ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜ ಮಾರಾಟವನ್ನು ಗದಗ ಕೃಷಿ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಮಲ್ಲಯ್ಯ ಕೊರವಣ್ಣವರ ಹೆಸರು ಹಾಗೂ ತೋಗರೆ ಬೀಜಗಳನ್ನು ರೈತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮು ಜೂನ್ 6ರಿಂದ ಪ್ರಾರಂಭವಾಗುತ್ತಿದ್ದು, ರೈತರು ಭೂಮಿ ಸಂಪೂರ್ಣವಾಗಿ ತೇವಗೊಂಡ ನಂತರ ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಕೃಷಿ ಅಧಿಕಾರಿ ಅಶೋಕ ಇಂಗಳಹಳ್ಳಿ, ಸಿ.ಎಸ್. ಹಿರೇಮಠ, ಟಿ.ಜಿ. ಬೋಳನವರ, ಅಡಿವೆಪ್ಪ ಕಣ್ಣೂರ, ಮಾಜಿ ಗ್ರಾ.ಪಂ ಅಧ್ಯಕ್ಷ ಮಾಬುಸಾಬ ಯಕ್ಲಾಸಪೂರ, ಗ್ರಾ.ಪಂ ಸದಸ್ಯ ಮರಿಯಪ್ಪ ಸಣ್ಣತಂಗಿಯವರ, ಪರಸಪ್ಪ ಮಲ್ಲಾರಿ, ಗುಂಡಪ್ಪ ಕುಸ್ಲಾಪೂರ, ದೇವಪ್ಪ ಅಡ್ರಕಟ್ಟಿ, ಹಸನಸಾಬ ಕುಸಣ್ಣವರ, ಸುರೇಶ ತಳವಾರ, ಚನ್ನಪ್ಪ ಗುರಿಕಾರ, ಆಕಾಶ ಪಿರಂಗಿ, ಕೃಷ್ಣಾ, ಹುಚ್ಚಪ್ಪ ಹಾಗೂ ರೈತರು ಇದ್ದರು.