ಗದಗ:-ನಾಲ್ವರು ಮುಸುಕುದಾರಿಗಳು ಪೆಟ್ರೋಲ್ ಬಂಕ್‌ಗೆ ನುಗ್ಗಿ, ಗಾಜು ಪುಡಿ ಪುಡಿ ಮಾಡಿ ಮಲಗಿದ್ದವರಿಗೆ ಬೆದರಿಸಿ ನಾಲ್ಕು ಸಾವಿರ ಹಣ ಲೂಟಿ ಮಾಡಿದ ಘಟನೆ ಜರುಗಿದೆ.
ಗದಗ ತಾಲೂಕಿನ ಕಳಸಾಪೂರ-ನಾಗಾವಿ ರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್‌ಗೆ ಮಧ್ಯರಾತ್ರಿ ನಾಲ್ವರು ಇದ್ದ ತಂಡ ನುಗ್ಗಿದೆ. ಕಚೇರಿಗೆ ಹಾಕಿದ್ದ ಶೆಟರ್ಸ್ ಎತ್ತಿ ಒಳನುಗ್ಗಿದ್ದಾರೆ. ಇದರಿಂದಾಗಿ ಅಲ್ಲಿ ಮಲಗಿದ್ದ ಕಾರ್ಮಿಕರು ಎಚ್ಚರಗೊಂಡಿದ್ದು, ಅವರಿಗೆ ಒಬ್ಬನ ಮೇಲೆ ಹಲ್ಲೆ ಮಾಡಿ, ನಾಲ್ಕು ಸಾವಿರ ಹಣ ದೋಚಿದ್ದಾರೆ.

ಸಿಸಿಟಿವಿ ಗಮನಿಸಿದ ಖದೀಮರು, ಡಿವಿಆರ್‌ನ್ನೆ ಹೊತ್ತೊಯ್ಯದಿದ್ದಾರೆ. ಮಾಹಿತಿ ತಿಳಿದು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಎಲ್.ಕೆ ಜೂಲಕಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



