ಬಿಗ್ ಬಾಸ್ ಸೀಸನ್ 11 ರಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದ್ದು, ಟಾಪ್ 6 ನಲ್ಲಿ ಕಾಣಿಸಿಕೊಳ್ಳಲು ಸ್ಪರ್ಧಿಗಳು ಜಿದ್ದಾಜಿದ್ದಿನ ಪೈಪೋಟಿ ಕೊಡುತ್ತಿದ್ದಾರೆ.
ಬಿಗ್ ಬಾಸ್ ಮನೆಯನ್ನು ಈ ವಾರ ರೆಸಾರ್ಟ್ ರೀತಿ ಮಾಡಲಾಗಿದೆ. ಒಂದು ತಂಡದವರು ರೆಸಾರ್ಟ್ ಸಿಬ್ಬಂದಿಗಳಾಗಿ, ಇನ್ನೊಂದು ತಂಡದವರು ರೆಸಾರ್ಟ್ಗೆ ಬಂದ ಅತಿಥಿಗಳಾಗಿ ಟಾಸ್ಕ್ ನಿಭಾಯಿಸಬೇಕು. ಅತಿಥಿಗಳು ಕೇಳಿದ್ದೆಲ್ಲವನ್ನೂ ಸಿಬ್ಬಂದಿ ನೀಡಬೇಕು. ಅತಿಥಿಗಳ ತಂಡದಲ್ಲಿ ರಜತ್, ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಇವರು ಕೇಳಿ ತರಿಸಿಕೊಂಡ ಊಟದಲ್ಲಿ ಹುಳ ಸಿಕ್ಕಿದೆ.
ಭವ್ಯಾ ಗೌಡ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಧನರಾಜ್ ಅವರು ಒಂದು ಟೇಬಲ್ ನಲ್ಲಿ ಕುಳಿತು ಊಟ ಆರ್ಡರ್ ಮಾಡಿದರು. ಉಗ್ರಂ ಮಂಜು ಅದನ್ನು ತಂದುಕೊಟ್ಟರು. ಇನ್ನೇನು ಅದನ್ನು ತಿನ್ನಬೇಕು ಎನ್ನುವಾಗ ಹುಳ ಕಾಣಿಸಿತು. ಊಟದಲ್ಲಿ ಹುಳವಿದ್ದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ. ಅತಿಥಿಗಳ ತಂಡಕ್ಕೆ ಕೂಡ ಹಾಗೆಯೇ ಆಯಿತು. ಎಲ್ಲರೂ ಬಾಯಿ ಬಡಿದುಕೊಂಡರು.
ಹುಳು ಇದೆ ಎಂದು ಹೇಳಿದರೂ ಕೂಡ ಸಿಬ್ಬಂದಿ ತಂಡದ ಉಗ್ರಂ ಮಂಜು ಅವರು ಅದನ್ನು ಕೊತ್ತಂಬರಿ ಸೊಪ್ಪು ಎಂದು ವಾಸಿಸಲು ಶುರು ಮಾಡಿದರು. ‘ಇಲ್ಲಿ ನೋಡು.. ಕೊತ್ತಂಬರಿ ಸೊಪ್ಪಿಗೆ ಕೈ ಕಾಲು ಇದೆ’ ಎಂದು ಹೇಳುವ ಮೂಲಕ ರಜತ್ ಅವರು ಹುಳ ಇರುವುದನ್ನು ಖಚಿತಪಡಿಸಿದರು. ಆ ಆಹಾರವನ್ನು ಉಗ್ರಂ ಮಂಜು ವಾಪಸ್ ತೆಗೆದುಕೊಂಡು ಹೋದರು.
ಇನ್ನೂ ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆಟದಲ್ಲಿ 88 ದಿನಗಳು ಕಳೆದಿವೆ. ಈಗ ಆಟದಲ್ಲಿ ಪೈಪೋಟಿ ಜೋರಾಗಿದೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಫಿನಾಲೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.