ಲಕ್ಷ್ಮೇಶ್ವರದಲ್ಲಿ ರಂಗಪಂಚಮಿ ಗೊಂದಲ

0
rangapanchami
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಗೊಜನೂರ, ಪು.ಬಡ್ನಿ, ಸೂರಣಗಿ ಮತ್ತು ಸೋಗಿವಾಳ ಗ್ರಾಮದಲ್ಲಿ ಮಂಗಳವಾರ ರಂಗಿನೋಕುಳಿ ಹಬ್ಬ ಆಚರಿಸಲಾಯಿತು. ಗೊಜನೂರ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಕಾಮರತಿ ಮೂರ್ತಿ ಮೆರವಣಿಗೆಯನ್ನು ಹಲಗೆ ಬಡಿಯುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಸುಡು ಬಿಸಿಲನ್ನೂ ಲೆಕ್ಕಿಸದೇ ಚಿಣ್ಣರು ಬಣ್ಣದಾಟದಲ್ಲಿ ಮಿಂದೆದ್ದರು.

Advertisement

ಲಕ್ಷ್ಮೇಶ್ವರದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆ ನೀಡಿದ್ದರು. ಆದರೆ ಪಟ್ಟಣದಲ್ಲಿ ಕಾಮರತಿ ಮೂರ್ತಿ ಪ್ರತಿಷ್ಠಾಪನೆಯ ಸಂಘಟಕರು, ಯುವಕರು, ಹಿರಿಯರು ಶುಕ್ರವಾರವೇ ರಂಗಪಂಚಮಿ ಆಚಣೆಯಾಗಬೇಕು, ಸೋಮವಾರ ಪಟ್ಟಣದಲ್ಲಿ ಕಾಮರತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಶುಕ್ರವಾರ 5ನೇ ದಿನ ರಂಗಪಂಚಮಿ ಆಚರಿಸಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗಳ ಪ್ರಕಟಣೆಗೆ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಮಹೇಶ ಹಡಪದ, ಶುಕ್ರವಾರ ವಾರದ ಸಂತೆ ಇರುವುದರಿಂದ ಗ್ರಾಮೀಣ ಜನರಿಗೆ, ವ್ಯಾಪಾರ-ವಹಿವಾಟಿಗೆ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಪ್ರಮುಖರೊಂದಿಗೆ ಚರ್ಚಿಸಿ ಶನಿವಾರ ಆಚರಣೆ ಮಾಡುವುದಾಗಿ ತಿಳಿಸಲಾಗಿತ್ತು. ಶುಕ್ರವಾರವೇ ರಂಗಪAಚಮಿ ಆಚರಿಸುವ ಬಗ್ಗೆ ತಹಸೀಲ್ದಾರ, ಪೊಲೀಸ್ ಮತ್ತು ಪಟ್ಟಣದ ಹಿರಿಯರು, ಜನಪ್ರತಿನಿದಿಗಳು, ಸಂಘಟಕರೊAದಿಗೆ ಚರ್ಚಿಸಿ ಸೂಕ್ತ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.


Spread the love

LEAVE A REPLY

Please enter your comment!
Please enter your name here