ವಿಜಯಸಾಕ್ಷಿ ಸುದ್ದಿ, ನರಗುಂದ: ನರಗುಂದದ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ದಂಡಾಪೂರ ಓಣಿಯ ಹನುಮಾನ ಮಂದಿರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯರಾದ ನೀಲಮ್ಮ ಹಕಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮೇಲ್ವಿಚಾರಕಿ ಪರಿಮಳಾ ಹೂಗಾರ ಅವರು ಮಾತನಾಡಿ, “ಅಪೌಷ್ಠಿಕತೆ ನಿವಾರಣೆಗೆ ಪೌಷ್ಠಿಕ ಆಹಾರ ಸೇವನೆ ಅತ್ಯಂತ ಅಗತ್ಯ. ಅಲ್ಲದೆ ವಾತಾವರಣದ ಅನುಸಾರವಾಗಿ ಲಭ್ಯವಿರುವ ಹಣ್ಣು, ಧಾನ್ಯಗಳು, ಆಹಾರ ಪದಾರ್ಥಗಳ ಸರಿಯಾದ ಬಳಕೆ ಬಹಳ ಮುಖ್ಯ” ಎಂದು ಹೇಳಿದರು.
ಪೋಷಣ್ ಸಂಯೋಜಕರಾದ ಮಂಜುನಾಥ ಗುಗ್ಗರಿ ಅವರು ವಿಶೇಷವಾಗಿ ಈ ವರ್ಷ ಬೊಜ್ಜು ನಿವಾರಣೆ, ಸಕ್ಕರೆ, ಉಪ್ಪು ಮತ್ತು ಎಣ್ಣೆಯ ಸೇವನೆಯನ್ನು ಕಡಿಮೆ ಮಾಡುವುದು, ತಾಯಿಯ ಹೆಸರಿನಲ್ಲಿ ಗಿಡ ನೆಡುವುದು, ಪುರುಷರ ಸಹಭಾಗಿತ್ವ ಹೆಚ್ಚಿಸುವುದು ಮತ್ತು ಮಕ್ಕಳ ಕಲಿಕೆಗೆ ಉತ್ತೇಜನ ನೀಡುವುದು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಕಾರ್ಯಕ್ರಮ ಜರುಗುವ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಬಾಸ್ಕರ ಪೊಲೀಸ್ ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರಾದ ಪಿ.ಆಯ್. ಹುಯಿಲಗೋಳ, ಬಿ.ಬಿ. ಗುರಿಕಾರ, ಕೆ.ಬಿ. ಪೂಜಾರ, ಎಸ್.ಎನ್. ಶಿರೋಳ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಎಸ್.ಜಿ. ಬಾಣಿ, ಭಾರತಿ ಮಾರಿಹಾಳ ಹಾಗೂ ಓಣಿಯ ಗರ್ಭಿಣಿ ಮಹಿಳೆಯರು, ಬಾಣಂತಿ ಮಹಿಳೆಯರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.