ಧಾರವಾಡ:- ಹೃದಯಾಘಾತದಿಂದ ಪಿಎಸ್ಐ ಆಕಾಂಕ್ಷಿ ರಾಮಾಂಜನೇಯ ಸಾವನ್ನಪ್ಪಿರುವ ಘಟನೆ ನಗರದ ನಿಸರ್ಗ ಲೇಔಟ್ನಲ್ಲಿ ಜರುಗಿದೆ.
ಈ ಯುವಕ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಕಗ್ಗಲ್ ಗ್ರಾಮದ ನಿವಾಸಿ ಎನ್ನಲಾಗಿದೆ. ಈ ಯುವಕ ಕಳೆದ 5 ವರ್ಷಗಳಿಂದ ಧಾರವಾಡದಲ್ಲಿ ಅಭ್ಯಾಸ ಮಾಡುತ್ತಿದ್ದರು. ನಿನ್ನೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದರಿಂದ,
ತಕ್ಷಣ ಧಾರವಾಡದ ಜಿಲ್ಲಾಸ್ಪತ್ರೆಗೆ ಸ್ನೇಹಿತರು ರಾಮಾಂಜನೇಯನನ್ನು ದಾಖಲಿಸಿದ್ದರು. ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



