ಬೆಂಗಳೂರಿನಲ್ಲಿ ನಿಲ್ಲದ ಪುಂಡರ ಹಾವಳಿ: BMTC ಬಸ್ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ..!

0
Spread the love

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಬಿಎಂಟಿಸಿ ಬಸ್​ ಡ್ರೈವರ್​​, ಕಂಡಕ್ಟರ್ ಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಗೊಲ್ಲರಹಟ್ಟಿ ಬಳಿ ‌ ಮಂಗಳವಾರ ರಾತ್ರಿ ನಡೆದಿದೆ. ಬಿಎಂಟಿಸಿ ಬಸ್ ಸಂಚರಿಸುವಾಗ ಕಾಚೋಹಳ್ಳಿಯಿಂದ ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಬಸ್​ ಅಡ್ಡಗಟ್ಟಿ ಚಾಲಕ ಮತ್ತು ಕಂಡಕ್ಟರ್​ ಮೇಲೆ ಹಲ್ಲೆ ಮಾಡಲಾಗಿದೆ.‌

Advertisement

ಬಸ್ ಪಕ್ಕದಲ್ಲಿ ಬೈಕ್​ ಹೋಗುತ್ತಿರುವುದಕ್ಕೆ ಚಾಲಕರು ಹಾರ್ನ್ ಮಾಡಿದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ಬೈಕ್ ಸವಾರರು ಗಲಾಟೆ ಮಾಡಿದ್ದಾರೆ. ಬಸ್ ಅನ್ನು ಹಿಂಬಾಲಿಸಿಕೊಂಡು ಬಂದ ಬೈಕ್​ ಸವಾರರು ಬಸ್​ ನಿಲ್ಲಿಸಿ, ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ.

ಬಸ್​ ಒಳಗೆ ನುಗ್ಗಿ ಅವಾಚ್ಯ ಶಬ್ದಗಳೊಂದಿಗೆ ನಿಂದಿಸಿ, ಸುಮಾರು ಅರ್ಧ ಗಂಟೆಯವರೆಗೆ ಬಸ್ ಅನ್ನು ನಿಲ್ಲಿಸಿಕೊಂಡಿದ್ದರು. ಹಲ್ಲೆಯಿಂದ ಚಾಲಕ ಮತ್ತು ಕಂಡಕ್ಟರ್‌ರಿಗೆ ರಕ್ತಸಿಕ್ತ ಗಾಯಗಳಾಗಿದ್ದವು. ಅಲ್ಲದೇ ಪ್ರಯಾಣಿಕರು ಕೂಡ ಭಯಭೀತರಾಗಿ ಕಿರುಚಾಡಿದ್ದಾರೆ. ನಂತರ ಬ್ಯಾಡರಹಳ್ಳಿ ಪೊಲೀಸ್ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here