ಚಿಕ್ಕಮಗಳೂರು: ಗಂಡನ ಜೊತೆ ಜಗಳವಾಡಿ ಕೆರೆಗೆ ಹಾರಿದ್ದ ಮಹಿಳೆಯೊಬ್ಬಳು ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದವಳನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ನಡೆದಿದೆ.
Advertisement
ರಂಜಿತಾ (35) ಗಂಡನ ಜೊತೆ ಜಗಳವಾಡಿ ಕೆರೆಗೆ ಹಾರಿದ್ದ ಮಹಿಳೆಯಾಗಿದ್ದು, ಸಾಯಬೇಕು ಎಂದು ಕೆರೆಗೆ ಹಾರಿದ ಬಳಿಕ ಸಾವಿನ ಭಯದಿಂದ ಆಂಜನೇಯನ ನೆನೆದು ಪ್ರಾರ್ಥನೆ ಮಾಡಿದ್ದಾರೆ.
ಕೆರೆಯಲ್ಲಿ ಯಾರೋ ಇರುವುದನ್ನು ನೋಡಿದ ಪಕ್ಕದ ಹೋಂ ಸ್ಟೇ ಮಾಲೀಕ ರಮೇಶ್ ಸ್ಥಳಕ್ಕೆ ಬಂದು ಹುಡುಗರನ್ನು ಕರೆಸಿದ್ದಾರೆ. ಬಳಿಕ ಕೆರೆಯಲ್ಲಿ ಮುಳುಗುತ್ತಿದ್ದ ರಂಜಿತಾಳನ್ನು ಸುಮಂತ್, ಪ್ರಸನ್ನ ರಕ್ಷಿಸಿದ್ದಾರೆ. ಚಿಕ್ಕಮಗಳೂರು ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.