ರವಿ ಗುಂಜೀಕರ್ ಅಭಿನಂದನಾ ಸಮಾರಂಭ ಇಂದು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ರಾಚೋಟೇಶ್ವರ ನಗರದ ವೀರಾಂಜನೆಯ ದೇವಸ್ಥಾನದಲ್ಲಿ ಡಾ. ರವಿ ಎಲ್.ಗುಂಜೀಕರ ಅವರ ಅಭಿಮಾನಿ ಬಳಗದಿಂದ ಗುರುವಾರ ಸಭೆ ಜರುಗಿತು.

Advertisement

ಈ ಸಭೆಯಲ್ಲಿ ಎಪ್ರಿಲ್ 4ರಂದು ರವಿ ಗುಂಜೀಕರ್ ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳ ಸಂಘದ ಉದ್ಘಾಟನೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸಂಜೆ 4 ಗಂಟೆಗೆ ನಡೆಸಲು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಲ್ಲಸಮುದ್ರ ಓಂಕಾರಗಿರಿಯ ಓಂಕಾರೇಶ್ವರ ಮಠದ ಪೂಜ್ಯಶ್ರೀ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಗಣ್ಯ ಉದ್ಯಮಿ ರಾಜು ಗುಡಿಮನಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗುರಣ್ಣ ಬಳಗಾನೂರು, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ ಮುಂತಾದವರು ಭಾಗವಹಿಸುವರು.

ಸಭೆಯಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಅರುಣಕುಮಾರ ಚವ್ಹಾಣ, ಉಪಾಧ್ಯಕ್ಷ ಡಾ. ಎಸ್.ಆರ್. ಹಿರೇಮಠ, ಎಚ್.ವೈ. ಸಂದಕದ, ಕೆ.ಎಫ್. ಹಳ್ಯಾಳ, ಆರ್.ಎಂ. ನಿಂಬನಾಯ್ಕರ, ಶಿವಾಜಿ ಪವನ, ಮಲ್ಲಿಕಾರ್ಜುನ ಹಿರೇಮಠ, ಮಂಜುನಾಥ ಮಾನೆ, ಭಾಷಾಸಾಬ ಮಲ್ಲಸಮುದ್ರ, ಕರಿಮಸಾಬ ಸುಣಗಾರ, ಮೌಲಾಸಾಬ ಗಚ್ಚಿ ಮುಂತಾದವರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here