ನೆಲಮಂಗಲ: ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಟೆಕ್ಕಿಯೊಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
26 ವರ್ಷದ ಪ್ರಿಯಾಂಕ ಮೃತ ಟೆಕ್ಕಿ. ಯುವತಿ ಅಣ್ಣನ ಜೊತೆ ಬೈಕ್‍ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ. ರಸ್ತೆ ಕಾಮಗಾರಿಯಿಂದ ಈ ರಸ್ತೆ ಹದಗೆಟ್ಟಿದ್ದು, ಗುಂಡಿ ತಪ್ಪಿಸಲು ಪ್ರಿಯಾಂಕ ಸಹೋದರ ಯತ್ನಿಸಿದ್ದಾರೆ. ಈ ವೇಳೆ ಮುಂದೆ ಬಂದ ಲಾರಿ ಕೆಳಗೆ ಯುವತಿ ಬಿದ್ದಿದ್ದಾರೆ. ಈ ವೇಳೆ ಲಾರಿ ಯುವತಿಯ ತಲೆ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


