ದಾಳಿಂಬೆ ಹಣ್ಣಿನ ಸಿಪ್ಪೆಯೂ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ!

0
Spread the love

ದಾಳಿಂಬೆ ಹಣ್ಣು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಈ ಹಣ್ಣು ಸಣ್ಣ ಜ್ವರದಿಂದ ಹಿಡಿದು ಕ್ಯಾನ್ಸರ್‌ ಎಂಬಂತಹ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುತ್ತದೆ. ಅದರಂತೆ ಸಿಪ್ಪೆಯಿಂದಲೂ ಹೆಚ್ಚು ಪ್ರಯೋಜನಗಳಿವೆ. ವಿಶೇಷವಾಗಿ ಚರ್ಮದ ಯಾವುದೇ ಭಾಗದಲ್ಲಿ ಕಂಡುಬರುವ ಸೋಂಕುಗಳನ್ನು ನಿವಾರಣೆ ಮಾಡುವಂತಹ ಔಷಧೀಯ ಗುಣ ಲಕ್ಷಣಗಳು ಕೂಡ ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಅಪಾರ ಪ್ರಮಾಣದಲ್ಲಿ ಸಿಗುತ್ತವೆ.

Advertisement

ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯಲ್ಲಿರುವ ಮೆಥನಾಲ್ ಸಾರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್​ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಯಿಯಲ್ಲಿ ಹರಡುವ ರೋಗಾಣು ವಿರುದ್ಧ ಹೋರಾಟ ದಾಳಿಂಬೆ ಸಿಪ್ಪೆಗಳಲ್ಲಿ ಪಾಲಿಫೆನಾಲಿಕ್ ಫ್ಲೇವನಾಯ್ಡ್​ಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ಹರಡುವ ರೋಗಾಣುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಕೆಟ್ಟ ಉಸಿರಾಟದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ದಾಳಿಂಬೆ ಸಿಪ್ಪೆಯನ್ನು ಬಾಯಿ ಫ್ರೆಶರ್ನಂತೆ ಬಳಸಬಹುದು. ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪೇಸ್ಟ್ ಮಾಡಿ. ಒಂದು ಚಮಚ ದಾಳಿಂಬೆ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಕುಡಿಯಿರಿ.

ಮುಟ್ಟಿನ ನೋವು ನಿವಾರಣೆ ಇತ್ತೀಚೆಗೆ ಬಹಳಷ್ಟು ಹೆಣ್ಣು ಮಕ್ಕಳು ಅನಿಯಮಿತ ಮುಟ್ಟಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದಾರೆ. ಮುಟ್ಟಾದಾಗ ವಿಪರೀತ ಹೊಟ್ಟೆ ನೋವಾಗುವುದು. ಆ ನೋವಿಗೆ ದಾಳಿಂಬೆ ಸಿಪ್ಪೆ ಮದ್ದಾಗಿದೆ. ಒಂದು ಲೋಟದ ನೀರಿಗೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಹಾಕಿ, ಬೆರೆಸಿ ಕುಡಿಯಬೇಕು. ಇದರಿಂದ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೂ ನಿಯಂತ್ರಣಕ್ಕೆ ತರುವುದು.

ಮುಖದ ಸುಕ್ಕು ಮುಖದಲ್ಲಿ ಸುಕ್ಕು, ನೆರಿಗೆಯಿಂದ ವಯಸ್ಸಾದಂತೆ ಕಾಣುತ್ತಾರೆ. ಹಾಗಾಗಿ ಮುಖದ ಮೇಲಿರುವ ಸುಕ್ಕನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸಿಪ್ಪೆಯ ಪುಡಿಯನ್ನು ರೋಸ್ ವಾಟರ್​ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ರೆಡಿಯಾದ ಪೇಸ್ಟ್ನ ಮುಖಕ್ಕೆ ಹಚ್ಚಿ. ಹಚ್ಚಿದ ಪೇಸ್ಟ್ ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಸನ್ ಟ್ಯಾನ್ಗೆ ಪರಿಹಾರ ಬಿಸಿಲಿಗೆ ಹೋದರೆ ಟ್ಯಾನ್ ಆಗುವುದು ಸಹಜ. ಟ್ಯಾನ್ ಆದರೆ ಸೌಂದರ್ಯ ಕಡಿಮೆಯಾಗುವುದು ನಿಜ. ಟ್ಯಾನ್ ಆಯ್ತು ಅಂತ ಭಯಪಡುವ ಅಗತ್ಯವಿಲ್ಲ. ಇದಕ್ಕೆ ಪರಿಹಾರ ಮನೆಯಲ್ಲೆ ಇದೆ. ದಾಳಿಂಬೆ ಸಿಪ್ಪೆಯನ್ನು ಸನ್ ಸ್ಕ್ರೀನ್​ನಂತೆ ಬಳಸಬಹುದು. ಒಣ ಸಿಪ್ಪೆಯನ್ನು ಎಣ್ಣೆಯೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಬೇಕು. ಇದರಿಂದ ಟ್ಯಾನ್ ಕಡಿಮೆಯಾಗುತ್ತದೆ.


Spread the love

LEAVE A REPLY

Please enter your comment!
Please enter your name here