ವಿಜಯಸಾಕ್ಷಿ ಸುದ್ದಿ, ಗದಗ : ಪಂ. ಬಸವರಾಜ ಶಾಸ್ತ್ರಿಗಳು ನವೋದಯ ಸಾಹಿತ್ಯ ಕಾಲದಲ್ಲಿದ್ದ ಶ್ರೇಷ್ಠ ಲೇಖಕ ಮತ್ತು ಅನುವಾದಕರಾಗಿದ್ದರು. ಅನೇಕ ಸಂಸ್ಕೃತ ಮಹಾಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿ ಇವರು ರಚಿಸಿದ ಪುಸ್ತಕಗಳು ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಗಳಾಗಿದ್ದವು ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಪಂ. ಬಸವರಾಜ ಶಾಸ್ತ್ರಿ ಕೋಡಿಕೊಪ್ಪಮಠ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ರಮೇಶ ಕಲ್ಲನಗೌಡರ ಅವರು, ಬಸವರಾಜ ಶಾಸ್ತ್ರಿಗಳು ರಚಿಸಿದ ಕೋಡಿಕೊಪ್ಪದ ಹಠಯೋಗಿ ಹುಚ್ಚಿರಪ್ಪಜ್ಜನವರ ಜೀವನ ಚರಿತ್ರೆ ಪುಸ್ತಕದ ಕುರಿತು ಮಾತನಾಡಿ, ವೀರಪ್ಪಜ್ಜನವರು ಯೋಗಿಯಾಗಿದ್ದು, ಬಾಲಕನಂತೆ, ಪಿಶಾಚಿಯಂತೆ, ಹುಚ್ಚನಂತೆ ಲೋಕದಲ್ಲಿ ಸಂಚರಿಸಿ ಲೋಕಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಸಿದ್ಧಪುರುಷರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮೊದಲಾದ ಸದ್ಗುಣಗಳಿಂದ ಕೂಡಿದವರಾಗಿರುತ್ತಾರೆ. ಭಾವೈಕ್ಯತೆಯ ಪ್ರತಿರೂಪದಂತಿರುವ ಹುಚ್ಚಿರಪ್ಪನವರು ಅನೇಕ ಜನರ ಸಂಕಟಗಳಿಗೆ ಸಮಾಧಾನವನ್ನು ಕರುಣಿಸಿದ್ದಾರೆಂದರು.
ಹಠಯೋಗಿ ಹುಚ್ಚಿರಪ್ಪಜ್ಜನವರ ಕುರಿತಾದ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ರವೀಂದ್ರನಾಥ ದೊಡ್ಡಮೇಟಿ, ನರೇಗಲ್ ಪರಿಸರದಲ್ಲಿ ವಾಸವಾಗಿದ್ದ ಹುಚ್ಚಿರಪ್ಪನವರು ಜಾತಿ-ಮತ-ಪಂಥಗಳನ್ನು ಮೀರಿ ಅಲೌಕಿಕ ಸಾಧನೆಯನ್ನು ಮಾಡಿ, ಜನರ ದುಃಖ-ದುಮ್ಮಾನಗಳಿಗೆ ಪರಿಹಾರ ನೀಡಿದ್ದಾರೆ. ಇಂದಿಗೂ ಅಸಂಖ್ಯಾತ ಭಕ್ತರ ಹೃದಯದಲ್ಲಿ ನೆಲೆನಿಂತಿದ್ದಾರೆಂದು ತಿಳಿಸಿದರು.
ಜಗದೀಶ ಕೋಡಿಕೊಪ್ಪಮಠ ವೇದಿಕೆಯಲ್ಲಿದ್ದರು. ಡಾ. ರಶ್ಮಿ ಅಂಗಡಿ ಸ್ವಾಗತಿಸಿದರು. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ಆಯ್.ಎಸ್. ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಅನ್ನದಾನಿ ಹಿರೇಮಠ, ಚಿನ್ನಮ್ಮ ವಸ್ತ್ರದ, ರತ್ನಕ್ಕ ಪಾಟೀಲ, ಡಾ. ಆರ್.ಎನ್. ಗೋಡಬೋಲೆ, ಡಾ. ರಾಜಶೇಖರ ದಾನರಡ್ಡಿ, ಉಮಾದೇವಿ ಪಾಟೀಲ, ಶೈಲಾ ಗಿಡ್ನಂದಿ, ಸಿ.ಎಂ. ಮಾರನಬಸರಿ, ಬಸವರಾಜ ಗಣಪ್ಪನವರ, ಜಯದೇವ ಮೆಣಸಗಿ, ಬಸಯ್ಯ ಬನಹಟ್ಟಿಮಠ, ಭಾಗ್ಯಶ್ರೀ ಕೋಡಿಕೊಪ್ಪಮಠ, ಬಸವರಾಜ ವಾರಿ, ಆರ್.ಡಿ. ಕಪ್ಪಲಿ, ಶಾಂತಲಾ ಹಂಚಿನಾಳ, ರಾಜಶೇಖರ ಕರಡಿ, ರತ್ನಾ ಪುರಂತರ, ಸುಧಾ ಬಳ್ಳಿ, ವಿ.ಎಸ್. ದಲಾಲಿ, ದಿಲೀಪಕುಮಾರ ಮುಗಳಿ, ಜೀತೇಂದ್ರ ಮುಗಳಿ, ಪ್ರ. ತೋ. ನಾರಾಯಣಪೂರ, ಅಮರೇಶ ರಾಂಪೂರ, ಎ.ಸಿ. ಹಿರೇಮಠ, ಡಿ.ಎಸ್. ಬಾಪುರಿ, ಎಸ್.ಎಫ್. ತಳವಾರ, ಶಿವಾನಂದ ಭಜಂತ್ರಿ, ಅಶೋಕ ಸತ್ಯರಡ್ಡಿ, ರಮೇಶ ಹತ್ತಿಕಾಳ, ಶಶಿಕಾಂತ ಕೊರ್ಲಹಳ್ಳಿ, ಎಸ್.ಎಫ್. ಬೆನಕಣ್ಣವರ, ವಿ.ಎಸ್. ನಾರಾಯಣಪೂರ, ಬಿ.ಬಿ. ಹೊಳಗುಂದಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತದ ಪರಿಸರದಲ್ಲಿ ಅಧ್ಯಾತ್ಮಿಕ ಚಿಂತನೆಗಳು ಅನಾದಿ ಕಾಲದಿಂದಲೂ ಬೇರುಬಿಟ್ಟಿವೆ. ವಿವಿಧ ಮಾರ್ಗದಲ್ಲಿ ನಿಜಾನಂದವನ್ನು ಸಾಧಿಸಿದ ಸಾಧಕರನ್ನು ಕಾಣಬಹುದಾಗಿದೆ. ಹುಚ್ಚಿರಪ್ಪನವರನ್ನು ಅತ್ಯಂತ ಸಮೀಪದಿಂದ ನೋಡಿದ ಬಸವರಾಜ ಶಾಸ್ತ್ರಿಗಳು ಇವರ ಕುರಿತು ಮಹತ್ವದ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಮತ್ತೆ ಚಂದ್ರಶೇಖರ ವಸ್ತ್ರದ ಅವರು ಕ್ಷಮಾ ಪ್ರಕಾಶನದ ಮೂಲಕ ಪ್ರಕಟಿಸಿ ಓದುಗರಿಗೆ ನೀಡಿದ್ದಾರೆಂದು ತಿಳಿಸಿದರು.