RCB Vs CSK: ಚೆನ್ನೈ ವಿರುದ್ಧ RCBಗೆ ಅಮೋಘ ಜಯ: ಬೆಂಗಳೂರು ತಂಡಕ್ಕೆ ವಿಜಯ್‌ ಮಲ್ಯಾ ವಿಶ್‌!

0
Spread the love

ಚೆನ್ನೈ:- ಇಲ್ಲಿ ಶುಕ್ರವಾರ ನಡೆದ ಐಪಿಎಲ್‌ನ ಹೈವೋಲ್ಟೇಜ್‌ ಪಂದ್ಯದಲ್ಲಿ ಚೆನ್ನೈ ವಿರುದ್ಧ RCB 50 ಅಂತರಗಳಿಂದ ಗೆಲುವು ದಾಖಲಿಸಿದೆ. ಚೆನ್ನೈ ತವರಲ್ಲೇ ನಡೆದ ಈ ಪಂದ್ಯವನ್ನು ಬೆಂಗಳೂರು ತಂಡ ಲೀಲಾಜಾಲವಾಗಿ CSK ಬೌಲರ್ಸ್, ಬ್ಯಾಟರ್ಸ್ ನ ದಂಡಿಸಿದರು.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. 197 ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 146 ರನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಚೆಪಾಕ್‌ನಲ್ಲಿ ಉಭಯ ತಂಡಗಳು ಒಟ್ಟು 10 ಪಂದ್ಯಗಳನ್ನಾಡಿವೆ. ಅದರಲ್ಲಿ ಚೆನ್ನೈ 8 ಹಾಗೂ ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಸಂಭ್ರಮಿಸಿದೆ.

ಬೆಂಗಳೂರು ತಂಡಕ್ಕೆ ವಿಜಯ್ ಮಲ್ಯಾ ವಿಶ್!

ಚೆಪಾಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಉದ್ಯಮಿ ವಿಜಯ್‌ ಮಲ್ಯಾ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮಲ್ಯಾ, 18 ವರ್ಷಗಳ ನಂತರ ಚೆಪಾಕ್ ಕೋಟೆಯಲ್ಲಿ ದಕ್ಷಿಣದ ಎದುರಾಳಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಬ್ಯಾಟಿಂಗ್ ಮತ್ತು ಬೌಲ್‌ನಲ್ಲಿ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ. ಧೈರ್ಯಶಾಲಿ ಹುಡುಗರೇ, ಇನ್ನೂ ಚೆನ್ನಾಗಿ ಆಟವಾಡಿ ಎಂದು ಶುಭಾಶಯ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here