ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣದ ವಿಚಾರಣೆ ಹಂತ ಪೂರ್ಣಗೊಂಡಿದ್ದು, ವಾದ–ಪ್ರತಿವಾದಗಳು ಮುಕ್ತಾಯಗೊಂಡಿದೆ. ತೀರ್ಪು ಪ್ರಕಟಿಸಲು ನವೆಂಬರ್ 26ರಂದು ದಿನಾಂಕ ನಿಗದಿಪಡಿಸಲಾಗಿದೆ.
ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಾದ–ಪ್ರತಿವಾದ ಪ್ರಕ್ರಿಯೆಯಲ್ಲಿ, ಪ್ರಾಸಿಕ್ಯೂಷನ್ ಹಾಗು ರಕ್ಷಣೆಪಕ್ಷ ತಮ್ಮ ವಾದಗಳನ್ನು ಸಂಪೂರ್ಣವಾಗಿ ಮಂಡನೆ ಮಾಡಿವೆ.
ಶಿವಮೂರ್ತಿ ಸ್ವಾಮೀಜಿಗಳ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ. ನಾಗೇಶ್ ಹಾಜರಾಗಿ, ಸ್ವಾಮೀಜಿಗಳ ವಿರುದ್ಧ ಹೊರಬಿದ್ದಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಅನಾಧಾರಿತವೆಂದು ವಾದಿಸಿದರು.
ಇದೇ ವೇಳೆ, ಪ್ರಾಸಿಕ್ಯೂಷನ್ ಪರ ವಕೀಲರೂ ತಮ್ಮ ಅಂತಿಮ ವಾದ ಮಂಡನೆಯನ್ನು ಇಂದು ಪೂರ್ಣಗೊಳಿಸಿದ್ದಾರೆ. ಈಗಾಗಲೇ ಎಲ್ಲಾ ಕಾನೂನು ಕ್ರಮಗಳು ಮುಕ್ತಾಯಗೊಂಡಿದ್ದು, ಪ್ರಕರಣವನ್ನು ವಿಚಾರಣೆ ಮಾಡುತ್ತಿರುವ ನ್ಯಾಯಾಧೀಶ ಸಿ.ಜಿ. ಹಡಪದ ಅವರು ನವೆಂಬರ್ 26, ಬುಧವಾರ ತೀರ್ಪು ಪ್ರಕಟಿಸಲಿದ್ದಾರೆ.



