Home Gadag News ಗೌರವಾನ್ವಿತ ಶಿಕ್ಷಕರು ನಮಗೆಲ್ಲ ಮಾರ್ಗದರ್ಶಿಗಳು: ಸುಮಾ ಪಾಟೀಲ

ಗೌರವಾನ್ವಿತ ಶಿಕ್ಷಕರು ನಮಗೆಲ್ಲ ಮಾರ್ಗದರ್ಶಿಗಳು: ಸುಮಾ ಪಾಟೀಲ

0
ಗೌರವಾನ್ವಿತ ಶಿಕ್ಷಕರು ನಮಗೆಲ್ಲ ಮಾರ್ಗದರ್ಶಿಗಳು: ಸುಮಾ ಪಾಟೀಲ
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣದಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಯಾಗುತ್ತದೆ, ಆದರೆ ಶಿಕ್ಷಕರಿಂದ ಅರಿವು ಮತ್ತು ಮಾರ್ಗದರ್ಶನ ಸಿಗುತ್ತದೆ. ಸಮಾಜದಲ್ಲಿ ಪೂಜ್ಯನೀಯರಾಗಿ ಗೌರವಿಸಲ್ಪಡುವ ಶಿಕ್ಷಕರು ನಮಗೆ ಮಾರ್ಗದರ್ಶಕರು ಎಂದರು ಗದಗ ಜಿಲ್ಲಾ ಜೆಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯ ಅಧ್ಯಕ್ಷೆ ಸುಮಾ ಪಾಟೀಲ.

ಸಂಘಟನೆಯ ವತಿಯಿಂದ ಜರುಗಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಶಿಕ್ಷಕರನ್ನು ನಾವು ಗೌರವಿಸಬೇಕು. ವಿಶೇಷವಾಗಿ ಅಂಗವಿಕಲ ಮಕ್ಕಳಿಗಾಗಿ ನಿಸ್ವಾರ್ಥ ಶ್ರಮಿಸುವ ಶಿಕ್ಷಕರ ಪರಿಶ್ರಮವೇ ಮೆಚ್ಚಿಗೆ ಯೋಗ್ಯ” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಪನ್ಮೂಲ ಶಿಕ್ಷಕಿ ಕವಿತಾ ದಂಡಿನ ಹೇಳಿದರು, “ಅಂಗವಿಕಲ ಮಕ್ಕಳನ್ನು ಸಾಕಿ, ಸಲಹುವಲ್ಲಿ ತಂದೆ-ತಾಯಿಗಳು ಮೊದಲ ಗುರುಗಳು. ಈ ಮಕ್ಕಳನ್ನು ಮುಖ್ಯ ಪ್ರವಾಹಕ್ಕೆ ತರುವಲ್ಲಿ ಪಾಲಕರೊಂದಿಗೆ ಶಿಕ್ಷಕರು, ಸಮಾಜ ಹಾಗೂ ಸಂಘಟನೆಗಳು ಕೈಜೋಡಿಸಬೇಕು. ಇದು ನಮ್ಮೆಲ್ಲರ ಕರ್ತವ್ಯ. ಸರ್ಕಾರದ ಉಚಿತ ಯೋಜನೆಗಳು ಹಾಗೂ ದಾನಿಗಳ ಸಹಕಾರದಿಂದ ಮಕ್ಕಳಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.”

ರೇಖಾ ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ಅಂಗವಿಕಲತೆಯನ್ನು ಮೆಟ್ಟಿನಿಟ್ಟು ಸಾಧನೆ ಮಾಡಿರುವವರು ಅಲ್ಲಿ ಇದ್ದಾರೆ. ಬಾಲ್ಯದಿಂದಲೂ ಇಂತಹ ಮಕ್ಕಳಿಗೆ ಉತ್ತಮ ತರಬೇತಿ ಮತ್ತು ವೈದ್ಯಕೀಯ ಸಲಹೆ ದೊರಕಿಸಿದರೆ, ಅವರು ಸಾಮಾನ್ಯರಂತೆ ಬೆಳೆಯಬಹುದು” ಎಂದರು.

ಕಾರ್ಯದರ್ಶಿ ಅಶ್ವಿನಿ ಮಾದಗುಂಡಿ ಪ್ರಾರ್ಥನೆ ಸಲ್ಲಿಸಿದರು. ಚಂದ್ರಕಲಾ ಸ್ಥಾವರಮಠ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಿತಾ ವೆರ್ಣೆಕರ ಪರಿಚಯಿಸಿದರು. ನಿರ್ಮಲಾ ಪಾಟೀಲ ವಂದಿಸಿದರು. ಮಧು ಕರಬಿಷ್ಠಿ, ಸುಗ್ಗಲಾ ಯಳಮಲಿ, ಪ್ರಿಯಾಂಕಾ ಹಳ್ಳಿ, ಶ್ರೀದೇವಿ ಮಹೇಂದ್ರಕರ, ವಿದ್ಯಾ ಶಿವನಗುತ್ತಿ, ಶೋಭಾ ಹಿರೇಮಠ, ಹೇಮಾ ಪೊಂಗಾಲಿಯಾ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here