ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಖಟವಟೆ ಕುಟುಂಬದ ಪ್ರೀತಿ ಪ್ರವೀಣ ಖಟವಟೆ ಇವರು ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 558 (ಶೇ 93) ಅಂಕಗಳನ್ನು ಪಡೆದು ಗದಗ ಜಿಲ್ಲೆಗೆ ಹಾಗೂ ಎಸ್‌ಎಸ್‌ಕೆ. ಸಮಾಜಕ್ಕೆ ಕೀರ್ತಿ ತಂದಿದ್ದು, ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
ಎಸ್‌ಎಸ್‌ಕೆ ಸಮಾಜದ ಮಾಜಿ ಅಧ್ಯಕ್ಷ ಶ್ರೀಕಾಂತ ಕೆ.ಖಟವಟೆ, ಸತ್ಯನಾರಾಯಣ ಖಟವಟೆ, ಪ್ರವೀಣ ಖಟವಟೆ, ಬಾಲಚಂದ್ರ ಖಟವಟೆ, ವೆಂಕಟೇಶ ಎನ್.ಹಬೀಬ ಹಾಗೂ ಉಪನ್ಯಾಸಕರು ಸಾಧಕ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.