ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ ರಜತ್ ಮತ್ತು ಚೈತ್ರಾ ಕುಂದಾಪುರ ನಡುವಿನ ಆಪ್ತತೆ ಹೆಚ್ಚು ದಿನ ಉಳಿದಿಲ್ಲ. ಈ ಹಿಂದೆ 11ನೇ ಸೀಸನ್‌ನಲ್ಲೂ ಸ್ಪರ್ಧಿಸಿದ್ದ ಈ ಜೋಡಿ, ಆಗ ಹಲವು ಬಾರಿ ಜಗಳ ಆಡಿದ್ದ ಹಿನ್ನೆಲೆ ಹೊಂದಿದೆ. 12ನೇ ಸೀಸನ್‌ನಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಆದರೆ ಇತ್ತೀಚಿನ ಟಾಸ್ಕ್‌ನಲ್ಲಿ ಇಬ್ಬರೂ ಎದುರಾಳಿಗಳಾಗಿ ನಿಂತು ತೀವ್ರವಾಗಿ ವಾಗ್ವಾದ ನಡೆಸಿದ್ದಾರೆ.
ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ಬೇರೆ ಬೇರೆ ತಂಡಗಳಲ್ಲಿ ಆಟ ಆಡುತ್ತಿದ್ದರು. ಈ ವೇಳೆ ಚೈತ್ರಾ ನಿಯಮಗಳನ್ನು ಮುರಿದಿದ್ದಾರೆ ಮತ್ತು ಸುಳ್ಳು ಹೇಳಿದ್ದಾರೆ ಎಂಬ ಆರೋಪವನ್ನು ರಜತ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ರಜತ್, “ನೀನು ಸುಳ್ಳಿ, ನ್ಯಾಯವಾಗಿ ಆಟ ಆಡೋಕೆ ನಿನಗೆ ಆಗಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ. ಸೋಲುವ ಸಂದರ್ಭಗಳಲ್ಲಿ ಮೋಸ ಮಾಡುತ್ತಾರೆ ಎಂದು ಕೂಡ ಆರೋಪಿಸಿದ್ದಾರೆ.
ಈ ಜಗಳದ ಮಧ್ಯೆಯೇ ಡಿಸೆಂಬರ್ 16ರ ಸಂಚಿಕೆ ಅಂತ್ಯಗೊಂಡಿದೆ. ಆದರೆ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಇನ್ನಷ್ಟು ಗಂಭೀರ ಆರೋಪಗಳು ಹೊರಬಿದ್ದಿವೆ. ಚೈತ್ರಾ ಕುಂದಾಪುರ ಅವರು ರಜತ್ ಫ್ಯಾಮಿಲಿ ಬಗ್ಗೆ ಉಲ್ಲೇಖಿಸಿದ್ದು, “ಅವನ ಫ್ಯಾಮಿಲಿಗೆ ಒಂದು ಸರ್ನೇಮ್ ಇದೆ, ಅದನ್ನೆಲ್ಲರಿಗೂ ಅಂಟಿಸುತ್ತಿದ್ದಾನೆ” ಎಂದು ಹೇಳಿದ್ದಾರೆ.



