕ್ಷನ್​ ಹೌಸ್​​ಗೂ ಸಂಬಂಧ ಇಲ್ಲ’ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here