ರಾಯಚೂರು: ಕಾಶ್ಮೀರದಲ್ಲಿನ ಉಗ್ರ ಕೃತ್ಯ ಖಂಡಿಸಿ ರಾಯಚೂರಿನಲ್ಲಿ ಹಿಂದೂ ಹಿತ ರಕ್ಷಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಸಲಾಯಿತು. ರಾಯಚೂರು ನಗರದ ನೇತಾಜಿ ವೃತ್ತದಿಂದ ಚಂದ್ರಮೌಳೇಶ್ವರ ಸರ್ಕಲ್ ವರೆಗೆ ಜಾಥಾ ನಡೆಸಿದ್ದು,
Advertisement
ಕ್ಯಾಂಡಲ್,ಮೊಬೈಲ್ ಟಾರ್ಚ್ ಹಿಡಿದು ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ಪಂಜಿನ ಮೆರವಣಿಗೆ ಮಾಡೋ ಮೂಲಕ ಉಗ್ರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದ್ದು, ಈ ವೇಳೆ ಇಸ್ಲಾಂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾಕಾರರ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಶಾಸಕ ಶಿವರಾಜ್ ಪಾಟೀಲ್, ಮಠಾಧೀಶರು,ಹಿಂದು ಸಂಘಟನೆ ಕಾರ್ಯಕರ್ತರು,ಮಹಿಳೆಯರು, ಸಾರ್ವಜನಿಕರು ಭಾಗಿಯಾಗಿದ್ದರು.