ಜೈಲಿನ ರಾಜಾತಿಥ್ಯ ಕೇಸ್:‌ ಕೈದಿಗಳಿಗೆ ಸವಲತ್ತು ಕೊಟ್ಟ ಇಬ್ಬರು ಅಧಿಕಾರಿಗಳ ತಲೆದಂಡ

0
Spread the love

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ರಿಲೀಸ್​​ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಕಾರಾಗೃಹ ಇಲಾಖೆ ಕಚೇರಿಯಲ್ಲಿ ಗೃಹ ಸಚಿವ ಪರಮೇಶ್ವರ್ ಅವ್ರು ಮಹತ್ವದ ಸಭೆ ನಡೆಸಿದ್ದಾರೆ.

Advertisement

ಸಭೆಯಲ್ಲಿ ಡಿಜಿಪಿ ಎಂಎ ಸಲೀಂ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಶರತ್ ಚಂದ್ರ, ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್​ ಭಾಗಿಯಾಗಿದ್ದಾರೆ.

ಅದಲ್ಲದೆ ಜೈಲಿನ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮುಖ್ಯ ಅಧೀಕ್ಷಕ ಸುರೇಶ್‌, ಜೈಲ್‌ ಅಧೀಕ್ಷಕ ಮ್ಯಾಗೇರಿ ಅವರನ್ನು ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ಮುಂದೆ ಈ ರೀತಿ ಪ್ರಕರಣ ಮರುಕಳಿಸದೇ ಇರಲು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರ ಮುಖ್ಯಸ್ಥರಾಗಿರುವ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಎಸ್‌ಪಿ ಇರಲಿದ್ದಾರೆ.

Spread the love

LEAVE A REPLY

Please enter your comment!
Please enter your name here