HomeBengaluru Newsನಮ್ಮ ಮೆಟ್ರೋದಲ್ಲಿ ಹೆಣ್ಮಕ್ಕಳ ವಿಡಿಯೋ ಸೆರೆಹಿಡಿದು ವಿಕೃತಿ ಕೇಸ್: ಆರೋಪಿ ಅರೆಸ್ಟ್!

ನಮ್ಮ ಮೆಟ್ರೋದಲ್ಲಿ ಹೆಣ್ಮಕ್ಕಳ ವಿಡಿಯೋ ಸೆರೆಹಿಡಿದು ವಿಕೃತಿ ಕೇಸ್: ಆರೋಪಿ ಅರೆಸ್ಟ್!

For Dai;y Updates Join Our whatsapp Group

Spread the love

ಬೆಂಗಳೂರು:- ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದು ವೈರಲ್‌ ಮಾಡ್ತಿದ್ದ ಆರೋಪಿಯನ್ನು ಕೊನೆಗೂ ಬನಶಂಕರಿ ಪೊಲೀಸರು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ದಿಗಂತ್ ಬಂಧಿತ ಆರೋಪಿ. ಹೊಳೆನರಸೀಪುರ ಮೂಲದ ದಿಗಂತ್‌ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್‌ ಮಾಡಿ ತನ್ನ ʻಮೆಟ್ರೋ ಚಿಕ್ಸ್ʼ ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. 5,538 ಫಾಲೋವರ್ಸ್‌ಗಳನ್ನ ಹೊಂದಿದ್ದ ಈ ಖಾತೆಯಲ್ಲಿ 13ಕ್ಕೂ ಹೆಚ್ಚು ವಿಡಿಯೋಗಳನ್ನ ಅಪ್‌ಲೋಡ್‌ ಮಾಡಿ ವೈರಲ್‌ ಮಾಡಿದ್ದ. ಅಲ್ಲದೇ ಯುವತಿಯರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದ.

ಇದರ ವಿರುದ್ಧ ಸಾರ್ವಜನಿಕರಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದಿಗಂತ್ ಕೆಲ ವಿಡಿಯೋಗಳನ್ನ ಡಿಲೀಟ್‌ ಕೂಡ ಮಾಡಿದ್ದ. ‌ಈ ಸಂಬಂಧ ಇನ್‌ಸ್ಟಾಗ್ರಾಮ್‌ ಪೇಜ್‌ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಘಟನೆ ಹಿನ್ನೆಲೆ?

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಈ ಸಂಬಂಧ ಅಪರಿಚಿತನ ವಿಕೃತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಕೃತಿ ಮೆರೆದಿದ್ದವನ ಹೆಡೆಮುರಿಕಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!