ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯಲ್ಲಿ PM-KISAN ಯೋಜನೆಯ 21ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 21ನೇ ಕಂತಿನಲ್ಲಿ ₹18,000 ಕೋಟಿಗೂ ಹೆಚ್ಚು ಮೊತ್ತ ರೈತರ ಖಾತೆಗಳಿಗೆ ಜಮೆಯಾಗಿದೆ. ಈ ಪರಿಹಾರ ಸುಮಾರು 9 ಕೋಟಿ ರೈತರಿಗೆ ನೀಡಲಾಗಿದ್ದು, ಪ್ರತಿ ಅರ್ಹ ರೈತನಿಗೆ ₹2,000 ನಗದು ನೇರವಾಗಿ ಡಿಬಿಟಿ ಮೂಲಕ ತೆರಳಿದೆ.
ದೇಶಾದ್ಯಂತ ಸುಮಾರು ಒಂಬತ್ತು ಕೋಟಿ ರೈತರಿಗೆ ಈ ಯೋಜನೆಯಿಂದ ಪ್ರಯೋಜನ ಸಿಗುತ್ತಿದ್ದು, 21ನೇ ಕಂತಿನಲ್ಲಿ 18,000 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ರೈತರ ಖಾತೆಗೆ ಜಮೆಯಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಈಗಾಗಲೇ 3.70 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ. ಈ ನಿಧಿಯು ರೈತರಿಗೆ ಕೃಷಿ ಸಾಮಾಗ್ರಿಗಳ ಖರೀದಿಸಲು ಸಹಾಯ ಮಾಡಿದೆ.
ನವೆಂಬರ್ 21ರವರೆಗೆ ನಡೆಯಲಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ತಮಿಳುನಾಡು ನೈಸರ್ಗಿಕ ಕೃಷಿ ಪಾಲುದಾರರ ವೇದಿಕೆ ಆಯೋಜಿಸಿದೆ. ಈ ಶೃಂಗಸಭೆಯು ಸುಸ್ಥಿರ, ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳನ್ನು ಒತ್ತಿಹೇಳುತ್ತದೆ. ಈ ಕಾರ್ಯಕ್ರಮವು ರೈತ-ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಬೆಳೆಸುವ ಗುರಿಯನ್ನು ಹೊಂದಿದೆ.


