HomeEntertainmentವರ್ಷಗಳ ವೈರಲ್ ನಂಬಿಕೆಗೆ ಫುಲ್ ಸ್ಟಾಪ್: ‘3 ಇಡಿಯಟ್ಸ್’ ಸೋನಂ ವಾಂಗ್‌ಚುಕ್ ಕಥೆಯಲ್ಲ ಎಂದ ಆಮಿರ್...

ವರ್ಷಗಳ ವೈರಲ್ ನಂಬಿಕೆಗೆ ಫುಲ್ ಸ್ಟಾಪ್: ‘3 ಇಡಿಯಟ್ಸ್’ ಸೋನಂ ವಾಂಗ್‌ಚುಕ್ ಕಥೆಯಲ್ಲ ಎಂದ ಆಮಿರ್ ಖಾನ್

For Dai;y Updates Join Our whatsapp Group

ಮುಂಬೈ: ‘3 ಇಡಿಯಟ್ಸ್’ ಸಿನಿಮಾದ ರಾಂಚೋ ಪಾತ್ರ ಸೋನಂ ವಾಂಗ್‌ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂಬ ವರ್ಷಗಳ ನಂಬಿಕೆಯನ್ನು ನಟ ಆಮಿರ್ ಖಾನ್ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸಿನಿಮಾ ನಿರ್ಮಾಣದ ವೇಳೆ ಚಿತ್ರತಂಡಕ್ಕೆ ಸೋನಂ ವಾಂಗ್‌ಚುಕ್ ಪರಿಚಯವೇ ಇರಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಲಗಾನ್’ ಚಿತ್ರದ ವಿಶೇಷ ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಈ ವಿಚಾರ ಪ್ರಸ್ತಾಪವಾಯಿತು.

ಇತ್ತೀಚೆಗೆ ನಟ ಓಮಿ ವೈದ್ಯ, ಸೋನಂ ವಾಂಗ್‌ಚುಕ್ ಅವರಿಗೆ ಬೆಂಬಲ ಸೂಚಿಸುತ್ತಾ, ‘3 ಇಡಿಯಟ್ಸ್’ ಚಿತ್ರದ ರಾಂಚೋ ಪಾತ್ರ ಅವರ ಜೀವನವನ್ನು ಆಧರಿಸಿದೆ ಎಂದು ಹೇಳಿದ್ದರು. ಇದೇ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆಮಿರ್, ‘ಅದು ಸತ್ಯವಲ್ಲ. ಓಮಿ ವೈದ್ಯ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ. ರಾಜಕುಮಾರ್ ಹಿರಾನಿ ಮತ್ತು ಅಭಿಜತ್ ಜೋಶಿ ಯಾರಿಗೂ ಆಗ ಸೋನಂ ವಾಂಗ್‌ಚುಕ್ ಅವರ ಬಗ್ಗೆ ತಿಳಿದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸೋನಂ ವಾಂಗ್‌ಚುಕ್ ಅವರ ಸಾಮಾಜಿಕ ಹೋರಾಟಕ್ಕೆ ಬೆಂಬಲ ಸೂಚಿಸಿದ ಆಮಿರ್, ‘ಅವರು ಮಾಡುತ್ತಿರುವ ಕೆಲಸ ಶ್ಲಾಘನೀಯ. ಆದರೆ ಅವರ ವ್ಯಕ್ತಿತ್ವಕ್ಕೆ ಗೌರವ ತೋರಿಸಲು ‘3 ಇಡಿಯಟ್ಸ್’ ಚಿತ್ರದೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಅವರು ಶೀಘ್ರ ಗುಣಮುಖರಾಗಿ ಉಪವಾಸ ಕೈಬಿಡಲಿ ಎಂದು ನಾವು ಆಶಿಸುತ್ತೇವೆ’ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ಈ ವಾದಕ್ಕೆ ಇದೀಗ ಆಮಿರ್ ಖಾನ್ ಅವರ ಹೇಳಿಕೆಯಿಂದ ಸ್ಪಷ್ಟ ಉತ್ತರ ಸಿಕ್ಕಂತಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img