ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಡೆದ ವೇಷ-ಭೂಷಣಗಳ ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಪುಟ್ಟ ಪುಟ್ಟ ಮಕ್ಕಳು ರಾಧೆ-ಕೃಷ್ಣರ ವೇಷ ತೊಟ್ಟು ವೇದಿಕೆಯ ಮೇಲೆ ಬಂದಾಗ ನೆರೆದ ತಾಯಂದಿರು, ಗುರು-ಹಿರಿಯರು ಚಪ್ಪಾಳೆ ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದರು.
ಈ ಸ್ಪರ್ಧೆಯಲ್ಲಿ ಪುಟ್ಟ ಮಕ್ಕಳಿಗೆ ರಾಧಾಕೃಷ್ಣ ವೇಷ ಭೂಷಣ ಹಾಕಿದ ಪೋಷಕರು ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವಂತೆ ಮಾಡಿದರು. ಸ್ಪರ್ಧೆಯಲ್ಲಿ 5 ವರ್ಷದ ಒಳಗಿದ ಮಕ್ಕಳಲ್ಲಿ ಸಾನ್ವಿ ಗೆದಗೇರಿ ಪ್ರಥಮ, ಅನ್ವಿತಾ ಕರಮುಡಿ ದ್ವಿತೀಯ, ವೇದಾಂತ ರಾಚನಗೌಡ್ರ ತೃತಿಯ ಹಾಗೂ 5ರಿಂದ 10 ವರ್ಷದ ಒಳಗಿನಗಿನ ಮಕ್ಕಳ ವಿಭಾಗದಲ್ಲಿ ರಿತಿಕಾ ಕರಮುಡಿ ಪ್ರಥಮ, ದೀಪ್ತಿ ಕಳಕಣ್ಣವರ ದ್ವಿತೀಯ, ಸಮರ್ಥ ಪದ್ಮಸಾಲಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಸಂಚಾಲಕಿ ಬಿ.ಕೆ. ಸವಿತಕ್ಕ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್. ಪೂಜಾರ, ಆನಂದ ರಾಚನಗೌಡ್ರ, ಶ್ವೇತಾ ಕರಮುಡಿ, ಲತಾ ಕಳಕಣ್ಣವರ, ಪ್ರಿಯಾ ಕುಲಕರ್ಣಿ, ರತ್ನಾ ಬಾಣದ, ವಿದ್ಯಾ ಹೆಗಡೆ, ಶಿವಪ್ಪ ಧರ್ಮಾಯತ, ಶರಣಪ್ಪ ಹೊಸಮನಿ ಚಂದ್ರಶೇಖರ ಹೊನವಾಡ ಸೇರಿದಂತೆ ಪಾಲಕರು ಇದ್ದರು.