ನವದೆಹಲಿ: ವಾಹನ ಸವಾರರಿಗೆ ಮತ್ತೆ ಇಂಧನ ಶಾಕ್ ಎದುರಾಗಿದೆ.
ಕಳೆದ 10 ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಹೆಚ್ಚಳವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.14 ರೂ. ಆಗಿದ್ದರೆ, ಡೀಸೆಲ್ ದರ 95.04 ರೂ. ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 99.51 ರೂ. ಹಾಗೂ ಡೀಸೆಲ್ ದರ 92.49 ರೂ. ಆಗಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ದೇಶೀಯ ಇಂಧನ ದರದಲ್ಲೂ ಏರಿಕೆ ಕಂಡುಬಂದಿದೆ. ಮೇ 15ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತ ಹಂತವಾಗಿ ದರ ಹೆಚ್ಚಿಸುತ್ತಿವೆ.
ಮೇ 15ರಂದು ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆಯಾಗಿ, ಒಟ್ಟು 10 ದಿನಗಳಲ್ಲಿ ಲೀಟರ್‌ಗೆ ಸುಮಾರು 5 ರೂ.ವರೆಗೆ ಹೆಚ್ಚಳವಾಗಿದೆ.
ಪ್ರಮುಖ ನಗರಗಳ ಪೆಟ್ರೋಲ್ ದರ
- ದೆಹಲಿ – 99.51 ರೂ. (+0.87)
- ಕೋಲ್ಕತ್ತಾ – 110.64 ರೂ. (+0.94)
- ಮುಂಬೈ – 108.49 ರೂ. (+0.90)
- ಚೆನ್ನೈ – 105.31 ರೂ. (+0.82)
ಪ್ರಮುಖ ನಗರಗಳ ಡೀಸೆಲ್ ದರ
- ದೆಹಲಿ – 92.49 ರೂ. (+0.91)
- ಕೋಲ್ಕತ್ತಾ – 97.02 ರೂ. (+0.95)
- ಮುಂಬೈ – 95.02 ರೂ. (+0.94)
- ಚೆನ್ನೈ – 96.98 ರೂ. (+0.87)



