ಹಾಸನ:- ವಿದ್ಯುತ್ ಶಾಕ್ ಹೊಡೆದು ಇಬ್ಬರು ರೈತರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶೆಟ್ಟಿಕೊಪ್ಪಲು ಗ್ರಾಮದಲ್ಲಿ ಜರುಗಿದೆ. ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟಲು ಹೋಗಿ ಈ ದುರಂತ ಸಂಭವಿಸಿದೆ.
ಚಗಚೆಗೆರೆ ಗ್ರಾಮದ ಬಾಳೆಗೌಡ (73 ), ಕುಡುಕುಂದಿ ಗ್ರಾಮದ ಹೊಂಬೆಗೌಡ (55) ಮೃತ ದುರ್ದೈವಿಗಳು. ತಮ್ಮ ತೋಟದ ಮನೆ ಬಳಿ ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟಲು ಮುಂದಾದಾಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ರೈತರು ಸಾವಿಗೀಡಾಗಿದ್ದಾರೆ.
ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



