ಯಾದಗಿರಿ:- ಪಾಳುಬಿದ್ದ ಮನೆಗೆ ಕರೆದೊಯ್ದು ಪರಿಚಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಯಾದಗಿರಿಯಲ್ಲಿ ಜರುಗಿದೆ.
Advertisement
ಹೇಮಂತ್ ಎಂಬಾ ಆರೋಪಿ ವಿವಾಹಿತೆ ಎಂಬುವುದನ್ನೂ ಲೆಕ್ಕಿಸದೆ ಅತ್ಯಾಚಾರ ನಡೆಸಿ ದುಷ್ಕೃತ್ಯ ಮೆರೆದಿದ್ದಾನೆ.
ಶನಿವಾರ ರಾತ್ರಿ ಘಟನೆ ನಡೆದಿದ್ದು, ನಿನ್ನೆ ರಾತ್ರಿಯಿಂದ ನಿತ್ರಾಣಗೊಂಡು ಮಹಿಳೆ ಪಾಳು ಮನೆಯಲ್ಲೇ ಬಿದ್ದಿದ್ದರು. ನಂತರ ಸ್ಥಳೀಯರು ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ.
ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೇಮಂತ್ನನ್ನು ವಶಕ್ಕೆ ಪಡೆಯಲಾಗಿದೆ..