ಮೈಸೂರು: ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಇನ್ನೊಂದು ಬಾರಿ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಮಗನೇ. ಅವನಿಗೆ ಅವನ ಭಾಷೆಯಲ್ಲೇ ಉತ್ತರ ಕೊಡುತ್ತಾ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ನನ್ನ ತಾಯಿ ಬಗ್ಗೆ ಪ್ರದೀಪ್ ಈಶ್ವರ ಅವಹೇಳನವಾಗಿ ಮಾತಾಡಿದ್ದಾನೆ. ಮುಳ್ಳುಹಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್ ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರದ ಕಡೆಗೆ ಬಂದಿದ್ದರೆ ನೀನು ಕೂಡ ಸುಂದರವಾಗಿಯೇ ಹುಟ್ಟುತ್ತಿದ್ದೆ. ಎಚ್ಚರಿಕೆ ಇರಬೇಕು ಮಗನೇ ನನ್ನ ಬಗ್ಗೆ ಮಾತಾಡುವಾಗ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.


