ರಂಜಾನ್ ಹಬ್ಬ ದಾನ-ಧರ್ಮದ ಸಂಕೇತ : ಇಸ್ಮಾಯಿಲ್ ಖಾಜಿ

0
ramzan
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ರಂಜಾನ್ ಹಬ್ಬವು ದಾನ-ಧರ್ಮದ ಸಂಕೇತವಾಗಿದೆ ಎಂದು ಧರ್ಮಗುರು ಇಸ್ಮಾಯಿಲ್ ಖಾಜಿ ಹೇಳಿದರು.

Advertisement

ಅವರು ಪಟ್ಟಣದ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಮಾತನಾಡಿ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳು.ಹಸಿದವರಿಗೆ, ಬಡವರಿಗೆ ನೊಂದು-ಬೆಂದವರಿಗೆ ದಾನ ಧರ್ಮ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಆದ್ದರಿಂದ ನಮ್ಮ ಕಾಯಕದಲ್ಲಿನ ಸಂಪತ್ತಿನಲ್ಲಿನ ಸ್ವಲ್ಪವನ್ನಾದರೂ ದಾನ-ಧರ್ಮ ಮಾಡಬೇಕು ಎಂದರು.

ಬೆಳಿಗ್ಗೆಯಿಂದ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರಾರ್ಥನೆಯ ನಂತರ ಶರಬತ್ ವಿತರಿಸಲಾಯಿತು.

ಯುವ ಮುಖಂಡ ಕೃಷ್ಣಗೌಡ ಪಾಟೀಲ್, ಪ.ಪಂ ಸದಸ್ಯ ಇಮ್ಮಣ್ಣಾ ಶೇಖ, ಎ.ಡಿ. ಮುಜಾವಾರ, ತಾಜುದ್ದಿನ ಕಿಂಡ್ರಿ, ಹಜರೇಸಾಬ ಖವಾಸ, ಮೌಲಾಸಾಬ ಸದರಭಾವಿ, ಮಾಬುಸಾಬ ದುರ್ಗಿಗುಡಿ, ಸೈಯದಲಿ ಶೇಖ ಹುಶೇನಸಾಬ ಕಲೇಗಾರ, ಎಂ.ಎಚ್. ಹುಬ್ಬಳ್ಳಿ, ಇಮಾಮಸಾಬ ನದಾಫ್, ಹಜರೇಸಾಬ ಖವಾಸ, ಎಚ್.ಎಂ. ನದ್ದಿಮುಲ್ಲಾ, ಹಜರತ್‌ಅಲಿ ಲಾಡಸಾಬನವರ, ಖಲಂದರ ಗಾಡಿ, ಖಾನ್‌ಸಾಬ ಲಾಡಂನವರ, ಇಸ್ಮಾಯಿಲ್ ಸುಂಕದ, ಇಸ್ಮಾಯಿಲ್ ಖಾಗದ, ಮಾಬುಸಾಬ ಅಬ್ಬುನವರ, ದಾವುದ ಜಮಾಲಸಾಬನವರ, ಹೈದರ ಖವಾಸ, ಅಲ್ಲಾಭಕ್ಷಿ ಹೊಂಬಳ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here