ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲಿಗೆ ಪೆಟ್ಟಾಗಿರುವ ಹಿನ್ನೆಲೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಸಿನಿಮಾಗಳಿಗೆ ಬ್ರೇಕ್ ಹಾಕಿ ವಿಶ್ರಾಂತಿಯಲ್ಲಿದ್ದಾರೆ.
ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಶ್ಮಿಕಾ ಅವರು ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜಿಮ್‌ನಲ್ಲಿ ನಾನು ಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರುತ್ತೇನೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ತಿಳಿದಿದೆ. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಪೋಸ್ಟ್ಗೆ ಅಭಿಮಾನಿಗಳಿಂದ ಕಮೆಂಟ್ಗಳ ಸುರಿಮಳೆ ಆಗಿದೆ. ಶೀಘ್ರವೇ ಗುಣಮುಖರಾಗಿ ಶ್ರೀವಲ್ಲಿ ಎಂದು ಕಮೆಂಟ್ ಮಾಡ್ತಿದ್ದಾರೆ. ಬೇಗ ಹುಷಾರಾಗಿ ಸಲ್ಲು ಜೊತೆ ಸಿಕಂದರ್ ಸಿನಿಮಾ ಮುಗಿಸಿ, ತೆರೆ ಮೇಲೆ ಈ ಜೋಡಿ ನೋಡಲು ಕಾಯ್ತಿದ್ದೇನೆ ಎಂದು ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದಾರೆ.