ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ ಸೆಟ್ ನಲ್ಲಿ ರಚಿತಾರಾಮ್ ಹುಟ್ಟುಹಬ್ಬ ಆಚರಣೆ!

0
Spread the love

“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರಕ್ಕೆ ಉಡುಪಿಯಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

Advertisement

ಈಗಾಗಲೇ ಇಪ್ಪತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ರಚಿತಾರಾಮ್ ಹಾಗೂ ಮಲೈಕಾ “ಕಲ್ಟ್” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಡುಪಿ ಭಾಗದ ಚಿತ್ರೀಕರಣದಲ್ಲಿ ಝೈದ್ ಖಾನ್ ಹಾಗೂ ರಚಿತಾರಾಮ್ ಅಭಿನಯಿಸುತ್ತಿದ್ದಾರೆ. ಅಕ್ಟೋಬರ್ 3 ನಾಯಕಿ ರಚಿತಾರಾಮ್ ಅವರ ಹುಟ್ಟುಹಬ್ಬ. ಚಿತ್ರೀಕರಣ ಸ್ಥಳದಲ್ಲಿ “ಕಲ್ಟ್” ಚಿತ್ರತಂಡ ಅದ್ದೂರಿಯಾಗಿ ರಚಿತಾರಾಮ್ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ.‌

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.


Spread the love

LEAVE A REPLY

Please enter your comment!
Please enter your name here