ಬಡತನದಲ್ಲಿ ಅರಳಿದ ಪ್ರತಿಭೆ….
ವಿಜಯಸಾಕ್ಷಿ ಸುದ್ದಿ, ಗದಗ/ ಧಾರವಾಡ/ ಲಕ್ಷ್ಮೇಶ್ವರ
ರಾಜ್ಯದಲ್ಲಿ ಇಂದು ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಲ್ಲಿ ವಿದ್ಯಾರ್ಥಿನಿಯರು ಮತ್ತೊಮ್ಮೆ ತಮ್ಮ ಮೇಲುಗೈ ಸಾಧಿಸಿದ್ದಾರೆ.
ಅದರಲ್ಲೂ ಗದಗ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ರಾಜ್ಯದಲ್ಲಿ ದೊಡ್ಡ ಸಾಧನೆ ಮಾಡಿದ್ದಾಳೆ.
ಕಲಾ ವಿಭಾಗದಲ್ಲಿ 2ನೇ ಸ್ಥಾನ ಪಡೆದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ವಿದ್ಯಾರ್ಥಿನಿ ರೆವಿನಾ ಸೋಮಪ್ಪ ಲಮಾಣಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
600 ಅಂಕಗಳಿಗೆ 595 ಅಂಕಗಳನ್ನು ವಿದ್ಯಾರ್ಥಿನಿ ರೆವಿನಾ ಪಡೆದಿದ್ದಾಳೆ. ಧಾರವಾಡದ ಕೆಇ ಬೋರ್ಡ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ರೆವಿನಾ ಅಭ್ಯಾಸ ಮಾಡುತ್ತಿದ್ದಳು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಿಹಿ ತಿನಿಸಿ ಮಗಳ ಈ ಸಾಧನೆಗೆ ಹೆತ್ತವರು ಸಂಭ್ರಮ ಪಟ್ಟರು. ಕಡುಬಡತನದಲ್ಲೂ ಕಷ್ಟ ಪಟ್ಟು ಓದಿ ಸಾಧನೆ ಮಾಡಿರುವ ವಿದ್ಯಾರ್ಥಿನಿಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ, 32ನೇ ಸ್ಥಾನ ಗದಗ ಜಿಲ್ಲೆ ಪಡೆದಿದೆ.